Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Avatar 2 Twitter Review: 3 ಗಂಟೆ ಸಿನಿಮಾ ಬೋರ್ ಹೊಡೆಸುತ್ತಾ? ಮಜಾ ಕೊಡುತ್ತಾ?
ಜೇಮ್ಸ್ ಕ್ಯಾಮರೂನ್ ನಿರ್ದೇಶನದ 'ಅವತಾರ್ -2' ಸಿನಿಮಾ ತೆರಗಪ್ಪಳಿಸಿ ಸದ್ದು ಮಾಡ್ತಿದೆ. ತ್ರೀ ಕನ್ನಡಕದಲ್ಲಿ ಸಿನಿಮಾ ನೋಡಿದವರು ಥ್ರಿಲ್ ಆಗಿದ್ದಾರೆ. ಬೆಳಗ್ಗೆ 7 ಗಂಟೆಯಿಂದಲೇ ದೇಶಾದ್ಯಂತ ಸಿನಿಮಾ ಪ್ರದರ್ಶನ ಶುರುವಾಗಿದೆ. ಸಿನಿಮಾ ನೋಡಿದವರ ಟ್ವಿಟ್ಟರ್‌ನಲ್ಲಿ ತಮ್ಮ ರಿವ್ಯೂ ಬರೆಯುತ್ತಿದ್ದಾರೆ.
ದೇಶ್ಯಾದ್ಯಂತ 3800ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಅವತಾರ್ -2' ರಿಲೀಸ್ ಆಗಿದೆ. ಪ್ರತಿದಿನ 17 ಸಾವಿರ ಶೋಗಳು ಪ್ರದರ್ಶನವಾಗುತ್ತಿದೆ. ರಿಲೀಸ್‌ಗೂ ಮೊದಲೇ ದೇಶದಲ್ಲಿ ಅಡ್ವಾನ್ಸ್ ಬುಕ್ಕಿಂಗ್‌ನಿಂದ ಸಿನಿಮಾ 12 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಅಡ್ವಾನ್ಸ್ ಬುಕ್ಕಿಂಗ್ ಚೆನ್ನಾಗಿ ಇದ್ದಿದ್ದರಿಂದ ಚಿತ್ರಕ್ಕೆ ಒಳ್ಳೆ ಓಪನಿಂಗ್ ಕೂಡ ಸಿಕ್ಕಿದೆ. ಬೆಳ್ಳಂಬೆಳಗ್ಗೆ ಜೇಮ್ಸ್ ಕ್ಯಾಮರೂನ್ ದೃಶ್ಯಕಾವ್ಯ ಕಣ್ತುಂಬಿಕೊಂಡು ಪ್ರೇಕ್ಷಕರು ಥಿಯೇಟರ್‌ಗಳಿಂದ ಹೊರ ಬರುತ್ತಿದ್ದಾರೆ.
ವಾರಕ್ಕೂ ಮೊದಲೇ ದೇಶ ವಿದೇಶಗಳಲ್ಲಿ ಕೆಲವೆಡೆ ಸಿನಿಮಾ ಪ್ರೀಮಿಯರ್ ಶೋಗಳು ಶುರುವಾಗಿತ್ತು. 13 ವರ್ಷಗಳ ನಂತರ 'ಅವತಾರ್' ಸೀಕ್ವೆಲ್ ಪ್ರೇಕ್ಷಕರ ಮುಂದೆ ಬಂದಿದೆ. ಹಾಗಾಗಿ ಪ್ರೀಕ್ವೆಲ್ ನೋಡಿದವರು ಸೀಕ್ವೆಲ್‌ಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಸಿನಿಮಾ ನೋಡಿದವರ ಟ್ವಿಟ್ಟರ್ ರಿವ್ಯೂ ಮುಂದೆ ಓದಿ.

ಜೇಮ್ಸ್ ಕ್ಯಾಮರೂನ್‌ಗೆ ಹ್ಯಾಟ್ಸಾಫ್
ಕುಮಾರ್ ಸ್ವಾಯಮ್ ಎನ್ನುವವರು ಟ್ವೀಟ್ ಮಾಡಿ "ಅವತಾರ್- 2 ಉತ್ತಮವಾದ ಬರವಣಿಗೆ, ವಿಷ್ಯುವಲ್ಸ್ ಅಂತೂ 100% ಅದ್ಭುತ, ಚಿತ್ರದ ದೀರ್ಘ ಕಾಲಾವಧಿ ನನಗೆ ಸಮಸ್ಯೆ ಅನ್ನಿಸಲಿಲ್ಲ. ಜೇಮ್ಸ್ ಕ್ಯಾಮರೂನ್ ಹ್ಯಾಟ್ಸಾಫ್, ಇಷ್ಟು ದಿನ ಕಾದಿದ್ದಕ್ಕೂ ತೃಪ್ತಿ ಆಯಿತು. ಸಿನಿಮಾ ಬಗ್ಗೆ ಬರುವ ಮೊದಲ ವಿಮರ್ಶೆಗಳೇ ಬೇರೆ. ಸಿನಿಮಾ ನೋಡಿದ ಸಾಮಾನ್ಯ ಪ್ರೇಕ್ಷಕರ ಅನುಭವವೇ ಬೇರೆ ಎನ್ನುವುದು ಮತ್ತೊಮ್ಮೆ ಸಾಬೀತಾಗುತ್ತಿದೆ.
ಪ್ಲಸ್ ಪಾಯಿಂಟ್
1. ವಿಷ್ಯುವಲ್ಸ್
2. ಎಮೋಷನಲ್ ಕಂಟೆಂಟ್
3. ಕಥೆ
4. ಚಿತ್ರಕಥೆ
5. ಮ್ಯೂಸಿಕ್
ಮೈನಸ್ ಪಾಯಿಂಟ್
ಏನು ಇಲ್ಲ, ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ಕಟ್ಟಿಹಾಕಿ ಬಿಡುತ್ತದೆ
ರಾಜ್‌ಶೇಖರ್ ಎನ್ನುವ ಮತ್ತೊಬ್ಬರು "ಅವತಾರ್-2 ಫಸ್ಟ್ ಹಾಫ್ ಅದ್ಭುತ, ಜೇಮ್ಸ್ ಕ್ಯಾಮರೂನ್ ಸೃಷ್ಟಿಸಿರುವ ಪ್ರಪಂಚ, ಅದರಲ್ಲೂ ನೀರಿನ ಆಳದ ಸನ್ನಿವೇಶಗಳು ಚಿಂದಿ. ಜೇಕ್ ಸುಲ್ಲಿ ಹಾಗೂ ಅವನ ಕುಟುಂಬದ ನಡುವಿನ ಭಾವನಾತ್ಮಕ ಅನುಬಂಧ ನಮ್ಮ ಕಟ್ಟಿಹಾಕಿಬಿಡುತ್ತದೆ. ನಿಜಕ್ಕೂ ಸಿನಿಮಾ ಅದ್ಭುತ" ಎಂದಿದ್ದಾರೆ.

ತಪ್ಪದೇ ನೋಡಬೇಕಾದ ಸಿನಿಮಾ
"ಜೇಮ್ಸ್ ಕ್ಯಾಮರೂನ್ ಈ ಚಿತ್ರವನ್ನು ಮತ್ತೊಂದು ಗ್ರಹದ ಮೇಲೆ ಕಟ್ಟಿಕೊಟ್ಟಿದ್ದಾರೆ ಎಂದು ನಾನು ನಂಬಿಬಿಟ್ಟೆ. ಸಿನಿಮಾ ಅದ್ಭುತ ಮತ್ತು ಸಿನಿಮಾ ನೋಡುತ್ತಾ ಕಳೆದು ಹೋಗಿದ್ದೆ. ಸಿನಿಮಾದಲ್ಲಿ ತಲ್ಲೀನಾಗಿ ಹೋಗಿದ್ದೆ. 13 ವರ್ಷಗಳ ಹಿಂದೆ ಬಂದ 'ಅವತಾರ್' ಇದು ಕೂಡ ಒಂದು ಸಿನಿಮ್ಯಾಟಿಕ್ ಅದ್ಭುತ. ತಪ್ಪದೇ ನೋಡಲೇಬೇಕಾದ ಸಿನಿಮಾ" ಎಂದು ಮತ್ತೊಬ್ಬ ನೆಟ್ಟಿಗ ಬರೆದಿದ್ದಾನೆ.

ಕಥೆಯಲ್ಲಿ ಕೊಂಚ ಧಮ್ ಇಲ್ಲ
"ನಾನು ಈವರೆಗೆ ನೋಡದ ಅದ್ಭುತ ವಿಎಫ್‌ಎಕ್ಸ್‌ನಿಂದ 'ಅವತಾರ್- 2' ಬಹಳ ರೋಚಕ ಮತ್ತು ಅಷ್ಟೇ ಸುಂದರವಾಗಿದೆ. ನಾನು ತ್ರಿಡಿಯಲ್ಲಿ ನೋಡಿದ್ದು. ಪ್ರೀಕ್ವೆಲ್‌ಗೆ ಹೋಲಿಸಿದರೆ ಕಥೆಯಲ್ಲಿ ಕೊಂಚ ಧಮ್ ಇಲ್ಲ ಎನ್ನಿಸುತ್ತದೆ. 3 ಗಂಟೆಗಳ ಕಾಲಾವಧಿ ಕೊಂಚ ಜಾಸ್ತಿ ಆಯಿತು ಅನ್ನಿಸದೇ ಇರುವುದಿಲ್ಲ. ಆದರೆ ಒಟ್ಟಾರೆಯಾಗಿ ನೋಡಿದರೆ ಸಿನಿಮಾ ಬಹಳ ಚೆನ್ನಾಗಿದೆ. ಕೊನೆ ಒಂದು ಗಂಟೆ ಅಂತೂ ಅದ್ಭುತ" ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.