»   » ಹಮ್ಮಿಂಗ್ ಬರ್ಡ್ ವಿಮರ್ಶೆ: ಕಥೆ, ನಟನೆಗಾಗಿ ನೋಡಿ

ಹಮ್ಮಿಂಗ್ ಬರ್ಡ್ ವಿಮರ್ಶೆ: ಕಥೆ, ನಟನೆಗಾಗಿ ನೋಡಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸಿಸ್ಟರ್ ಕ್ರಿಸ್ಟಿನಾ ಹಾಗೂ ಮಾಜಿ ಯೋಧ ಜೋಸೆಫ್ ಸ್ಮಿತ್ ನಡುವಿನ ಕುತೂಹಲಕಾರಿ ಕಥೆ 'ಹಮ್ಮಿಂಗ್ ಬರ್ಡ್' ಆಗಿ ಪ್ರೇಕ್ಷಕರನ್ನು ಹೊಸ ಲೋಕದಲ್ಲಿ ಹಾರುವಂತೆ ಮಾಡುತ್ತದೆ.

ಜೇಸನ್ ಸ್ಟಾಥಮ್ ಹಾಗೂ ಅಗಾಥ ಬುಜೆಕ್ ಉತ್ತಮ ಅಭಿನಯ,  'who wants to be a millionaire' ಖ್ಯಾತಿಯ ಸ್ಕ್ರಿಪ್ಟ್ ರೈಟರ್ಸ್ಟೀವನ್ ನೈಟ್ ನಿರೂಪಣೆ, ಸಂಭಾಷಣೆ, ನಿರ್ದೇಶನ ಚಿತ್ರವನ್ನು ನೋಡುವಂತೆ ಮಾಡಿದೆ. ಥ್ರಿಲ್ಲರ್ ಚಿತ್ರಕ್ಕೆ ಭಾವನಾತ್ಮಕ ಲೇಪ ಸೇರಿ ಪ್ರೇಕ್ಷಕರನ್ನು ಕೊನೆ ತನಕ ಹಿಡಿದಿಡುತ್ತದೆ. ಸ್ವಲ್ಪ ಯಾಮಾರಿದ್ದರೂ ಇದು ಮತ್ತೊಂದು ಸೇಡಿನ ಕಥೆಯಾಗುವ ಎಲ್ಲಾ ಚಾನ್ಸ್ ಇತ್ತು. ಆದರೆ, ಸ್ಟೀವನ್ ಸಂಭಾಳಿಸಿದ್ದಾರೆ.

ಇಂಗ್ಲೀಷ್ ಹವಾಮಾನಕ್ಕೆ ತಕ್ಕಂತೆ ಶಿಶಿರದಿಂದ ಹೇಮಂತದವರೆಗೂ ಋತು ಬದಲಾದಂತೆ ಹಮ್ಮಿಂಗ್ ಬರ್ಡ್ ನಂತೆ ನಾಯಕನ ಸ್ಥಿತಿ ಎಂಬುದನ್ನು ಇಲ್ಲಿ ತೋರಿಸಲಾಗಿದೆ. ಲಂಡನ್ನಿನ ವೇಶ್ಯಾವಾಟಿಕೆ, ಮಾನವ ಕಳ್ಳಸಾಗಣೆ, ನಿರ್ಗತಿಕರ ಪಾಡು, ನಗರ ಜೀವನದ ನಿತ್ಯ ಗಲಭೆ, ಕೆಳವರ್ಗದ ಜನರ ಕಷ್ಟ ಸುಖ ಎಲ್ಲವನ್ನು ಹಿಡಿದಿಡುವ ಪ್ರಯತ್ನವನ್ನು ಇಲ್ಲಿ ಕಾಣಬಹುದು.

ಚಿತ್ರದ ಆರಂಭ ಸಾಕ್ಷ್ಮಚಿತ್ರದಂತೆ ಇದ್ದರೂ ಮುಂದೆ ಕಥೆ ವೇಗ ಪಡೆದುಕೊಳ್ಳುತ್ತದೆ. ಅಫ್ಘಾನಿಸ್ತಾನದ ವಾರ್ ಮುಗಿಸಿಕೊಂಡು ನ್ಯಾಯ ಕೊಟ್ಟು ಬಂದ ಯೋಧ, ಲಂಡನ್ನಿನಲ್ಲಿ ಭೂಗತ ಜಗತ್ತಿಗೆ ದೂಡಲ್ಪಡುವುದು, ಡ್ರಗ್ ಮಾಫಿಯಾ ಜೊತೆ ಹೋರಾಟ, ಮಧ್ಯವಯಸ್ಕ ಕ್ರೈಸ್ತ ಸನ್ಯಾಸಿ(ಸಿಸ್ಟರ್) ಆಸರೆ ಎಲ್ಲವೂ ಸರಿಯಾಗಿ ಸಂಯೋಜನೆಗೊಂಡಿದೆ.

ಜೂ.28ರಂದು ತೆರೆಕಂಡ ಈ ಚಿತ್ರ ಸುಮಾರು 2 ಮಿಲಿಯನ್ ಡಾಲರ್ ನೊಂದಿಗೆ ನಿರ್ಮಾಣವಾಗಿದ್ದು ಮೊದಲ ವಾರದಲ್ಲೇ ಯುಎಸ್ ಬಾಕ್ಸಾಫೀಸ್ ನಲ್ಲಿ 4,762.040 ಡಾಲರ್ ಗಳಿಕೆ ಮಾಡಿದೆ. ಚಿತ್ರದ ಇನ್ನಷ್ಟು ಕಥೆ ವಿಶೇಷಗಳನ್ನು ಚಿತ್ರ ಸರಣಿಯಲ್ಲಿ ನೋಡಿ...

ಚಿತ್ರದ ಕಥೆ

ಡ್ರಗ್ಸ್ ಚಟಕ್ಕೆ ಬಿದ್ದ ಜೋಸೆಫ್ ಈ ಹಿಂದೆ ಮಿಲಿಟರಿ ಸೇವೆಯಲ್ಲಿದ್ದನ್ನು ಸಂಪೂರ್ಣ ಮರೆಯುವ ಹಂತದಲ್ಲಿರುವಾಗ ಖಾಲಿ ಬಿದ್ದ ಅಪಾರ್ಟ್ಮೆಂಟ್ ಸೇರುತ್ತಾನೆ. ಆಲ್ಲಿಂದ ಮುಂದೆ ಕಥೆ ಬೇರೆಯದೆ ಮಜಲಿಗೆ ಹೊರಳುತ್ತದೆ.

ನಾಪತ್ತೆಯಾಗಿರುವ ತನ್ನ ಗೆಳತಿ ಇಸಬೆಲ್ ಳನ್ನು ಮೈಕ್ ಫೊರೆಸ್ಟರ್ ಎಂಬ ಕೊಲೆಗಾರ ಹಿಂಸಿಸಿ ಕೊಂದಿದ್ದು, ಮತ್ತೆ ಆಯುಧ ಕೈಲಿ ಹಿಡಿಯಬೇಕಾಗಿದ್ದು ನಾಯಕನಿಗೆ ದ್ವಂದ್ವತೆ ಇಲ್ಲಿ ಕಾಣಬಹುದು.

ಮಾಜಿ ಸೈನಿಕರು, ನಿರ್ಗತಿಕರು, ವ್ಯಸನಿಗಳು, ನಿಶಾಚರರ ಬದುಕಿನ ನೈಜ ಘಟನೆಗಳನ್ನು ಆಧಾರಿಸಿದ ಈ ಚಿತ್ರದ ಕಥೆಗಾಗಿ ಹೆಚ್ಚಾಗಿ ರಾತ್ರಿ ವೇಳೆ ಶೂಟಿಂಗ್ ನಡೆಸಲಾಗಿದೆ.

ಬದಲಾವಣೆ ಸಾಧ್ಯವೇ?

ಬದಲಾವಣೆ ಬಯಸುವ ಮಾಜಿ ಯೋಧನನ್ನು ಅಫ್ಟಾನ್ ಘಟನೆಗಳು ಕಾಡತೊಡಗುತ್ತದೆ. ಗೆಳತಿ ಇಸಾಬೆಲ್ ಕೊಲೆ ನಂಬದಂತೆ ಮಾಡುತ್ತದೆ. ನೈಜತೆ ಬಯಸಿದ ನಾಯಕ ಭ್ರಮೆದ ಬದುಕಿಗೆ ದೂಡಲ್ಪಡುತ್ತಾನೆ.

ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಹಾದಿಯಲ್ಲಿದ್ದ ನಾಯಕನಿಗೆ ಸಿಸ್ಟರ್ಸ್ ಆಫ್ ರೆಡೆಂಪ್ಟನ್ ನ ಕ್ರಿಸ್ಟಿನಾ ಆಸರೆಯಾಗುತ್ತಾಳೆ. ಜೋಸೆಫ್ ನನ್ನು ಒಳ್ಳೆ ವ್ಯಕ್ತಿಯನ್ನಾಗಿಸಲು ಪಣ ತೊಡುತ್ತಾಳೆ

ಸಂಭಾಷಣೆ, ಕ್ಲೈಮ್ಯಾಕ್ಸ್

ಚಿತ್ರದ ಕ್ಲೈಮ್ಯಾಕ್ಸ್ ಬರುವ ಹೊತ್ತಿಗೆ ನಾಯಕ ರಿಲ್ಯಾಕ್ಸ್ ಮೂಡ್ ಗೆ ಬಂದಿರುತ್ತಾನೆ. ಕ್ರಿಸ್ಟೀನಾ ಜೊತೆ ರೋಮ್ಯಾನ್ಸ್ ಗೂ ಇಳಿಯಲು ನೋಡುತ್ತಾನೆ. ಹಾಸ್ಯ ಲೇಪಿತ ಒನ್ ಲೈನರ್ ಗಳ ಮೂಲಕ ಈ ಸಂದರ್ಭದಲ್ಲಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ನಿರ್ದೇಶಕ ಸ್ಟೀವನ್ ಯಶಸ್ವಿಯಾಗಿದ್ದಾರೆ.

ವು ವಾಂಟ್ಸ್ ಟು ಬಿ ಮಿಲೇನಿಯರ್?( ಕೌನ್ ಬನೇಗಾ ಕೋಟ್ಯಧಿಪತಿ ಮೂಲ ಆಂಗ್ಲ ಸರಣಿ) ಕಾರ್ಯಕ್ರಮಕ್ಕೆ ಸ್ಕ್ರಿಪ್ಟ್ ಒದಗಿಸಿದ್ದ ಸ್ಟೀವನ್ ತನ್ನ ಪ್ರತಿಭೆಯನ್ನು ಇಲ್ಲಿ ಸೂಕ್ತವಾಗಿ ಬಳಸಿಕೊಂಡಿದ್ದಾರೆ.

ನಟನೆ ಸೂಪರ್

ದಿ ಟ್ರಾನ್ಸ್ ಪೋರ್ಟರ್ ಸರಣಿ, ದಿ ಇಟಾಲಿಯನ್ ಜಾಬ್, ದಿ ಬ್ಯಾಂಕ್ ಜಾಬ್ ಜೊತೆಗೆ ಕ್ರಾಂಕ್, ಡೆಥ್ ರೇಸ್, ಡಿ ಮೆಕಾನಿಕ್ ಚಿತ್ರಗಳ ಜಾಸನ್ ಸ್ಟಾಥಮ್ ನಟನೆ ರೀಮಿಕ್ಸ್ ಮಾಡಿ ಸುಂದರವಾದ ಕಾಕ್ ಟೈಲ್ ಆಗಿ ಹಮ್ಮಿಂಗ್ ಬರ್ಡ್ ನಲ್ಲಿ ಜಾಸನ್ ಪಾತ್ರ ಮೂಡಿ ಬಂದಿದೆ.

ಜಾಸನ್ ಗೆ ಸರಿ ಸಮನಾಗಿ ಅಗಾಥ ಬುಜೆಕ್ ಅವರು ಸಿಸ್ಟರ್ ಕ್ರಿಸ್ಟೀನಾ ಪಾತ್ರದಲ್ಲಿ ತಲ್ಲೀನರಾಗಿದ್ದಾರೆ. ಇಬ್ಬರ ಪಾತ್ರ ಪೋಷಣೆ, ಸಂಭಾಷಣೆ ಸೊಗಸಾಗಿ ಮೂಡಿ ಬಂದಿದೆ. ಫ್ಯಾಶ್ ಬ್ಯಾಕ್ ತಂತ್ರದಲ್ಲಿ ಮುಖ್ಯ ಕಥೆ ಹೇಳುವುದು ನಿರೂಪಣೆಯಲ್ಲಿ ಸ್ವಲ್ಪ ಆಲ್ಲಲ್ಲಿ ಕಥೆ ಬಿಟ್ಟು ಬೇರೆ ಟ್ರ್ಯಾಕ್ ಗೆ ಹೊರಳಿರುವುದು ಬಿಟ್ಟರೆ ಚಿತ್ರ ಒಳ್ಳೆ ಥ್ರಿಲ್ ನೀಡುತ್ತದೆ.

ಉತ್ತಮ ಟೀಂ ಎಫರ್ಟ್

ರಾತ್ರಿ ವೇಳೆಯಲ್ಲೇ ಚಿತ್ರದ ಬಹುತೇಕ ಭಾಗ ಚಿತ್ರೀಕರಣ ನಡೆದಿರುವುದರಿಂದ ಹಾಗೂ ಇದು ಕಥೆ ಅವಶ್ಯವಾದ್ದರಿಂದ ಛಾಯಾಗ್ರಾಹಕ ಕ್ರಿಸ್ ಮೆಂಗೆಸ್ ಗೆ ಹೆಚ್ಚಿನ ಕೆಲಸ ಸಿಕ್ಕಿದೆ. ಲಂಡನ್ನಿನ ಜನರ ಗರ್ವಭಂಗವಾಗುವ ರೀತಿಯಲ್ಲಿ ರಾತ್ರಿ ಚಿತ್ರಗಳು ಇಲ್ಲಿ ಕಾಣಿಸಿಕೊಂಡಿವೆ.

ವಾಲೆರಿಯೊ ಬೊನೆಲ್ಲಿ ಹಾಗೂ ಸ್ಟೀವನ್ ನೈಟ್ ಇಬ್ಬರು ಸಂಕಲನ ಟೇಬಲ್ ಮೇಲೆ ಸಾಕಷ್ಟು ಸಮಯ ವ್ಯರ್ಥ ಮಾಡಿದ್ದು ಫಲ ನೀಡಿದೆ. ಇದರ ಜೊತೆಗೆ ಪ್ರೈಡ್ ಅಂಡ್ ಪ್ರಿಜ್ಯೂಡಿಯಸ್ ಹಾಗೂ ಅನ್ನಾ ಕರೆನಿನಾದಂಥ ಕ್ಲಾಸಿಕ್ ಚಿತ್ರಕ್ಕೆ ಸಂಗೀತ ನೀಡಿದ ಡಾರಿಯೋ ಮಾರಿಯಾನೆಲ್ಲಿ ಹಿನ್ನೆಲೆ ಸಂಗೀತ ಇಲ್ಲೂ ಹಿತವಾಗಿದೆ.

ಚಿತ್ರ ನೋಡಬಹುದೇ?

ಚಿತ್ರದ ಕಥೆ ಹಾಗೂ ನಟನೆ ಪ್ರೇಕ್ಷಕರನ್ನು ಕೊನೆ ತನಕ ಹಿಡಿದಿಡುತ್ತದೆ. ಅಲ್ಪ ಸ್ವಲ್ಪ ಬೋರಿಂಗ್ ಸೀನ್ ಗಳನ್ನು ಕೂಡಾ ಕ್ಯಾಚಿ ಒನ್ ಲೈನರ್ ಗಳು ಸರಿದೂಗಿಸಿದೆ. ಹೀಗಾಗಿ ಚಿತ್ರ ತಪ್ಪದೇ ನೋಡಬಹುದು. ಜಾಸನ್ ಅಭಿಮಾನಿಗಳಿಗೆ ಮತ್ತೊಂದು ವಿಭಿನ್ನ ಚಿತ್ರ ಇದಾಗಿದೆ.

ಹಮ್ಮಿಂಗ್ ಬರ್ಡ್ ಹೆಸರು ಸೂಕ್ತವಾಗಿದೆ. ಹಮ್ಮಿಂಗ್ ಬರ್ಡ್ ಗಳು ಗೊತ್ತಲ್ಲ. 8-13 ಸೆಂ.ಮೀ ಉದ್ದವಿರುವ ಅತಿ ಚಿಕ್ಕ ಪಕ್ಷಿ, ಅದರ ತ್ವರಿತ ರೆಕ್ಕೆ ಬಡಿತ ಮೂಡಿಸುವ ಶಬ್ದ ಹಾಗೂ ಮುಂದೆ ಹಾಗೂ ಹಿಂದೆ ಹಾರುವ ವಿಶಿಷ್ಟ ಪಕ್ಷಿಯಾಗಿದ್ದು, ನಾಯಕನ ಕಥೆ ಇದಕ್ಕೆ ಪೂರಕವಾಗಿದೆ.

ಇನ್ನೇನಿದೆ ಮಾಹಿತಿ

ಯುಕೆಯಲ್ಲಿ ಹಮ್ಮಿಂಗ್ ಬರ್ಡ್, ಅಮೆರಿಕದಲ್ಲಿ ರೆಡೆಂಪ್ಷನ್ ಹಾಗೂ ಫ್ರಾನ್ಸ್ ನಲ್ಲಿ ಕ್ರೇಜಿ ಜೊ ಆಗಿ ಚಿತ್ರ ತೆರೆ ಕಂಡಿದೆ. ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.

ಹೊಡೆದಾಟ ದೃಶ್ಯಗಳು ಮತ್ತು ಸಾಹಸಭರಿತ ಚಿತ್ರಗಳಲ್ಲೂ ಭಾವನಾತ್ಮಕ, ಮಾನವೀಯ ಮೌಲ್ಯಗಳನ್ನು ತುಂಬುವ ಕಥೆ ಬರೆದ ಸ್ಟೀವನ್ ಹಾಗೂ ಉತ್ತಮ ಅಭಿನಯ ನೀಡಿರುವ ಜಾಸನ್ ಗಾಗಿ ಚಿತ್ರವನ್ನು ತಪ್ಪದೇ ನೋಡಿ

ಜಾಸನ್ ಬಗ್ಗೆ ಟ್ವೀಟ್ಸ್

ಜಾಸನ್ ಚಿತ್ರಗಳಲ್ಲಿನ ಹೋಲಿಕೆ ಬಗ್ಗೆ ಬಂದಿರುವ ಟ್ವೀಟ್ ಚರ್ಚಾರ್ಹವಾದರೂ ಇಲ್ಲಿ ಕಥೆಗಾರ ಜಾಸನ್ ಗಾಗಿ ಕಥೆ ಮಾಡಿಲ್ಲ ಎಂಬುದನ್ನು ಮರೆಯುವಂತಿಲ್ಲ

ಜಾಸನ್ ಬಗ್ಗೆ ಟ್ವೀಟ್ಸ್

ಇದೇನು ಹೊಗಳಿಕೆಯೋ ಅಥವಾ ನೈಜತೆಯೋ ನೀವೇ ನಿರ್ಧರಿಸಿ

English summary
Hummingbird - Movie Review: This film, which spans over a period of eight months from spring to autumn, uses the small petite Hummingbird beautifully as an analogy since it makes its presence felt in Britain during this period.
Please Wait while comments are loading...