Just In
Don't Miss!
- News
LIVE: ಜಾರ್ಖಂಡ್ 3ನೇ ಹಂತದ ಮತದಾನ ಸಂಪೂರ್ಣ ಅಪ್ಡೇಟ್ಸ್
- Sports
ವಿಶ್ವದಾಖಲೆಗಾಗಿ ಅಫ್ರಿದಿ, ಗೇಲ್ ಸಾಲು ಸೇರಿದ ಹಿಟ್ಮ್ಯಾನ್ ರೋಹಿತ್!
- Lifestyle
ದಂಪತಿ ನಡುವಿದ್ದ ಭಿನ್ನಾಭಿಪ್ರಾಯ ಮತ್ತೆ ಸೆಕ್ಸ್ ಲೈಫ್ ಉತ್ತಮವಾಗಲು ಟಿಪ್ಸ್
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Technology
ಗೂಗಲ್ ಮ್ಯಾಪ್ಸ್ನ ಹಿಸ್ಟರಿ ಸ್ವಯಂಚಾಲಿತ ಡಿಲೀಟ್ ಹೇಗೆ..?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
Kannad Gothilla Review: ಒಳ್ಳೆಯ ವಿಷಯ.. ಸಾಧಾರಣ ನಿರೂಪಣೆ..
'ಕನ್ನಡ್ ಗೊತ್ತಿಲ್ಲ' ಸಿನಿಮಾದ ಟೈಟಲ್ ಕೇಳಿದ ಕೂಡಲೇ ಇದು ಕನ್ನಡದ ಬಗ್ಗೆ ಇರುವ ಸಿನಿಮಾ ಎನ್ನುವ ಊಹೆ ಎಲ್ಲರಿಗೂ ಇರುತ್ತದೆ. ಅದೇ ರೀತಿ ಈ ಸಿನಿಮಾದ ಕನ್ನಡದ ಸುತ್ತಲು ನಡೆಯುವ ಕಥೆ ಹೊಂದಿದೆ. ಆ ಚೌಕಟ್ಟಿನಲ್ಲಿಯೇ ಕ್ರೈಂ ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ನಿರ್ದೇಶಕರು ಸೇರಿಸಿದ್ದಾರೆ. ಚಿತ್ರದ ವಿಷಯ ಚೆನ್ನಾಗಿದೆ. ಆದರೆ, ಸಿನಿಮಾ ನೋಡಲು ತುಂಬ ತಾಳ್ಮೆ ಬೇಕಾಗುತ್ತದೆ.

'ಕನ್ನಡ್ ಬರಲ್ಲ' ಅಂದ್ರೆ ಕಿಡ್ನಪ್
ಕ್ಯಾಬ್ ಡ್ರೈವರ್ ಮೂಲಕ ಚಿತ್ರದ ಕಥೆ ಶುರು ಆಗುತ್ತದೆ. 'ಕನ್ನಡ್ ಗೊತ್ತಿಲ್ಲ' ಅಂತ ಹೇಳಿದವರೆಲ್ಲ ಕಿಡ್ನಪ್ ಆಗುತ್ತಿರುತ್ತಾರೆ. ಕಿಡ್ನಪ್ ಅದವರೆಲ್ಲ ಆ ಕ್ಯಾಬ್ ನಲ್ಲಿಯೇ ಪ್ರಯಾಣ ಮಾಡಿರುತ್ತಾರೆ. ಅವರೆಲ್ಲ ಪರಭಾಷಿಗರು. ಕ್ಯಾಬ್ ಡ್ರೈವರ್ ಮಂಜುನಾಥ (ಧರ್ಮಣ್ಣ) ಅಪ್ಪಟ್ಟ ಕನ್ನಡ ಅಭಿಮಾನಿ. ಆಗಿದ್ದ ಮೇಲೆ ಆ ಅಪಹರಣಕ್ಕೂ, ಕ್ಯಾಬ್ ಡ್ರೈವರ್ ಗೂ ಸಂಬಂಧ ಇದೆ ಎನ್ನುವ ಪ್ರಶ್ನೆ ಮೂಡುತ್ತದೆ.
''ಶಿವಣ್ಣ ನಮ್ಮ ಅಣ್ಣ'' ಹೀಗೆ ಹೇಳಿದ್ರು ಧರ್ಮಣ್ಣ

ತನಿಖೆ ಮಾಡಲು ಬರುತ್ತಾಳೆ ಶ್ರುತಿ
ಸರಣಿ ಅಪಹರಣಗಳು, ಕೊಲೆಗಳ ತನಿಖೆ ಮಾಡಲು ಬರುವ ಪೊಲೀಸ್ ಅಧಿಕಾರಿ ಶ್ರುತಿ (ಹರಿಪ್ರಿಯಾ). ತನ್ನ ಚಾಣಾಕ್ಷತನದಿಂದ ತನಿಖೆ ಶುರು ಮಾಡುತ್ತಾಳೆ. ಕನ್ನಡ್ ಗೊತ್ತಿಲ್ಲ ಎಂದವರ ಸರಣಿ ಅಪಹರಣ, ಕೊಲೆಗಳಿಗೆ ಕಾರಣ ಯಾರು?. ಹೇಗೆ ಶ್ರುತಿ ಅವರನ್ನು ಪತ್ತೆ ಮಾಡುತ್ತಾಳೆ?, ಎನ್ನುವುದು ಸಿನಿಮಾದ ಕಥೆ. ಈ ಕಥೆ ಕನ್ನಡ ಭಾಷೆಯ ಹಿನ್ನಲೆಯಲ್ಲಿ ಸಾಗುತ್ತದೆ.

ನಟನೆ ಹೇಗಿದೆ?
ಹರಿಪ್ರಿಯಾ ನಟನೆ ಚೆನ್ನಾಗಿದೆ. ಆದರೆ, ಪೊಲೀಸ್ ಅಧಿಕಾರಿ ಎಂದ ಮೇಲೆ ಇನ್ನಷ್ಟು ಪವರ್ ಬೇಕಾಗಿತ್ತು. ಆ ಪಾತ್ರಕ್ಕಾಗಿ ಸ್ಪಲ್ಪ ಬದಲಾದ ಲುಕ್ ಪ್ರಯತ್ನ ಮಾಡಬಹುದಿತ್ತೇನೋ. ಸುಧಾರಾಣಿ ಸ್ಪಲ್ಪ ಹೊತ್ತು ಇದ್ದರೂ ಖದರ್ ತೋರಿಸಿದ್ದಾರೆ. ಆರ್ ಜೆ ಮಯೂರ್ ರಾಘವೇಂದ್ರ ಒಂದು ಪತ್ರ ಮಾಡಿದ್ದಾರೆ. ಪವನ್ ಎಮೋಷನಲ್ ದೃಶ್ಯಗಳು ಇಷ್ಟ ಆಗುತ್ತವೆ. ನಟ ಧರ್ಮಣ್ಣ ಕಾಮಿಡಿ ಸಿನಿಮಾದ ಟಾನಿಕ್. ಅವರ ಪಾತ್ರದಿಂದಲೇ ಸಿನಿಮಾ ತಿರುವುಗಳನ್ನು ಪಡೆದುಕೊಳ್ಳುತ್ತದೆ.
Review: ನಗಿಸುತ್ತಲೇ ಪ್ರಶ್ನಿಸುವ 'ಕಾಳಿದಾಸ ಕನ್ನಡ ಮೇಷ್ಟ್ರು'

ಒಳ್ಳೆಯ ವಿಷಯ.. ಸಾಧಾರಣ ನಿರೂಪಣೆ..
ಬೆಂಗಳೂರಿನ ಸದ್ಯದ ಪರಿಸ್ಥಿತಿಗೆ ಸಿನಿಮಾ ಹೋಲಿಕೆ ಆಗುತ್ತದೆ. ಅನೇಕ ದೃಶ್ಯಗಳು ಹತ್ತಿರ ಆಗುತ್ತವೆ. ಸಿನಿಮಾದ ವಿಷಯ ಚೆನ್ನಾಗಿದೆ. ಕನ್ನಡ ಭಾಷೆ ಬಗ್ಗೆ ಸಿನಿಮಾ ಮಾಡಿರುವ ನಿರ್ದೇಶಕರ ಪ್ರಯತ್ನವನ್ನು ಮೆಚ್ಚಬೇಕು. ಆದರೆ, ಇಡೀ ಚಿತ್ರವನ್ನು ನೋಡಿದಾಗ ಪ್ರೇಕ್ಷಕರಿಗೆ ತೃಪ್ತಿ ನೀಡುವುದಿಲ್ಲ. ಎಲ್ಲ ಮುಗಿದರೂ, ಇನ್ನೆನೋ ಬೇಕಿತ್ತು ಅನಿಸುತ್ತದೆ. ನಿರೂಪಣೆ ಇನ್ನಷ್ಟು ಸ್ವಾರಸ್ಯಕರವಾಗಿ ಇರಬೇಕಿತ್ತು.

ಚುರುಕುತನ, ರೋಚಕತೆ ಇಲ್ಲ
ಒಂದು ಕಡೆ ಕನ್ನಡ ಪ್ರೇಮ, ಮತ್ತೊಂದು ಕಡೆ ಕ್ರೈಂ ಥ್ರಿಲ್ಲರ್ ಈ ಎರಡು ಅಂಶಗಳನ್ನು ಬೆರೆಸಿ ಸಿನಿಮಾ ಮಾಡಿದ್ದಾರೆ. ಆದರೆ, ಒಂದು ಕ್ರೈಂ ಥ್ರಿಲ್ಲರ್, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೆ ಬೇಕಾದ ಚುರುಕುತನ, ರೋಚಕತೆ ಸಿನಿಮಾದಲ್ಲಿ ಇಲ್ಲ. ಕ್ರೈಮ್ಯಾಕ್ಸ್ ನಲ್ಲಿ ನೀಡಿರುವ ಟ್ವಿಸ್ಟ್ ಗಳು ಬಿಟ್ಟರೆ, ಮೊದಲಾರ್ಧ ಬೋರ್ ಎನಿಸುತ್ತದೆ. ಸಣ್ಣ ಪುಟ್ಟ ದೃಶ್ಯಗಳು ಕಾರಣ ಇಲ್ಲದೆ ಬರುತ್ತವೆ.
ಸ್ಯಾಂಡಲ್ ವುಡ್ ಮಂದಿ ಈ ನಟಿಯರನ್ನ 'ಹೀಗೆ' ಬಳಸಿಕೊಳ್ಳುವುದು ಸರಿಯೇ?

ಥ್ರಿಲ್ಲರ್ ಸಿನಿಮಾಗೆ ಬೇಕಾದ ಅಂಶಗಳ ಕೊರತೆ
ಪರಭಾಷೆಯವರು ಕನ್ನಡ ಕಲಿಯಬೇಕು. ಆ ರೀತಿಯ ವಾತಾವರಣ ಸೃಷ್ಟಿ ಮಾಡಬೇಕು. ಹಾಗೆ ಇದ್ದರೆ, ಕಷ್ಟಪಟ್ಟಾದರೂ ಕನ್ನಡ ಕಲಿಯುತ್ತಾರೆ, ಭಯ ಇದ್ದರೆ ಮಾತ್ರ ಭಕ್ತಿ ಬರುತ್ತದೆ. ಇಂತಹ ವಿಷಯಗಳು ಚೆನ್ನಾಗಿವೆ. ಕನ್ನಡದ ಅಭಿಮಾನ ಬರುವಂತೆ ಮಾಡುವ ಕೆಲವು ದೃಶ್ಯಗಳೂ ಇಲ್ಲಿವೆ. ಕೆಲವು ಕೊರತೆಗಳಿಂದ ಸಿನಿಮಾದ ಶಕ್ತಿ ಕಡಿಮೆ ಆಗಿದೆ. ಕನ್ನಡದ ಮೇಲಿನ ಅಭಿಮಾನಕ್ಕಾಗಿ ಒಮ್ಮೆ ನೋಡಬಹುದು.