»   » ಜೇಮ್ಸ್ ಬಾಂಡ್ 'ಸ್ಪೆಕ್ಟ್ರಾ' ಅಷ್ಟಕಷ್ಟೆ.? ವಿಮರ್ಶಕರ ಮಾತೇನು?

ಜೇಮ್ಸ್ ಬಾಂಡ್ 'ಸ್ಪೆಕ್ಟ್ರಾ' ಅಷ್ಟಕಷ್ಟೆ.? ವಿಮರ್ಶಕರ ಮಾತೇನು?

Posted By:
Subscribe to Filmibeat Kannada

ಐದು ದಶಕಗಳ ನಿರಂತರ ಸಂಚಲನ ಜೇಮ್ಸ್ ಬಾಂಡ್ ನ ಹೊಚ್ಚ ಹೊಸ ಚಿತ್ರ 'ಸ್ಪೆಕ್ಟ್ರಾ' (Spectre) ವಿಶ್ವದಾದ್ಯಂತ ರಿಲೀಸ್ ಆಗಿದೆ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.

'ಸ್ಕೈ ಫಾಲ್' ಬಿಡುಗಡೆ ಆದ ಮೂರು ವರ್ಷಗಳ ನಂತ್ರ 'ಸ್ಪೆಕ್ಟ್ರಾ' ರಿಲೀಸ್ ಆಗಿದೆ. ಎಂದಿನ ಚಾರ್ಮ್ ಉಳಿಸಿಕೊಂಡಿರುವ ನಾಯಕ ಡೇನಿಯಲ್ ಕ್ರೇಗ್ ಮತ್ತು ಮಲೇನಾ ಖ್ಯಾತಿಯ ಮೋನಿಕಾ ಬೆಲೂಚ್ಚಿ ಅಭಿನಯದ 'ಸ್ಪೆಕ್ಟ್ರಾ' ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡ್ತಿದೆ.

ಇದುವರೆಗಿನ ಎಲ್ಲಾ ಬಾಂಡ್ ಸಿನಿಮಾಗಳ ಥ್ರಿಲ್, ನಿಗೂಢತೆ, ತಾಂತ್ರಿಕತೆ ಮತ್ತು ಸಾಹಸ ಪ್ರೇಕ್ಷಕರಿಗೆ ಮಾತ್ರವಲ್ಲ ವಿಮರ್ಶಕರ ಮನಸ್ಸನ್ನೂ ಗೆದ್ದಿವೆ. ಈ ಬಾರಿ 'ಸ್ಪೆಕ್ಟ್ರಾ' ಕೂಡ ಎಲ್ಲಾ ವಿಮರ್ಶಕರ ಮನಸ್ಸನ್ನ ಗೆದ್ದಿದ್ಯಾ ಅಂತ ನೀವು ಕೇಳಿದ್ರೆ, ಉತ್ತರ ಕೊಂಚ ಕಷ್ಟ. [ಜೇಮ್ಸ್ ಬಾಂಡ್ ಸಂಸ್ಕಾರಿಯಾಗಿಬಿಟ್ಟ, ಕಿಸ್ ಮರೆತು ಬಿಟ್ಟ]

ಯಾಕಂದ್ರೆ, ಮೈನವಿರೇಳಿಸುವ ಸಾಹಸವಿರುವ 'ಸ್ಪೆಕ್ಟ್ರಾ' ಸಿನಿಮಾ, ಜೇಮ್ಸ್ ಬಾಂಡ್ ಅಪ್ಪಟ ಭಕ್ತರಿಗೆ ಬೋರ್ ಹೊಡೆಸುವುದು ಗ್ಯಾರೆಂಟಿ. ಕೆಲ ವಿಮರ್ಶಕರ ಅಭಿಪ್ರಾಯ ಕೂಡ ಇದೆ. 'ಸ್ಪೆಕ್ಟ್ರಾ' ಚಿತ್ರದ ಬಗ್ಗೆ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ನೀಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ......

ಸ್ಪೆಕ್ಟರ್ 007 ; ಬೊಂಬಾಟ್ ಬಾಂಡ್ - ವಿಜಯ ಕರ್ನಾಟಕ

ಜೇಮ್ಸ್ ಬಾಂಡ್ ಸರಣಿಯ 25ನೇ ಚಿತ್ರ ಸ್ಪೆಕ್ಟರ್ 007 ಪ್ರೇಕ್ಷಕರಿಗೆ ಬರೀ ಅಚ್ಚರಿಗಳನ್ನೇ ಕೊಟ್ಟಿದೆ. ಈ ಬಾರಿ ಗನ್ ಗಳಿಗೆ ಹೆಚ್ಚು ಕೆಲಸ ಇಲ್ಲ. ಬರೀ ಬಿಲ್ಡಿಂಗ್ ಗಳೇ ಬಿದ್ದು ಸದ್ದು ಮಾಡುತ್ತವೆ. ಚಿತ್ರದ ಮೊದಲು ಜೇಮ್ಸ್ ಬಾಂಡ್ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅರೆ ಬೆತ್ತಲಾಗಿ ಗ್ಲಾಮ್ ಗರ್ಲ್ ಜತೆ ರೊಮಾನ್ಸ್ ಮಾಡುತ್ತಾರೆ. ಹಾಡಿನ ಡಾನ್ಸ್ ಮುಗಿಯುತ್ತಿದ್ದಂತೆ ಬಾಂಡ್ ಗನ್ ಹಿಡಿದು ಸ್ಟೇಡಿಯಂ ಸ್ಫೋಟಿಸಲು ಸಂಚು ರೂಪಿಸುತ್ತಿದ್ದವರ ಮೇಲೆ ಅಟ್ಯಾಕ್ ಮಾಡುತ್ತಾರೆ. ಅಲ್ಲಿಂದ ಬಿಲ್ಡಿಂಗ್ ಗಳು ಕೆಳಗೆ ಉರುಳುವ ದೃಶ್ಯಗಳು ಪ್ರಾರಂಭವಾಗುತ್ತವೆ. ಇಂದಿನ ಪ್ರೇಕ್ಷಕರಿಗೆ ಗೊತ್ತಿಲ್ಲದ ಗ್ಯಾಜೆಟ್ ಗಳೇನೂ ಚಿತ್ರದಲ್ಲಿ ಹೆಚ್ಚಾಗಿ ಇಲ್ಲ. ಆದರೆ ಬಾಂಡ್ ಕಾರಿನಲ್ಲಿರುವ ಗನ್, ಬೆಂಕಿ ಎಲ್ಲವೂ ಇದೆ. ನಿರ್ದೇಶಕ ಸ್ಯಾಂ ಮೆಂಡೆಸ್, ಜೇಮ್ಸ್ ಬಾಂಡ್ ರನ್ನು ಮೆಕ್ಸಿಕೋ ಸಿಟಿ, ರೋಂ, ಲಂಡನ್‌ಗೆ ಕಳುಹಿಸುತ್ತಾರೆ. ಚಿತ್ರದ ಪ್ರಾರಂಭದಲ್ಲೇ ಮೆಕ್ಸಿಕೋ ಸಿಟಿಯನ್ನು ತೋರಿಸಿರುವ ರೀತಿ ಸೊಗಸಾಗಿದೆ. ಲಕ್ಷಾಂತರ ಜನರು ಸೇರಿರುವ ಸಿಟಿಯಲ್ಲಿ ಹೆಲೆಕಾಪ್ಟರ್ ಒಳಗೆ ಖಳ ನಾಯಕನ ಜತೆ ಬಾಂಡ್ ಫೈಟ್ ಮಾಡುವಾಗ ಪ್ರೇಕ್ಷಕನ ಎದೆ ನಡುಗುತ್ತದೆ. ಅದೇ ರೀತಿ ಎದೆ ನಡುಗುವ ಸಾಕಷ್ಟು ಸಾಹಸಮಯ ದೃಶ್ಯಗಳು ಚಿತ್ರದಲ್ಲಿವೆ. ಚಿತ್ರದ ಕ್ಲೈಮಾಕ್ಸ್ ನಲ್ಲಿ ಬಿಲ್ಡಿಂಗ್ ಬೀಳುವ ದೃಶ್ಯ ಅಂತೂ ಭಯಾನಕವಾಗಿ ಚಿತ್ರಿಸಲಾಗಿದೆ. - ಎಚ್.ಮಹೇಶ್

Spectre Movie Review - Times of India

Spectre features haunting cinematography, pale, misty lakes, snow-clad hills, helicopters gleaming like malevolent wasps, wicked shadows on glass walls. Traditional Bond imagery - golden roulette wheels, blush-red casino carpets, silky gowns falling upon ivory floors - are replaced with starker, darker shots. The action leaves you breathless as choppers burst, cars drown, a plane explodes on a Christmas cake landscape and Hinx breaks necks - but while Spectre's hand-to-hand is thrilling, its tepid mouth-to-mouth, Bond's kisses censoriously chopped, leaves you feeling the world is certainly not enough. - Srijana Mitra Das

Spectre Movie Review - Bangalore Mirror

The film opens to a colourful canvas of Mexico City amidst the Day of the Dead celebrations. Scores of skeleton-masked revellers parade through a densely populated street, swaying rhythmically to the drums beating to a jungle tune. Just then, from an ocean of black coats, a masked man in a crisp white suit emerges, walking against the tide of human traffic. He passes a couple (also masked), triggering a chain of events that lead to an ominous end. The highlights of this scene include a building crumpling as our British agent narrowly escapes from being flattened under it and later, a fist fight while clinging from a helicopter hovering dangerously above a crowd of revellers. If you need one reason for watching Spectre, it would be to experience this elaborately engineered and conceived opening sequence. Full marks to cinematographer Hoyte Van Hoytema for capturing the proceedings in a manner that evokes pure thrill. - Kunal Guha

Daniel Craig movie is a pleasure-less, workman-like exercise - The Indian Express

This dreary, and thanks to the Censor chief, sex-less film has Daniel Craig's solemn Bond shooting up the world during a confusingly circuitous route towards the ‘SPECTRE'. That, Bond fans know, stands for Special Executive for Counter-intelligence, Terrorism, Revenge and Extortion, a global terrorist organisation encompassing almost all Bond villains. - Shalini Langer

English summary
Daniel Craig starrer latest James Bond flick 'Spectre' has received mixed response from the critics. Here is the collection of reviews by Top News Papers of Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada