Don't Miss!
- News
ಜನವರಿ 28ರಂದು 300 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
SA Vs Eng 1st ODI: ಚೇಸಿಂಗ್ನಲ್ಲಿ ಎಡವಿದ ಇಂಗ್ಲೆಂಡ್ : ದಕ್ಷಿಣ ಆಫ್ರಿಕಾಗೆ 27 ರನ್ಗಳ ಜಯ
- Automobiles
ವೈರಲ್: ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹೊಚ್ಚ ಹೊಸ ವಾಹನ... ಇದರ ಬಗ್ಗೆ ಗೊತ್ತಾ?
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Sakath Movie Review: ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾಗೆ ಪ್ರೇಕ್ಷಕರ ಸಖತ್ ರೆಸ್ಪಾನ್ಸ್
ಕೊರೊನಾ ನಿಯಂತ್ರಣಕ್ಕೆ ಬರ್ತಾ ಇದ್ದಂತೆ ಸಿನಿಮಾ ಇಂಡಸ್ರ್ಟಿಗಳು ನಿಧಾನಕ್ಕೆ ತನ್ನ ಕೆಲಸ ಕಾರ್ಯಗಳನ್ನು ಆರಂಭಿಸಿವೆ. ಅಲ್ಲದೇ ಕಳೆದೆರೆಡು ವರ್ಷಗಳಿಂದ ರಿಲೀಸ್‌ಗೆ ಸಜ್ಜಾಗಿದ್ದ ಸಿನಿಮಾಗಳು ಈಗ ತೆರೆಗೆ ಒಂದೊಂದಾಗಿ ಬರುತ್ತಿವೆ. ಸಿನಿಪ್ರಿಯರು ಕೂಡ ಈ ಬಗ್ಗೆ ಖುಷಿಯಾಗಿದ್ದು, ಸಿನಿಮಾಗಳನ್ನು ನೋಡಿ ಸಂತಸಗೊಂಡಿದ್ದಾರೆ. ಅಂತೆಯೇ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಸಕತ್ ಸಿನಿಮಾ ಕೂಡ ಇಂದು ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿದ ಅಭಿಮಾನಿಗಳು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಖತ್ ಸಿನಿಮಾ ಅಂದುಕೊಂಡಂತೆ ಕಾಮಿಡಿ ಹೂರಣವನ್ನು ಪ್ರೇಕ್ಷಕರಿಗೆ ಉಣ ಬಡಿಸಿದೆ. ಸಿನಿಮಾ ಆರಂಭವಾದಾಗಿನಿಂದಲೂ ಕೊನೆಯವರೆಗೂ ಕಾಮಿಡಿ ಟಚ್ ಅಲ್ಲಲ್ಲಿ ಬಂದು ಸಿನಿ ವೀಕ್ಷಕರಿಗೆ ಬ್ಯಾಕ್ ಟು ಬ್ಯಾಕ್ ಮನೋರಂಜನೆ ನೀಡುತ್ತೆ ಸಿನಿಮಾ. ವಿಶೇಷ ಎಂದರೇ ಸಖತ್ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ಕೂಡ ಇದರಲ್ಲಿ ಅಭಿನಯಿಸಿದ್ದು, ತುಂಬಾ ಸಹಜವಾಗಿಯೇ ತನ್ನ ಪಾತ್ರ ನಿರ್ವಹಿಸಿದ್ದಾರೆ. ಯಾವ ಪಾತ್ರ ಅನ್ನೋದನ್ನ ಸಿನಿಮಾ ನೋಡಿಯೇ ನೀವು ತಿಳಿದುಕೊಳ್ಳಬೇಕು.

ಟಿವಿ ನಿರೂಪಕಿ ಮೇಲೆ ಕ್ರಶ್ ಆಗುತ್ತೆ
ಬಾಲು ಎಂಬ ಪಾತ್ರದಲ್ಲಿ ಅಭಿನಯಿಸಿರುವ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಟಿವಿ ನಿರೂಪಕಿ ಮೇಲೆ ಕ್ರಶ್ ಆಗುತ್ತೆ, ಆಕೆಯನ್ನು ಮಾತನಾಡಿಸಬೇಕು, ಹೇಗಾದರೂ ಇಂಪ್ರೆಸ್ ಮಾಡಬೇಕೆಂದು ಬಾಲು ಪ್ರಯತ್ನ ಮಾಡುತ್ತಾನೆ. ಆಗ ಒಲಿದ ಐಡಿಯಾವೇ ನಿರೂಪಕಿ ನಡೆಸಿಕೊಡುವ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸೋದು. ಹೇಗಾದರೂ ಪ್ರಯತ್ನ ಮಾಡಿ ಆ ಶೋನಲ್ಲಿ ಆಯ್ಕೆ ಆಗುವ ಬಾಲು ಪ್ರತೀ ಹೆಜ್ಜೆಯಲ್ಲೂ ನಿರೂಪಕಿಯನ್ನು ಇಷ್ಟಪಡಿಸಲು ಮುಂದಾಗುತ್ತಾನೆ. ಹೀಗೆ ಮಾಡುವಂತಹ ಸಂದರ್ಭದಲ್ಲಿ ಬಾಲು ಏನೇನೊ ರಿಸ್ಕ್‌ಗಳನ್ನು ಕೂಡ ತೆಗೆದುಕೊಳ್ಳುತ್ತಾನೆ. ಹೀಗೆ ಹುಡುಗಿಗಾಗಿ ಮಾಡುವ ನಾಟಕ ಮುಂದೆ ಹೇಗೆ ಬಾಲುರನ್ನ ಫಜೀತಿಗೆ ಸಿಲುಕಿಸಿತ್ತೇ? ಮತ್ತು ಆತ ಅದರಿಂದ ಹೊರಬರಲು ಹೇಗೆ ಪ್ರಯತ್ನವನ್ನು ಮಾಡುತ್ತಾನೆ, ಹೊರಬರಲು ಆಗುತ್ತಾ ಇಲ್ವಾ ಅನ್ನೋದೆ ಸಿನಿಮಾದ ಒನ್ ಲೈನ್ ಸ್ಟೋರಿ.

ಸೀರಿಯಸ್ ವಿಚಾರಕ್ಕೆ ತಿರುಗುತ್ತೆ
ಹೀಗೆ ಮೊದಲಿಗೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಚಿಕ್ಕಣ್ಣ ಅವರ ಕಾಮಿಡಿ ಕಿಕ್‌ನಿಂದ ಆರಂಭವಾಗುವ ಸಿನಿಮಾ ನೋಡುತ್ತಾ ಹೋದಂತೆ ಸೀರಿಯಸ್ ವಿಚಾರಕ್ಕೆ ತಿರುಗುತ್ತೆ. ಒಂದು ಸಾವಿನ ಸುತ್ತಾ ಕಥೆ ಸಾಗುತ್ತೆ. ಆ ಸಾವು ಯಾಕಾಯ್ತು, ಯಾವ ಕಾರಣಕ್ಕಾಗಿ ಆಯಿತು, ಯಾರು ಕೊಲೆ ಮಾಡಿಸಿದ್ದಾರೆ ಮತ್ತು ಯಾಕೆ ಕೊಲೆ ಮಾಡಿಸಿದ್ದಾರೆ ಎಂಬ ವಿಷಯದ ಸುತ್ತಾ ತುಂಬಾ ಟ್ವಿಸ್ಟ್‌ಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಕೊಲೆಗೂ ಬಾಲುಗು ಕನೆಕ್ಟ್ ಆಗೋದು ಎಲ್ಲಿ, ಬಾಲುವಿನಿಂದ ಈ ಒಂದು ಕೊಲೆಗೆ ಹೇಗೆ ಬೇರೆ ಬೇರೆ ಮಜಲುಗಳು ಸಿಗುತ್ತೆ ಅನ್ನೋದೆ ಸಿನಿಮಾದ ಇಂಟ್ರಸ್ಟಿಂಗ್ ವಿಚಾರ.

ಮತ್ತೊಂದು ಇಂಟ್ರಸ್ಟಿಂಗ್ ವಿಚಾರ
ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅಂಧನ ಪಾತ್ರದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ನಿಜಕ್ಕೂ ಗಣೇಶ್ ಸಿನಿಮಾದಲ್ಲಿ ಕಣ್ಣು ಕಾಣದವನ? ಅನ್ನೋದು ಮತ್ತೊಂದು ಇಂಟ್ರಸ್ಟಿಂಗ್ ವಿಚಾರ. ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು ಸುರಭಿ ಮತ್ತು ನಿಶ್ವಿಕ ನಾಯ್ಡು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇವರಿಬ್ಬರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಯಾರನ್ನು ಇಷ್ಟ ಪಡುತ್ತಾರೆ, ಇಬ್ಬರಲ್ಲಿ ಯಾರನ್ನ ಮದುವೆ ಆಗಲು ಒಪ್ಪುತ್ತಾರೆ ಅನ್ನೋದರ ಕಥೆಯಲ್ಲಿಯೂ ಸಾಕಷ್ಟು ರೋಚಕ ಟ್ವಿಸ್ಟ್‌ಗಳಿವೆ. ಹೀಗೆ ಜೂನಿಯರ್ ಬಾಲುವಿನಿಂದ ಸಿನಿಮಾ ಆರಂಭವಾಗಿ ಕಟಕಟೆಯ ಮೇಲೆ ನ್ಯಾಯ ಸಿಗುವವರೆಗೂ ಸಾಗುವ ಕಥೆಯಲ್ಲಿ ಸಾಕಷ್ಟು ಪಾತ್ರವರ್ಗಗಳು ಬರುತ್ತೆ.

ವಿಭಿನ್ನ ಬಗೆಯ ಕೋರಿಯೋಗ್ರಫಿ
ಸಾಧು ಕೋಕಿಲಾ, ರಂಗಾಯಣ ರಘು,ಗಿರೀಶ್ ಶಿವಣ್ಣ,ಧರ್ಮಣ್ಣ ಕಡೂರು, ಮಾಳವಿಕ ಅವಿನಾಶ್, ಶೋಭರಾಜ್, ಮುಂತಾದವರು ಕಾಣಿಸಿಕೊಂಡಿದ್ದಾರೆ. ಪಾತ್ರವರ್ಗ ದೊಡ್ಡದಿದ್ದರೂ ಯಾವ ಪಾತ್ರವೂ ಸುಮ್ಮನೆ ಮಾಡಿದ್ದಾರೆ ಎಂದು ಎಲ್ಲೂ ಅನ್ನಿಸೋದಿಲ್ಲಾ. ಹಾಗೇ ಸಿನಿಮಾದಲ್ಲಿ ಬರುವ ಇಂಟ್ರೋಡಕ್ಷನ್ ಸಾಂಗ್, ರೋಮ್ಯಾಟಿಂಕ್ ಸಾಂಗ್‌ಗಳು ಕೂಡ ತುಂಬಾ ಅದ್ಭುತವಾಗಿ ಕೇಳುಗರಿಗೆ ಹಿಡಿಸಿದೆ. ವಿಭಿನ್ನ ಬಗೆಯ ಕೋರಿಯೋಗ್ರಫಿ, ಹಾಡಿನ ಸಂಯೋಜನೆ ಗಣೇಶ್ ಇಮೇಜ್‌ಗೆ ಮತ್ತಷ್ಟು ಮೈಲೇಜ್ ನೀಡುವಂತಿತ್ತು.

ವಿಭಿನ್ನ ಬಗೆಯ ಸಿನಿಮಾ ಅನ್ನಿಸಿದ್ದಂತು ಸುಳ್ಳಲ್ಲ
ಇನ್ನು ಸಿಂಪಲ್ ಸುನಿ ಅವರ ನಿರ್ದೇಶನದಲ್ಲಿ ಸಖತ್ ಮೂವಿ ಮೂಡಿಬಂದಿದೆ. ಸಿಂಪಲ್ ಸುನಿ ಅವರ ಹಿಂದಿನ ಸಿನಿಮಾಗಳಿಗೂ ಸಖತ್ ಸಿನಿಮಾಗೂ ಸಾಕಷ್ಟು ವ್ಯತ್ಯಾಸಗಳಿದ್ದು, ವಿಭಿನ್ನ ಬಗೆಯ ಸಿನಿಮಾ ಅನ್ನಿಸಿದ್ದಂತು ಸುಳ್ಳಲ್ಲ. ಲವ್, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಸೇರಿಸಿ ಮಾಡಿರುವಂತಹ ಸಿನಿಮಾ ಇದಾಗಿದ್ದು, ಜೂಡ ಸ್ಯಾಂಡಿ ಸಂಗೀತ ನಿರ್ದೇಶನವೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಒಟ್ಟಾರೆಯಾಗಿ ಗೋಲ್ಡನ್ ಸ್ಟಾರ್ ಅಭಿನಯದ ಸಖತ್ ಸಿನಿಮಾ ರಿಲೀಸ್ ಫಸ್ಟ್ ಡೇ ಫಸ್ಟ್ ಶೊ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ, ಈ ರೆಸ್ಪಾನ್ಸ್ ನೋಡಿದ ಚಿತ್ರತಂಡ ಕೂಡ ಖುಷಿಯಾಗಿದೆ.