twitter
    For Quick Alerts
    ALLOW NOTIFICATIONS  
    For Daily Alerts

    ಡಾ ರಾಜ್ ಅಭಿಮಾನಿ 'ಕನಕ'ನಿಗೆ ವಿಮರ್ಶಕರು ಕೊಟ್ಟ ಅಂಕಗಳೆಷ್ಟು?

    By Bharath Kumar
    |

    ದುನಿಯಾ ವಿಜಯ್ ಮತ್ತು ನಿರ್ದೇಶಕ ಆರ್.ಚಂದ್ರು ಜೋಡಿಯಲ್ಲಿ ಮೂಡಿಬಂದಿರುವ 'ಕನಕ' ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಚಿತ್ರವನ್ನ ನೋಡಿದ ದುನಿಯಾ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಚಿತ್ರದಲ್ಲಿ ಏನಿಷ್ಟ ಆಯ್ತು ಅಂದ್ರೆ, ಎಲ್ಲ ಇಷ್ಟ ಆಯ್ತು, ವಿಜಯ್ ಸೂಪರ್ ಅಂತಾರೆ ಅಭಿಮಾನಿಗಳು.

    ಆದ್ರೆ, ಚಿತ್ರವನ್ನ ನೋಡಿದ ವಿಮರ್ಶಕರು, ಕನಕನ ಬಗ್ಗೆ ಹೇಳೋದೆ ಬೇರೆ. ವಿಜಿ ಮತ್ತು ಚಂದ್ರು ಕಾಂಬಿನೆಷನ್ ನ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ಟ್ರೈಲರ್, ಹಾಡುಗಳನ್ನ ನೀಡಲಾಗಿತ್ತು. ಈಗ ಸಿನಿಮಾದಲ್ಲಿ ಅಂತಹ ಅಂಶಗಳು ಇದೆಯಾ? ವಿಮರ್ಶಕರು ಸಿನಿಮಾ ನೋಡಿ ಖುಷಿಯಾದ್ರಾ? ಎಂಬುದು ಪ್ರಶ್ನೆ.

    ವಿಮರ್ಶೆ: ಅಣ್ಣಾವ್ರ ಅಭಿಮಾನಿ 'ಕನಕ' ಮಾಸ್ ಪ್ರೇಕ್ಷಕರ ಮನೋರಂಜಕವಿಮರ್ಶೆ: ಅಣ್ಣಾವ್ರ ಅಭಿಮಾನಿ 'ಕನಕ' ಮಾಸ್ ಪ್ರೇಕ್ಷಕರ ಮನೋರಂಜಕ

    ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, 'ಕನಕ' ಚಿತ್ರದ ಬಗ್ಗೆ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ವಿಮರ್ಶೆ ಬರೆದಿದೆ. ಜನಮೆಚ್ಚಿದ ಕನಕನಿಗೆ ವಿಮರ್ಶಕರು ಏನಂದ್ರು? ಏನಿಷ್ಟ ಆಯ್ತು, ಏನು ಇಷ್ಟ ಆಗಿಲ್ಲ ಎಂದು ತಿಳಿಯಲು ಮುಂದೆ ಓದಿ....

    ಅಭಿಮಾನಿ ಕನಕನ ಕಮರ್ಷಿಯಲ್ ವೃತ್ತಾಂತ

    ಅಭಿಮಾನಿ ಕನಕನ ಕಮರ್ಷಿಯಲ್ ವೃತ್ತಾಂತ

    ''ಅಮಾವಾಸ್ಯೆ ದಿನ ಹುಟ್ಟಿದ ಎಂಬ ಕಾರಣ ಕ್ಕೆ ತಂದೆ ಕೋಪಿಸಿಕೊಂಡಿದ್ದಾನೆ, ಅಮ್ಮನ ಪ್ರೀತಿಯಿಂದ ವಂಚಿತನಾಗಿದ್ದಾನೆ, ಪ್ರೀತಿಸಲು ಬಂದವಳ ಬಾಳು ಕತ್ತಲೆಯಾಗಿದೆ, ಪ್ರತಿಹೆಜ್ಜೆಗೂ ನೋವಿನ ಮುಳ್ಳು ಅವನಿಗೆ ಚುಚ್ಚುತ್ತಿದೆ. ಆದರೂ, ಸಮಾಜಕ್ಕೆ ಒಳಿತನ್ನೇ ಬಯಸುವ, ತಮ್ಮವರ ಕಷ್ಟಕ್ಕೆ ಮರುಗುವ ಅವನ ಮುಖದ ಮೇಲೆ ಸದಾ ನಗುವಿದೆ. ಇದು ‘ಕನಕ' ಚಿತ್ರದ ಕಥಾನಾಯಕನ ಹಿನ್ನೆಲೆ-ಮುನ್ನೆಲೆ ಎಲ್ಲವೂ. ಅಡಿಗಡಿಗೂ ನಾಡು-ನುಡಿ ಹಾಗೂ ಡಾ.ರಾಜ್​ಕುಮಾರ್ ಅಭಿಮಾನದ ಡೈಲಾಗ್​ಗಳು, ಆಟೋ ಡ್ರೈವರ್​ಗಳ ಬಗ್ಗೆ ಹೆಮ್ಮೆ ಮೂಡಿಸುವಂತಹ ದೃಶ್ಯಗಳು, ಖಳರನ್ನು ಸದೆಬಡಿಯುವ ಅಬ್ಬರದ ಫೈಟ್​ಗಳು... ಇವೆ ‘ಕನಕ'ನ ಜೀವಾಳ'' - ವಿಜಯ ವಾಣಿ

    ಕನಕನಿಗೆ ಕಣ್ಣಾಗುವ ಅಣ್ಣಾವ್ರ ಚಿತ್ರಗಳು

    ಕನಕನಿಗೆ ಕಣ್ಣಾಗುವ ಅಣ್ಣಾವ್ರ ಚಿತ್ರಗಳು

    ''ಸಿನಿಮಾದ ಮೊದಲರ್ಧ ನೋಡುಗನಿಗೆ ಯಾವುದೇ ಗೊಂದಲ ಸೃಷ್ಟಿ ಮಾಡಲ್ಲ. ಆದರೆ, ದ್ವಿತೀಯಾರ್ಧದಲ್ಲಿ ಬರುವ ಹಲವು ಪಾತ್ರಗಳು ಮುಖ್ಯ ಕತೆಗೆ ದಿಕ್ಕು ತಪ್ಪಿಸುತ್ತವೆ. ಇವುಗಳನ್ನು ಹೊರತು ಪಡಿಸಿ, ಅಣ್ಣಾವ್ರ ಅಭಿಮಾನಿಗಳಿಗೆ ಮತ್ತು ವಿಜಯ್ ಅಭಿಮಾನಿಗಳಿಗೆ ಏಕಕಾಲಕ್ಕೆ ಮನರಂಜನೆ ನೀಡುವಲ್ಲಿ ನಿರ್ದೇಶಕ ಚಂದ್ರು ಗೆಲ್ಲುತ್ತಾರೆ. ರಾಜ್‌ಕುಮಾರ್ ಸಿನಿಮಾಗಳ ಆಶಯ ಮತ್ತು ದುನಿಯಾ ವಿಜಯ್ ಅವರ ನಟನೆಯ ಸಿನಿಮಾದ ಜೀವಾಳ. ಅದನ್ನು ಎಂದಿನಂತೆ ನೈಜವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಚಂದ್ರು. ಈ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಕನಕ ಪ್ರೇಕ್ಷಕರಿಗೆ ಮೋಡಿ ಮಾಡುವುದರಲ್ಲಿ ಅನುಮಾವಿಲ್ಲ'' - ವಿಜಯ ಕರ್ನಾಟಕ

    ‘ಕನಕ’ನ ಪ್ರಲಾಪ

    ‘ಕನಕ’ನ ಪ್ರಲಾಪ

    ''ಆಪ್ತ ಪ್ರೇಮಕಥಾನಕಗಳ ಮೂಲಕವೇ ಪ್ರೇಕ್ಷಕರ ಮನಗೆದ್ದವರು ನಿರ್ದೇಶಕ ಆರ್. ಚಂದ್ರು. ‘ಕನಕ' ಚಿತ್ರದಲ್ಲಿ ರಾಜಕುಮಾರ್‌ ಅವರ ಚಿತ್ರಗಳ ಮಹತ್ವ, ತಾಯಿಯ ಸೆಂಟಿಮೆಂಟ್‌ ಮತ್ತು ಪ್ರೀತಿಯ ಮಹತ್ವ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ, ವಸ್ತುವಿನ ಆಯ್ಕೆಯಲ್ಲಿ ಅವರು ತೋರಿಸಿರುವ ಆಸ್ಥೆಯು ಪರದೆ ಮೇಲಿನ ಪ್ರಸ್ತುತಿಯಲ್ಲಿ ಕಾಣುವುದಿಲ್ಲ. ದುರ್ಬಲ ಚಿತ್ರಕಥೆ, ಮಂದಗತಿಯಲ್ಲಿ ಸಾಗುವ ನಿರೂಪಣೆಯಿಂದಾಗಿ ಚಿತ್ರ ನೋಡುಗರಲ್ಲಿ ಆಸಕ್ತಿ ಕೆರಳಿಸುವುದಿಲ್ಲ. ಅಬ್ಬರದ ಸಾಹಸ ದೃಶ್ಯಗಳು, ಕೆಲವೆಡೆ ಅಸಂಬದ್ಧ ಡೈಲಾಗ್‌ಗಳು ಪ್ರೇಕ್ಷಕರ ತಾಳ್ಮೆಯನ್ನು ಅಗ್ನಿಪರೀಕ್ಷೆಗೆ ಒಡ್ಡುತ್ತವೆ. ಅನ್ಯಭಾಷೆಯ ಯಶಸ್ವಿ ಚಿತ್ರಗಳಿಗೆ ಕನ್ನಡದ ಚಿತ್ರಗಳೇ ಪ್ರೇರಣೆ ಎಂದು ನಾಯಕನ ಮೂಲಕ ಹೇಳಿಸುವ ‍ಪ್ರಯತ್ನವನ್ನೂ ಮಾಡಿದ್ದಾರೆ ನಿರ್ದೇಶಕರು'' - ಪ್ರಜಾವಾಣಿ

    ಡಾ ರಾಜ್‌ ಅಭಿಮಾನದಿಂದ; ವಿಜಯ್‌ ಅಭಿಮಾನಿಗಳಿಗೆ

    ಡಾ ರಾಜ್‌ ಅಭಿಮಾನದಿಂದ; ವಿಜಯ್‌ ಅಭಿಮಾನಿಗಳಿಗೆ

    ''ಪಂಚಿಂಗ್ ಸಂಭಾಷಣೆಗಳು, ಫೈಟುಗಳು, ಕಲರ್‌ ಕಲರ್‌ ಹಾಡುಗಳು, ಕಾಮಿಡಿ ಎಲ್ಲವೂ ಈ ಚಿತ್ರದಲ್ಲಿದೆ. ಇದರ ಜೊತೆಗೆ, ಡಾ ರಾಜಕುಮಾರ್‌ ಮೇಲಿನ ಅಭಿಮಾನ, ಆಟೋ ಡ್ರೈವರ್‌ಗಳ ಕಾಯಕ ಪ್ರೇಮ, ಲವ್ವು, ಆಕ್ಷನ್ ಸೆಂಟಿಮೆಂಟು (ಮದರ್‌ ಮತ್ತು ಬ್ರದರ್ ಎರಡೂ), ಕಾಮಿಡಿ ಹೀಗೆ ಎಲ್ಲವನ್ನೂ ಸೇರಿಸಿ ಚಿತ್ರ ಮಾಡಿದ್ದಾರೆ ಚಂದ್ರು. ಎಲ್ಲಕ್ಕಿಂತ ಹೆಚ್ಚಾಗಿ ಹಲವು ಸಂದೇಶಗಳನ್ನೂ, ವಿಪರೀತ ಮಾತುಗಳನ್ನೂ ಸೇರಿಸಲಾಗಿದೆ. ಇದೆಲ್ಲಾ ಸೇರಿ ಚಿತ್ರದ ಗಾತ್ರ ದೊಡ್ಡದಾಗಿದೆ. ವಿಜಯ್‌ ಅಭಿಮಾನಿಗಳಿಗೆ ಚಿತ್ರ ಬಹಳ ಖುಷಿ ಕೊಡುವುದರಲ್ಲಿ ಅನುಮಾನವೇ ಇಲ್ಲ. ರವಿಶಂಕರ್‌ ಇದ್ದರೂ, ಅವರಿಗೊಂದು ಒಳ್ಳೆಯ ಪಾತ್ರ ಅಂತೇನಿಲ್ಲ. ಇನ್ನು ಸಾಧು, ಬುಲೆಟ್‌ ಪ್ರಕಾಶ್‌, ಕುರಿ ಪ್ರತಾಪ್‌ ಅವರ ಕಾಮಿಡಿಯಿದ್ದರೂ ನಗು ಬರುವುದಿಲ್ಲ. ಒಬ್ಬ ನಾಯಕನ ಅಭಿಮಾನಿಗಳನ್ನು ಮೆಚ್ಚಿಸುವಂತ ಸಿನಿಮಾ "ಕನಕ'. ವಿಜಯ್‌ ಅಭಿಮಾನಿಯಾಗಿದ್ದರೆ, ಚಿತ್ರ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ'' - ಉದಯವಾಣಿ

    ಕನಕ ವಿಮರ್ಶೆ-ಬೆಂಗಳೂರು ಮಿರರ್

    ಕನಕ ವಿಮರ್ಶೆ-ಬೆಂಗಳೂರು ಮಿರರ್

    ''Kanaka is a normal film made with a commercial mind. It fulfils its aim.. Taking for granted that this film has everything that a Chandru film should have is not enough. Kanaka has even more. For starters, there are two films in Kanaka: One before the interval and the second after. Two different leading ladies and two different sets of villains and comedy actors justify this. A few more days of shooting and Kanaka could well have been Kanaka 1 and Kanaka 2. So you get two films for the price of one'' - bangalore mirror

    English summary
    Kannada actor duniya vijay, haripriya, manvitha harish starrer r chandru directorial kannada Movie 'kanaka' has received positive response from the critics. Here is the collection of 'kanaka' reviews by Top News Papers of Karnataka.
    Saturday, January 27, 2018, 14:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X