twitter
    For Quick Alerts
    ALLOW NOTIFICATIONS  
    For Daily Alerts

    Head Bush Twitter Review : ಧನಂಜಯ್, ಯೋಗಿ 'ಹೆಡ್ ಬುಷ್' ಸಿನಿಮಾ ನೋಡಿ ನೆಟ್ಟಿಗರು ಹೇಳಿದ್ದೇನು?

    By ಫಿಲ್ಮಿಬೀಟ್ ಡೆಸ್ಕ್
    |

    ಸ್ಯಾಂಡಲ್‌ವುಡ್‌ನ 'ಕಾಂತಾರ' ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿರುವಾಗಲೇ ಮತ್ತೊಂದು ಸಿನಿಮಾ ಪ್ರೀಮಿಯರ್ ಆಗಿದೆ. ಡಾಲಿ ಧನಂಜಯ್ ಅಭಿನಯದ 'ಹೆಡ್ ಬುಷ್' ಇಂದು (ಅಕ್ಟೋಬರ್ 21) ಗ್ರ್ಯಾಂಡ್ ಆಗಿ ಬಿಡುಗಡೆಯಾಗಲಿದೆ.

    ಆದರೆ, ಸಿನಿಮಾ ಬಿಡುಗಡೆಗೂ ಮುನ್ನವೇ ಸಿನಿಪ್ರಿಯರು ಹಾಗೂ ಧನಂಜಯ್ ಅಭಿಮಾನಿಗಳು 'ಹೆಡ್ ಬುಷ್' ಸಿನಿಮಾವನ್ನು ವೀಕ್ಷಿಸಿದ್ದಾರೆ. ಮೊದಲು ಸಿನಿಮಾ ವೀಕ್ಷಿಸಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಟ್ವಿಟರ್‌ನಲ್ಲಿ 'ಹೆಡ್ ಬುಷ್' ನೋಡಿ ಏನಂತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

    ದೀಪಾವಳಿ ಹಬ್ಬಕ್ಕೆ ಬಂಪರ್

    ದೀಪಾವಳಿ ಹಬ್ಬಕ್ಕೆ ಬಂಪರ್

    'ಹೆಡ್ ಬುಷ್' ಪ್ರೀಮಿಯರ್ ನೋಡಿದವರು ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. 70ರ ದಶಕದ ಬೆಂಗಳೂರಿನ ಭೂಗತಲೋಕವನ್ನು ಪರಿಚಯಿಸಲು ಹೊರಟಿರುವ ಸಿನಿಮಾ ನೋಡಿ ಕೆಲವರು ಥ್ರಿಲ್ ಆಗಿದ್ದಾರೆ. " ಫಸ್ಟ್ ಹಾಫ್ ಪಾತ್ರಗಳನ್ನು ಪರಿಚಯ ಮಾಡುವ ಮೂಲಕ ಆರಂಭ ಆಗುತ್ತೆ. ಹಾಗೇ ಫಿಲಾಸೋಪಿಕಲ್ ಡೈಲಾಗ್‌ಗಳು ಕೂಡ ಇವೆ. ಅದೇ ಸೆಕೆಂಡ್ ಹಾಫ್‌ ಸಂಪೂರ್ಣ ಪೊಲಿಟಿಕಲ್ ಗೇಮ್ ಮೇಲೆ ನಡೆಯಲಿದೆ. ಈ ಸಿನಿಮಾ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಗೆದ್ದಂತೆ" ಎಂದು ಟ್ವೀಟ್ ಮಾಡಿದ್ದಾರೆ.

    ಎಲ್ಲಾ ಪಾತ್ರಗಳೂ ಜೀವಂತ

    ಎಲ್ಲಾ ಪಾತ್ರಗಳೂ ಜೀವಂತ

    " ಎಂ ಪಿ ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ್ ಅದ್ಭುತವಾಗಿ ನಟಿಸಿದ್ದಾರೆ. ಹಾಗೇ ಯೋಗಿ ಹಾಗೂ ಸ್ಯಾಮ್‌ಸನ್ ಪಾತ್ರಗಳು ಖಡಕ್ ಆಗಿವೆ. ಹಿನ್ನೆಲೆ ಸಂಗೀತ ಚಿಂದಿ. ಥಿಯೇಟರ್ ವೈಬ್ರೇಟಿಂಗ್ ಮೋಡ್‌ನಲ್ಲಿತ್ತು" ಎನ್ನುತ್ತಿದ್ದಾರೆ. ಇದರ ಜೊತೆನೇ ಶೂನ್ಯ ನಿರ್ದೇಶನ ಇನ್ನೂ ಅದ್ಭುತವಾಗಿ ಇರಬಹುದಿತ್ತು. ಹಾಗೇ ಕ್ಲೈಮ್ಯಾಕ್ಸ್ ನಿರೀಕ್ಷೆಗೆ ತಕ್ಕಂತಿಲ್ಲ" ಎಂದೂ ಹೇಳುತ್ತಿದ್ದಾರೆ.

    ಕಾಲ ಘಟ್ಟಕ್ಕೆ ಹೊಂದಿಕೊಳ್ಳುತ್ತಿಲ್ಲ

    ಕಾಲ ಘಟ್ಟಕ್ಕೆ ಹೊಂದಿಕೊಳ್ಳುತ್ತಿಲ್ಲ

    "ಹೆಡ್ ಬುಷ್ ನಾಟಕೀಯ ಅಂತ ಅನಿಸುತ್ತೆ. ರಿಯಲ್ ಪಾತ್ರಗಳು ಜೀವಿಸಿದ್ದ ಕಾಲಕ್ಕೆ ಹೊಂದಾಣಿಕೆಯಾಗುವುದಿಲ್ಲ. ಪ್ರೇಕ್ಷಕರು ಅಂದು ಏನಾಗಿತ್ತು ಅನ್ನುವುದನ್ನು ನೋಡಲು ಇಷ್ಟ ಪಡುತ್ತಾರೆ. ಆದರೆ, ಯಾರೂ ನಿರೀಕ್ಷೆಯ ಹಂತವನ್ನು ತಲುಪಲಿಲ್ಲ" ಅಂತ ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

    ಇದು ಇಂಟರ್‌ವಲ್ ಅಷ್ಟೇ

    ಇದು ಇಂಟರ್‌ವಲ್ ಅಷ್ಟೇ

    "ನೀವು ಕೇಳುತ್ತಿರುವುದು ನಿಜ. ಈ ಇಡೀ ಸಿನಿಮಾ ಕೇವಲ ಇಂಟರ್‌ವಲ್ ಅಷ್ಟೇ. ಇಡೀ ಸಿನಿಮಾವನ್ನು ಎರಡನೇ ಅಧ್ಯಾಯದಲ್ಲಿ ಹೇಳಲಿದ್ದಾರೆ. ಗ್ಯಾಂಗ್ ವಾರ್ ಹೇಗಾಯ್ತು ಅನ್ನುವುದನ್ನು ಈ ಸಿನಿಮಾದ ಕತೆ ಹೇಳುತ್ತಿದೆ." ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

    ಸ್ಯಾಮ್‌ಸಮ್ ಪಾತ್ರ ಅದ್ಭುತ

    ಸ್ಯಾಮ್‌ಸಮ್ ಪಾತ್ರ ಅದ್ಭುತ

    ಈ ಸಿನಿಮಾ ಮೂರು ಪಾತ್ರಗಳು ಪ್ರಮುಖವಾಗಿ ಗಮನ ಸೆಳೆದಿದ್ದವು. ಮಾಜಿ ಡಾನ್ ಜಯರಾಜ್ ಪಾತ್ರದಲ್ಲಿ ನಟಿಸುತ್ತಿರುವ ಧನಂಜಯ್, ಗಂಗಾ ಪಾತ್ರದಲ್ಲಿ ಲೂಸ್ ಮಾದ ಯೋಗಿ ಹಾಗೂ ಸ್ಯಾಮ್‌ಸನ್ ಪಾತ್ರದಲ್ಲಿ ಬಾಲು ನಾಗೇಂದ್ರ. ಡಾಲಿ ಹಾಗೂ ಯೋಗಿ ಜೊತೆ ಸ್ಯಾಮ್‌ಸನ್ ಪಾತ್ರಧಾರಿ ಬಾಲು ನಾಗೇಂದ್ರ ಅಭಿನಯ ಕೂಡ ಇಷ್ಟ ಆಗಿದೆ.

    English summary
    Dhananjaya, Loose Mada Yogi, Raghu Mukherjee Starrer Head Bush Movie Twitter Review, Know More.
    Friday, October 21, 2022, 10:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X