For Quick Alerts
  ALLOW NOTIFICATIONS  
  For Daily Alerts

  'ಯಜಮಾನ' ಮಾಸ್ ಪ್ರೇಕ್ಷಕರಿಗೆ ಮಹಾರಾಜ.. ಕ್ಲಾಸ್ ಪ್ರೇಕ್ಷಕರಿಗೆ ಮನೆ ಹುಡುಗ

  By ನವೀನ್ ಕುಮಾರ್. ಆರ್.ಓ
  |

  ಶಿವನಂದಿಯ ಗೀತೆಯೊಂದಿಗೆ ಭರ್ಜರಿ‌ ಎಂಟ್ರಿ ಕೊಡುವ ದರ್ಶನ್ ಹಾಗೂ ಈ ಹಾಡಿನಲ್ಲಿ ವಿನೋದ್ ಪ್ರಭಾಕರ್, ಪ್ರಜ್ವಲ್ ದೇವರಾಜ್, ಪ್ರೇಮ್, ಚಿರು ಸರ್ಜಾ ಅವರು ದರ್ಶನ್ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ. ಕಿರಿಕ್ ಪಾರ್ಟಿಯ ರಶ್ಮಿಕಾ ಮಂದಣ್ಣ ಕ್ಯೂಟಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ದೇವದುರ್ಗದಲ್ಲಿ ಎಂಬುದೊಂದು ಹಳ್ಳಿ, ಆ ಹಳ್ಳಿಯ ಹಿರಿಯನಾಗಿ ಹಾಗೂ ಕಾವೇರಿ (ರಶ್ಮಿಕಾ) ಅಪ್ಪನಾಗಿ ನಟಿಸಿದ್ದಾರೆ. ಮೊಟ್ಟಮೊದಲ ಬಾರಿಗೆ ರಶ್ಮಿಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿರುವುದು ವಿಶೇಷ. 'ಒಂದು ಮುಂಜಾನೆ..' ಹಾಡಿನಲ್ಲಿ ದರ್ಶನ್ ಹಾಗೂ ರಶ್ಮಿಕಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಅವರ ಡೈಲಾಗೆ "ಕಾವೇರಿನು ನಂದೆ ಹಾಗೂ ಬೆಂಜ಼ು ಕಾರು ನಂದೆ" ಆಗಾಗ ಕೇಳಿಬರುತ್ತದೆ. ಇನ್ನೋಬ್ಬ ಬೆಡಗಿ ಗಂಗಾ (ತಾನ್ಯ ಹೋಪ್) ಅವರು ಪತ್ರಕರ್ತೆಯಾಗಿ ಅಭಿನಯಿಸಿದ್ದಾರೆ.

  'ಯಜಮಾನ'ನ ಪ್ಲಸ್ ಗಳೇನು? ಮೈನಸ್ ಗಳೇನು?

  ಮಿಠಾಯಿ ಸೂರಿಯಾಗಿ ಧನಂಜಯ ಅಭಿನಯ ಚೆನ್ನಾಗಿದೆ ಹಾಗೂ ಪ್ರಾರಂಭದಿಂದ ಕೊನೆಯವರೆಗೂ ದರ್ಶನ್ ಅವರಿಗೆ ಪೈಪೋಟಿ ಕೊಟ್ಟಿದ್ದಾರೆ. ರವಿಶಂಕರ್ ಹಾಗೂ ಠಾಕೂರ್ ಸಿಂಗ್ ಚಿತ್ರದಲ್ಲಿ ವಿಲನ್ ಗಳಾಗಿ ಬೊಬ್ಬಿರಿದು ಅಬ್ಬರಿಸಿದ್ದಾರೆ. ಅಡುಗೆ ಎಣ್ಣೆಯ ತಯಾರಿಕೆ, ಕೊಳ್ಳುವಿಕೆ ಒಂದಿಷ್ಟು ಮಾಫಿಯವೇ ಚಿತ್ರದ ಒಂದು ಎಳೆಯಷ್ಟೇ. ಇನ್ನೂ ದತ್ತಣ್ಣ, ಸಾಧು ಕೋಕಿಲ, ಕೆ.ಆರ್.ಪೇಟೆ ಶಿವು, ಮಂಡ್ಯ ರಮೇಶ್ ಹೀಗೆ ತಾರಾಗಾಣವೇ ಚಿತ್ರಕ್ಕಿದೆ.

  Darshans yajamana kannada movie review

  ''ಯಜಮಾನ' ಚೆನ್ನಾಗಿಲ್ಲ ಅಂತ ಒಬ್ಬರೂ ಹೇಳಿಯೇ ಇಲ್ಲ'' - ಶೈಲಜಾ ನಾಗ್

  ಬಸಣ್ಣಿ ಹಾಡು ಮಾಸ್ ಪ್ರೇಕ್ಷಕರಿಗೆ ಕಿಕ್ ನೀಡುತ್ತದೆ ಹಾಗೂ ಉಳಿದೆಲ್ಲ ಹಾಡುಗಳು ಅದ್ಭುತವಾಗಿ ಮೂಡಿಬಂದಿದೆ. ಚಿತ್ರದ ಸಂಗೀತ ಹಾಗೂ ನಿರ್ದೇಶನ ಮಾಡಿರುವ ಹರಿಕೃಷ್ಣ ಚಿತ್ರದಲ್ಲಿ ಗೆದ್ದಿದ್ದಾರೆ. ದರ್ಶನ್ ಅವರ ಹಲವಾರು ಡೈಲಾಗ್ ಗಳು ಚೆಪ್ಪಾಳೆ ಹಾಗೂ ವಿಜ಼ಲ್ ಗಿಟ್ಟಿಸಿವೆ. ಚೇತನ್ ಹಾಗೂ ಹರಿಕೃಷ್ಣ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಶ್ರೀಷ ಕೂದುವಳ್ಳಿಯವರು ತಮ್ಮ ಕ್ಯಾಮೆರಾದಲ್ಲಿ ಹಳ್ಳಿಯ ಸೊಗಡನ್ನು ಸೆರೆಹಿಡಿದಿದ್ದಾರೆ. ಚಿತ್ರದುದ್ದಕ್ಕೂ ಹಲವಾರು ಸೆಟ್‌ಗಳನ್ನು ಹಾಗೂ ಬೃಹತ್ ನಂದಿಯ ವಿಗ್ರಹವನ್ನು ತಮ್ಮ ಕಲೆಯ ಮೂಲಕ ಚಿತ್ರಕ್ಕೆ ಮೆರಗು ನೀಡಿದ್ದಾರೆ ಶಶಿಧರ ಅಡಪ.

  Darshans yajamana kannada movie review

  ಒಟ್ಟಾರೆ, ಹೇಳುವುದಾದರೆ ಚಿತ್ರವು ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರಿಗೆ ರಂಜಿಸುವಲ್ಲಿ ಯಶಸ್ವಯಾಗಿದೆ. ಸಾಧು ಅವರು ನಗೆಗಡಲಿನಲ್ಲಿ ತೇಲಿಸುತ್ತದೆ. ಅದ್ಭುತವಾದ ಫೈಟ್ಸ್ ಗಳು ಮಾಸ್ ಪ್ರೇಕ್ಷಕರ ಕಣ್ಣಿಗೆ ಮುದ್ದ ನೀಡುತ್ತವೆ. " ಹೇ ಕ್ಯಾಡಬರೀಸ್ .. ಆನೆ ನಡೆದದ್ದೇ ದಾರಿ..ತಾಕತ್ತಿದ್ದರೆ ಕಟ್ಟಿಹಾಕು" ಡೈಲಾಗ್ ಅಭಿಮಾನಿಗಳ ಫೇವರೇಟ್. ಒಂದಿಷ್ಟು ಹಳ್ಳಿಗರಿಗೆ ಒಗ್ಗಟ್ಟಿನ ಮಂತ್ರ ಹಾಗೂ ತಾವು ಬೆಳೆದ ಬೆಳೆಗಳಿಗೆ ಮಧ್ಯವರ್ತಿಗಳಿಲ್ಲದೇ ತಮ್ಮ ಕಸುಬಿಗೆ ತಾವೇ "ಯಜಮಾನ" ರಾಗಬೇಕು ಎಂಬ ಸಂದೇಶವನ್ನು ನೀಡಿದ್ದಾರೆ.

  ಇವುಗಳ ಜೊತೆಗೆ ಒಂದಿಷ್ಟು ಸ್ಕ್ರೀನ್ ಪ್ಲೇನಲ್ಲಿ ಹಿಡಿತಸಾಧಿಸಬಹುದಿತ್ತು. ಪಕ್ಕ ಪೈಸಾವಸೂಲ್, ಕಮರ್ಷಿಯಲ್ ಜಾಗೂ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಈ ಯಜಮಾನ.

  English summary
  Challenging star Darshan and Rashmika Mandanna's most expected movie 'Yajamana' review. The movie is a mass and family entertainer. Song and action scenes are highlight in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X