»   » ಡೈರೆಕ್ಟರ್ ಸ್ಪೆಷಲ್ : ಟ್ವಿಟ್ಟರ್ ವಿಶೇಷ ವರದಿ

ಡೈರೆಕ್ಟರ್ ಸ್ಪೆಷಲ್ : ಟ್ವಿಟ್ಟರ್ ವಿಶೇಷ ವರದಿ

Posted By:
Subscribe to Filmibeat Kannada

ಸತತ ಮೂರು ವರ್ಷಗಳ ಬಳಿಕ ಗುರು ಪ್ರಸಾದ್ ನಿರ್ದೇಶನದ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದೆ. ಕಾಡಿಸಿ, ಬೇಡಿಸಿ ಚಿತ್ರಗಳನ್ನು ಮಾಡುವ ಜಾಯಾಯದ ಪೈಕಿಯ ನಿರ್ದೇಶಕ ಗುರುಪ್ರಸಾದ್. ಇದೇ ಮೇ 31ಕ್ಕೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣುತ್ತಿದೆ.

ಆರಂಭದಲ್ಲಿ ಕೋಮಲ್ ಅವರನ್ನು ನಾಯಕ ನಟನನ್ನಾಗಿ ಆಯ್ಕೆ ಮಾಡಲಾಗಿತ್ತು. ಸಂಪೂರ್ಣ ಕಥೆ ಕೇಳಿದ ಬಳಿಕ ಅವರು ಕೈಎತ್ತಿದರು. ಪತ್ರಿಕಾಗೋಷ್ಠಿಯನ್ನೂ ಕರೆದು ನಾನು ಆ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ ಎಂದು ಹೇಳಿದ್ದರು.

ಸತತ ಮೂರು ವರ್ಷಗಳ ಕಾಲ ಸುದೀರ್ಘ ಸಮಯ ಈ ಚಿತ್ರಕ್ಕಾಗಿ ವೆಚ್ಚಿಸಿದ್ದಾರೆ. ಅವರು ಬೇರೆ ಬೇರೆ ವಿಭಾಗಗಳಲ್ಲಿ ತೊಡಗಿಕೊಂಡಿದ್ದೇ ಚಿತ್ರ ವಿಳಂಬವಾಗಲು ಕಾರಣ. ಸಂಭಾಷಣೆ ರಚನೆ, ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಗಳಲ್ಲಿ ಗುರು ತೊಡಗಿಕೊಂಡಿದ್ದರು. ಆಗಾಗ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು.

ಈಗ ಹ್ಯಾಟ್ರಿಕ್ ಹೊಡೆಯುವ ಕನಸು ಹೊತ್ತಿದ್ದಾರೆ. ನಾಟಕ ರಂಗದ ಯುವ ಪ್ರತಿಭೆ ಮೈಸೂರಿನ ಧನಂಜಯ ಅವರು ಚಿತ್ರದ ನಾಯಕನಾಗಿ ತಮ್ಮ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಓದುಗರು ಚಿತ್ರದ ಬಗ್ಗೆ ಏನು ಹೇಳುತ್ತಾರೆ ಇಲ್ಲಿದೆ ಟ್ವೀಟ್ ವರದಿ

ಡೈರೆಕ್ಟರ್ ಸ್ಪೆಷಲ್ -ಟ್ವೀಟ್ ವಿಮರ್ಶೆ

* ಕೆಲವರು ಜಗ್ಗೇಶ್ ಇರಬೇಕಿತ್ತು ಮಗಾ, ಗುರು-ಜಗ್ಗೇಶ್ ಡೆಡ್ಲಿ ಕಾಂಬಿನೇಷನ್ ಎಂದು ಗೊಣಗುವುದು ಕೇಳಿಸುತ್ತಿದೆ.
* ಟೈಟಲ್ ಸಾಂಗ್ ಜೊತೆ ಚಿತ್ರದ ಶೀರ್ಷಿಕೆ ಪ್ಯಾಥೋ ಭಾವನೆ
* ನಾಯಕ ಧನಂಜಯ ಎಂಟ್ರಿ ಮೊದಲ ದೃಶ್ಯದಲ್ಲೇ ಪ್ರಾರ್ಥನೆ, ರಂಗಾಯಣ ರಘು ಎಂಟ್ರಿ 'ಪಂಚೆ ರಘು' ನಾಯಕನ ತಂದೆ

ಪಂಚೆ ರಘು ಫುಲ್ ಪಂಚಿಂಗ್

ಅಪ್ಪನಿಗೆ ಅಮ್ಮ ಹುಡುಕಿಕೊಂಡು ಬಂದ ಮಗ, ಹೊಸ ಅಮ್ಮನನ್ನು ಮೇಲಿಂದ ಕೆಳಕ್ಕೆ ನೋಡಿದ ರಂಗಾಯಣ ರಘು-
"ಈಕೆ ಕನ್ನಡದ ಥರಾ ಮುಂದೆ ಇಂದ ಓದಿದ್ರೂ ಚೆಂದ, ಉರ್ದು ಥರಾ ಹಿಂದೆಯಿಂದ ಓದಿದ್ರೂ ಚೆಂದ" ಡೈಲಾಗ್ ಗೆ ಶಿಳ್ಳೆ

"ಅಪ್ಪ ಆಗೋದು 3 ನಿಮಿಷದ ಕೆಲ್ಸ, ಆದರೆ, ಅಮ್ಮ ಆಗೋದು 9 ತಿಂಗಳ ಕೆಲ್ಸ"

ಪಂಚೆ ರಘು ಫುಲ್ ಪಂಚಿಂಗ್ ಡೈಲಾಗ್ಸ್ ಶುರು

ಪಂಚೆ ರಘು ಫುಲ್ ಪಂಚಿಂಗ್

ಡಾಕ್ಟ್ರು: ನಿಮಗೆ ಕಣ್ಣಿನ ಸಮಸ್ಯೆ ಇದ್ಯಾ?
ರಂಗಾಯಣ ರಘು: ಇಲ್ಲಾ ನಮ್ಗೆ ಉಪೇಂದ್ರ ಥರಾ ಮೈ ಎಲ್ಲಾ ಕಣ್ಣು

ಕಮಲ ಅನ್ನೋಳಿಗೆ ಮಕ್ಕಳಾಗಿ ಆಪರೇಷನ್ ಮಾಡೋಕೊಂಡ್ರೆ ಅದನ್ನು ಏನಂತೀರಾ?
ಆಪರೇಷನ್ ಕಮಲCool

ಪಂಚೆ ರಘು ಫುಲ್ ಪಂಚಿಂಗ್

ಟಿಎನ್ ಸೀತಾರಾಮ್ ಅವರ ಹೆಸರು ಕೂಡಾ ಬಳಕೆ ಸ್ಮಾಲ್ ಸ್ಕ್ರೀನ್ ಗೆ ಒಳ್ಳೆ ರೈಟರ್ ಎಂದು ಶಭಾಷ್.

"ನಮ್ಮ ಅಪ್ಪ ಬ್ರಾಹ್ಮಣ, ಅಮ್ಮ ಲಿಂಗಾಯತ, ಸೋ ನನ್ನ ಜಾತಿ
ಲಿಂಗ-ಬ್ರಾ ಅಥವಾ ಬ್ರಾ-ಲಿಂಗ"

"ಪ್ರಪಂಚದಲ್ಲಿ ಏನೇ ಎಳೆದ್ರೂ ಉದ್ದ ಆಗುತ್ತೆ. ಎಳೆದಂತೆ ಗಿಡ್ಡ ಆಗೋ ಏಕೈಕ ವಸ್ತು ಎಂದ್ರೆ ಈ ಸಿಗರೇಟ್ "Laughing

ಗುರು ಚಿಂದಿ ಡೈಲಾಗ್ಸ್ ಸುರಿಮಳೆ

ರಂಗಾಯಣ ರಘು ತನ್ನ ಮಗಳಿಗೆ :
ರಘು: ಅಮ್ಮ ನಿನಗೆ ಯಾವ ಥರಾ ಗಂಡು ಬೇಕಮ್ಮ
ಮಗಳು: ನನಗೆ ಉಪೇಂದ್ರ ಥರಾ ಬುದ್ಧಿವಂತ ಬೇಡ, ವಿಷ್ಣುವರ್ಧನ ಥರಾ ಹೃದಯವಂತ ಬೇಕು

"ಆಟದ ಸಾಮಾನು ಇಲ್ಲದೆ ಆಡೋ ಏಕೈಕ ಆಟ ಅಂದ್ರೆ- ಅಪ್ಪ, ಅಮ್ಮ ಆಟ"

ರಘು: ನೀವು ಎಷ್ಟು ಜನ ಮಕ್ಕಳು?
ಹುಡುಗಿ: 6
ರಘು: ಪ್ರತಿ ಭಾರತೀಯನು ಹಾಸಿಗೆ ಸವೆಸಿದಷ್ಟು ಚಪ್ಪಲಿ ಸವೆಸಿದ್ರೆ ನಮ್ ದೇಶ ಎಲ್ಲೋ ಹೋಗಿರೋದು

ಗುರು ಚಿಂದಿ ಡೈಲಾಗ್ಸ್ ಸುರಿಮಳೆ

* ಅಪ್ಪ ಮಗ ಒಟ್ಟಿಗೆ ಕೂತು ಇಸ್ಪೀಟ್ ಕಾರ್ಡ್ ಆಟ ಆಡೋದನ್ನು ನೋಡಬೇಕಾ ಡೈರೆಕ್ಟರ್ ಸ್ಪೆಷ್ಪಲ್ ಸಿನ್ಮಾ ನೋಡಿ
* ಮಧ್ಯಂತರ ತನಕ ಚಿತ್ರವನ್ನು ಡೈಲಾಗ್ ಗಳು ತೂಗಿಸಿಕೊಂಡು ಹೋಗುತ್ತದೆ. ರಂಗಾಯಣ ರಘು ಪಾತ್ರದಲ್ಲಿ ತಲ್ಲೀನರಾಗಿಬಿಟ್ಟಿದ್ದಾರೆ. ಧನಂಜಯ್ ರೋಲ್ ಗೂ ಶಿಳ್ಳೆಗಳೂ ಬೀಳುತ್ತಿದೆ. ಒಳ್ಳೆ ಟೈಮ್ ಪಾಸ್

* "ನಾವಿಬ್ಬರು ಮೂರಾಗದಂತೆ ನಮ್ಮ ಮಧ್ಯೆ ರಬ್ಬರು" ದುಂಡಿರಾಜ್ ಅವರ ಹನಿಗವನ ಸಮರ್ಥವಾಗಿ ಬಳಕೆ

ಗುರು ಚಿಂದಿ ಡೈಲಾಗ್ಸ್ ಸುರಿಮಳೆ

ರಘು ಬೈಯಲ್ಲಿ ಡೈಲಾಗ್ಸ್ ಕೇಳಿ ಆನಂದಿಸುತಿರುವ ಪ್ರೇಕ್ಷಕರು.

"ಹೆಣ್ಮಕ್ಕಳು ಸೌಂದರ್ಯಕ್ಕಾಗಿ ದುಡ್ಡು ಖರ್ಚು ಮಾಡಬೇಕು. ದುಡ್ಡಿಗಾಗಿ ಸೌಂದರ್ಯ ಖರ್ಚು ಮಾಡಬಾರದು"

ಡೈಲಾಗ್ಸ್ ಹಾಗೂ ಚಿತ್ರಕಥೆ ಸೂಪರ್

ಮನುಷ್ಯನ ದೇಹಕ್ಕೆ ಆನೆ ತಲೆ ಜೋಡಿಸಿ ಲಾರ್ಡ್ ಗಣೇಶ ಆದ
ಆಮೇಲೆ ಆನೆ ದೇಹಕ್ಕೆ ಮನುಷ್ಯನ ತಲೆ ಜೋಡಿಸಿ ಆದವನೆ ಹಣೇಶ

ಗುರುಪ್ರಸಾದ್ ಅವರು ಡೈಲಾಗ್ಸ್ ಚಿತ್ರದ ಜೀವಾಳ. ರಂಗಾಯಣ ರಘು ಹಾಗೂ ಧನಂಜಯ್ ಕಾಂಬಿನೇಷನ್ ವರ್ಕ್ ಔಟ್ ಆಗಿದೆ

ಡೈಲಾಗ್ಸ್ ಹಾಗೂ ಚಿತ್ರಕಥೆ ಸೂಪರ್

ಸಕುಟುಂಬ ಸಪರಿವಾರ ಸಮೇತ ಹೋಗಿ ನೋಡಬಹುದಾದ ಚಿತ್ರ U/A ಸರ್ಟಿಫಿಕೇಟ್ ಇರುವುದರಿಂದ ಆಗಾಗ ಕಣ್ಣು ಕಿವಿ ಮುಚ್ಚಿಕೊಂಡು ನೋಡಬೇಕಾಗುತ್ತದೆ. ಮಿಕ್ಕಂತೆ ಕಾಸಿಗೆ ತಕ್ಕ ಕಜ್ಜಾಯ. ಹ್ಯಾಟ್ರಿಕ್ ಕನಸು ನನಸಾಗುವ ಎಲ್ಲಾ ಲಕ್ಷಣಗಳಿದೆ.

ಡೈಲಾಗ್ಸ್ ಹಾಗೂ ಚಿತ್ರಕಥೆ ಸೂಪರ್

ಪೂಜಾ ಗಾಂಧಿ ಅವರು ತಮ್ಮ ಉದರವನ್ನು ಕುಲುಕಿಸುತ್ತಾ ಏನೇ ಥಳಕು ಬಳಕು ಮಾಡಿದರೂ DSP ಬ್ಲಾಕೋ ಅಲ್ಲ ವೈಟೂ ಅಲ್ಲ ಎಂಬಂತೆ ಕಿಕ್ ಕೊಟ್ಟಿಲ್ಲ. ಐಟಂ ಸಾಂಗ್ ಬರೋ ಅಷ್ಟರಲ್ಲಿ ಪ್ರೇಕ್ಷಕ ಬೇರೆ ಯಾವುದೋ ಮೂಡ್ ನಲ್ಲಿರುತ್ತಾನೆ. ನಗಿಸ್ಸೋಸೆ ನಮ್ಮ ಬಿಸಿನೆಸ್ಸು ಗುರೂ

English summary
Mata, Eddelu Manjunatha fame director Guruprasad's latest venture' Director's Special' movie gets grand opening today(May.31) across Karnataka. Here is Live Tweet report. review by Gandhadagudi team
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada