For Quick Alerts
  ALLOW NOTIFICATIONS  
  For Daily Alerts

  'ಭುಜ್' ವಿಮರ್ಶೆ: ಕೆಟ್ಟ ಮೇಕಿಂಗ್‌ನಿಂದ ಅಜಯ್ ದೇವಗನ್‌ಗೆ ಸೋಲು

  |

  ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ ಭುಜ್ ಪ್ರೈಡ್ ಆಫ್ ಇಂಡಿಯಾ ಸಿನಿಮಾ ಬಿಡುಗಡೆಯಾಗಿದೆ. ಆಗಸ್ಟ್ 13ರ ಸಂಜೆ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ವರ್ಲ್ಡ್‌ ಪ್ರೀಮಿಯರ್ ಕಂಡಿದೆ. ಸೆಲೆಬ್ರಿಟಿಗಳಿಗಾಗಿ ಮುಂಬೈನ ಜುಹಾದಲ್ಲಿ ಸ್ಪೆಷಲ್ ಸ್ಕ್ರೀನಿಂಗ್ ಏರ್ಪಡಿಸಲಾಗಿತ್ತು. ಈ ವೇಳೆ ನಟಿ ಕಾಜೋಲ್ ಹಾಗೂ ಮಗಳು ಭುಜ್ ಸಿನಿಮಾ ನೋಡಿ ಅಜಯ್ ದೇವಗನ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

  ಸಿನಿಮಾ ವೀಕ್ಷಿಸಿದ ನಂತರ ಇನ್ಸ್ಟಾಗ್ರಾಂನಲ್ಲಿ ವಿಮರ್ಶಿಸಿರುವ ಕಾಜೋಲ್, ತನ್ನ ಗಂಡನ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ. ''ಬಹಳ ದಿನಗಳ ನಂತರ ಥಿಯೇಟರ್‌ನಲ್ಲಿ ಸಿನಿಮಾ ನೋಡಿದೆ. ಅಂತಹ ಅದ್ಭುತ ಸಮಯ ಇದು. ನಮ್ಮ ಜೀವನದಲ್ಲಿ ನಾವು ನಿಶ್ಚಿಂತೆಯಿಂದ ನಿರಾಳವಾಗಿ ಜೀವಿಸುತ್ತಿದ್ದೇವೆ ಅಂದ್ರೆ ಅದಕ್ಕೆ ಭದ್ರತೆ ಒದಗಿಸುತ್ತಿರುವುದು ಯಾರು ಎಂಬ ಕನಿಷ್ಠ ತಿಳುವಳಿಕೆಯನ್ನು ಮರೆತಿರುತ್ತೇವೆ. ಇಂತಹ ವಿಷಯಗಳನ್ನು ನಮಗೆ ನೆನಪು ಮಾಡಿಸುತ್ತದೆ'' ಎಂದು ಬರೆದುಕೊಂಡಿದ್ದಾರೆ. ಮುಂದುವರಿಸಿ ,''ನಾವು ಸುರಕ್ಷಿತ ಜೀವನ ಸಾಗಿಸಲು ಕಾರಣರಾಗಿರುವ ಎಲ್ಲಾ ನಿಜವಾದ ಹೀರೋಗಳಿಗೆ ಹ್ಯಾಟ್ಸಪ್'' ಎಂದಿದ್ದಾರೆ. ಅಜಯ್ ದೇವಗನ್-ಕಾಜೋಲ್ ಮಗಳು ಸಹ ಭುಜ್ ಚಿತ್ರದ ಬಗ್ಗೆ ಖುಷಿಯಾಗಿದ್ದಾರೆ.

  ಆಗಸ್ಟ್ ಚಿತ್ರೋತ್ಸವ: 'ಬೆಲ್ ಬಾಟಮ್' ರೋಚಕತೆ, 'ಭುಜ್' ದೇಶಪ್ರೇಮಆಗಸ್ಟ್ ಚಿತ್ರೋತ್ಸವ: 'ಬೆಲ್ ಬಾಟಮ್' ರೋಚಕತೆ, 'ಭುಜ್' ದೇಶಪ್ರೇಮ

  ಇನ್ನು ಭುಜ್ ಸಿನಿಮಾದ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ನಿರೀಕ್ಷೆ ಮಾಡಿದಂತೆ ಸಿನಿಮಾ ಬಂದಿಲ್ಲ. ವಿಶ್ಯೂಲ್, ವಿಎಫ್‌ಎಕ್ಸ್ ಗುಣಮಟ್ಟತೆ ಹೊಂದಿಲ್ಲ ಎಂದು ಸಿನಿಮಾ ನೋಡಿದವರು ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್‌ ವಿಮರ್ಶೆ ನೋಡಿದ್ರೆ ಭುಜ್ ಚಿತ್ರಕ್ಕೆ ಬಹಳ ಕೆಟ್ಟ ವಿಮರ್ಶೆ ಸಿಕ್ಕಿದೆ. ಮುಂದೆ ಓದಿ...

  3.5 ಸ್ಟಾರ್ ಕೊಟ್ಟ ತರಣ್ ಆದರ್ಶ್

  3.5 ಸ್ಟಾರ್ ಕೊಟ್ಟ ತರಣ್ ಆದರ್ಶ್

  ಖ್ಯಾತ ವಿಶ್ಲೇಷಕ ತರಣ್ ಆದರ್ಶ್ ಚಿತ್ರದ ಬಗ್ಗೆ ವಿಮರ್ಶೆ ಮಾಡಿದ್ದು, 3.5 ಸ್ಟಾರ್ ಕೊಟ್ಟಿದ್ದಾರೆ. ಸಿನಿಮಾ ಥ್ರಿಲ್ಲಿಂಗ್ ಆಗಿದೆ ಎಂದು ಹೇಳಿರುವ ತರಣ್ ''ಮಾಸ್ ಪ್ರೇಕ್ಷಕರನ್ನು ಆಕರ್ಷಿಸುವ ಚಮತ್ಕಾರ ಮಾಡಿದೆ. ಅತಿ ದೊಡ್ಡ ದೃಶ್ಯ ವೈಭವ, ಬೆರಗುಗೊಳಿಸುವಂತಿದೆ. ಎರಡು ಗಂಟೆಗಳ ಕಾಲ ಥ್ರಿಲ್ ಆಗಿ ನೋಡಬಹುದು. ಅಜಯ್ ದೇವಗನ್ ಭಯಾನಕ ಅಭಿನಯದ ಚಿತ್ರಕ್ಕೆ ಪ್ಲಸ್ ಪಾಯಿಂಟ್'' ಎಂದು ಟ್ವೀಟ್ ಮಾಡಿದ್ದಾರೆ.

  ಇದು ದುರಂತ ಎಂದ ನೆಟ್ಟಿಗರು

  ಇದು ದುರಂತ ಎಂದ ನೆಟ್ಟಿಗರು

  - ''ಈಗಷ್ಟೇ ಸಿನಿಮಾ ನೊಡಿದೆ. ಇಂತಹ ಕಥೆಗಳು ಅತ್ಯದ್ಬುತ ಮನರಂಜನೆಗೆ ಅರ್ಹವಾಗಿರುತ್ತದೆ. ಆದರೆ, ಹತ್ತು ನಿಮಿಷಗಳ ವಿಎಫ್‌ಎಕ್ಸ್ ನೋಡಿದ್ಮೇಲೆ ನನಗೆ ಬೇಸರ ಆಗಿದೆ. ಏಕೆ ಪ್ರೊಡಕ್ಷನ್ ಮೇಲೆ ಇಷ್ಟೊಂದು ನಿರ್ಲಕ್ಷ್ಯ ತೋರಿಸಿದ್ರಿ?'' ಎಂದು ರಾಜದೀಪ್ ಶರ್ಮಾ ಟ್ವೀಟ್ ಮಾಡಿದ್ದಾರೆ.
  - ''ಭುಜ್ ಪ್ರೈಡ್ ಆಫ್ ಇಂಡಿಯಾ ನಿರ್ದೇಶನ ಭಯಾನಕ ಎನಿಸುತ್ತದೆ. ಮೊದಲ ಗಂಟೆಯಲ್ಲಿ ದೃಶ್ಯಗಳೊಂದಿಗೆ ಹೋರಾಡುತ್ತಲೇ ಇರ್ತೀರ. ಕೆಟ್ಟ ವಿಎಫ್‌ಎಕ್ಸ್ ಮತ್ತು ತೇಪೆ ಹಚ್ಚುವಂತಹ ಕಳಪೆ ಕೆಲಸ ನೋಡುಗರ ಆಸಕ್ತಿಯನ್ನು ಮತ್ತಷ್ಟು ಹಾಳುಮಾಡುತ್ತವೆ. ಕಥೆ ಮತ್ತು ಸಂಭಾಷಣೆಗಳು ಸರಾಸರಿಗಿಂತ ಕೆಳಗಿವೆ. ಇದು ದುರಂತ.'' ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

  ಕಳಪೆ ಮೇಕಿಂಗ್‌ನಿಂದ ಸೋಲು

  ಕಳಪೆ ಮೇಕಿಂಗ್‌ನಿಂದ ಸೋಲು

  - ''ಭುಜ್ ಪ್ರೈಡ್ ಆಫ್ ಇಂಡಿಯಾ ಸಿನಿಮಾ ನಮ್ಮ ನಿಜವಾದ ಹೀರೋಗಳ ಕಥೆಯನ್ನು ಹೇಳಲು ಪ್ರಯತ್ನಿಸಿದೆ. ಆದರೆ ನಟನೆ, ಸ್ಕ್ರಿಪ್ಟ್‌, ಕ್ರಿಯೇಟಿವಿಟಿಯ ಪ್ರತಿಯೊಂದು ವಿಭಾಗದಲ್ಲಿಯೂ ದಿಕ್ಕು ತಪ್ಪಿದೆ. ಕೊನೆ ಕ್ಷಣದವರೆಗೂ ಮಸಲಾ ಸೇರಿಸಿ ಕೊಂದುಬಿಟ್ಟಿದ್ದಾರೆ. ನೀವು ಮೊದಲು ಸಿನಿಮಾ ಮಾಡುವುದನ್ನು ಬಿಟ್ಟು ಯುದ್ಧದ ಬಗ್ಗೆ ಓದಿ ತಿಳಿಯಿರಿ'' ಎಂದು ವೀಕ್ಷಕನೊಬ್ಬ ಕಾಮೆಂಟ್ ಮಾಡಿದ್ದಾನೆ.
  - ''ಅಜಯ್ ದೇವಗನ್ ಅಭಿಮಾನಿಯಾಗಿ ಈ ಬಾರಿ ತುಂಬಾ ನಿರಾಸೆಯಾಗಿದೆ'' ಎಂದು ಅಭಿಮಾನಿಯೊಬ್ಬ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
  - ಈ ಎಲ್ಲಾ ವಿಮರ್ಶೆಗಳನ್ನು ನೋಡಿದ್ರೆ ಪ್ರೇಕ್ಷಕರನ್ನು ರಂಜಿಸಲು ಅಜಯ್ ದೇವಗನ್ ವಿಫಲರಾಗಿದ್ದಾರೆ. ವಿಶೇಷವಾಗಿ ವಿಎಫ್‌ಎಕ್ಸ್‌ ಹಾಗೂ ಕಳಪೆ ಗುಣಮಟ್ಟದ ದೃಶ್ಯಗಳಿಂದ ಸಿನಿಮಾ ಸೋಲು ಕಂಡಿದೆ ಎಂದು ಹೇಳಬಹುದು.

  ನೈಜ ಘಟನೆಯ ಆಧರಿತ ಸಿನಿಮಾ

  ನೈಜ ಘಟನೆಯ ಆಧರಿತ ಸಿನಿಮಾ

  1971 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸಮಯದಲ್ಲಿ ಭುಜ್ ವಿಮಾನ ನಿಲ್ದಾಣದ ಉಸ್ತುವಾರಿ ವಹಿಸಿದ್ದ ವಿಂಗ್ ಕಮಾಂಡರ್ ಆಗಿ ವಿಜಯ್ ಕಾರ್ಣಿಕ್ ಪಾತ್ರದಲ್ಲಿ ಅಜಯ್ ಆಗಿ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನದಿಂದ ಭಾರೀ ಬಾಂಬ್ ದಾಳಿ ಎದುರಿಸುತ್ತಿದ್ದರೂ 50 ವಾಯುಪಡೆ ಮತ್ತು 60 ರಕ್ಷಣಾ ಭದ್ರತಾ ಅಧಿಕಾರಿಗಳೊಂದಿಗೆ ವಾಯುನೆಲೆ ಮೇಲೆ ನಿಯಂತ್ರಣ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಂತಹ ದೇಶಭಕ್ತಿಯ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ, ಅಜಯ್ ದೇವಗನ್ ಜೊತೆ ಸಂಜಯ್ ದತ್, ಸೋನಾಕ್ಷಿ ಸಿನ್ಹಾ, ನೋರಾ ಫತೇಹಿ ಮತ್ತು ಅಮ್ಮಿ ವಿರ್ಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Bollywood actress Kajol and Her daughter reviewed 'BhujThePrideOfIndia' movie, says their are proud of Ajay Devgn.
  Saturday, August 14, 2021, 10:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X