»   » 'ಮುಗುಳುನಗೆ' ನೋಡಿ ಮುಗುಳುನಕ್ಕ ಹೆಂಗಳೆಯ ವಿಮರ್ಶೆ ಇದು.!

'ಮುಗುಳುನಗೆ' ನೋಡಿ ಮುಗುಳುನಕ್ಕ ಹೆಂಗಳೆಯ ವಿಮರ್ಶೆ ಇದು.!

By: ಚಿತ್ರ ಬಡಿಗೇರ್
Subscribe to Filmibeat Kannada

ಮುಗುಳು ನಗೆ...ನಿಮ್ಮನ್ನು ನಿಮಗೆ ತೋರಿಸುವ ಪ್ರಯತ್ನ. ಎಷ್ಟೋ ಸಲ ಬರೀ ನಮ್ಮ ಬಾಹ್ಯ ಸೌಂದರ್ಯ ‌ನೋಡಿ ಸುಮ್ಮನಾಗಿ ಬಿಡ್ತೀವಿ. ಆದ್ರೆ ನಮ್ಮ ಮನಸ್ಸಿಗೆ ಏನು ಬೇಕು? ಮನಸ್ಸು ಸುಂದರವಾಗಿ ಸ್ವಚ್ಛವಾಗಿ ಇರ್ಬೇಕಂದ್ರೆ ಏನು ಮಾಡ್ಬೇಕು ಅನ್ನೋದನ್ನೆ ಮರೀತೀವಿ.

ಸಮಾಜನ ಇಂಪ್ರೆಸ್ ಮಾಡೋಕೆ ಕೃತಕ ನಗೆ.. ಹಾಯ್ ಸ್ಟೇಟಸ್ ಗೊಂದು ಸ್ಮೈಲ್... ನಮ್ಮ ಸಮಾಜದಲ್ಲಿ ಈ ಸಂದರ್ಭದಲ್ಲಿ ಅಳಬೇಕು, ಇದೇ ಸಂದರ್ಭದಲ್ಲಿ ನಗಬೇಕು, ಎಲ್ಲಾ ಪೂರ್ವ ನಿಯೋಜಿತ. ಅದೇ.. ಮನುಷ್ಯ ಯಾವಾಗ್ಲೂ ಹಸನ್ಮುಖಿ ಆಗಿದ್ರೆ ಹುಚ್ಚ, ಮ್ಯಾನರ್ಸ್ ಇಲ್ಲದವ ಅನ್ನೋ ಪಟ್ಟ.

Ganesh starrer Kannada Movie 'Mugulu Nage' review by viewer Chitra Badiger

ವಿಮರ್ಶೆ: ಕಣ್ಣಾಲಿಯ ಜಲಪಾತ ಬಂಧಿಸುವ 'ಮುಗುಳುನಗೆ'

ದುಃಖಕ್ಕೆ ಮುಗುಳು ನಗೆಯಿಂದಲೂ ಸ್ಪಂದಿಸಬಹುದು ಎಂದು ಹೇಳಿದ ಹೊಸ ಆಯಾಮ ಈ ಚಿತ್ರ. ನಗು ಸಂತೋಷದಲ್ಲಿ ಮಾತ್ರ ಇರುತ್ತೆ, ಅನ್ನೋ ವ್ಯಾಕರಣ ಬದಲಿಸಿ, ನಗುವನ್ನ ದುಃಖ ಕೋಪ ಬೇಜಾರು ಎಲ್ಲಾ ಎಮೋಶನ್ ಗಳಲ್ಲಿ ತೋರಿಸಿದ ಚಿತ್ರ.

ಒಂದು ಹೆಣ್ಣಿನ ಮನಸ್ಸು ಇನ್ನೊಂದ್ ಹೆಣ್ಣಿಗೆ ಮಾತ್ರ ಅರ್ಥ ಆಗತ್ತೆ ಅನ್ನೋದು ಸುಳ್ಳಾಗಿ, ಒಂದು ಹೆಣ್ಣಿನ ಮನಸ್ಸು ಭಟ್ರಿಗೆ ಮಾತ್ರ ಅರ್ಥ ಆಗತ್ತೆ ಅನ್ನೋವಷ್ಟು ಅದ್ಭುತವಾಗಿ ಹೆಣ್ಣಿನ ಮನಃಸ್ಥಿತಿ ತೋರ್ಸಿದಾರೆ. ಪ್ರತಿ ಪಾತ್ರಗಳು ನಿಮ್ಮ ಅಂತರಾಳಕ್ಕೆ ಕನ್ನಡಿ ಹಿಡಿತಾವೆ.

'ಮುಗುಳುನಗೆ' ಮೊದಲ ಶೋ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿತ್ತು.!

ಇನ್ನೂ ಕತೆ ವಿಷಯಕ್ಕೆ ಬರೋದಾದ್ರೆ, ಯಾವ ಕತೆನೂ ಹೊಸದಲ್ಲ ಯಾವ ಕತೆನೂ ಹಳೆದಲ್ಲ. ಪಾತ್ರಗಳು ಜಾಸ್ತಿ connect ಆದ್ರೆ thrill, ಸ್ವಲ್ಪ ಆದ್ರೆ just chill, ಎನೂ ಆಗ್ಲಿಲ್ಲಾ ಅಂದ್ರೆ dull. Direction ಬಗ್ಗೆ ಹೇಳೋವಷ್ಟು ದೊಡ್ಡವಳಲ್ಲ. ಸುಂದರವಾದ ಹೀರೋಯಿನ್ಸ್ ಅನ್ನೋದಕ್ಕಿಂತ ನಮ್ಮ ಸುತ್ಮುತ್ತ ಮತ್ತು ನಮ್ಮ ಸುಪ್ತ ಮನಸ್ಸಿನಲ್ಲಿ ಗುಪ್ತವಾಗಿ ಕುಳಿತ ಮಾಂತ್ರಿಕೆಯರು ಅನ್ಬಹುದು.

ಪುಲ್ಕೇಶಿ...ನೋಡಿದ್ರೆ ಫುಲ್+ಖುಷಿ. ಗಣೇಶ್ ಸರ್ ಬಿಟ್ರೆ ಯಾರಿಂದಲೂ ಈ ಪಾತ್ರ ನಿಭಾಯಿಸಲು ಸಾಧ್ಯವಿಲ್ಲ ಎಂಬಂತೆ ನಟಿಸಿದ್ದಾರೆ. ಉಳಿದ ನಟ ನಟಿಯರು ಗುಡ್. ಕತೆ ಮತ್ತು ತಿರುವುಗಳಿಗೆ ಸೂಕ್ತವಾದ ಲೊಕೇಶನ್ ಗಳು. ಪೃಕ್ರತಿಯನ್ನು ಕ್ಯಾಮರಾದಲ್ಲಿ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ನಿರ್ಮಾಪಕ ಅಭಿರುಚಿಗೆ ಶರಣು. ಚಿತ್ರಕತೆಯಲ್ಲಿ ಪಂಚ್ ಡೈಲಾಗ್ ಇಲ್ದಿದ್ರೂ ಪಂಚೇಂದ್ರೀಯಕ್ಕೆ ತಲುಪೋ ಡೈಲಾಗ್ ಅಂತೂ ಖಂಡಿತಾ ಇದಾವೆ.

ವೆಜ್ ಫುಲ್ ಮೀಲ್ಸ್ ತರಹ ಕಾಮಿಡಿ ಇದೆ. ಮ್ಯೂಸಿಕ್ ಬಗ್ಗೆ ಹೇಳಬೇಕಂದ್ರೆ ಈಗಾಗಲೇ ಹಾಡುಗಳು ಹಿಟ್ ಆಗಿದಾವೆ. ಭಟ್ರ ಲಿರಿಕ್ಸ್ ನಲ್ಲಿ ಜೀವನದ ಸಾರನ ಸಾಂಬಾರ ಮಾಡ್ಬಿಟ್ಟಿದಾರೆ. ಹರಿಕೃಷ್ಣ ಅವ್ರ ಮ್ಯಸಿಕ್ ಹಳೆದನ್ನ ನೆನಪಿಸಿ ಮರೆಯಾಗಿ ಬಿಡತ್ತೆ. ಕೊನೆಗೆ ಉಳಿಯೋದು ನಮ್ಮ ಜೀವನದ ಮುಗುಳು ನಗೆ ಮತ್ತು ಕಣ್ಣಂಚಿನ ಕಂಬನಿ.

ಇನ್ನು low-ಪ ದೋಷ ಇಲ್ಲದಂತಿಲ್ಲ, ಆದ್ರೆ ಅಲ್ಲಲ್ಲಿ ಕಾಣುವ ಮಿಸ್ಟೇಕ್ಸ್ ನಾ ಮುಗುಳು ನಗೆ ಮರೆಮಾಚುತ್ತೆ. ನಾಲ್ಕು ಜನ ಹೀರೋಯಿನ್ಸ್ ಸ್ಕ್ರಿಪ್ಟ್ ನ ಗ್ರಾಮರ್ ಗೋ ಇಲ್ಲಾ ಗ್ಲಾಮರ್ ಗೋ ಅನ್ನೋ ತರ್ಕ ಬೇಡ.

Dont watch movie with technically strategically logically, prejudice mind set.....just watch with ಮುಗುಳು ನಗೆ come out with ಮುಗುಳು ನಗೆ

English summary
Golden Star Ganesh starrer 'Mugulu Nage' has hit the screens today (September 1st). Here is the review of 'Mugulu Nage' by viewer Chitra Badiger

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada