»   » ವಿಮರ್ಶೆ: ಕುತೂಹಲಭರಿತ 'ಕಾಫಿತೋಟ'ದಲ್ಲಿ ಥ್ರಿಲ್ಲಿಂಗ್ ಜರ್ನಿ

ವಿಮರ್ಶೆ: ಕುತೂಹಲಭರಿತ 'ಕಾಫಿತೋಟ'ದಲ್ಲಿ ಥ್ರಿಲ್ಲಿಂಗ್ ಜರ್ನಿ

Posted By:
Subscribe to Filmibeat Kannada

'ಕಾಫಿತೋಟ' ಒಂದು ಮರ್ಡರ್ ಮಿಸ್ಟರಿ ಸಿನಿಮಾ. ಆದ್ರೆ, ರೆಗ್ಯೂಲರ್ ಮರ್ಡರ್ ಮಿಸ್ಟರಿ ಚಿತ್ರಗಳಿಗಿಂತ ತುಂಬ ವಿಭಿನ್ನ. ಸಿನಿಮಾದಲ್ಲಿ ಜಾಣ್ಮೆಯ ಚಿತ್ರಕಥೆಯಿದ್ದು, ಕೊನೆಯ ದೃಶ್ಯದವರೆಗೂ ಕುತೂಹಲವನ್ನು ಹಿಡಿದಿಟ್ಟು ಪ್ರೇಕ್ಷಕರನ್ನ ರಂಜಿಸುತ್ತೆ.

ಸಂದರ್ಶನ : 'ಕಾಫಿತೋಟ'ದ ಓನರ್ ಆದ 'ರಂಗಿತರಂಗ' ಬೆಡಗಿ ರಾಧಿಕಾ ಚೇತನ್

Rating:
3.5/5

ಚಿತ್ರ: ಕಾಫಿತೋಟ

ನಿರ್ಮಾಣ: ಮನ್ವಂತರ ಚಿತ್ರ

ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ: ಟಿ.ಎಸ್.ಸೀತಾರಾಮ್

ಸಂಗೀತ: ಮಿದುನ್ ಮುಕುಂದನ್, ಅನೂಪ್ ಸಿಳೀನ್

ಛಾಯಾಗ್ರಹಣ: ಅಶೋಕ್ ಕಶ್ಯಪ್

ತಾರಾಗಣ: ರಾಧಿಕ ಚೇತನ್, ರಘು ಮುಖರ್ಜಿ, ರಾಹುಲ್ ಮಾದವ್, ಸೀತಾರಾಮ್, ಸುಧಾ ಬೆಳವಾಡಿ, ಸಂಯುಕ್ತ ಹೊರನಾಡು, ಸುಂದರ್ ರಾಜ್ ಮತ್ತು ಇತರರು

ಬಿಡುಗಡೆ: ಆಗಸ್ಟ್ 18, 2017

'ಕಾಫಿತೋಟ'ದ ಕಥೆ

'ಕಾಫಿತೋಟ' ಒಂದು ಕೊಲೆಯ ಸುತ್ತ ಸುತ್ತುವ ಚಿತ್ರ. ಕಥಾ ನಾಯಕಿ ಮೈಥಿಲಿ (ರಾಧಿಕ ಚೇತನ್) ಕಾಫಿತೋಟದ ಒಡತಿ. ತಂದೆ ತಾಯಿ ಇಲ್ಲದ ಈಕೆ 200 ಕೋಟಿ ಆಸ್ತಿಯ ಒಡತಿ. ಹೀಗಿರುವಾಗ ಲಾಯರ್ ನಿರಂಜನ್ (ರಘು ಮುಖರ್ಜಿ) ರನ್ನು ಮೈಥಿಲಿ ಪ್ರೀತಿ ಮಾಡುತ್ತಾಳೆ. ಆದರೆ ತನ್ನ ಪ್ರೀತಿಯಲ್ಲಿ ಸೋತ ಮೈಥಿಲಿ ಪ್ರೀತಿ ಪ್ರೇಮದ ಸಹವಾಸ ಬೇಡ ಅಂತ ಸುಮ್ಮನಾಗ್ತಾಳೆ. ಇದೇ ಸಂಧರ್ಭದಲ್ಲಿ ಚಾರ್ಲಿ (ರಾಹುಲ್ ಮಾದವ್) ಎಂಬ ಹುಡುಗನ ಜೊತೆ ಮೈಥಿಲಿ ಮದುವೆ ಕೂಡ ಆಗುತ್ತದೆ. ಎಲ್ಲ ಸರಿಯಾಗಿದೆ ಎನ್ನುವಷ್ಟಲ್ಲಿರಯೇ ಮೈಥಿಲಿ ಕೊಲೆ ನಡೆಯುತ್ತದೆ. 'ಕಾಫಿತೋಟ'ದಲ್ಲಿ ನಡೆದ ಈ ಕೊಲೆ ಯಾರು ಮಾಡಿದರು ಎನ್ನುವುದೇ ಸಿನಿಮಾದ ಕಥೆ.

ಕ್ಷಣ ಕ್ಷಣ ಕುತೂಹಲ

'ಕಾಫಿತೋಟ' ಸಿನಿಮಾ ನೋಡುಗರಿಗೆ ಕ್ಷಣ ಕ್ಷಣವೂ ಕುತೂಹಲ ಹುಟ್ಟಿಸುತ್ತದೆ. ಒಂದು ಮರ್ಡರ್ ಮಿಸ್ಟರಿ ಸಿನಿಮಾಗೆ ಅಗತ್ಯವಾಗಿ ಬೇಕಾದ ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಅಂಶಗಳು ಚಿತ್ರದಲ್ಲಿದೆ. ಚಿತ್ರ ಕೊನೆಯ ದೃಶ್ಯದ ವರೆಗೆ ಕುತೂಹಲವನ್ನು ಹಿಡಿದಿಡುತ್ತದೆ.

ಸಸ್ಪೆನ್ಸ್ ಥ್ರಿಲ್ಲರ್ 'ಕಾಫಿತೋಟ'ದ ನಿರ್ದೇಶಕ ಸೀತಾರಾಮ್ ಸಂದರ್ಶನ

ಸೆಕೆಂಡ್ ಹಾಫ್

ಚಿತ್ರದ ಮೊದಲಾರ್ದ ಪ್ರೀತಿ ಪ್ರೇಮದಲ್ಲಿ ಮುಳುಗಿ ಹೋಗುತ್ತೆ. ಸೆಕೆಂಡ್ ಆಫ್ ನಲ್ಲಿ ಸಿನಿಮಾದ ಆಯಾಮವೇ ಬದಲಾಗುತ್ತದೆ. ಮಧ್ಯಂತರ ಮುಗಿಸಿ ಸೀಟ್ ಮೇಲೆ ಕುಳಿತ ಪ್ರೇಕ್ಷಕನಿಗೆ ಕೊನೆಯವರೆಗೂ ಥ್ರಿಲ್ ನೀಡುತ್ತದೆ.

ಸೀತಾರಾಮ್ ಸಿನಿಮಾ

'ಕಾಫಿತೋಟ' ಚಿತ್ರ ನಿರ್ದೇಶಕ ಸೀತಾರಾಮ್ ಅವರ ಸ್ಟೈಲ್ ಆಫ್ ಸಿನಿಮಾ. ಅವರ ಧಾರಾವಾಹಿಗಳನ್ನು ನೋಡಿ ಇಷ್ಟಪಟ್ಟ ಜನರಿಗೆ ಈ ಸಿನಿಮಾ ಕೂಡ ಇಷ್ಟ ಆಗುತ್ತದೆ. ಚಿತ್ರದಲ್ಲಿನ ಕೋರ್ಟ್ ದೃಶ್ಯಗಳು ಸೀತಾರಾಮ್ ಅವರ ಅಪ್ಪಟ್ಟ ಅಭಿಮಾನಿಗಳ ಮನತಣಿಸುತ್ತದೆ.

ಸಂದರ್ಶನ: 'ಕಾಫಿ ತೋಟ'ಕ್ಕಾಗಿ ಕಾಲಿವುಡ್ ನಿಂದ ಬಂದ ಉಡುಪಿಯ ಹುಡುಗ ರಾಹುಲ್

ಜಾಣ್ಮೆಯ ಚಿತ್ರಕಥೆ

'ಕಾಫಿತೋಟ' ಸಿನಿಮಾದ ದೊಡ್ಡ ಹೈಲೆಟ್ ಅಂದರೆ ಚಿತ್ರಕಥೆ. ಅದರಲ್ಲಿಯೂ ವಿಶೇಷವಾಗಿ ದ್ವಿತೀಯಾರ್ಧದಲ್ಲಿ ಜಾಣ್ಮೆಯ ಚಿತ್ರಕಥೆ ಇದೆ. ಕೊಲೆಯ ಕಥೆ ಹೇಳಲು ಹೊರಟಿರುವ ನಿರ್ದೇಶಕರು, ಇಂದಿನ ತಲೆಮಾರಿನ ಪ್ರೇಕ್ಷಕರಿಗೆ ಇಷ್ಟ ಆಗುವಂತೆ ನಿರೂಪಣೆ ಮಾಡಿದ್ದಾರೆ.

ಉತ್ತಮ ನಟನೆ

ಚಿತ್ರದಲ್ಲಿ ಮೈಥಿಲಿ ಪಾತ್ರವನ್ನು ಮಾಡಿರುವ ನಟಿ ರಾಧಿಕ ಚೇತನ್, ನಿರಂಜನ್ ಪಾತ್ರವನ್ನು ಮಾಡಿರುವ ರಘು ಮುಖರ್ಜಿ ಮತ್ತು ಚಾರ್ಲಿ ಪಾತ್ರಧಾರಿ ರಾಹುಲ್ ಮೂರು ಜನರ ನಟನೆ ಗಮನ ಸೆಳೆಯುತ್ತೆ. ಲಾಯರ್ ಪಾತ್ರದಲ್ಲಿ ಎಂದಿನಂತೆ ಸೀತಾರಾಮ್ ತಮ್ಮ ಖದರ್ ತೋರಿಸಿದ್ದಾರೆ.

ಫ್ಯಾಮಿಲಿ ಸಿನಿಮಾ

'ಕಾಫಿತೋಟ' ಮರ್ಡರ್ ಮಿಸ್ಟರಿ ಕಥೆ ಆಧರಿಸಿದ್ದರು ಇದೊಂದು ಫ್ಯಾಮಿಲಿ ಓರಿಯೆಂಟೆಡ್ ಚಿತ್ರ. ಹಾಗಾಗಿ ಕುಟುಂಬ ಸಮೇತ ಸಿನಿಮಾ ನೋಡಬಹುದು.

ಕ್ಯಾಮರಾ ವರ್ಕ್ ಸೂಪರ್

ಅಶೋಕ್ ಕಶ್ಯಪ್ ಕ್ಯಾಮೆರಾ ಕೆಲಸ ಚಿತ್ರದ ಸೊಬಗನ್ನು ಹೆಚ್ಚಿಸಿದೆ. ಚಿತ್ರದ ಲೊಕೇಶನ್ ಗಳು ನೋಡುಗರ ಕಣ್ಣು ತಂಪು ಮಾಡುತ್ತದೆ. ಜೊತೆಗೆ ಹಿನ್ನೆಲೆ ಸಂಗೀತ ಪರಿಣಾಮಕಾರಿಯಾಗಿದೆ.

ಒಳ್ಳೆಯ ಸಿನಿಮಾ

'ಕಾಫಿತೋಟ' ಒಂದು ಒಳ್ಳೆಯ ಪ್ರಯತ್ನದ ಸಿನಿಮಾ. ಚಿತ್ರ ಒಂದು ಕೊಲೆಯ ಸುತ್ತ ಸುತ್ತಿದ್ದರು ಅದನ್ನು ಹೇಳಿರುವ ಶೈಲಿ ಇಷ್ಟವಾಗುತ್ತೆ. ಸೀತಾರಾಮ್ ಅಭಿಮಾನಿಗಳಿಗೆ ಸಖತ್ ಕಿಕ್ ನೀಡುವ ಸಿನಿಮಾ ಇದು.

English summary
T.N.Seetharam' directional 'Kaafi Thota' Movie has hit the screens today (august 18th). The movie is out and out Suspense Thriller. The review of the movie is here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada