»   » 'ಟೆಂಪರ್' ಚಿತ್ರವಿಮರ್ಶೆ: ಜೂ.ಎನ್.ಟಿ.ಆರ್ ಒನ್ ಮ್ಯಾನ್ ಶೋ!

'ಟೆಂಪರ್' ಚಿತ್ರವಿಮರ್ಶೆ: ಜೂ.ಎನ್.ಟಿ.ಆರ್ ಒನ್ ಮ್ಯಾನ್ ಶೋ!

Posted By:
Subscribe to Filmibeat Kannada

ತೆಲುಗು ಸಿನಿ ಅಂಗಳದಲ್ಲಿ ಭರ್ಜರಿ ಪ್ರಚಾರ ಪಡೆದ ಸಿನಿಮಾ ಜೂ.ಎನ್.ಟಿ.ಆರ್ ಅಭಿನಯದ 'ಟೆಂಪರ್' ಇಂದು ರಿಲೀಸ್ ಆಗಿದೆ. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಟೆಂಪರ್' ಯಂಗ್ ಟೈಗರ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. 'ಟೆಂಪರ್' ಚಿತ್ರದ ವಿಮರ್ಶೆ ಇಲ್ಲಿದೆ.....

Rating:
3.5/5
Jr.NTR starrer Temper movie review


ಚಿತ್ರ
: ಟೆಂಪರ್
ನಿರ್ಮಾಣ : ಬಾಂಡ್ಲಾ ಗಣೇಶ್
ನಿರ್ದೇಶನ : ಪುರಿ ಜಗನ್ನಾಥ್
ಸಂಗೀತ : ಅನೂಪ್ ರೂಬೆನ್ಸ್
ಬಿಡುಗಡೆ : ಫೆಬ್ರವರಿ 13, 2015
ತಾರಾಗಣ : ಜೂ.ಎನ್.ಟಿ.ಆರ್, ಕಾಜಲ್ ಅಗರ್ವಾಲ್, ಪ್ರಕಾಶ್ ರೈ ಮತ್ತು ಇತರರು.
Jr.NTR starrer Temper movie review

ಕಥಾಹಂದರ : ಚಿಕ್ಕ ಕಳ್ಳತನ ಮಾಡಿ ಪೆಟ್ಟಿ ಕೇಸ್ ಒಂದರಲ್ಲಿ ಅನಾಥ ಬಾಲಕ ದಯಾ (ಜೂ.ಎನ್.ಟಿ.ಆರ್) ಪೊಲೀಸ್ ಸ್ಟೇಷನ್ ಮೆಟ್ಟಿಲೇರುತ್ತಾನೆ. ಅಲ್ಲಿನ ಭ್ರಷ್ಟ ಪೊಲೀಸ್ ಅಧಿಕಾರಿಯ ಪ್ರಭಾವಕ್ಕೆ ಒಳಗಾಗಿ ತಾನೂ ಪೊಲೀಸ್ ಆಗಬೇಕ್ಕೆನ್ನುವ ಹಠ ತೊಟ್ಟು, ಹಾಗೂ ಹೀಗೂ ದಯಾ ಖಾಕಿ ತೊಡುತ್ತಾನೆ.

ಚಿಕ್ಕ ವಯಸ್ಸಲ್ಲಾದ ಕೆಲ ಘಟನೆಗಳಿಂದ ಭ್ರಷ್ಟ ಪೊಲೀಸ್ ಅಧಿಕಾರಿಯಾಗುವ ದಯಾ, ಶಿಷ್ಟ ರಕ್ಷಕನಾಗಿ ಮಾರ್ಪಡುವ ಕಥೆಯೇ 'ಟೆಂಪರ್'. ಕಳ್ಳತನ, ಸುಳ್ಳು, ಮೋಸ, ಭ್ರಷ್ಟತನದಲ್ಲಿ ಬೆಳೆದ್ದಿದ್ದ ದಯಾ ಬದಲಾವಣೆಗೆ ಕಾರಣವೇನು ಅಂತ ತಿಳಿದುಕೊಳ್ಳುವುದಕ್ಕೆ ನೀವು ಚಿತ್ರಮಂದಿರದಲ್ಲೇ 'ಟೆಂಪರ್' ನೋಡಬೇಕು.

Jr.NTR starrer Temper movie review

ಇಡೀ ಭಾರತವನ್ನೇ ಅಲುಗಾಡಿಸಿದ ಗ್ಯಾಂಗ್ ರೇಪ್ ಪ್ರಕರಣ ಸೇರಿದಂತೆ ಪ್ರಸ್ತುತ ವಿದ್ಯಾಮಾನದ ಹಲವು ಸನ್ನಿವೇಶಗಳು 'ಟೆಂಪರ್' ಚಿತ್ರದಲ್ಲಿದೆ. ಸೀರಿಯಸ್ ಕಥೆ ಜೊತೆಗೆ ಕೊಂಚ ರೋಮ್ಯಾನ್ಸ್, ಸ್ವಲ್ಪ ಕಾಮಿಡಿ ಕೂಡ 'ಟೆಂಪರ್' ನಲ್ಲಿ ಹದವಾಗಿ ಬೆರೆತಿದೆ.

'ಟೆಂಪರ್' ರೈಸ್ ಮಾಡಿಕೊಳ್ಳುವ ಜೂ.ಎನ್.ಟಿ.ಆರ್ : ಭ್ರಷ್ಟ ಪೊಲೀಸ್ ಅಧಿಕಾರಿ ದಯಾ ಆಗಿ ಅಭಿನಯಿಸಿರುವ ಜೂ.ಎನ್.ಟಿ.ಆರ್ ನಟನೆ ಎಂದಿನಂತೆ ಸರಾಗ. ಡೈಲಾಗ್ ಡೆಲಿವರಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿರುವ ಜೂ.ಎನ್.ಟಿ.ಆರ್ ಇಡೀ ಚಿತ್ರವನ್ನ ಆವರಿಸಿಕೊಂಡಿದ್ದಾರೆ. ಡ್ಯಾನ್ಸ್ ನಲ್ಲಿ ಮರಿ ಹುಲಿ ಅಕ್ಷರಶಃ ಅಬ್ಬರಿಸಿದೆ. [ಹೊಸ ವರ್ಷಕ್ಕೆ ಜೂ.ಎನ್.ಟಿ.ಆರ್ ಕೊಟ್ಟ ಉಡುಗೊರೆ]

Jr.NTR starrer Temper movie review

ಗ್ಲಾಮರಸ್ ಕಾಜಲ್ : ತೆರೆಮೇಲೆ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಕಾಜಲ್ 'ಟೆಂಪರ್' ನಲ್ಲಿ ಚೆಂದಕ್ಕಿಂತ ಚೆಂದ. ಈಗಾಗಲೇ ಜೂ.ಎನ್.ಟಿ.ಆರ್ ಜೊತೆ ಕಾಜಲ್ ಅನೇಕ ಚಿತ್ರಗಳಲ್ಲಿ ಅಭಿನಯಿಸಿರುವುದರಿಂದ ಇಬ್ಬರ ಕೆಮಿಸ್ಟ್ರಿ ವರ್ಕೌಟ್ ಆಗಿದೆ. ವಿಶೇಷ ಪಾತ್ರದಲ್ಲಿ ಮಿಂಚಿರುವ ಪ್ರಕಾಶ್ ರಾಜ್ ಆಕ್ಟಿಂಗ್ ಬಗ್ಗೆ ತುಟಿ ಬಿಚ್ಚುವಹಾಗಿಲ್ಲ.

'ಟೆಂಪರ್' ಸಿನಿಮಾ ಕೊಂಚ ಸೀರಿಯಸ್ ಕಥೆಯಾದರೂ, ಮನರಂಜನೆಗೆ ಬೇಕಾದ ಎಲ್ಲಾ ಕಮರ್ಶಿಯಲ್ ಅಂಶಗಳು ಚಿತ್ರದಲ್ಲಿದೆ. ಅನೂಪ್ ರೂಬೆನ್ಸ್ ಸಂಗೀತ ಓಕೆ. ಆದ್ರೆ, ಮಣಿ ಶರ್ಮಾ ಹಿನ್ನಲೆ ಸಂಗೀತದಲ್ಲಿ ಧಮ್ ಇಲ್ಲ. ಎಸ್.ಆರ್.ಶೇಖರ್ ಕತ್ರಿ ಕೆಲಸ ಅಚ್ಚುಕಟ್ಟಾಗಿದೆ. ['ಟೆಂಪರ್' ರೈಸ್ ಆದ ಜೂ.ಎನ್.ಟಿ.ಆರ್ ಮಾಡಿದ್ದೇನು?]

Jr.NTR starrer Temper movie review

ವಿಭಿನ್ನ ಕಥಾಹಂದರಕ್ಕೆ ಕೈಹಾಕಿರುವ ಪುರಿ ಜಗನ್ನಾಥ್ ಪ್ರೇಕ್ಷಕರನ್ನ ಇಡೀ ಎರಡು ಕಾಲು ಗಂಟೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನೀವು ಜೂ.ಎನ್.ಟಿ.ಆರ್ ಅಭಿಮಾನಿಯಾಗಿದ್ದರೆ, 'ಟೆಂಪರ್' ಚಿತ್ರವನ್ನ ಈ ವಾರಾಂತ್ಯ ಮಿಸ್ ಮಾಡಿಕೊಳ್ಳಬೇಡಿ.

English summary
Jr.NTR's brand new movie Temper has hit the screens today (Feb 13th). Puri Jagannadh directorial venture Temper review is here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada