For Quick Alerts
ALLOW NOTIFICATIONS  
For Daily Alerts

ಘನ್ ಚಕ್ಕರ್ ವಿಮರ್ಶೆ: ಒಮ್ಮೆ ನೋಡಿ 'ಮರೆತು' ಬಿಡಿ

By Mahesh
|

ದಿ ಡರ್ಟಿ ಪಿಕ್ಚರ್ ನಂತರ ಮತ್ತೊಮ್ಮೆ ವಿದ್ಯಾ ಬಾಲನ್ ಕಿಚ್ಚು ಹಚ್ಚಲು ಬಂದಿದ್ದಾರೆ. ಕಿಸ್ಸಿಂಗ್ ಸ್ಟಾರ್ ಇಮ್ರಾನ್ ಹಶ್ಮಿ ಜೋಡಿ ಪ್ರೇಕ್ಷಕರಿಗೆ ಹುಚ್ಚೆಬ್ಬಿಸುತ್ತಿದೆ. ರಾಜಕುಮಾರ್ ಗುಪ್ತಾ ನಿರ್ದೇಶನದ ಚಿತ್ರದ ಕಥೆಯಲ್ಲಿ ವಿದ್ಯಾ ಪಂಜಾಬಿ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಥ್ರಿಲ್ಲರ್ ಚಿತ್ರಕಥೆವನ್ನು ಕಾಮಿಡಿ ಟ್ರ್ಯಾಕ್ ಮೂಲಕ ಹೇಳಲು ಯತ್ನಿಸಿರುವ ರಾಜಕುಮಾರ್ ಯತ್ನ ಫಲ ನೀಡಿದೆ. ಆದರೆ ಕೆಲವೊಮ್ಮೆ ರಿಪೀಟ್ ದೃಶ್ಯಗಳು ಕಿರಿಕಿರಿ ಎನಿಸುತ್ತವೆ.

ಕಥೆ ಏನು?: ತಿಜೋರಿ ಕಳ್ಳ ಸಂಜು (ಇಮ್ರಾನ್ ಹಶ್ಮಿ)ಗೆ ತನ್ನ ಚೋರಿ ಬದುಕಿಗೆ ವಿದಾಯ ಹೇಳುವ ಮನಸ್ಸಾಗುತ್ತದೆ. ಅದರೆ, ಕೊನೆಯದಾಗಿ ಒಂದು ಅದ್ಭುತ ಯತ್ನ ಮಾಡುವ ಆಲೋಚನೆ ಬರುತ್ತದೆ. ಇಬ್ಬರು ಖತರ್ ನಾಕ್ ಕ್ರಿಮಿನಲ್ ಗಳು ಜೊತೆಗೂಡುತ್ತಾರೆ.

ಎಂದಿನಂತೆ ಇದೊಂದು ಬ್ಯಾಂಕ್ ದರೋಡೆ ಮಾಡಿದರೆ ಲೈಫ್ ನಲ್ಲಿ ಆರಾಮವಾಗಿ ಸೆಟ್ಲ್ ಆಗಬಹುದು ಎಂದು ಎಲ್ಲರ ದೂರಾಲೋಚನೆ. ಅಂದುಕೊಂಡಂತೆ ಕಳ್ಳತನ ಯಶಸ್ವಿಯಾಗಿ ನಡೆಯುತ್ತದೆ. ಪ್ರಕರಣದ ಬಿಸಿ ತಣ್ಣಗಾಗುವವರೆಗೂ ಕದ್ದ ಮಾಲನ್ನು ಬಚ್ಚಿಡುವ ಕೆಲಸ ಸಂಜುಗೆ ವಹಿಸಲಾಗುತ್ತದೆ. ನಂತರ ಎಲ್ಲರೂ ಹಂಚಿಕೊಳ್ಳುವ ಒಪ್ಪಂದವಾಗಿರುತ್ತದೆ.

ಮೂರು ತಿಂಗಳ ನಂತರ ಕಳ್ಳತನಕ್ಕೆ ಸಹಕರಿಸಿದ ಇಬ್ಬರು ತಮ್ಮ ಪಾಲು ನೀಡುವಂತೆ ಸಂಜು ಬಳಿ ಬರುತ್ತಾನೆ. ಸಂಜು ಇಬ್ಬರನ್ನು ಮೇಲಿಂದ ಕೆಳಗೆ ನೋಡಿ ನೀವು ಯಾರು? ಎನ್ನುತ್ತಾನೆ. ಸಂಜುಗೆ ಅಪಘಾತವಾಗಿ ತಲೆಗೆ ಪೆಟ್ಟು ಬಿದ್ದಿರುತ್ತದೆ. ನೆನಪಿನ ಶಕ್ತಿ ಕಳೆದುಕೊಂಡಿರುವ ಸಂಜುಗೆ ಮತ್ತೆ ಹಳೆಯದ್ದು ನೆನೆಪಿಗೆ ಬರುವ ತನಕ ಅವನ ಜೊತೆ ಇರಲು ನಿರ್ಧರಿಸುತ್ತಾರೆ.

ಸಂಜು ಪತ್ನಿ ನೀತು(ವಿದ್ಯಾ ಬಾಲನ್). ಸಂಜುಗೆ ನೆನಪಿನ ಶಕ್ತಿ ಮತ್ತೆ ಬರುತ್ತದೆಯೆ? ಸಂಜು-ನೀತು ನಾಟಕವಾಡುತ್ತಿದ್ದಾರಾ? ಕದ್ದ ಮಾಲು ಎಲ್ಲಿದೆ? ಚಿತ್ರಮಂದಿರದಲ್ಲಿ ಚಿತ್ರ ನೋಡಿ ಆನಂದಿಸಿ..

Rating:
2.5/5

ಕಥೆ ಪರ್ವಾಗಿಲ್ಲ ಅಷ್ಟೇ

ಕಥೆ ಪರ್ವಾಗಿಲ್ಲ ಅಷ್ಟೇ

ಚಿತ್ರದ ಕಥೆ ಅದ್ಭುತವಾಗೇನು ಇಲ್ಲ. ಸಿಂಪಲ್ ಕಥೆ.. ಕೊನೆ ಕೊನೆಗೆ ಇಷ್ಟೇನಾ ಅನ್ನಿಸಲೂ ಬಹುದು. ಬಹುಶಃ ಮಧ್ಯಂತರ ನಂತರ ಕಥೆ ಹುಡುಕದಿದ್ದರೆ ಒಳ್ಳೆಯದು. ರಿಪೀಟ್ ದೃಶ್ಯಗಳು ಕೆಲವೊಮ್ಮೆ ಕಿರಿಕಿರಿ ಎನಿಸುತ್ತದೆ. ಕಥೆ ಕಡೆ ಸ್ವಲ್ಪ ಹೆಚ್ಚು ಗಮನ ನೀಡಿದ್ದರೆ ಚಿತ್ರದ ಮನರಂಜನೆಗೆ ಪ್ಲಸ್ ಪಾಯಿಂಟ್ ಆಗಿರುತ್ತಿತ್ತು.

ನಟನೆ ಸೂಪರ್

ನಟನೆ ಸೂಪರ್

ಇಮ್ರಾನ್ ಹಶ್ಮಿ ಅವರ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿ ಥೇಟರ್ ಗೆ ಹೋದರೆ ನಿಮಗೆ ಶಾಕ್ ಆಗಲಿದೆ. ಹಶ್ಮಿ ತನ್ನ ನಟನಾ ಪ್ರತಿಭೆಯನ್ನು ಸಂಪೂರ್ಣವಾಗಿ ತೆರೆದಿಟ್ಟಿದ್ದಾರೆ.

ಸೀರಿಯಲ್ ಕಿಸ್ಸರ್ ಇಮೇಜ್ ನಿಂದ ಉಳಿಸಬಲ್ಲಂಥ ಪಾತ್ರ ಇದಾಗಿದೆ. ಸಂಜು ಪಾತ್ರದಲ್ಲಿ ನಗು, ಸಿಟ್ಟು, ಹತಾಶೆ, ಮರೆಗುಳಿತನ ಹಾಸ್ಯ ಎಲ್ಲವನ್ನೂ ಕಿಸ್ ಮಾಡುವಷ್ಟು ಸಲೀಸಾಗೇ ಹಶ್ಮಿ ನಿಭಾಯಿಸಿದ್ದಾರೆ.

ಎಂದಿನಂತೆ ವಿದ್ಯಾಬಾಲನ್ ಡರ್ಟಿ ಪಿಕ್ಚರ್, ಕಹಾನಿ ನಂತರ ಕ್ರೇಜಿಯಾಗಿ ಕಾಣಿಸಿಕೊಂಡಿದ್ದು, ವಿಚಿತ್ರ ವಿಶಿಷ್ಟ ರೀತಿಯಲ್ಲಿ ಗಮನ ಸೆಳೆಯುತ್ತಾರೆ. ಪಾತ್ರ ಪ್ರೇಕ್ಷಕರಿಗೆ ಸಹ್ಯವಾಗುವಂತೆ ಮಾಡಿ ಚಿತ್ರವನ್ನು ಉಳಿಸಿದ್ದಾರೆ.

ಗೆಲ್ಲುತ್ತಾ ಸೋಲುತ್ತಾ?

ಗೆಲ್ಲುತ್ತಾ ಸೋಲುತ್ತಾ?

ರಾಜಕುಮಾರ್ ಗುಪ್ತಾ ನಿರ್ದೇಶನಕ್ಕಿಂತ ಪಾತ್ರಧಾರಿಗಳ ನಟನೆ ಚಿತ್ರವನ್ನು ನೋಡುವಂತೆ ಮಾಡಿದೆ. ವಿದ್ಯಾ ಬಾಲನ್, ಇಮ್ರಾನ್ ಹಶ್ಮಿ ಜೋಡಿ, ರಾಜೇಶ್ ಶರ್ಮ(ಡರ್ಟಿ ಪಿಕ್ಚರ್ ನಲ್ಲಿ ಕಾಣಿಸಿದ್ದ), ನಮಿತ್ ದಾಸ್ ಅವರ ನಟನೆ ಬಾಕ್ಸಾಫೀಸ್ ನಲ್ಲಿ ಒಂದಷ್ಟು ಕಾಲ ಚಿತ್ರ ಸದ್ದು ಮಾಡುವಂತೆ ಮಾಡಬಲ್ಲದು.

ರಾಜ್ ಕುಮಾರ್ ಗೆ ಏನಾಯ್ತು

ರಾಜ್ ಕುಮಾರ್ ಗೆ ಏನಾಯ್ತು

ಆಮೀರ್, ನೋ ಒನ್ ಕಿಲ್ಡ್ ಜೆಸ್ಸಿಕಾ ಚಿತ್ರಗಳ ನಿರ್ದೇಶಕ ರಾಜ್ ಕುಮಾರ್ ಗುಪ್ತಾ ಅವರು ಘನ್ ಚಕ್ಕರ್ ಚಿತ್ರ ನಿರ್ದೇಶಕರಾಗಿದ್ದು, ಸಿನಿವಲಯದಲ್ಲಿ ಹೆಚ್ಚಿನ ನಿರೀಕ್ಷೆಯಿತ್ತು

ಆದರೆ, ಘಟಾನುಘಟಿ ನಟ, ನಟಿಯರನ್ನು ಹಾಕಿಕೊಂಡರೂ, ಉತ್ತಮವಾಗಿ ಚಿತ್ರ ನಿರೂಪಿಸುವಲ್ಲಿ ಸೋತಿದ್ದಾರೆ. ಮುಖ್ಯವಾಗಿ ದ್ವಿತೀಯಾರ್ಧದಲ್ಲಿ ಚಿತ್ರ ಜಾಳು ಜಾಳಾಗಿದೆ. ಮುಂದೇನು? ಎಂದು ಕುಳಿತು ನೋಡುವ ಕಾತುರ ಇರುವುದಿಲ್ಲ. ಕ್ಲೈಮ್ಯಾಕ್ ಮಾತ್ರ ಸ್ವಲ್ಪ ಟ್ವಿಸ್ಟ್ ಎನಿಸುತ್ತದೆ ಅಷ್ಟೇ.

ಕೊನೆ ನುಡಿ

ಕೊನೆ ನುಡಿ

ನಟನೆಯೊಂದೇ ಚಿತ್ರ ಗೆಲ್ಲಿಸಬಲ್ಲದೇ? ಸಾಧ್ಯವಿಲ್ಲ ಎನಿಸುತ್ತದೆ. ವಿದ್ಯಾಬಾಲನ್, ಇಮ್ರಾನ್ ಹಶ್ಮಿ ಅಭಿಮಾನಿಗಳಾದರೆ ತಪ್ಪದೇ ಒಮ್ಮೆ ಚಿತ್ರ ನೋಡಬಹುದು. ಟೈಮ್ ಪಾಸ್ ಮಾಡಲು ಚಿತ್ರಮಂದಿರಕ್ಕೆ ಕಾಲಿಡಬಹುದೇ ಹೊರತೂ ಚಿತ್ರದ ಬಗ್ಗೆ ಏನು ನಿರೀಕ್ಷೆ ಇಟ್ಟುಕೊಂಡು ಹೋಗಬೇಡಿ

English summary
Last time, we saw Vidya Balan and Emraan Hashmi getting really dirty in their flick The Dirty Picture, and this time, they have vowed to drive their fans go crazy. Their latest film Ghanchakkar, directed by Rajkumar Gupta is a "quirky" comedy involving a bank heist, memory loss and a loud Punjabi housewife. Here is the review of comedy, thriller movie

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more