twitter
    For Quick Alerts
    ALLOW NOTIFICATIONS  
    For Daily Alerts

    ರಿಮೇಕ್ ಎಂಬ ಸತ್ಯ ಮುಚ್ಚಿಟ್ಟು ನಿರಾಸೆ ಮಾಡಿದ್ರು, ಆದ್ರೂ ಓಕೆ; ಮಾನ್ಸೂನ್ ರಾಗ ಫಸ್ಟ್ ಶೋ ನೋಡಿದವರ ಮಾತಿದು

    |

    ಡಾಲಿ ಧನಂಜಯ, ರಚಿತಾರಾಮ್, ಅಚ್ಯುತ್ ಕುಮಾರ್ ಸುಹಾಸಿನಿ ಹಾಗೂ ಯಶಾ ಶಿವಕುಮಾರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಮಾನ್ಸೂನ್ ರಾಗ ಚಿತ್ರ ಹಲವು ಬಿಡುಗಡೆ ದಿನಾಂಕಗಳನ್ನು ಬದಲಾಯಿಸಿದ ನಂತರ ನಿನ್ನೆ ( ಸೆಪ್ಟೆಂಬರ್ 15 ) ತೆರೆಗಪ್ಪಳಿಸಿದೆ.

    ಇನ್ನು ಈ ಚಿತ್ರ ಇಂದು ( ಸೆಪ್ಟೆಂಬರ್ 16 ) ಅಧಿಕೃತವಾಗಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆದರೆ ಚಿತ್ರತಂಡ ನಿನ್ನೆಯೇ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿನ ಆಯ್ದ ಚಿತ್ರಮಂದಿರಗಳಲ್ಲಿ ಚಿತ್ರದ ಒಟ್ಟು 6 ಪೇಯ್ಡ್ ಪ್ರೀಮಿಯರ್ ಪ್ರದರ್ಶನವನ್ನು ಏರ್ಪಡಿಸಿತ್ತು. ಈ ಪ್ರೀಮಿಯರ್ ಪ್ರದರ್ಶನಗಳ ಟಿಕೆಟ್ ಕೂಡ ಸೋಲ್ಡ್ ಔಟ್ ಆಗಿ ಹೌಸ್ ಫುಲ್ ಬೋರ್ಡ್ ಬಿದ್ದಿತ್ತು.

    ಹುಡುಗರ ಸಾಮರ್ಥ್ಯ ಮ್ಯಾಗಿಯಂತೆ 2 ನಿಮಿಷ ಎಂದಿದ್ದ ನಟಿಗೆ ಡಾಲಿ ಧನಂಜಯ ಸವಾಲ್! ಹುಡುಗರ ಸಾಮರ್ಥ್ಯ ಮ್ಯಾಗಿಯಂತೆ 2 ನಿಮಿಷ ಎಂದಿದ್ದ ನಟಿಗೆ ಡಾಲಿ ಧನಂಜಯ ಸವಾಲ್!

    ಚಿತ್ರ ನೋಡಿ ಬಂದ ಪ್ರೇಕ್ಷಕರು ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಚಿತ್ರವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ, ಎಡಿಟಿಂಗ್ ಹಾಗೂ ಸಂಭಾಷಣೆ ಸಕತ್ತಾಗಿದೆ ಎಂಬ ವಿಮರ್ಶೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರ ಜತೆಗೆ ಎಲ್ಲಾ ಭಾಷೆಯ ಚಿತ್ರಗಳನ್ನು ನೋಡಿ ಅಭ್ಯಾಸವಿರುವ ಸಿನಿ ಪ್ರೇಕ್ಷಕ ಮಾತ್ರ ಚಿತ್ರತಂಡ ದೊಡ್ಡ ಸತ್ಯವೊಂದನ್ನು ಮುಚ್ಚಿಟ್ಟು ನಿರಾಸೆ ಮೂಡಿಸಿತು ಎಂದು ಕೂಡ ಚಿತ್ರ ನೋಡಿದ ನಂತರ ಬೇಸರ ಹೊರಹಾಕಿದ್ದಾರೆ.

     ಮಾನ್ಸೂನ್ ರಾಗ ರೀಮೇಕ್!

    ಮಾನ್ಸೂನ್ ರಾಗ ರೀಮೇಕ್!

    ಸಿನಿ ಪ್ರೇಕ್ಷಕನೋರ್ವ ಮಾನ್ಸೂನ್ ರಾಗ ಪೆಯ್ಡ್ ಪ್ರೀಮಿಯರ್ ಶೋ ವೀಕ್ಷಿಸಿದ ನಂತರ ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಚಿತ್ರದ ಮೇಕಿಂಗ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ಇದೇ ವೇಳೆ ಚಿತ್ರತಂಡ ಇದು ತೆಲುಗಿನ ಕೇರ್ ಆಫ್ ಕಂಚೆರಪಾಲೆಂ ಚಿತ್ರದ ರಿಮೇಕ್ ಎಂಬ ಸತ್ಯವನ್ನು ಮುಚ್ಚಿಟ್ಟದ್ದು ಬೇಸರದ ಸಂಗತಿ ಎಂದು ಬರೆದುಕೊಂಡಿದ್ದಾರೆ. ಮೂಲ ಚಿತ್ರವನ್ನು ನೋಡಿಲ್ಲದೇ ಇರುವವರು ಈ ಚಿತ್ರವನ್ನು ಖಂಡಿತ ನೋಡಬಹುದು ಎಂದು ಕೂಡ ಈ ಪ್ರೇಕ್ಷಕ ತಿಳಿಸಿದ್ದಾರೆ.

     ಮುಂಚೆನೇ ಹೇಳ್ಬಹುದಿತ್ತಲ್ವಾ?

    ಮುಂಚೆನೇ ಹೇಳ್ಬಹುದಿತ್ತಲ್ವಾ?

    ಮತ್ತೋರ್ವ ಸಿನಿಪ್ರೇಕ್ಷಕರ ಮಾನ್ಸೂನ್ ರಾಗ ರಿಮೇಕ್ ಎಂಬುದರ ಕುರಿತು ದನಿ ಎತ್ತಿದ್ದು, 'ಏನಪ್ಪಾ ಡಾಲಿ ಮುಂಚೆನೇ ಹೇಳೋದಲ್ವಾ ನಾವು ಮಾಡ್ತಿರೋದು ರೀಮೇಕ್ ಅಂತ' ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಚಿತ್ರತಂಡ ಪ್ರೇಕ್ಷಕರು ಹೇಳುತ್ತಿರುವಂತೆ ರಿಮೇಕ್ ಎಂಬ ಸತ್ಯವನ್ನು ಮುಚ್ಚಿಟ್ಟಿದ್ದು ಏಕೆ ಎಂಬ ಪ್ರಶ್ನೆ ಇದೀಗ ಎಲ್ಲರನ್ನು ಕಾಡುತ್ತಿದೆ.

     ಕನ್ನಡದವರು ಸಿನಿಮಾ ಮೇಕಿಂಗ್ ಪಂಡಿತರು

    ಕನ್ನಡದವರು ಸಿನಿಮಾ ಮೇಕಿಂಗ್ ಪಂಡಿತರು

    ರಾಹುಲ್ ಆರ್ ಎಲ್ ಎಂಬ ಸಿನಿಪ್ರೇಕ್ಷಕ ಮಾನ್ಸೂನ್ ರಾಗ ಪೇಯ್ಡ್ ಪ್ರೀಮಿಯರ್ ವೀಕ್ಷಿಸಿದ ನಂತರ ಟ್ವೀಟ್ ಮಾಡಿದ್ದು, ಕನ್ನಡ ಸಿನಿಮಾ ಮಂದಿ ಅದ್ಭುತ ಗುಣಮಟ್ಟದ ಚಿತ್ರಗಳನ್ನು ನಿರ್ಮಿಸುವ ಪಂಡಿತರಾಗಿಬಿಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಮಾನ್ಸೂನ್ ರಾಗ ಚಿತ್ರದ ಪ್ರತಿಯೊಂದು ದೃಶ್ಯ ಕೂಡ ಸುಂದರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

     ಒಂದೊಳ್ಳೆ ಫೀಲ್ ಗುಡ್ ಮೂವಿ

    ಒಂದೊಳ್ಳೆ ಫೀಲ್ ಗುಡ್ ಮೂವಿ

    ಪ್ರಜ್ವಲ್ ಗೌಡ ಎಂಬ ಸಿನಿರಸಿಕ ಮಾನ್ಸೂನ್ ರಾಗ ಚಿತ್ರ ನೋಡಿದ ನಂತರ ಇದೊಂದು ಫೀಲ್ ಗುಡ್ ಸಿನಿಮಾ, ಎಂತಹ ಸುಂದರ ಸಂಗೀತ ಮತ್ತು ಛಾಯಾಗ್ರಹಣ ಎಂದು ಹೊಗಳಿದ್ದಾರೆ ಹಾಗೂ ಚಿತ್ರದ ತಾರಾಗಣ ಪರ್ಫೆಕ್ಟ್ ಆಗಿದೆ ಎಂದು ಬರೆದುಕೊಂಡಿದ್ದಾರೆ.

    English summary
    Dhananjaya, Rachita Ram Starrer Monsoon Raaga Twitter Review: Audience disappointed movie team hide the remake fact
    Friday, September 16, 2022, 9:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X