»   » 'ಮೇಲುಕೋಟೆ ಮಂಜ'ನ ಮನರಂಜನೆಗೆ ವಿಮರ್ಶಕರು ಫುಲ್ ಖುಷಿ

'ಮೇಲುಕೋಟೆ ಮಂಜ'ನ ಮನರಂಜನೆಗೆ ವಿಮರ್ಶಕರು ಫುಲ್ ಖುಷಿ

Posted By:
Subscribe to Filmibeat Kannada

ನವರಸ ನಾಯಕ ಜಗ್ಗೇಶ್ ಅಭಿನಯದ 'ಮೇಲುಕೋಟೆ ಮಂಜ' ಚಿತ್ರಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಮಂಜನ ಅವತಾರದಲ್ಲಿ ಜಗ್ಗೇಶ್ ಅವರು ಪ್ರೇಕ್ಷಕರನ್ನ ನಕ್ಕು ನಗಿಸಿದ್ದಾರೆ.

ಆದ್ರೆ, 'ಮೇಲುಕೋಟೆ ಮಂಜ'ನನ್ನ ನೋಡಿ ಚಿತ್ರ ಪ್ರೇಮಿಗಳಷ್ಟೇ ಖುಷಿಯಾದ್ರಾ ಚಿತ್ರ ವಿಮರ್ಶಕರು? ಹಾಗಾದ್ರೆ, ಜಗ್ಗೇಶ್ ಸಿನಿಮಾಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?[ವಿಮರ್ಶೆ: ಮಾತಿನಲ್ಲೇ 'ಮಾಂಜ' ಕೊಡುವ 'ಮಿಮಿಕ್ರಿ ಮಂಜ']

ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಮೇಲುಕೋಟೆ ಮಂಜ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿ....

'ಮಂಜನ ನಂಬಿದವರಿಗೆ ಮೋಸಲವಿಲ್ಲ'-ವಿಜಯ ಕರ್ನಾಟಕ

''ಮ್ಯಾಜಿಕ್ ಗೆ ಮತ್ತೊಂದು ಹೆಸರೇ ಈ ಸಿನಿಮಾ ಇರಬೇಕು. ಕಾಮಿಡಿ ಚಿತ್ರಗಳು ಎಂದಾಗ ಡಬಲ್ ಮೀನಿಂಗ್ ಡೈಲಾಗ್ ಗೆ ಮೊರೆ ಹೋಗುವುದು ಸಾಮಾನ್ಯ. ಈ ಮಂಜ ಅಂತಹ ಯಾವುದೇ ಮಾತುಗಳನ್ನ ಆಡುವುದಿಲ್ಲ. ಆದರೂ, ಸಖತ್ ನಗಿಸುತ್ತಾನೆ, ಆಗಾಗ ಮನಮುಟ್ಟುವಂತಹ ಮಾತಿನ ಮುತ್ತು ಉದುರಿಸುತ್ತಾನೆ. ಕೊನೆಯಲ್ಲಿ ಕೊಂಚ ಕಣ್ಣೀರು ತರಿಸುತ್ತಾನೆ. ಈ ಎಲ್ಲ ಕಾರಣದಿಂದ ಜಗ್ಗೇಶ್ ಅವರು ನಟನೆ ಮತ್ತು ನಿರ್ದೇಶನ ಎರಡರಲ್ಲೂ ಗೆಲುವು ಸಾಧಿಸಿದ್ದಾರೆ. ಜಗ್ಗೇಶ್ ಆರ್ಭಟದಲ್ಲಿ ನಾಯಕಿ ಐಂದ್ರಿತಾ ರೇ ಕಳೆಗುಂದಿದ್ದಾರೆ. ಸಂಗೀತ ನಿರ್ದೇಶಕ ಗಿರಿಧರ್ ಕೊಂಚ ಸ್ಕೋರ್ ಮಾಡುತ್ತಾರೆ. ನಗು ಅರಸಿ ಹೋದವರಿಗೆ ಖಂಡಿತ ಮೋದ ಮಾಡಲಾರ ಈ ಮಂಜ''

'ಮಂಜನ ವಾಮನ ಅವತಾರ'-ಪ್ರಜಾವಾಣಿ

''ಜಗ್ಗೇಶ್ ಅಭಿಮಾನಿಗಳಿಗೆಂದೇ ಮಾಡಿದ ಸಿನಿಮಾ ‘ಮೇಲುಕೋಟೆ ಮಂಜ'. ಜಗ್ಗೇಶ್ - ಸಾಲ ಮಾಡುವ, ತೀರಿಸದೆ ಓಡಾಡಿಕೊಂಡಿರುವ ವ್ಯಕ್ತಿಯ ಕಥೆ ಇಟ್ಟುಕೊಂಡು ಎರಡೂಕಾಲು ಗಂಟೆ ಎಳೆದಾಡಿದ್ದಾರೆ. ಕಥೆಯನ್ನು ಹಾಸ್ಯದ ಲೇಪನದಲ್ಲಿ ಕಟ್ಟಿಕೊಡುವುದು ಅವರ ಪ್ರಯತ್ನ. ಸಿನಿಮಾವನ್ನು ಆವರಿಸಿಕೊಂಡಿರುವ ಜಗ್ಗೇಶ್ ಸಂಭಾಷಣೆ, ದೇಹಭಾಷೆಯಲ್ಲಿ ನಗಿಸುತ್ತಾರೆ. ಬೇರೆ ಪಾತ್ರಗಳ ಅಭಿನಯ, ಸಂಭಾಷಣೆಗಳು ಕೆಲವು ಕಡೆ ಅತಿರೇಕವೂ ಆಗಿದೆ (ಸಂಭಾಷಣೆ ಜಗ್ಗೇಶ್). ಗಿರಿಧರ್ ದಿವಾನ್ ಸಂಗೀತದಲ್ಲಿ ವಿಶೇಷ ಏನಿಲ್ಲದಿದ್ದರೂ ಹಿನ್ನೆಲೆ ಸಂಗೀತ ಕಠೋರವಾಗಿದೆ. ಐಂದ್ರಿತಾ ರೇ ಅವರಿಗೆ ತೆರೆಯಲ್ಲಿ ಕಾಣಿಸಿಕೊಳ್ಳುವ ಅವಕಾಶವೇ ಕಡಿಮೆ.''

'ನಗೆ ರಹಿತ ಪ್ರಸಂಗಗಳಿಗೆ ಜಗ್ಗೇಶ್ ಪರಿಹಾರ ನಿಧಿ'-ಕನ್ನಡ ಪ್ರಭ

''ಒಂದಿಷ್ಟು ಕಾಮಿಡಿ, ನಡುವೆ ಒಂದೆರೆಡು ಟ್ವಿಸ್ಟ್ ಗಳು, ಹೆತ್ತವರ ಸೆಂಟಿಮೆಂಟ್, ಸೋದರ ಮಾವನ ಕಪಿಮುಷ್ಠಿಯಲ್ಲಿ ಒದ್ದಾಡುವ ನಾಯಕಿಯ ಅಳಲು, ಎರಡು ಫೈಟು, ಇವಿಷ್ಟು ಮಂಜನ ಕೋಟೆಯ ಪ್ರಧಾನ ಕಲ್ಲುಗಳು. ಇಲ್ಲಿ ಮಂಜ ಮಾಡಿದ್ದೇ ಕಾಮಿಡಿ, ಆಡಿದ್ದೇ ಆಟ ಎಂದುಕೊಂಡು ಪ್ರೇಕ್ಷಕ ಎಂಜಾಯ್ ಮಾಡಿದರೇ ಕೊಟ್ಟ ಕಾಸಿಗೆ ಮೋಸ ಆಗಲ್ಲ. ಆದ್ರೆ, ನಿರೀಕ್ಷೆಯ ಮಟ್ಟಕ್ಕೆ ಕಾಮಿಡಿ ಫಲಿಸಿಲ್ಲ. ಚಿತ್ರದ ಸಂಭಾಷಣೆಯಲ್ಲಿ ಕೂಡ ಅಷ್ಟು ಪಂಚ್ ಇಲ್ಲ. ಯಂದ್ರಿಆ ರೇ ಅವರದ್ದು ಬಂದು ಹೋಗುವ ಪಾತ್ರ. ಜಗ್ಗೇಶ್ ಅವರ ಮ್ಯಾನರಿಸಂಗೆ ಗಿರಿಧರ್ ಅವರ ತಮಟೆ ಸಂಗೀತ ಹೊಂದಿಕೊಂಡಿದೆ, ದಾಸಿರಿ ಸೀನು ಕ್ಯಾಮೆರಾ, ಜತೆಗೆ ಸಂಕಲನಕಾರಿ ಕತ್ತರಿ ಅಷ್ಟಾಗಿ ಚುರಾಕಾಗಿಲ್ಲ''

'ನಿಧಾನವಾಗಿ ನಗಿಸುವ ಸಾಲಗಾರ ಮಂಜ'-ವಿಜಯವಾಣಿ

'‘ನಗುವವರಿಗೆ ಮಾತ್ರ' ಎಂಬ ಅಡಿಬರಹದೊಂದಿಗೆ ನವರಸನಾಯಕ ಜಗ್ಗೇಶ್ ‘ಮೇಲುಕೋಟೆ ಮಂಜ'ನಾಗಿ ಪ್ರೇಕ್ಷಕರನ್ನು ನಗಿಸಲು ಪ್ರಯತ್ನಿಸಿದ್ದಾರೆ. ''ಕಚಗುಳಿ ಇಡುವ ಸಂಭಾಷಣೆಯಿಂದ ಮೊದಲಾರ್ಧ ರಂಜಿಸುತ್ತದೆ. ಆದರೆ ದ್ವಿತೀಯಾರ್ಧದ ಓಟ ನಿಧಾನ. ಎಂದಿನ ಮ್ಯಾನರಿಸಂ ಮೂಲಕ ಜಗ್ಗೇಶ್ ನಗು ತರಿಸುತ್ತಾರೆ. ತಂದೆಯ ಪಾತ್ರಕ್ಕೆ ಶ್ರೀನಿವಾಸ್ ಪ್ರಭು ನ್ಯಾಯ ಒದಗಿಸಿಕೊಟ್ಟಿದ್ದಾರೆ. ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳಲಷ್ಟೇ ಐಂದ್ರಿತಾ ಸೀಮಿತ. ರಂಗಾಯಣ ರಘು, ಕುರಿ ಪ್ರತಾಪ್ ಕಾಮಿಡಿ ಸೆಳೆಯುತ್ತದೆ. ತಾಂತ್ರಿಕತೆಯ ವಿಚಾರದಲ್ಲಿ ‘ಮಂಜ' ಸ್ವಲ್ಪ ವೀಕು''

'There Is A Manja Everywhere'-Bangalore Mirror

The story is not complex and most of the pre-interval part is a comic take on the life of Manja. There is a sentimental twist after that and a regular potboiler of a film later. The film slows down a bit in the second half due to the prolonged focus on a single issue and soon hurtles towards a predictable climax.

Jaggesh as the writer and director has not gone overboard in any aspect. He has framed the film in a pre-determined template. A little innovation in the plot in the second half would have done a world of good. That does not, however, take away from the otherwise decent film. The character strikes a chord and is worth an exploration. Behind the screen, it is Giridhar Diwan's music that stands out. There are a couple of good tunes he has set. The background score is another job well done.

English summary
Kannada Actor Jaggesh starrer Kannada Movie 'Melkote Manja' has received positive response from the critics. Here is the collection of 'Melkote Manja' reviews by Top News Papers of Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada