»   » ಚಿತ್ರ ವಿಮರ್ಶೆ: 'Zooಮ್' ಮಾಡಿ ನೋಡಿದ್ರೂ, 'ಜುಮ್' ಎನಿಸದು.!

ಚಿತ್ರ ವಿಮರ್ಶೆ: 'Zooಮ್' ಮಾಡಿ ನೋಡಿದ್ರೂ, 'ಜುಮ್' ಎನಿಸದು.!

Posted By:
Subscribe to Filmibeat Kannada

'Zooಮ್' ಚಿತ್ರ ನೋಡಲು ಥಿಯೇಟರ್ ಒಳಗೆ ಹೊಕ್ಕ ನಂತರ ನಮ್ಮ ಸೆನ್ಸಾರ್ ಮಂಡಳಿ ನೀಡಿರುವ U/A ಸರ್ಟಿಫಿಕೇಟ್ ಕಣ್ಣಿಗೆ ರಾಚುತ್ತೆ. ಅಲ್ಲಿಗೆ, ಇದೊಂದು ಪಕ್ಕಾ 'ಫ್ಯಾಮಿಲಿ' ಎಂಟರ್ ಟೇನರ್ ಅಂತ ಕೂತರೇ ಸಂಪ್ರದಾಯಸ್ತರು ಆಗಾಗ ಹಲ್ಲು ಬಿಟ್ಟು ನಗಲು ಮುಜುಗರ ಪಡಬೇಕಾದೀತು.!


ಗಣೇಶ್ ಮತ್ತು ಸಾಧು ಕೋಕಿಲ ಬಾಯಲ್ಲಿ ಡಬ್ಬಲ್ ಮೀನಿಂಗ್ ಅಲ್ಲ, ನೇರವಾಗಿರುವ ಸಿಂಗಲ್ ಮೀನಿಂಗ್ 'ವಯಸ್ಕರ ಕಾಮಿಡಿ' ಡೈಲಾಗ್ ಗಳು ಪಟಪಟ ಅಂತ ಉದುರುವುದರಿಂದ 'Zooಮ್' ಸಿನಿಮಾ ಪಡ್ಡೆ ಹುಡುಗರು ಹಾಗೂ ತುಂಡ್ ಹೈಕ್ಳಿಗೆ ಮಾತ್ರ ಹೇಳಿಮಾಡಿಸಿದ್ದು.

'Zooಮ್' ಚಿತ್ರದ ಸಂಪೂರ್ಣ ವಿಮರ್ಶೆ ಕೆಳಗಿರುವ ಸ್ಲೈಡ್ ಗಳಲ್ಲಿದೆ. ಓದಿರಿ....


Rating:
3.0/5

ಚಿತ್ರ : 'Zooಮ್'
ನಿರ್ಮಾಣ : ನವೀನ್
ಕಥೆ - ಚಿತ್ರಕಥೆ : ಪ್ರಶಾಂತ್ ರಾಜ್
ಸಂಗೀತ : ಎಸ್.ಥಮನ್
ಛಾಯಾಗ್ರಹಣ : ಸಂತೋಷ್ ರೈ ಪತಾಜೆ
ಸಂಕಲನ : ರವಿಚಂದ್ರನ್
ತಾರಾಗಣ : ಗಣೇಶ್, ರಾಧಿಕಾ ಪಂಡಿತ್, ಸಾಧು ಕೋಕಿಲ, ಕಾಶೀನಾಥ್, (ನರ್ಸ್) ಜಯಲಕ್ಷ್ಮಿ ಮತ್ತು ಇತರರು.
ಬಿಡುಗಡೆ : ಜುಲೈ 1, 2016


'Zooಮ್' ಕಥೆ ಏನು.?

ಲಲನೆಯರಿಂದ ಕ್ಯಾಬರೇಟ್ ನೃತ್ಯ ಮಾಡಿಸಿ, ವಾಮ ಮಾರ್ಗದಿಂದ ಎಂ.ಜೆ (ಸಾಧು ಕೋಕಿಲ) ಆಡ್ ಏಜೆನ್ಸಿಯ ಮುಖ್ಯಸ್ಥ ಸಂತೋಷ್ (ಗಣೇಶ್) ಒಂದು ಕಾರ್ ಆಡ್ ಕಾಂಟ್ರ್ಯಾಕ್ಟ್ ಪಡೆಯುತ್ತಾನೆ. ಅದನ್ನು ಧಿಕ್ಕರಿಸುವ ಮತ್ತೊಂದು ಆಡ್ ಏಜೆನ್ಸಿಯ ನಯನ (ರಾಧಿಕಾ ಪಂಡಿತ್) ಆಡ್ ಕೌನ್ಸಿಲ್ ಗೆ ದೂರು ನೀಡುತ್ತಾಳೆ. ಅಲ್ಲಿಂದ ಇಬ್ಬರ ಮಧ್ಯೆ ನಡೆಯುವ ಗದ್ದಲ-ಗಲಾಟೆಯ ಕಾಮಿಡಿ ಕಹಾನಿಯೇ 'Zooಮ್' ಸಿನಿಮಾ.


'Zooಮ್' ಅಂದ್ರೆ ಏನು.?

'Zooಮ್' ಅನ್ನೋದು 'ವಯಸ್ಕ'ರಿಗೆ ಬೇಕಾಗಬಹುದಾದ ಮಲ್ಟಿ ಪರ್ಪಸ್ ಪ್ರಾಡಕ್ಟ್. ತಯಾರಾಗುವ ಮುನ್ನವೇ ಭರ್ಜರಿ ಪ್ರಚಾರ ಗಿಟ್ಟಿಸುವ 'Zooಮ್' ಬಗ್ಗೆ ಹೆಚ್ಚಿನ ಮಾಹಿತಿ ನಾವು ಹೇಳಲು ಅಸಾಧ್ಯ. ಅದನ್ನ ನೀವು ಚಿತ್ರಮಂದಿರದಲ್ಲೇ ನೋಡಿ, ನಿಮ್ಮ ಪಕ್ಕದಲ್ಲಿ ಯಾರಿದ್ದಾರೆ ಅಂತ ಒಮ್ಮೆ ನೋಡಿಕೊಂಡು ನಕ್ಕು ನಲಿಯಿರಿ....


ಸಖತ್ ಸ್ಟೈಲಿಶ್ ಆಗಿ ಕಾಣುವ ಗಣೇಶ್

ಹಿಂದೆಂದಿಗಿಂತೂ 'Zooಮ್' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸಖತ್ ಸ್ಟೈಲಿಶ್ ಆಗಿ ಕಾಣುತ್ತಾರೆ. ಗಣೇಶ್ ಕಾಮಿಡಿ ಟೈಮಿಂಗ್ ಬಗ್ಗೆ ಕಾಮೆಂಟ್ ಮಾಡುವ ಹಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಗಣೇಶ್ ಮಾಡಿರುವ ಡ್ಯಾನ್ಸ್ ನ ಈ ಬಾರಿ 'Zooಮ್' ಮಾಡಿ ನೋಡಬಹುದು.


ವಿಭಿನ್ನವಾಗಿ ಕಾಣುವ ರಾಧಿಕಾ ಪಂಡಿತ್

ವಿಭಿನ್ನ ಹೇರ್ ಸ್ಟೈಲ್ ಮತ್ತು ಅಲ್ಟ್ರಾ ಮಾಡ್ರನ್ ಔಟ್ ಫಿಟ್ಸ್ ಮೂಲಕ ರಾಧಿಕಾ ಪಂಡಿತ್ 'Zooಮ್' ಚಿತ್ರದಲ್ಲಿ ಗಮನ ಸೆಳೆಯುತ್ತಾರೆ. ಅವರ ನಟನೆ ಕೂಡ ಚೆನ್ನಾಗಿದೆ.


'ರಿಯಲ್ ಹೀರೋ' ಸಾಧು ಕೋಕಿಲ

ಹಾಗ್ನೋಡಿದ್ರೆ, 'Zooಮ್' ಚಿತ್ರದ ನಿಜವಾದ ಹೀರೋ ಸಾಧು ಕೋಕಿಲ. ಅಲ್ಲಲ್ಲಿ ಕಾಮಿಡಿ ನೆಪ ಇಟ್ಕೊಂಡು ಬರದೆ, ಇಡೀ ಸಿನಿಮಾದಲ್ಲಿ ಹೈಲೈಟ್ ಆಗಿರುವ ಸಾಧು ಕೋಕಿಲ ಪಡ್ಡೆ ಹುಡುಗರನ್ನ ಕಿಲ ಕಿಲ ಅಂತ ನಗಿಸುತ್ತಾರೆ.


ಸಿಂಗಲ್ ಮೀನಿಂಗ್ ಕಾಶೀನಾಥ್

ವಿಜ್ಞಾನಿ ಧೂಮಕೇತು ಪಾತ್ರ ನಿರ್ವಹಿಸಿರುವ ಕಾಶೀನಾಥ್ ಗೆ ಇಲ್ಲಿ ಡಬಲ್ ಮೀನಿಂಗ್ ಅಲ್ಲ, ಸಿಂಗಲ್ ಮೀನಿಂಗ್ ಡೈಲಾಗ್ಸ್ ಮಾತ್ರ ಇದೆ.


ಹಾಡುಗಳು ಚಿತ್ರದ ಪ್ಲಸ್ ಪಾಯಿಂಟ್

ಟಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಥಮನ್ ಕಂಪೋಸ್ ಮಾಡಿರುವ ಟ್ಯೂನ್ಸ್ ಓಕೆ. ಆದ್ರೆ, ಪರಭಾಷೆಯ ಗಾಯಕರು ಹಾಡಿರುವ ಹಾಡಲ್ಲಿ ಕನ್ನಡದ ಕೊಲೆಯಾಗಿದೆ. ಪುನೀತ್ ಗಾನುಸುಧೆ ಹರಿಸಿರುವ 'ರಾಜಾ ಧಿ ರಾಜಾ', ಶ್ರೀಮುರಳಿ ಮತ್ತು ರಾಧಿಕಾ ಪಂಡಿತ್ ಗುನುಗಿರುವ 'ಹೇ ದಿವಾನಾ' ಹಾಗೂ 'ಪಿಸ್ತೂಲ್ ಬಾಬಾ' ಹಾಡುಗಳು ಅಪ್ಪಟ ಡ್ಯಾನ್ಸಿಂಗ್ ನಂಬರ್ಸ್. ಇಟಲಿಯಲ್ಲಿ ಚಿತ್ರೀಕರಿಸಿರುವ ಹಾಡು ಕಣ್ಣಿಗೆ ಹಬ್ಬ.


ಕಣ್ಣಿಗೆ ಮುದ ನೀಡುವ ಛಾಯಾಗ್ರಹಣ

ಸಂತೋಷ್ ರೈ ಪತಾಜೆ ಛಾಯಾಗ್ರಹಣ ಅಕ್ಷರಶಃ ಕಣ್ಣಿಗೆ ಮುದ ನೀಡುತ್ತೆ. ಅವರ ಕ್ಯಾಮರಾ ಕಂಗಳಲ್ಲಿ ಇಟಲಿ ಮಾತ್ರ ಅಲ್ಲ, ಬೆಂಗಳೂರು ಕೂಡ ರಿಚ್ ಆಗಿ ಕಂಡಿದೆ.


ಮೊದಲಾರ್ಧ ವೇಗ, ದ್ವಿತೀಯಾರ್ಧ ನಿಧಾನ.!

ಎರಡೆರಡು ಹಾಡು, ಒಂದು ಫೈಟ್, ಬೇಜಾನ್ ಕಾಮಿಡಿ ಇರುವ ಮೊದಲಾರ್ಧ ಮುಕ್ತಾಯವಾಗುವುದೇ ಗೊತ್ತಾಗಲ್ಲ. ವಿರಾಮ ತೆಗೆದುಕೊಂಡು ಅದೇ ಸ್ಪೀಡ್ ನಲ್ಲಿ ಬರುವ ಪ್ರೇಕ್ಷಕರಿಗೆ ಸೆಕೆಂಡ್ ಹಾಫ್ ಸ್ವಲ್ಪ ಸ್ಲೋ ಅನಿಸಬಹುದು.


ವಯಸ್ಕರ ಕಾಮಿಡಿ ಇಷ್ಟವಾದ್ರೆ ನೋಡಿ

ಸಿಂಪಲ್ ಆಗಿರುವ 'Zooಮ್' ಚಿತ್ರದ ಕಥೆಯಲ್ಲಿ ಟ್ವಿಸ್ಟ್ ಗಳಿಲ್ಲ. ಮಸಾಲೆ ಒಗ್ಗರಣೆ ಅದರಲ್ಲೂ 'ವಯಸ್ಕ'ರಿಗೆ ಮಜಾ ನೀಡುವ ಮಿರ್ಚಿ ಫ್ಲೇವರ್ ಮಾತ್ರ ಹೇರಳವಾಗಿದೆ. ಅದನ್ನ ಸವಿಯುವ ಇಚ್ಛೆ ಇದ್ರೆ ಮಾತ್ರ ಒಮ್ಮೆ 'Zooಮ್' ಹಾಕಿ.


ಫೈನಲ್ ಸ್ಟೇಟ್ ಮೆಂಟ್.!

ಬಿಸಿ ಲೈಫ್ ನಲ್ಲಿ ಇರುವವರು ಸ್ವಲ್ಪ ರಿಲ್ಯಾಕ್ಸ್ ಆಗ್ಬೇಕು ಅಂತಿದ್ರೆ 'Zooಮ್' ಚಿತ್ರ ನೋಡಿ ನಕ್ಕು ನಲಿಯಬಹುದು. ಆದ್ರೆ, ನಿಮ್ಮ ಜೊತೆ 'Zooಮ್' ಮಾಡುವವರು ಯಾರು ಅಂತ ಮೊದಲು ಯೋಚಿಸಿ....


English summary
Golden Star Ganesh and Radhika Pandit starrer Kannada Movie 'Zoom' has hit the screens today (July 1st). The movie is full of Adult Comedy. Complete review of the movie is here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada