»   » 'ಎರಡನೇ ಸಲ'ದ ಸೆಂಟಿಮೆಂಟ್, ಸಲ್ಲಾಪಕ್ಕೆ ವಿಮರ್ಶಕರ ಕಾಮೆಂಟ್ಸ್ ಏನು.?

'ಎರಡನೇ ಸಲ'ದ ಸೆಂಟಿಮೆಂಟ್, ಸಲ್ಲಾಪಕ್ಕೆ ವಿಮರ್ಶಕರ ಕಾಮೆಂಟ್ಸ್ ಏನು.?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಡೈರೆಕ್ಟರ್ ಸ್ಪೆಷಲ್' ಚಿತ್ರದ ನಂತರ ಬೆಳ್ಳಿತೆರೆಯಿಂದ ದೂರ ಇದ್ದ ಗುರುಪ್ರಸಾದ್ ಮತ್ತೆ 'ಎರಡನೇ ಸಲ' ಮೂಲಕ ನಿರ್ದೇಶನಕ್ಕೆ ಹಿಂದಿರಿಗಿದ್ದಾರೆ. ಸ್ಪೆಷಲ್ ಸ್ಟಾರ್ ಧನಂಜಯ್ ಮತ್ತು ಸಂಗೀತಾ ಭಟ್ ಅಭಿನಯಿಸಿರುವ 'ಎರಡನೇ ಸಲ' ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

  ಉತ್ತಮ ಸಂಭಾಷಣೆ, ನವಿರಾದ ರೊಮ್ಯಾನ್ಸ್, ಅಮ್ಮನ ಸೆಂಟಿಮೆಂಟ್ ಮತ್ತು ಸಂದೇಶ ಇರುವ 'ಎರಡನೇ ಸಲ' ಚಿತ್ರ ನೋಡಿದವರು ಇಷ್ಟಪಟ್ಟಿದ್ದಾರೆ. ಪ್ರೇಕ್ಷಕರಿಗೆ ಇಷ್ಟವಾಗಿರುವ 'ಎರಡನೇ ಸಲ' ವಿಮರ್ಶಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿ ಆಯ್ತಾ..?[ವಿಮರ್ಶೆ: 'ಮಠ' ಗುರುಗಳ 'ಎರಡನೇ ಸಲ' ಸಖತ್ ನಾಟಿ]


  ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಎರಡನೇ ಸಲ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ಓದಿರಿ...


  ರಂಜನೆಯ ಪೊಟ್ಟಣದಲ್ಲಿ ಭಾವುಕ ಗುಳಿಗೆ: ಪ್ರಜಾವಾಣಿ

  ಇಂದಿನ ಜನಪ್ರಿಯ ಸಿನಿಮಾಗಳಲ್ಲಿ ಕಾಣುವ ಹಲವು ‘ಟ್ವಿಸ್ಟ್‌ಗಳು ಇರುವ ಕಥೆ' ಇಲ್ಲಿಲ್ಲ. ಜೊತೆಗೆ ತಾರಾನಟ ಪ್ರಧಾನ ಸಿನಿಮಾಗಳ ಇಂಟ್ರೊಡೊಕ್ಷನ್‌ ಫೈಟ್‌, ತಾಯಿ ಸೆಂಟಿಮೆಂಟ್‌ಗಳ ಸಿದ್ಧ ಸೂತ್ರಗಳ ಮೇಲೂ ಅವರು ತಮ್ಮ ವ್ಯಂಗ್ಯದ ಹರಿತ ಕತ್ತಿಯನ್ನು ನಿರ್ದೇಶಕ ಗುರುಪ್ರಸಾದ್ ಝಳಪಿಸಿದ್ದಾರೆ. ಜನಪ್ರಿಯ ದಾಟಿಯ ‘ಕಥೆ'ಯನ್ನು ನಿರಾಕರಿಸಿದ ಹಾಗೆಯೇ ‘ನಾಯಕ' - ‘ನಾಯಕಿ' ಎಂಬ ಸಿನಿಮೀಯ ಪ್ರಭಾವಳಿಯನ್ನೂ ನಿರಾಕರಿಸಿ ಗಟ್ಟಿ ಪಾತ್ರಗಳನ್ನು ನಿರ್ದೇಶಕರು ಕಟ್ಟಿದ್ದಾರೆ. ಆದ್ದರಿಂದಲೇ ಸಂಗೀತಾ ಭಟ್‌, ಧನಂಜಯ್‌, ಲಕ್ಷ್ಮೀ - ಈ ಮೂವರ ಜೊತೆಗೆ ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌ ಕೂಡ ಈ ಸಿನಿಮಾದ ನಾಯಕರೇ! ಹಾಗೆಯೇ ಹಾಗೆ ಬಂದು ಹೀಗೆ ಹೋಗುವ ಅನಾಥಾಶ್ರಮದಲ್ಲಿನ ಭಾರ್ಗವಿ ನಾರಾಯಣ್‌ ಪಾತ್ರವೂ ಮನಸಲ್ಲಿ ಅಚ್ಚೊತ್ತಿಬಿಡುತ್ತವೆ.
  ಧನಂಜಯ್‌ ಶಕ್ತಿ ಮಿತಿಗಳೆರಡನ್ನೂ ಚೆನ್ನಾಗಿ ಬಲ್ಲ ಗುರುಪ್ರಸಾದ್‌, ಅವರ ಪತಿಭೆಯನ್ನು ಸಶಕ್ತವಾಗಿ ಬಳಸಿಕೊಂಡಿದ್ದಾರೆ. ತುಂಟ ಹುಡುಗಿಯಾಗಿ ಸಂಗೀತಾ ಭಟ್‌ ಇಷ್ಟವಾಗುತ್ತಾರೆ. ಮುಗ್ಧತೆಯಲ್ಲೂ ಮುದ್ದಾಟದಲ್ಲಿಯೂ ಅವರೂ ಸೈ ಎನಿಸಿಕೊಳ್ಳುತ್ತಾರೆ. ಅಶ್ಲೀಲತೆಯ ಗಡಿ ಮುಟ್ಟದಂತೆಯೇ ಶೃಂಗಾರರಸದ ಪಾಕವನ್ನು ತುಳುಕಿಸುವುದು ಹೇಗೆ ಎನ್ನುವುದಕ್ಕೂ ಈ ಸಿನಿಮಾ ಮಾದರಿ ಆಗಬಲ್ಲದು. ಲಕ್ಷ್ಮಿ ತಮ್ಮ ಪಕ್ವ ಅಭಿನಯದ ಮೂಲಕ ಸಿನಿಮಾದ ಆಚೆಗೂ ಮನಸ್ಸಿನಲ್ಲಿ ಉಳಿಯುತ್ತಾರೆ.
  ಮೇಲು ಮಟ್ಟದಲ್ಲಿ ಚುರುಕು ಸಂಭಾಷಣೆ (ಕೆಲವು ಕಡೆ ದ್ವಂದ್ವಾರ್ಥದ), ವಿಶಿಷ್ಟ ಸನ್ನಿವೇಶಗಳ ಮೂಲಕ ಭರಪೂರ ಮನರಂಜನೆ ನೀಡುತ್ತಲೇ, ಒಳ್ಳೆಯ ಅನುಭವಚಿತ್ರವನ್ನೂ ದಾಟಿಸುವ ಶಕ್ತಿ ‘ಎರಡನೇ ಸಲ' ಸಿನಿಮಾಕ್ಕಿದೆ. ಕೊನೆಯ ದೃಶ್ಯದಲ್ಲಿ ನಾಯಕ ಹೇಳುವ ‘ನಾನು ತುಂಟ ಇರಬಹುದು, ಆದರೆ ಕೆಟ್ಟವನಲ್ಲ' ಎಂಬ ಮಾತು, ನಿರ್ದೇಶಕ ಗುರುಪ್ರಸಾದ್‌ ಅವರಿಗೂ ಅನ್ವಯಿಸಬಹುದು.


  ಫಿಲಾಸಫಿ ಹೇಳಿ ಕಚಗುಳಿ ಇಡುವ ಎರಡನೇ ಸಲ: ವಿಜಯ ಕರ್ನಾಟಕ

  ಸಿನಿಮಾ ಒಂದು ಮನರಂಜನಾ ಮಾಧ್ಯಮ. ಪ್ರೇಕ್ಷಕನಿಗೆ ಏನೇ ಹೇಳಬೇಕಿದ್ದರೂ ಇದರ ಮೂಲಕವೇ ಹೇಳಬೇಕು. ಇಲ್ಲವಾದರೆ ಪ್ರೇಕ್ಷಕನಿಗೆ ಮುಟ್ಟುವುದಿಲ್ಲ. ಈ ಸೂತ್ರವನ್ನು ನಿರ್ದೇಶಕ ಗುರು ಪ್ರಸಾದ್‌ 'ಎರಡನೇ ಸಲ' ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಿದ್ದಾರೆ. ಈ ಸಿನಿಮಾ ಮೂಲಕ ಫಿಲಾಸಫಿಯನ್ನು ಹೀಗೂ ಹೇಳಬಹುದು ಎಂದು ಅವರು ಬ್ರಾಂಡ್‌ ಮಾಡಿದ್ದಾರೆ. ಗುರು ಪ್ರಸಾದ್‌, ಒಂದೊಳ್ಳೆ ಕತೆಯನ್ನು ಪೋಲಿತನದ ಮೂಲಕ ಚೆನ್ನಾಗಿಯೇ ಉಣಬಡಿಸಿದ್ದಾರೆ. ಸಿನಿಮಾದ ಮೊದಲರ್ಧದಲ್ಲಿ ಒಂದಷ್ಟು ಪೋಲಿ ಜೋಕುಗಳು ತುಂಬಿದ್ದರೂ, ದ್ವಿತೀಯಾರ್ಧದಲ್ಲಿ ಅವೆಲ್ಲವನ್ನು ಮರೆಸುವಂತಹ ಸನ್ನಿವೇಶಗಳನ್ನು ಗುರು ಸೃಷ್ಟಿ ಮಾಡಿದ್ದಾರೆ. ಇನ್ನು ಈ ಕತೆ ಹೇಳಲು ಗುರು ಪ್ರಸಾದ್‌ ಮಾಡಿಕೊಂಡಿರುವ ಕಲಾವಿದರ ಆಯ್ಕೆಯೇ ಅದ್ಭುತ. ತಾಯಿ ಪಾತ್ರದಲ್ಲಿ ಲಕ್ಷ್ಮಿ ಅವರದ್ದು ಸಹಜಾಭಿನಯ. ತಮ್ಮ ಆರಂಭದ ದಿನಗಳಿಂದಲೂ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಧನಂಜಯ ಅವರು ಈ ಪಾತ್ರದಲ್ಲಿಯೂ ಉತ್ತಮವಾಗಿ ನಟಿಸುವ ಮೂಲಕ ತಾವೊಬ್ಬ ಉತ್ತಮ ಕಲಾವಿದ ಎಂಬುದನ್ನು ತೋರಿಸಿದ್ದಾರೆ. ನಾಯಕಿ ಸಂಗೀತಾಭಟ್‌ ಅಂತು ಪಾತ್ರದಲ್ಲಿ ಮಿಂದು ಎದ್ದಿದ್ದಾರೆ. ಡಿ ಗ್ಲಾಮ್‌ ರೋಲ್‌ನಲ್ಲಿಯೂ ಅತ್ಯುತ್ತಮವಾಗಿ ನಟಿಸಬಹುದು ಎಂಬುದನ್ನು ಸಂಗೀತಾ ಭಟ್‌ ಸಮರ್ಥವಾಗಿ ತೆರೆಯ ಮೇಲೆ ತೋರಿಸಿದ್ದಾರೆ. ಅನೂಪ್‌ ಸೀಳಿನ್‌ ಮನಸ್ಸಲ್ಲಿ ಉಳಿಯುವಂತಹ ಟ್ಯೂನ್‌ ನೀಡಿದ್ದಾರೆ. ಸಿನಿಮಾದಲ್ಲಿ ಹಾಡುಗಳ ಬಳಕೆ ಕತೆಗೆ ಹೊರೆ ಎನಿಸುವುದಿಲ್ಲ. ಹೂವ ಸುರಿದೇವೋ ಎಂಬ ಹಾಡನ್ನು ಪ್ರತಿ ಪ್ರೇಕ್ಷಕನು ಚಿತ್ರಮಂದಿರ ಬಿಟ್ಟು ಹೊರಬಂದರೂ ಗುನುಗುತ್ತಿರುತ್ತಾನೆ. ಸಂಕಲನಕಾರ ಕೆಂಪರಾಜು ಮತ್ತು ಸಿನಿಮಾಟೋಗ್ರಾಫರ್‌ ಸಾಮ್ರಾಟ್‌ ಅಶೋಕ್‌ ತಮ್ಮ ಕೆಲಸದಲ್ಲಿ ಗಮನ ಸೆಳೆಯುತ್ತಾರೆ


  ಚಮತ್ಕಾರ-ಪೋಲಿತನದ ಪೈಪೋಟಿಯ ನಡುವೆ ಒಂದಷ್ಟು ನವಿರು ರೊಮ್ಯಾನ್ಸು, ಹಳೆ ಸೆಂಟಿಮೆಂಟ್ಸು: ಕನ್ನಡಪ್ರಭ

  ಸರಳ ಕಥೆ ಮತ್ತು ಅಷ್ಟೇ ತೆಳು ಸಂಘರ್ಷಯಿಂದ ಕೂಡಿರುವ ಈ ಕಥೆಯಲ್ಲಿ ಚಮತ್ಕಾರಿ ನಿರೂಪಣೆ ಇದೆ. ಒಟ್ಟಾರೆ ಸಿನೆಮಾದಲ್ಲಿ ಹೆಚ್ಚು ಆಪ್ತವಾಗುವುದು ನಾಯಕನಟ ಮತ್ತು ನಾಯಕನಟಿಯ ಪ್ರೇಮಕಥೆ ಹಾಗು ರೋಮ್ಯಾನ್ಸ್ ಭರಿತ ಘಟನೆಗಳು. ತಾಜಾತನದ ನಡುವೆ ನಿರ್ದೇಶಕರು ತಮ್ಮ ಎಂದಿನ ಶೈಲಿಯ ಪೋಲಿ ಹಾಸ್ಯ ಕೂಡ ಸೇರಿಸಿಕೊಂಡು ಒಂದಷ್ಟು ಅಭಿಮಾನಿಗಳನ್ನು ಕೇಕೆ ಹಾಕಲು ಉದ್ರೇಕಿಸಿದರೆ ಮತ್ತೆ ಕೆಲವರಿಗೆ ಮುಜುಗರವನ್ನು ತರಬಲ್ಲದು. ಇದು ನಿರ್ದೇಶಕ ಗುರುಪ್ರಸಾದ್ ತಮ್ಮ ಸಿನೆಮಾಗಳಲ್ಲಿ ಹೂಡುವ ಮಾಮೂಲಿ ಜೂಜು. ಅಮ್ಮ-ಮಗನ ಸಂಬಂಧವನ್ನು ಕೂಡ ಬಹಳ ಆತ್ಮೀಯವಾಗಿ ಕಟ್ಟಿಕೊಡುವ ನಿರ್ದೇಶಕ, ಪೋಷಕರ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ತೀವ್ರ ಭಾವನಾತ್ಮಕ ದೃಶ್ಯಗಳನ್ನೂ ಮೂಡಿಸುತ್ತಾರೆ. ತಾಂತ್ರಿಕವಾಗಿಯೂ ಸಿನೆಮಾ ನಿರ್ದೇಶಕನ ಕಥೆಗೆ ಪೂರಕವಾಗಿ ನಿಲ್ಲುತ್ತದೆ. ತನ್ನ ಕಥೆಯನ್ನು ಹೇಳಿಕೊಳ್ಳುತ್ತಾ ಹಿಂದಕ್ಕೆ ಮುಂದಕ್ಕೆ ಚಲಿಸುವ ನಿರೂಪಣೆ, ಗೊಂದಲತೆಯನ್ನು ಮತ್ತು ಕುತೂಹಲತೆಯನ್ನು ಕಾಯ್ದುಕೊಳ್ಳಲು ಸಹಕರಿಸಿದೆ. ಅನೂಪ್ ಸೀಳಿನ್ ಸಂಗೀತದಲ್ಲಿ ಮೂಡಿಬಂದಿರುವ 'ಪ್ರೇಮ ಕುರುಡು' ಮತ್ತು 'ಹೂವ ಸುರಿದೇನ' ಹಾಡುಗಳು ಮನಸ್ಸಿನಲ್ಲಿ ನಿಲ್ಲುತ್ತವೆ. ಹಿನ್ನಲೆಯಲ್ಲಿ ಹಳೆಯ ಚಿತ್ರಗೀತೆಗಳು, ಸಂಗೀತವನ್ನು, ಜಾನಪದ ಹಾಡನ್ನು ಮೂಡ್ ಗೆ ತಕ್ಕಂತೆ ಜಾಣತನದಿಂದ ಬಳಸಿಕೊಳ್ಳಲಾಗಿದೆ. ಛಾಯಾಗ್ರಹಣ ಮತ್ತು ಸಂಕಲನ ಕೂಡ ಚಲನಚಿತ್ರಕ್ಕೆ ಸಹಕರಿಸಿವೆ.


  ಮಜಾ ಕೊಡುತ್ತಲೇ, ಅಳಿಸುವ ಎರಡನೇ ಸಲ: ಉದಯವಾಣಿ

  "ಎರಡನೇ ಸಲ' ಚಿತ್ರದ ಕಥೆ ತೀರಾ ಅದ್ಭುತವಾದುದು ಅಥವಾ ಹಿಂದೆಂದು ಕಂಡು ಕೇಳಿರದ ಕಥೆಯಂತೂ ಅಲ್ಲವೇ ಅಲ್ಲ. ತಾಯಿ ಸೆಂಟಿಮೆಂಟ್‌ ಇರುವ ಒಂದು ನಾರ್ಮಲ್‌ ಲವ್‌ಸ್ಟೋರಿ. ಕಥೆಯಲ್ಲಿ ಸೆಂಟಿಮೆಂಟ್‌ಗೆ ಹೆಚ್ಚು ಮಹತ್ವವಿದೆ. ಸಿಕ್ಕಾಪಟ್ಟೆ ಫೀಲಿಂಗ್ಸ್‌ ಇರುವ ಕಥೆಯನ್ನು ಮಜವಾಗಿ ಗುರುಪ್ರಸಾದ್ ಹೇಳಿದ್ದಾರೆ. ಈ ಚಿತ್ರದಲ್ಲಿ ಗುರುಪ್ರಸಾದ್ ಅವರ ಹಿಂದಿನ ಸಿನಿಮಾ ಶೈಲಿ ಎದ್ದು ಕಾಣುತ್ತದೆ. ಡಬಲ್‌ ಮೀನಿಂಗ್‌ ಡೈಲಾಗ್‌ಗಳು, ನಾಯಕನ ತುಂಟತನ, ಪೋಲಿ ಮಾತುಗಳ ಜೊತೆಗೆ ಈ ಬಾರಿ ಗುರುಪ್ರಸಾದ್‌ ಗ್ಲಾಮರ್‌ಗೂ ಹೆಚ್ಚು ಒತ್ತುಕೊಟ್ಟಿದ್ದಾರೆ. ಈ ಫ‌ನ್ನಿ ಲವ್‌ಸ್ಟೋರಿ ನಡುವೆಯೇ ಕಾಡುವ ಸಾಕಷ್ಟು ಅಂಶಗಳಿವೆ. ಕೆಲವು ಸೂಕ್ಷ್ಮ ಅಂಶಗಳನ್ನು ಸಿನಿಮಾದುದ್ದಕ್ಕೂ ಹೇಳುತ್ತಾ ಬಂದಿರುವ ಗುರುಪ್ರಸಾದ್‌, ಒಂದು ಹಂತಕ್ಕೆ ಸಿನಿಮಾವನ್ನು ಸಿಕ್ಕಾಪಟ್ಟೆ ಗಂಭೀರವನ್ನಾಗಿಸಿದ್ದಾರೆ.
  ನಾಯಕ ಧನಂಜಯ್‌ಗೆ ಒಂದು ವಿಭಿನ್ನ ಪಾತ್ರ ಸಿಕ್ಕಿದೆ. ತುಂಟನಾಗಿ, ತಾಯಿಯ ಮುದ್ದಿನ ಮಗನಾಗಿ ಧನಂಜಯ್‌ ಇಷ್ಟವಾಗುತ್ತಾರೆ. ತುಂಬಾ ಸೆಟಲ್ಡ್‌ ಆದ ಅಭಿನಯದ ಮೂಲಕ ಧನಂಜಯ್‌ ಸಿನಿಮಾದುದ್ದಕ್ಕೂ ಹತ್ತಿರವಾಗುತ್ತಾರೆ. ನಾಯಕಿ ಸಂಗೀತಾ ಭಟ್‌ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್‌ಗೂ ಸೈ, ಕಣ್ಣೀರಿಗೂ ಸೈ ಎಂಬುದನ್ನು ಸಾಬೀತುಮಾಡಲು ಪ್ರಯತ್ನಿಸಿದ್ದಾರೆ. ಇನ್ನು ಚಿತ್ರದಲ್ಲಿ ಲಕ್ಷ್ಮೀಯವರ ಅಭಿನಯ ನಿಮ್ಮ ಕಣ್ಣಂಚನ್ನು ಒದ್ದೆ ಮಾಡದೇ ಇರದು. ತಾಯಿಯಾಗಿ, ಭವಿಷ್ಯದ ಬಗ್ಗೆ ಚಿಂತಿಸುವ ಹಿರಿಯ ಜೀವವಾಗಿ ಅವರು ಇಷ್ಟವಾಗುತ್ತಾರೆ. ಅನೂಪ್‌ ಸೀಳೀನ್‌ ಸಂಗೀತದ "ಹೂವ ಸುರಿದೆನಾ ...' ಹಾಡು ಇಷ್ಟವಾಗುತ್ತದೆ.


  Eradane Sala Movie Review: Profoundly Irreverent : Bangalore Mirror

  As usual with him, Guruprasad's tone is irreverent. Underneath this approach is hidden the profound message that he manages to deliver without forcing it as one. The ample sprinkling of double entendres is something that comes complimentary with his films and there is no escaping them. Composer-singer Anoop Seelin gives the film a melodious touch. They feel so soothing even in the first hearing. The songs are however used as montages and not stand-alone poles like in most films. This keeps the film's narrative flow quick while still giving the music its importance. One jarring issue in the film is the deliberately distracting cinematography. Most of the closeup shots indoors have actors behind some element like a screen or grill. Whatever the purpose, it is an annoying irritant. Lakshmi's acting can only be called magical. The film should do a whole lot of good to the careers of Dhananjaya and Sangeetha Bhat. Guruprasad has got almost all things right in Eradane Sala. The mistakes of Director's Special is washed away. He goes back to being the maverick of Matha and Eddelu Manjunatha.  Eradane Sala Movie Review: The Times Of India

  Director Guruprasad has a reputation for making films that are a little hatke. Eradane Sala is no different. There film deals with a subject that has been tried by many filmmakers, but the maverick filmmaker gives it his own quirky spin. This works in most parts, but one feels somewhere that the narrative could have been tackled with a better pace, especially with the shaky the start the film takes. One has seen many Kannada films deal with this topic, with the most memorable one being Thutha Mutha. But, Guruprasad's irreverent and unapologetic take on this topic is refreshing and can connect well with Gen Now. The other interesting bit about the film is how it has its own way of paying a tribute to many cinematic greats, as well as uses memorable film moments and adapts it into a clever way in the story. The other important pillar in the film is the OST; the music stays on long after the film is done in one's mind. Guruprasad definitely has made an interesting youthful tale, where he tries to drive home a point too. One only hopes that certain aspects of the film were up the mark too. At times, the cinematography seems too jaded and shaky, while the editing could have been a tad better too.


  English summary
  Guruprasad Directorial 'Eradane Sala' Kannada Movie has hit the screens yesterday(March 3) and recieved positive Response from the Critics. Here is the critic review of 'Eradane Sala' movie.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more