Don't Miss!
- News
ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ: ರೆಸಾರ್ಟ್ ಸಭೆಯ ಬಳಿಕ ಗುಟ್ಟು ಬಿಟ್ಟುಕೊಟ್ಟ ಡಿಕೆಶಿ- ಇವರಿಗೆ ಟಿಕೆಟ್ ಗ್ಯಾರಂಟಿ
- Automobiles
ಕೈಗೆಟಕುವ ಬೆಲೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್!... ಫೆ. 9 ರಂದು ಓಲಾದಿಂದ ಮಹತ್ವದ ಘೋಷಣೆ
- Sports
IND vs AUS: ಭಾರತ ನ್ಯಾಯಯುತ ಪಿಚ್ ಸಿದ್ಧಪಡಿಸಿದರೆ, ಆಸೀಸ್ ಸರಣಿ ಗೆಲ್ಲುತ್ತದೆ; ಇಯಾನ್ ಹೀಲಿ
- Technology
Valentines Day ಗಿಫ್ಟ್ ಸರ್ಚ್ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ
- Finance
PM Pranam Scheme: ಏನಿದು ಪಿಎಂ ಪ್ರಣಾಮ ಯೋಜನೆ, ಇತರೆ ಮಾಹಿತಿ ಇಲ್ಲಿದೆ
- Lifestyle
Chanakya Neeti: ಚಾಣಕ್ಯ ಪ್ರಕಾರ ಪುರುಷನ ಬದುಕಿನಲ್ಲಿ ಅದೃಷ್ಟ ತರುವ 3 ವ್ಯಕ್ತಿಗಳಿವರು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Kranti Twitter Review: 'ಕ್ರಾಂತಿ' ಕಿಚ್ಚು ಹೇಗಿದೆ? ಪ್ರೇಕ್ಷಕ ಪ್ರಭು ಹೇಳಿದ್ದಿಷ್ಟು
ವರ್ಷದ ಬಹುನಿರೀಕ್ಷಿತ 'ಕ್ರಾಂತಿ' ಸಿನಿಮಾ ಬಿಡುಗಡೆಯಾಗಿದೆ. ಮುಂಜಾನೆಯೇ ಪ್ರೇಕ್ಷಕರು ಸಿನಿಮಾ ನೋಡಿ ಹೊರಬಂದಿದ್ದಾರೆ. ರಾಜ್ಯಾದ್ಯಂತ ಬಹಳ ದೊಡ್ಡಮಟ್ಟದಲ್ಲಿ 'ಕ್ರಾಂತಿ' ಸಿನಿಮಾ ಬಿಡುಗಡೆಯಾಗಿದೆ. ದಾಖಲೆ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಮುಂಜಾನೆ 6 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗಿದೆ.
ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಚಿತ್ರದಲ್ಲಿ ಅಕ್ಷರ ಕ್ರಾಂತಿಯ ಕಥೆ ಹೇಳಲಾಗಿದೆ. ದರ್ಶನ್ ಅಭಿಮಾನಿಗಳು ಕೇಳುವ ಆಕ್ಷನ್, ಖಡಕ್ ಡೈಲಾಗ್ಸ್, ಡ್ಯಾನ್ಸ್ ಎಲ್ಲವೂ ಚಿತ್ರದಲ್ಲಿದೆ. ಅದೆಲ್ಲದರ ಜೊತೆಗೆ ಒಂದೊಳ್ಳೆ ಸಂದೇಶವನ್ನು ಚಿತ್ರದಲ್ಲಿ ಹೇಳಿದ್ದಾರೆ. ಖಾಸಗಿ ಶಾಲೆಗಳನ ಮಾಫಿಯಾ ವಿರುದ್ಧ್ ಹೋರಾಡುವ ನಾಯಕ 'ಕ್ರಾಂತಿ' ರಾಯಣ್ಣ ಆಗಿ ದರ್ಶನ್ ಅಬ್ಬರಿಸಿದ್ದಾರೆ. ಬಹಳ ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡಿ 'ಕ್ರಾಂತಿ' ಚಿತ್ರವನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ. ಕೆಜಿ ರಸ್ತೆಯ ಅನುಪಮಾ, ಜೆಪಿ ನಗರದ ಸಿದ್ದೇಶ್ವರ ಥಿಯೇಟರ್‌ಗಳಲ್ಲಿ ಸಂಭ್ರಮಾಚರಣೆ ಕೊಂಚ ಜೋರಾಗಿಯೇ ಇತ್ತು.
Kranti Celebration: ಥಿಯೇಟರ್ ಅಂಗಳದಲ್ಲಿ ಅಭಿಮಾನೋತ್ಸವ: 'ಕ್ರಾಂತಿ' ರಿಲೀಸ್ ಸೆಲೆಬ್ರೇಷನ್ ಹೇಗಿತ್ತು?
ಭಾನುವಾರವೇ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿತ್ತು. ದಾಖಲೆಯ ಮಟ್ಟದಲ್ಲಿ ಬುಕ್ಕಿಂಗ್ ನಡೆದಿತ್ತು. ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡಿದ್ದರು. ಬೆಳ್ಳಂ ಬೆಳಗ್ಗೆ ಸಿನಿಮಾ ನೋಡಿ ಪ್ರೇಕ್ಷಕರು ಹೊರ ಬಂದಿದ್ದಾರೆ. ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಮುಂದೆ ಓದಿ..

ಪಕ್ಕಾ ಪೈಸಾ ವಸೂಲ್ ಸಿನಿಮಾ
"ಕ್ರಾಂತಿ ಒಂದು ಉತ್ತಮ ಸಂದೇಶ ಸಾರುವ ಚಿತ್ರ , ಸರ್ಕಾರಿ ಶಾಲೆ & ಖಾಸಗಿ ಶಾಲೆಯ ರಾಜಕೀಯದ ವ್ಯವಸ್ಥೆ ಬಗ್ಗೆ ತುಂಬಾ ಚೆನ್ನಾಗಿ ತೋರಿಸಿದ್ದಾರೆ . ಕ್ಲೈಮ್ಯಾಕ್ಸ್ ಬೆಂಕಿ. ಡೈಲಾಗ್, ಆಕ್ಷನ್, ಕಾಮಿಡಿ ಎಲ್ಲವೂ ಸೂಪರ್, ಪಕ್ಕಾ ಪೈಸಾ ವಸೂಲ್ ಸಿನಿಮಾ" ಎಂದು ನೆಟ್ಟಿಗರೊಬ್ಬರು 'ಕ್ರಾಂತಿ' ಸಿನಿಮಾ ಬಗ್ಗೆ ಬರೆದುಕೊಂಡಿದ್ದಾರೆ.

ಡಿಬಾಸ್ ಒನ್‌ಮ್ಯಾನ್ ಶೋ
"ರೊಟೀನ್ ಕಮರ್ಷಿಯಲ್ ಸಿನಿಮಾ 'ಕ್ರಾಂತಿ'. ಎಂದಿನಂತೆ ಡಿಬಾಸ್ ಒನ್‌ಮ್ಯಾನ್ ಶೋ. ಊಹಿಸಬಹುದಾದ ಕಥೆ. ಹಳೇ ಸ್ಟೋರಿ ಲೈನ್, ಸರ್ಕಾರಿ ಶಾಲೆಗಳ ಕಥೆ. ಮ್ಯೂಸಿಕ್, ಬಿಜಿಎಂ ಓಕೆ. ರವಿಶಂಕರ್ ಟೈಮಿಂಗ್, ಡೈಲಾಗ್ ಸೂಪರ್. ಅಭಿಮಾನಿಗಳು ಆಕ್ಷನ್, ಸ್ಟೈಲ್ ನೋಡಿ ಎಂಜಾಯ್ ಮಾಡಬಹುದು."

ಸೆಕೆಂಡ್ ಹಾಫ್ ಚೆನ್ನಾಗಿದೆ
"ಫಸ್ಟ್ ಹಾಫ್ ಆವರೇಜ್ ಆಗಿದ್ದರೂ ಸಕೆಂಡ್ ಹಾಫ್ ಚೆನ್ನಾಗಿದೆ. ಚಿತ್ರದಲ್ಲಿರುವ ಒಳ್ಳೆ ಸಂದೇಶ ಚಿತ್ರವನ್ನು ಗೆಲ್ಲಿಸಿದೆ. ಕೊನೆ 20 ನಿಮಿಷದಲ್ಲಿ ದಾಟಿಸಿರುವ ಸಂದೇಶ, ಅಂಶಗಳು ಚೆನ್ನಾಗಿದೆ. ಪಕ್ಕಾ ಕಮರ್ಷಿಯಲ್ ಎಂಟರ್ಟೈನರ್ ಸಿನಿಮಾ. ದರ್ಶನ್ ಒನ್‌ಮ್ಯಾನ್ ಶೋ ಚಿಂದಿ. D56 ಚಿತ್ರಕ್ಕಾಗಿ ಕಾತರ ಹೆಚ್ಚಾಗಿದೆ" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.