For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ವಿಮರ್ಶೆ: 'ಹಂಬಲ್ ಪೊಲಿಟಿಷಿಯನ್' ನೋಡಿದ ಜನ ಫುಲ್ ಖುಷ್

  By Bharath Kumar
  |

  ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ರೀತಿಯಲ್ಲಿ ಪ್ರಚಾರ ಮತ್ತು ಸಿನಿಮಾ ಮಾಡಿ ಟಾಕ್ ಆಫ್ ದಿ ಇಂಡಸ್ಟ್ರಿ ಆಗಿರುವ 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಸಿನಿಮಾ ಇಂದು (ಜನವರಿ 12) ತೆರೆಕಂಡಿದೆ.

  ರಾಜ್ಯದ ಹಲವು ಕಡೆ ನಿನ್ನೆಯೇ ಪ್ರಿಮೀಯರ್ ಶೋ ಆರಂಭವಾಗಿದ್ದು, ಸುಮಾರು 28 ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವಾಗಿದೆ. ಈ ಮೂಲಕ ಒಂದು ದಿನದ ಮುಂಚೆಯೇ ಹಲವು ಪ್ರೇಕ್ಷಕರು ಹಂಬಲ್ ಪೊಲಿಟಿಷಿಯನ್ ನೊಗರಾಜ್ ಅವರ ಕ್ವಾಟ್ಲೆ ನೋಡಿದ್ದಾರೆ.

  ಹಾಗಿದ್ರೆ, ನಿರೀಕ್ಷೆ ಮೂಡಿಸಿದಂತೆ ಹಂಬಲ್ ಪೊಲಿಟಿಷಿಯನ್ ಸಿನಿಮಾ ಚೆನ್ನಾಗಿದೆಯಾ? ಮೊದಲ ದಿನದ ಮೊದಲ ಶೋ ಸಿನಿಮಾ ನೋಡಿದವರು ಚಿತ್ರದ ಬಗ್ಗೆ ಏನಂದ್ರು? ಚಿತ್ರದಲ್ಲಿ ಏನಿಷ್ಟ ಆಯ್ತು? ಏನು ಇಷ್ಟ ಆಗಿಲ್ಲ ಎಂದು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ.....

  ಕಂಪ್ಲೀಟ್ ಮನರಂಜನೆ

  ಕಂಪ್ಲೀಟ್ ಮನರಂಜನೆ

  ಹಂಬಲ್ ಪೊಲಿಟಿಷಿಯನ್ ಚಿತ್ರತಂಡದ ಕೆಲಸ ಅತ್ಯುತ್ತಮವಾಗಿದೆ. ಡ್ಯಾನಿಶ್ ಮತ್ತು ಅವರ ಕಂಗ್ಲೀಷ್ ಭಾಷೆ ಸಖತ್ ರಂಜಿಸುತ್ತೆ. ಕ್ಲೈಮ್ಯಾಕ್ಸ್ ನಲ್ಲೂ ಸೂಪರ್ ಟ್ವಿಸ್ಟ್ ಇದೆ. ಪ್ರೇಕ್ಷಕರಿಗೆ ಒಂದೊಳ್ಳೆ ಸಂದೇಶ ಚಿತ್ರದಲ್ಲಿದೆ.

  ರಾಜಕೀಯ ವಿಡಂಬನೆ

  ರಾಜಕೀಯ ವಿಡಂಬನೆ

  ಹಂಬಲ್ ಪೊಲಿಟಿಷಿಯನ್ ನೊಗರಾಜ್ ಸಿನಿಮಾ ಹಾಸ್ಯದ ಗಲಭೆ. ಹಾಸ್ಯದ ಮೂಲಕ ಭಾರತದ ರಾಜಕೀಯ ವ್ಯವಸ್ಥೆಯ ನಿಜ ಚಿತ್ರಣವನ್ನ ತೋರಿಸುತ್ತದೆ.

  ವಿಶೇಷ ಅತಿಥಿ

  ವಿಶೇಷ ಅತಿಥಿ

  ಪ್ರೆಸೆಂಟೇಶನ್ ಅತ್ಯದ್ಭುತವಾಗಿದೆ. ಅದಕ್ಕೆ ತಕ್ಕಂತೆ ಪಂಚಿಂಗ್ ಡೈಲಾಗ್ ಗಳು ಚಿತ್ರದಲ್ಲಿದೆ. ರಕ್ಷಿತ್ ಶೆಟ್ಟಿ ಮತ್ತು ಪುನೀತ್ ರಾಜ್ ಕುಮಾರ್ ಪವರ್ ಫುಲ್ ಎಂಟ್ರಿ ಕೂಡ ಚಿತ್ರದಲ್ಲಿದೆ.

  ನಿರೀಕ್ಷೆ ಹುಸಿ ಮಾಡಲ್ಲ

  ನಿರೀಕ್ಷೆ ಹುಸಿ ಮಾಡಲ್ಲ

  ಟ್ರೈಲರ್ ನಲ್ಲಿ ಸಿಕ್ಕಿದ್ದ ಮನರಂಜನೆ ಚಿತ್ರದ ಪೂರ್ತಿ ಇದೆ. ನೋಡುಗರಿಗೆ ಬೇಸರ ತರಿಸುವುದಿಲ್ಲ. ಡ್ಯಾನಿಶ್ ಅಭಿನಯವಂತೂ ಸಖತಾಗಿದೆ.

  English summary
  kannada actor danish sait starrer humble politician nograj movie has released today (january 12th). the movie get positive response from twitter audience. film directed by saad khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X