»   » ಟ್ವಿಟ್ಟರ್ ವಿಮರ್ಶೆ: ಫಸ್ಟ್ ಶೋ 'ಚಮಕ್' ನೋಡಿದ ಜನ ಖುಷಿಯೋ ಖುಷಿ

ಟ್ವಿಟ್ಟರ್ ವಿಮರ್ಶೆ: ಫಸ್ಟ್ ಶೋ 'ಚಮಕ್' ನೋಡಿದ ಜನ ಖುಷಿಯೋ ಖುಷಿ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಬರಿ ಟೀಸರ್ ಮೂಲಕವೇ ಕನ್ನಡ ಕಲಾಭಿಮಾನಿಗಳನ್ನ ಚಿತ್ರಮಂದಿರಕ್ಕೆ ಆಕರ್ಷಿಸಿದ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ.

'ಚಮಕ್' ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಿ ಪ್ರೇಕ್ಷಕರು ಖುಷಿ ಪಟ್ಟಿದ್ದಾರೆ. ವರ್ಷದ ಕೊನೆಯಲ್ಲಿ ಅತ್ಯುತ್ತಮ ಮನರಂಜನೆಯ ಚಿತ್ರವನ್ನ ನಿರ್ದೇಶಕ ಸಿಂಪಲ್ ಸುನಿ ಅವರು ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಹಾಗಿದ್ರೆ, 'ಚಮಕ್' ಚಿತ್ರದ ಮೊದಲ ಶೋ ನೋಡಿದ ಜನ ಏನಂದ್ರು? ಗಣೇಶ್ ಹಾಗೂ ರಶ್ಮಿಕಾ ಕೊಟ್ಟ ಚಮಕ್ ನಲ್ಲಿ ಏನು ಇಷ್ಟ ಆಯ್ತು ಅಥವಾ ಇಷ್ಟ ಆಗಿಲ್ಲ ಎಂಬ ಅಭಿಪ್ರಾಯವನ್ನ ಟ್ವಿಟ್ಟರ್ ನಲ್ಲಿ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ.....

'ಚಮಕ್'ಗೆ ಕ್ಲೀನ್ ಬೌಲ್ಡ್

''ನಿರೀಕ್ಷೆಯಂತೆ ಚಮಕ್ ಸಿನಿಮಾ ರಂಜಿಸಿದೆ. ಸುನಿ ಅವರ ಟ್ರೇಡ್ ಮಾರ್ಕ್ ಡೈಲಾಗ್ ಗಳು ಅದ್ಭುತವಾಗಿದೆ. ಫ್ಯಾಮಿಲಿ ಆಡಿಯೆನ್ಸ್ ಗೆ ಹೆಚ್ಚು ಇಷ್ಟವಾಗುತ್ತೆ. ಗಣೇಶ್ ಮತ್ತು ರಶ್ಮಿಕಾ ಅಭಿನಯ ಚೆನ್ನಾಗಿದೆ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಕ್ಲಾಸ್ ಕಾಮಿಡಿ ಜೊತೆ ಕ್ಲಾಸ್ ಮನರಂಜನೆ

''ಚಮಕ್ ಚಿತ್ರದಲ್ಲಿ ಮಿಕ್ಸ್ ಎಂಟರ್ ಟೈನ್ ಮೆಂಟ್ ಇದೆ. ಕ್ಲಾಸ್ ಕಾಮಿಡಿ, ಭಾವನೆ ಎಲ್ಲವೂ ಇದೆ. ರಶ್ಮಿಕಾ ತೆರೆಮೇಲೆ ಮುದ್ದಾಗಿ ಕಾಣ್ತಾರೆ. ಗೋಲ್ಡನ್ ಸ್ಟಾರ್ ಮತ್ತು ರಶ್ಮಿಕಾ ಜೋಡಿ ಇಷ್ಟವಾಗುತ್ತೆ. ಸುನಿ ಈ ಚಿತ್ರದಿಂದ ವಿನ್ನರ್ ಆಗಿದ್ದಾರೆ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೊಮ್ಯಾಂಟಿಕ್ ಕಾಮಿಡಿ

''ಚಮಕ್ ಸಿನಿಮಾದಲ್ಲಿ ಹಾಸ್ಯಕ್ಕೆ ಹೆಚ್ಚು ಮಾನ್ಯತೆ ನೀಡಿದ್ದು, ರೊಮ್ಯಾಂಟಿಕ್ ಆಗಿ ಪ್ರಸೆಂಟ್ ಮಾಡಲಾಗಿದೆ. ಆಲ್ ದಿ ಬೆಸ್ಟ್ ಚಮಕ್ ಚಿತ್ರತಂಡಕ್ಕೆ'' ಎಂದು ಪುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಒಂದು ಮ್ಯಾರೇಜ್ ಸ್ಟೋರಿ

''ಚಮಕ್ ಸಿನಿಮಾ ಸಿಂಪಲ್ ಆಗಿರುವ ಒಂದು ಮ್ಯಾರೇಜ್ ಸ್ಟೋರಿ. ಹಾಸ್ಯಮಯವಾಗಿದೆ'' ಎಂದು ಖುಷಿ ಹಂಚಿಕೊಂಡಿದ್ದಾರೆ

ಚಿತ್ರದಲ್ಲಿ ಕೊರತೆ ಇದೆ

''ಇನ್ನು ಕೆಲವು ಪ್ರೇಕ್ಷಕರಿಗೆ ಇದು ಹಳೆಯ ಸಿನಿಮಾ ಎನಿಸಿದೆ. ಡೈಲಾಗ್ ಗಳು ವಾಟ್ಸಾಪ್ ನಲ್ಲಿ ನೋಡಿದ ಅನುಭವ ನೀಡುತ್ತಂತೆ. ಕಥೆಯಲ್ಲಿ ಗಟ್ಟಿತನ ಇಲ್ಲ''ವೆಂದು ಬೇಸರ ಕೂಡ ವ್ಯಕ್ತಪಡಿಸಿದ್ದಾರೆ.

English summary
Kannada actor, golden star ganesh and ramshika mandanna starrer chamak movie released today (december 29th). the movie gets positive respons in twitter. movie directed by simple suni.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X