»   » ಫಸ್ಟ್ ಡೇ, ಫಸ್ಟ್ ಶೋ 'ಭರ್ಜರಿ' ನೋಡಿದವರು ಏನಂದ್ರು.?

ಫಸ್ಟ್ ಡೇ, ಫಸ್ಟ್ ಶೋ 'ಭರ್ಜರಿ' ನೋಡಿದವರು ಏನಂದ್ರು.?

Posted By:
Subscribe to Filmibeat Kannada

ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ ಅಭಿನಯದ 'ಭರ್ಜರಿ' ಸಿನಿಮಾದ ಮೂಲಕ ಹ್ಯಾಟ್ರಿಕ್ ಬಾರಿಸುವ ತವಕದಲ್ಲಿದ್ದಾರೆ. ಬಹುದ್ಧೂರ್ ನಂತರ ನಿರ್ದೇಶಕ ಚೇತನ್ ಕುಮಾರ್ ಮತ್ತು ಧ್ರುವಸರ್ಜಾ ಕಾಂಬಿನೇಷನ್ ಮತ್ತೆ ಅದೃಷ್ಟ ಪರೀಕ್ಷೆಗೆ ನಿಂತಿದೆ.

ನಿರೀಕ್ಷೆಯಂತೆ ರಾಜ್ಯಾದ್ಯಂತ ಅದ್ಧೂರಿಯಾಗಿ 'ಭರ್ಜರಿ' ಸಿನಿಮಾ ತೆರೆಕಂಡಿದೆ. ಸುಮಾರು 300 ಥಿಯೇಟರ್ ನಲ್ಲಿ 'ಭರ್ಜರಿ' ಪ್ರದರ್ಶನವಾಗುತ್ತಿದೆ. ಈಗಾಗಲೇ ಮುಂಜಾನೆ ಚಿತ್ರದ ಮೊದಲ ಶೋ ಆರಂಭವಾಗಿದ್ದು, ಬಹುತೇಕ ಕಡೆ ಮೊದಲ ಶೋ ಅಂತ್ಯವಾಗಿದೆ.

ಹಾಗಿದ್ರೆ, ಫಸ್ಟ್ ಡೇ ಫಸ್ಟ್ ಶೋ 'ಭರ್ಜರಿ' ಸಿನಿಮಾ ನೋಡಿದವರು ಏನಂದ್ರು. ಮುಂದೆ ಓದಿ....

ದರ್ಶನ್ ಧ್ವನಿಯಿಂದ ಆರಂಭ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹಿನ್ನೆಲೆ ಧ್ವನಿಯಿಂದ 'ಭರ್ಜರಿ' ಸಿನಿಮಾ ಆರಂಭವಾಗುತ್ತೆ.

'ಭರ್ಜರಿ' ಹುಡುಗನಿಗೆ ಶುಭ ಕೋರಿದ ಸ್ಯಾಂಡಲ್ ವುಡ್ ನಟರು

ಒಳ್ಳೆಯ ಮನರಂಜನೆ

''ಚಿತ್ರದ ಮೊದಲಾರ್ಧದಲ್ಲಿ ಲವ್ ಸ್ಟೋರಿ ಜೊತೆ ಒಳ್ಳೆಯ ಮನರಂಜನೆ ಇದೆ. ಚಿತ್ರದ ಸೆಕೆಂಡ್ ಹಾಫ್ ನಲ್ಲಿ ಹೆಚ್ಚು ಆಕ್ಷನ್ ಇರಬಹುದು ಎಂಬ ಕುತೂಹಲದಿಂದ ಕಾಯುತ್ತಿದ್ದೇವೆ'' ಎಂದು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಕಮರ್ಷಿಯಲ್ ಎಂಟರ್ ಟೈನ್ ಮೆಂಟ್

''ಡೈಲಾಗ್ ಮತ್ತು ಫೈಟ್ಸ್ ನಿಂದ ಧ್ರುವಸರ್ಜಾ ಗಮನ ಸೆಳೆಯುತ್ತಾರೆ. ರಚಿತಾ ರಾಮ್ ಮುದ್ದಾಗಿದ್ದಾರೆ. ಸಾಧುಕೋಕಿಲಾ ಮಿಂಚಿದ್ದಾರೆ''

ಧ್ರುವ ಫ್ಯಾನ್ಸ್ ಗೆ ಫುಲ್ ಮಿಲ್ಸ್

''ಭರ್ಜರಿ ಚಿತ್ರದ ಇಂಟರ್ ವಲ್ ಪವರ್ ಫುಲ್ ಫೈಟ್ ನೊಂದಿಗೆ ಅಂತ್ಯವಾಗಿದೆ. ಮೊದಲಾರ್ಧ ಮನರಂಜನೆಯಾಗಿದೆ. ಧ್ರುವ ಅಭಿಮಾನಿಗಳಿಗೆ ಫುಲ್ ಮಿಲ್ಸ್'' ಎಂದಿದ್ದಾರೆ.

ಕ್ಯೂಟ್ ಭರ್ಜರಿ

ಮೊದಲಾರ್ಧ ಮಸ್ತ್ ಎಂಟರ್ ಟೈನಿಂಗ್ ನಿಂದ ಕೂಡಿದೆ. ಧ್ರುವ ಸರ್ಜಾ ಮಿಂಚಿದ್ದಾರೆ, ಸಾಧುಕೋಕಿಲಾ ಸೂಪರ್. ಇದು ಭರ್ಜರಿ ಕ್ಯೂಟ್ ಆಗಿದೆ''

ಹಳೆ ಡೈಲಾಗ್, ಹಳೆ ಬಿಲ್ಡಪ್ 'ಭರ್ಜರಿ'

''ಭರ್ಜರಿ ಅದೇ ಹಳೆ ಡೈಲಾಗ್, ಹಳೆ ಬಿಲ್ಡಪ್ ಮತ್ತು ಅದೇ ಸಾಂಗ್ ಗಳಿಂದ ಕೂಡಿದೆ. ಮಧ್ಯಂತರವೊತ್ತಿಗೆ ತಲೆನೋವು ಶುರುವಾಗಿದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

English summary
Action Prince Dhruva Sarja starrer 'Bharjari' has hit the screens today (September 15th). 'Bharjari' is receiving positive response in Twitter.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada