twitter
    For Quick Alerts
    ALLOW NOTIFICATIONS  
    For Daily Alerts

    ಮಂಕಾದ ಡಾಲಿಗೆ ವರ್ಷದ ಕೊನೆ ಚಿತ್ರವಾದರೂ ಗೆಲುವು ತಂದುಕೊಡ್ತಾ? ಹೇಗಿದೆ ಜಮಾಲಿಗುಡ್ಡ?

    |

    ನಟ ಡಾಲಿ ಧನಂಜಯ್ ಕಳೆದ ವರ್ಷ ಬಡವ ರಾಸ್ಕಲ್ ಹಾಗೂ ಪುಷ್ಪ ಚಿತ್ರಗಳ ಮೂಲಕ ಭರ್ಜರಿ ಗೆಲುವು ಕಂಡಿದ್ದರು. ಆದರೆ ಈ ವರ್ಷದಲ್ಲಿ ಬಿಡುಗಡೆಗೊಂಡ ಅವರ ಯಾವ ಚಿತ್ರಗಳೂ ಸಹ ಗೆಲುವನ್ನು ಕಂಡಿಲ್ಲ. ಮೊದಲಿಗೆ 'ಟ್ವೆಂಟಿ ಒನ್ ಅವರ್ಸ್' ಎಂಬ ಚಿತ್ರದಲ್ಲಿ ನಟಿಸಿದ ಧನಂಜಯ್ ವರ್ಷದ ಆರಂಭದಲ್ಲಿಯೇ ಸೋಲನ್ನು ಕಂಡರು. ನಂತರ ತಮಿಳಿನ 'ಕಡಗು' ಚಿತ್ರದ ರಿಮೇಕ್ 'ಬೈರಾಗಿ' ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಜತೆ ನಟ ಧನಂಜಯ್ ನಟಿಸಿದ್ದರು. ಈ ಚಿತ್ರವೂ ಸಹ ಗೆಲ್ಲಲಿಲ್ಲ.

    ಬಳಿಕ ತೆಲುಗಿನ 'ಕೇರ್ ಆಫ್ ಕಾಂಚೆರಪಾಲೆಂ' ಚಿತ್ರದ ರಿಮೇಕ್ 'ಮಾನ್ಸೂನ್ ರಾಗ' ಚಿತ್ರದಲ್ಲಿ ನಟಿಸಿದ ಧನಂಜಯ್ ಈ ಚಿತ್ರದ ಮೂಲಕವೂ ಸಹ ಗೆಲ್ಲಲಿಲ್ಲ. ಇನ್ನುಳಿದಂತೆ ಧನಂಜಯ್ ಅತಿಥಿ ಪಾತ್ರದಲ್ಲಿ ನಟಿಸಿದ್ದ ತೋತಾಪುರಿ ಸೋಲುಂಡಿತು ಹಾಗೂ ಬಹು ನಿರೀಕ್ಷಿತ ಚಿತ್ರ ಹೆಡ್ ಬುಷ್ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು.

    ಹೀಗೆ ಈ ವರ್ಷದಲ್ಲಿ ಇಲ್ಲಿಯವರೆಗೆ ಧನಂಜಯ್ ನಟಿಸಿದ ಯಾವ ಚಿತ್ರವೂ ದೊಡ್ಡ ಸದ್ದು ಮಾಡಲಾಗದೇ ಮಂಕಾಗಿದ್ದು, ವರ್ಷಾಂತ್ಯದಲ್ಲಿ ತೆರೆಕಂಡಿರುವ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಚಿತ್ರದ ಮೂಲಕ ಧನಂಜಯ್ ಕಮ್‌ಬ್ಯಾಕ್ ಮಾಡ್ತಾರಾ ಎಂಬ ಪ್ರಶ್ನೆ ಹಾಗೂ ಕುತೂಹಲ ಪ್ರೇಕ್ಷಕರಲ್ಲಿತ್ತು. ಚಿತ್ರ ಇಂದು ( ಡಿಸೆಂಬರ್ 30 ) ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಮೊದಲ ಪ್ರದರ್ಶವನ್ನು ವೀಕ್ಷಿಸಿ ಆಚೆ ಬಂದ ಕೆಲ ಸಿನಿ ರಸಿಕರು ಚಿತ್ರ ಹೇಗಿದೆ ಎಂಬುದನ್ನು ಟ್ವಿಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಈ ಕೆಳಕಂಡಂತೆ ತಿಳಿಸಿದ್ದಾರೆ.

    ಎಮೋಷನಲ್ ಚಿತ್ರ

    ಎಮೋಷನಲ್ ಚಿತ್ರ

    ರವಿರಾಜ್ ಎಸ್ ಪಾಟೀಲ್ ಎಂಬ ಸಿನಿ ರಸಿಕ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಚಿತ್ರವನ್ನು ನೋಡಿದ ಬಳಿಕ ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರವನ್ನು ವಿಮರ್ಶಿಸಿದ್ದಾರೆ. ಓರ್ವ ಮುಗ್ಧ ಹುಡುಗ ಹಾಗೂ ಒಂದು ಪುಟ್ಟ ಹುಡುಗಿಯ ನಡುವಿನ ಒಡನಾಟ ಹಾಗೂ ಭಾವನೆಗಳು ಚಿತ್ರದಲ್ಲಿದೆ, ನಾಯಕ ಧನಂಜಯ ಹಾಗೂ ನಾಯಕಿ ಅದಿತಿ ಪ್ರಭುದೇವ ನಡುವಿನ ಪವಿತ್ರ ಪ್ರೀತಿ ಚೆನ್ನಾಗಿ ಮೂಡಿಬಂದಿದೆ, ಅರ್ಜುನ್ ಜನ್ಯಾ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಸೂಪರ್ಬ್ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

    ಸಾಧಾರಣ

    ಸಾಧಾರಣ

    ವರ್ಲ್ಡ್ ಸಿನಿಮಾ ಎಂಬ ಚಿತ್ರ ಪ್ರೇಮಿ ಓರ್ವ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಚಿತ್ರವನ್ನು ವೀಕ್ಷಿಸಿದ ನಂತರ ಚಿತ್ರದ ಮೊದಲಾರ್ಧ ಸಾಮಾನ್ಯವಾಗಿದೆ, ಅದ್ಭುತ ಎನ್ನುವಂತದ್ದೂ ಏನಿಲ್ಲ ಹಾಗೂ ಬೋರ್ ಹೊಡೆಸುವಂತದ್ದೂ ಸಹ ಏನಿಲ್ಲ ಎಂದು ಬರೆದಿದ್ದಾರೆ. ದ್ವಿತೀಯಾರ್ಧದಲ್ಲಿ ಲವ್ ಸ್ಟೋರಿ ಇದ್ದು. ಕಥೆ ಸರಳ ಹಾಗೂ ಈ ಹಿಂದೆ ಹಲವು ಚಿತ್ರಗಳಲ್ಲಿರುವ ಕಥೆಯೇ ಎನಿಸಿದರೂ ಒಳ್ಳೆ ಫೀಲ್ ಕೊಡುತ್ತೆ ಎಂದಿದ್ದಾರೆ. ಇದೊಂದು ಪಕ್ಕಾ ಸಾಧಾರಣ ಚಿತ್ರವಾಗಿದ್ದು, ಕುಟುಂಬ ಸಮೇತ ನೋಡಬಹುದು ಎಂದು ಉಲ್ಲೇಖಿಸಿದ್ದಾರೆ.

    ಸಿನಿಮಾ ಪೇಜ್ ರಿವ್ಯೂ

    ಸಿನಿಮಾ ಪೇಜ್ ರಿವ್ಯೂ

    ಇನ್ನು ಸಿನಿಮಾ ಅಪ್‌ಡೇಟ್ಸ್ ಎಂಬ ಸಿನಿಮಾ ಕುರಿತಾದ ಟ್ವಿಟರ್ ಪೇಜ್ ಕೂಡ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಚಿತ್ರದ ವಿಮರ್ಶೆ ಬರೆದು ಟ್ವೀಟ್ ಮಾಡಿದೆ. ಸರಳ ಕಥೆಯನ್ನು ಹೊಂದಿರುವ ಚಿತ್ರ ಇದಾಗಿದ್ದು, ಒಳ್ಳೆಯ ವಿಷುಯಲ್ ಚಿತ್ರದಲ್ಲಿದೆ, ಎಂಗೇಂಜಿಂಗ್ ಆಗಿದೆ, ಧನಂಜಯ್ ಹಾಗೂ ಅದಿತಿ ಪ್ರಭುದೇವ ತೆರೆ ಮೇಲೆ ಚೆನ್ನಾಗಿ ಕಾಣುತ್ತಾರೆ, ಚಿತ್ರಕತೆ ಚೆನ್ನಾಗಿದೆ, ಅರ್ಜುನ್ ಜನ್ಯಾ ಒಳ್ಳೆಯ ಸಂಗೀತ ನೀಡಿದ್ದು, ಯಶ್ ಶೆಟ್ಟಿ ಹಾಗೂ ಧನಂಜಯ್ ದೃಶ್ಯಗಳು ನಿಮಗೆ ಇಷ್ಟವಾಗುತ್ತವೆ ಎಂದು ಬರೆದುಕೊಂಡು ಐದಕ್ಕೆ ಮೂರೂವರೆ ಸ್ಟಾರ್ ಕೊಟ್ಟಿದ್ದಾರೆ.

    English summary
    Dhananjaya Starrer Monsoon Once Upon a time in Jamaligudda Twitter Review. Read on
    Friday, December 30, 2022, 15:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X