For Quick Alerts
  ALLOW NOTIFICATIONS  
  For Daily Alerts

  'ಗಾಳಿಪಟ 2' ಮೂಲಕ ಹಿಟ್ ಬಾರಿಸಿದ್ದ ಗಣೇಶ್ ಅಭಿನಯದ 'ತ್ರಿಬಲ್ ರೈಡಿಂಗ್' ಗೆಲ್ತಾ, ಸೋಲ್ತಾ?

  |

  ಇಂದು ( ನವೆಂಬರ್ 25 ) ತಿಂಗಳ ಅಂತಿಮ ಶುಕ್ರವಾರ. ಈ ದಿನ ಕನ್ನಡ ಸೇರಿದಂತೆ ಭಾರತದ ಹಲವು ಚಿತ್ರಗಳ ಹಲವಾರು ಚಿತ್ರಗಳು ಬಿಡುಗಡೆಯಾಗಿವೆ. ಇನ್ನು ಕನ್ನಡದ ಪೈಕಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ತ್ರಿಬಲ್ ರೈಡಿಂಗ್', ಪವನ್ ಒಡೆಯರ್ ನಿರ್ದೇಶನದ 'ರೇಮೊ' ಹಾಗೂ ಯುವ ಕಲಾವಿದರ 'ಸದ್ದು ವಿಚಾರಣೆ ನಡೆಯುತ್ತಿದೆ' ಚಿತ್ರಗಳು ಬಿಡುಗಡೆಗೊಂಡಿವೆ.

  ಇನ್ನು ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಗಾಳಿಪಟ 2 ಚಿತ್ರದ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಗಣೇಶ್ ಈಗ ಮೂವರು ನಾಯಕಿಯರ ಜತೆ ತ್ರಿಬಲ್ ರೈಡಿಂಗ್ ಹೊರಟಿದ್ದು, ಚಿತ್ರ ನಿನ್ನೆಯೇ ( ನವೆಂಬರ್ 24 ) ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಪೇಯ್ಡ್ ಪ್ರೀಮಿಯರ್‌ ಪ್ರದರ್ಶನಗಳನ್ನು ಕಂಡಿದೆ. ಈ ವಿಶೇಷ ಪ್ರದರ್ಶನದಲ್ಲಿ ತ್ರಿಬಲ್ ರೈಡಿಂಗ್ ವೀಕ್ಷಿಸಿದ ಸಿನಿ ರಸಿಕರು ಚಿತ್ರವನ್ನು ಮೆಚ್ಚಿಕೊಂಡಿದ್ದರು.

  ಚಿತ್ರ ವೀಕ್ಷಿಸಿ ಹೊರಬಂದಿದ್ದ ಸಿನಿ ರಸಿಕರು ಒಂದೊಳ್ಳೆ ಕಾಮಿಡಿ ಎಂಟರ್‌ಟೈನರ್ ಎಂದಿದ್ದರು. ನಾಯಕ ಗೋಲ್ಡನ್ ಸ್ಟಾರ್ ಗಣೇಶ್, ನಾಯಕಿಯರಾದ ಮೇಘಾ ಶೆಟ್ಟಿ, ರಚನಾ ಇಂದರ್ ಹಾಗೂ ಅದಿತಿ ಪ್ರಭುದೇವ ನಟನೆಗೆ ಫುಲ್ ಮಾರ್ಕ್ಸ್ ನೀಡಿದ್ದರು. ಇನ್ನು ಇಂದು ( ನವೆಂಬರ್ 25 ) ತ್ರಿಬಲ್ ರೈಡಿಂಗ್ ನೋಡಲು ಮಾರ್ನಿಂಗ್ ಶೋಗೆ ಥಿಯೇಟರ್ ಒಳಗೆ ಕಾಲಿಟ್ಟಿದ್ದ ಪ್ರೇಕ್ಷಕರು ಸಹ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಚಿತ್ರಮಂದಿರಗಳಲ್ಲಿ ಗಣೇಶ್ ಹಾಗೂ ಮೂವರು ನಾಯಕಿಯರ ತ್ರಿಬಲ್ ರೈಡಿಂಗ್ ವೀಕ್ಷಿಸಿದ ಸಿನಿ ರಸಿಕರು ಸಾಮಾಜಿಕ ಜಾಲತಾಣದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದರ ಕುರಿತ ಮಾಹಿತಿ ಈ ಕೆಳಕಂಡಂತಿದೆ..

  ಹಿಟ್ ಸಿನಿಮಾ

  ಹಿಟ್ ಸಿನಿಮಾ

  ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ವೀಕ್ಷಿಸಿದ ಪ್ರಸನ್ನ ಕಶ್ಯಪ್ ಎಂಬ ಸಿನಿರಸಿಕ ಚಿತ್ರವನ್ನು ಹಿಟ್ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ವಿಶೇಷವಾಗಿ ಚಿತ್ರದ ಕಾಮಿಡಿಗೆ 5ಕ್ಕೆ 4 ಅಂಕಗಳನ್ನು ಕೊಟ್ಟಿರುವ ಇವರು ಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಬಹುದು ಎಂದಿದ್ದಾರೆ.

  ಕಾಮಿಡಿ ಎಂಟರ್‌ಟೈನರ್

  ಕಾಮಿಡಿ ಎಂಟರ್‌ಟೈನರ್

  ದೀಕ್ಷಾ ಶೇಖರ್ ಎಂಬ ಚಿತ್ರ ಪ್ರೇಕ್ಷಕಿ ತ್ರಿಬಲ್ ರೈಡಿಂಗ್ ವೀಕ್ಷಿಸಿದ ನಂತರ ಚಿತ್ರದ ಕುರಿತು ಟ್ವೀಟ್ ಮಾಡಿದ್ದು ಇದೊಂದು ಪಕ್ಕಾ ಕಾಮಿಡಿ ಎಂಟರ್‌ಟೈನರ್ ಎಂದಿದ್ದಾರೆ. ಚಿತ್ರ ಎಂಗೇಜಿಂಗ್ ಆಗಿ ಇದ್ದು, ಕಥೆಯಲ್ಲಿನ ತಿರುವುಗಳು ಚೆನ್ನಾಗಿವೆ ಮತ್ತು ಚಿತ್ರದ ಹಾಡುಗಳು ಹಾಗೂ ಛಾಯಾಗ್ರಾಹಣ ಸೂಪರ್‌ ಎಂದು ಬರೆದುಕೊಂಡಿದ್ದಾರೆ.

  ಗಣೇಶ್ ಕೆರಿಯರ್‌ನ ದೊಡ್ಡ ರಿಲೀಸ್

  ಗಣೇಶ್ ಕೆರಿಯರ್‌ನ ದೊಡ್ಡ ರಿಲೀಸ್

  ಇನ್ನು ಇಲ್ಲಿಯವರೆಗೂ ಬಿಡುಗಡೆಗೊಂಡಿರುವ ಗಣೇಶ್ ಅಭಿನಯದ ಎಲ್ಲಾ ಚಿತ್ರಗಳಿಗಿಂತ ತ್ರಿಬಲ್ ರೈಡಿಂಗ್ ಅತಿಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಚಿತ್ರ ಎನಿಸಿಕೊಂಡಿದೆ. ಇಂದು ( ನವೆಂಬರ್ 25 ) 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತ್ರಿಬಲ್ ರೈಡಿಂಗ್ ತೆರೆ ಕಂಡಿದೆ. ಬೆಂಗಳೂರಿನ ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರ ನರ್ತಕಿಯಲ್ಲಿ ತೆರೆಕಂಡಿರುವ ತ್ರಿಬಲ್ ರೈಡಿಂಗ್ ಬೆಂಗಳೂರು ನಗರದಲ್ಲಿ ಮೊದಲ ದಿನ 238 ಪ್ರದರ್ಶನ ಕಂಡಿದೆ. ಇಂದು ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತಿರುವ ಎಲ್ಲಾ ಚಿತ್ರಗಳಿಗಿಂತ ತ್ರಿಬಲ್ ರೈಡಿಂಗ್ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿದೆ.

  ನವೆಂಬರ್ 25ರಂದು ಬೆಂಗಳೂರಿನಲ್ಲಿ ವಿವಿಧ ಚಿತ್ರಗಳು ಪಡೆದ ಪ್ರದರ್ಶನಗಳ ಸಂಖ್ಯೆ

  ತ್ರಿಬಲ್ ರೈಡಿಂಗ್: 238 ಪ್ರದರ್ಶನಗಳು

  ಭೇದಿಯಾ: 206 ಪ್ರದರ್ಶನಗಳು

  ದೃಶ್ಯಂ 2 : 178 ಪ್ರದರ್ಶನಗಳು

  ರೇಮೊ : 103 ಪ್ರದರ್ಶನಗಳು

  ವಾಕಂಡಾ ಫಾರೆವರ್ : 90 ಪ್ರದರ್ಶನಗಳು

  ಕಾಂತಾರ : 72 ಪ್ರದರ್ಶನಗಳು

  English summary
  Golden star Ganesh starrer Tribble Riding movie twitter review . Take a look
  Friday, November 25, 2022, 15:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X