For Quick Alerts
  ALLOW NOTIFICATIONS  
  For Daily Alerts

  ಗಣೇಶ್ ದೀಪಾ 'ಸಕ್ಕರೆ' ಸವಿ ಸವಿ ಟ್ವೀಟ್ಸ್

  By Mahesh
  |

  ಗೋಲ್ಡನ್ ಸ್ಟಾರ್ ಗಣೇಶ್ 'ಸಕ್ಕರೆ' ನಗುವಿನ ಚೆಲುವೆ ದೀಪಾ ಸನ್ನಿಧಿ ಜೋಡಿಯ ಚಿತ್ರ ರಾಜ್ಯದೆಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವ ಪ್ರಾಥಮಿಕ ವರದಿಗಳು ಬಂದಿವೆ. ಶೈಲಜಾ ನಾಗ್ ಹಾಗೂ ಬಿ ಸುರೇಶ್ ಅವರ ನಿರ್ಮಾಣದ ಚಿತ್ರ ಎಂಬ ಕಾರಣಕ್ಕೆ ಸಿನಿರಸಿಕರಲ್ಲಿ ಕುತೂಹಲ ಹೆಚ್ಚಿತ್ತು. ಅಲ್ಲದೆ ಯುವ ನಿರ್ದೇಶಕ ಅಭಯ ಸಿಂಹ ಅವರ ಮೇಲೆ ಅಭಿಮಾನಿಗಳಿಗೆ ಭರವಸೆಯೂ ಇದೆ.

  ರೋಮಿಯೋ, ಮಿ.420 ಹಾಗೂ ಆಟೋರಾಜ ಚಿತ್ರಗಳ ನಂತರ ಅಮೋಘ ಯಶಸ್ವಿ ಚಿತ್ರದ ನಿರೀಕ್ಷೆಯಲ್ಲಿದ್ದಾರೆ ಗೋಲ್ಡನ್ ಸ್ಟಾರ್. 'ಗುಬ್ಬಚ್ಚಿಗಳು', 'ಶಿಕಾರಿ' ತರಹದ ಅದ್ಭುತ ಚಿತ್ರಗಳನ್ನು ಕೊಟ್ಟ ಅಭಯ ಸಿಂಹ ಅವರು ಈ ಬಾರಿ ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದು ಓ ಹೆನ್ರಿ ಅವರ ಸಣ್ಣಕಥೆ ದಿ ಲಾಸ್ಟ್ ಲೀಫ್ ಎನ್ನಲಾಗಿದೆ.

  ಆದರೆ, ದಿ ಲಾಸ್ಟ್ ಲೀಫ್ ನ ಹಾಗೆ ಭಟ್ಟಿ ಇಳಿಸಲು ಸಾಧ್ಯವಿಲ್ಲ. ಕನ್ನಡ ಸಿನಿಮಾಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಚಿತ್ರ ತೆರೆಗೆ ಬಂದಿದೆ ಎಂದು ಅಭಯ ಸಿಂಹ ಹೇಳಿದ್ದಾರೆ. ಸಕ್ಕರೆ ಚಿತ್ರಕ್ಕೆ ಮಧುರವಾದ ಸಂಗೀತವನ್ನು ವಿ. ಹರಿಕೃಷ್ಣ ನೀಡಿದ್ದಾರೆ. ಚಿತ್ರದ ಮೊದಲ ದಿನದ ವರದಿ, ಸಾಮಾಜಿಕ ಜಾಲ ತಾಣಗಳಲ್ಲಿ ಸಿನಿಲೋಕ, ಗಂಧದಗುಡಿ ಮುಂತಾದ ಅಪ್ಪಟ ಸಿನಿಪ್ರೇಮಿಗಳು ನೀಡಿರುವ ಅಭಿಮತಗಳ ಸಾರ ಸಂಗ್ರಹ ಇಲ್ಲಿದೆ ನೋಡಿ

  ಚಿತ್ರಕಥೆ ಮುಖ್ಯ :ಅಭಯ್

  ಚಿತ್ರಕಥೆ ಮುಖ್ಯ :ಅಭಯ್

  ಈ ಚಿತ್ರದಲ್ಲಿ ಎರಡು ಆಯಾಮದಲ್ಲಿ ಕಥೆ ಸಾಗಲಿದೆ ಇದಕ್ಕಾಗಿ ಚಿತ್ರಕಥೆ ರಚಿಸಲು ತುಂಬಾ ಸಮಯ ತೆಗೆದುಕೊಂಡೆ. ನಾವು ಜಗತ್ತನ್ನು ನೋಡುವ ದೃಷ್ಟಿ ಹಾಗೂ ಜಗತ್ತನ್ನು ನಮ್ಮತ್ತ ನೋಡುವ ದೃಷ್ಟಿಯ ಅನಾವರಣ ಕಾಣಬಹುದು. ನಾಯಕ ನಾಯಕಿ ದೃಷ್ಟಿಕೋನ ಭಿನ್ನತೆ ವಿಶಿಷ್ಟತೆ ಸಕ್ಕರೆ ಚಿತ್ರದ ಹೈಲೇಟ್

  rn

  ಆರಂಭ ದೃಶ್ಯದ ಬಗ್ಗೆ ಟ್ವೀಟ್

  ಸಕ್ಕರೆ ಚಿತ್ರದ ಆರಂಭದಲ್ಲಿ ಕಾಣುವ ಬೆಂಗಳೂರು ದೃಶ್ಯದ ಬಗ್ಗೆ ಶಶಿ ಪ್ರಸಾದ್ ಟ್ವೀಟ್

  ಸಕ್ಕರೆ ರುಚಿ ಸಿಕ್ತಾ ಇಲ್ಲ

  ಸಕ್ಕರೆ ರುಚಿ ಇನ್ನೂ ಸಿಕ್ತಾ ಇಲ್ಲ ಎಂದು ಸಿನಿಲೋಕ ಟ್ವೀಟ್

  ಚಿತ್ರದ ಬಗ್ಗೆ ನಿರೀಕ್ಷೆ

  ಚಿತ್ರದ ಬಗ್ಗೆ ನಿರೀಕ್ಷೆ

  * ಗಣೇಶ್ ಹಾಗೂ ದೀಪಾ ಸನ್ನಿಧಿ ಇಬ್ಬರ ನಡುವಿನ ಆನ್ ಸ್ಕ್ರೀನ್ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿ ಬಂದಿದೆಯಂತೆ.

  * ಮೊದಲೇ ಹೇಳಿದಂತೆ ಎರಡು ಆಯಾಯ ಹಾಗೂ ಮೂರು ಕಾಲಘಟ್ಟದಲ್ಲಿ ಕಥೆ ಸಾಗುವುದರಿಂದ ಪ್ರೇಕ್ಷಕರಿಗೆ ಬೋರ್ ಎನಿಸುವುದಿಲ್ಲ ಎನ್ನಲಾಗಿದೆ.

  ಚಿತ್ರದ ಬಗ್ಗೆ ನಿರೀಕ್ಷೆಗಳು

  ಚಿತ್ರದ ಬಗ್ಗೆ ನಿರೀಕ್ಷೆಗಳು

  ಅನಂತ್ ನಾಗ್ ಹಾಗೂ ವಿನಯ್ ಪ್ರಸಾದ್ ಮತ್ತೊಮ್ಮೆ ಒಟ್ಟಿಗೆ ನಟಿಸುತ್ತಿದ್ದಾರೆ. ಆದರೆ, ಚಿತ್ರದಲ್ಲಿ ಇಬ್ಬರು ಒಂಟಿಯಂತೆ. ಹಳೆ ಪ್ರೇಮಿಗಳಂತೆ. ವಿ ಹರಿಕೃಷ್ಣ ಈಗಾಗಲೇ ಪ್ರೇಕ್ಷಕರಿಗೆ ಹಿಡಿಸಿದೆ. ಹಾಡುಗಳ ಚಿತ್ರೀಕರಣ ಸೂಪರ್

  ಏನೇ ಆಗಲಿ ಸಾಂಗ್ ಮೂಲಕ ಗಣೇಶ್ ಎಂಟ್ರಿ ನಂತರ ಸೋನು ನಿಗಂ ಇದ್ದಲಿಯೇ ಹಾಡು

  ಶ್ಯಾಮ್ ಪ್ರಸಾದ್ ಟ್ವೀಟ್

  ಐರಾವತ ಬಸ್ ನಲ್ಲಿ ಪ್ರಯಾಣದಂತಿದೆ ಸ್ಪೀಡೇ ಇಲ್ಲ. ಸಿಂಪಲ್ಲಾಗೊಂದ್ ಲವ್ ಸ್ಟೋರಿ ತರಾನೇ ಫ್ಲಾಶ್ ಬ್ಯಾಕ್

  ಮಧ್ಯಂತರ ತನಕ

  ನಿರೀಕ್ಷೆ ಇನ್ನೂ ಇದೆ ಆದರೆ ಚಿತ್ರ ಯಾಕೋ ನಿಧಾನಗತಿಯಲ್ಲೇ ಸಾಗಿದೆ

  ಹೀಗೊಂದು ಕಾಮಿಡಿ ಟ್ವೀಟ್

  ನಾಲ್ಕು ಸೂಸೈಡ್ ಯತ್ನ ಒಂದು ಹೆಣ ಬೀಳಲ್ಲ

  ಮೊದಲ ಪ್ರತಿಕ್ರಿಯೆ

  ಸಕ್ಕರೆ ತಿಂದರೆ ಡಯಾಬಿಟಿಸ್ ಆಗುತ್ತೆ 2 ಸ್ಟಾರ್ ಸಾಕು ಅನ್ಸುತ್ತೆ

  ಶ್ಯಾಮ್ ಪ್ರಸಾದ್ ತೀರ್ಪು

  ಪತ್ರಕರ್ತ ಶ್ಯಾಮ್ ಪ್ರಸಾದ್ 2.5/5 ನೀಡಿದ್ದಾರೆ.

  ದರ್ಶನ್ ತೀರ್ಪು

  ನೋಡಬಹುದು ಆದರೆ ಸಕ್ಕರೆ ಅಷ್ಟೊಂದು ಸಿಹಿ ಇಲ್ಲ 3/5

  ಸಿನಿಲೋಕ ತೀರ್ಪು

  ಇದು ಆವರೇಜ್ ಸಿನಿಮಾ. ಅಭಯ ಸಿಂಹ ಇನ್ನೂ ಚೆನ್ನಾಗಿ ಮಾಡಬಹುದಾಗಿತ್ತು.

  English summary
  Golden Star Ganesh and Deepa Sannidhi's Kannada film 'Sakkare' is released all over the Karnataka on 18th October. This the romantic drama is produced Shylaja Nag and B Suresha. Sakkare is inspired by O Henry's short story The Last Leaf but not the exact adaptation says Director Abhay Simha

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X