»   » ಕಲಾತ್ಮಕತೆಯಲ್ಲಿ ಅರಳಿದ ಪ್ರೇಮ'ರಾಗ'ಕ್ಕೆ ವಿಮರ್ಶಕರ ಅಭಿಪ್ರಾಯ..

ಕಲಾತ್ಮಕತೆಯಲ್ಲಿ ಅರಳಿದ ಪ್ರೇಮ'ರಾಗ'ಕ್ಕೆ ವಿಮರ್ಶಕರ ಅಭಿಪ್ರಾಯ..

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಹಾಸ್ಯ ಕಲಾವಿದ ಮಿತ್ರ ಮತ್ತು ಭಾಮಾ ಅಭಿನಯದ 'ರಾಗ' ಚಿತ್ರ ನಿನ್ನೆ(ಏಪ್ರಿಲ್ 21) ಬಿಡುಗಡೆ ಆಗಿ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ನೋಡಿದ ಪ್ರೇಕ್ಷಕರಿಗೆ ಕಣ್ಣು ಒದ್ದೆ ಆದರೂ ಚಿತ್ರದಲ್ಲಿನ ಉತ್ತಮ ಉಪದೇಶಗಳಿಗೆ ಮನಸೋತಿದ್ದಾರೆ.[ವಿಮರ್ಶೆ: ಭಾವನೆಯಲ್ಲಿ ಮುಳುಗಿಸುವ ಪ್ರೇಮ'ರಾಗ']

  ಭಾವುಕತೆಯಲ್ಲಿ ತೇಲಿಸಿ ಉತ್ತಮ ಸಂದೇಶಗಳನ್ನು ನೀಡಿದ 'ರಾಗ'ಕ್ಕೆ ಕನ್ನಡ ಸಿನಿ ರಸಿಕರು ಶಭಾಷ್ ಎಂದಿದ್ದಾರೆ. ಚಿತ್ರ ನೋಡಿದ ನಮ್ಮ ವಿಮರ್ಶಕರು ಪ್ರೇಕ್ಷರಂತೆಯೇ 'ರಾಗ'ವನ್ನು ಮೆಚ್ಚಿಕೊಂಡ್ರಾ? ಅವರ ಅಭಿಪ್ರಾಯವೇನು?... ಉತ್ತರ ಇಲ್ಲಿದೆ..

  ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ರಾಗ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿ..

  ರಮ್ಯ ಭಾವುಕತೆಯ ಸುದೀರ್ಘ ರಾಗಾಲಾಪ: ಪ್ರಜಾವಾಣಿ

  'ರಾಗ' ಭಾವುಕತೆಯ ಮಂತ್ರದಲ್ಲಿಯೇ ಪ್ರೇಕ್ಷಕರನ್ನು ಮೋಡಿಮಾಡಲು ಯತ್ನಿಸಿದ ನಿರ್ದೇಶಕರ ಪ್ರಯತ್ನ. ಕುರುಡರ ಪ್ರೇಮಕಥೆಯನ್ನು ಸಂದೇಶಗಳ ಅಡಿಪಾಯದ ಮೇಲೆ ಕಟ್ಟುವ ಪ್ರಯತ್ನವಾಗಿದೆ. ಅತಿಭಾವುಕತೆಯೇ ಚಿತ್ರಕ್ಕೆ ಶಾಪವಾಗಿದೆ. ಅಷ್ಟೊಂದು ಚೆನ್ನಾಗಿ ದೃಶ್ಯಗಳ ಮೂಲಕ ಪ್ರೇಕ್ಷಕರನ್ನು ಅಳಿಸಿದ್ದಾರೆ. ಮಿತ್ರ ಹಿಂದಿನ ಇಮೇಜ್ ಗೆ ನೆರಳೂ ಸುಳಿಯದಂತೆ ನಟಿಸಿದ್ದಾರೆ. ಭಾಮಾ ತಮ್ಮ ಪಾತ್ರವನ್ನು ಜೀವಂತವಾಗಿಸಿದ್ದಾರೆ. ಇರುವುದಕ್ಕಿಂತ ಹೆಚ್ಚು ಮೋಹಕಗೊಳಿಸಿ ತೋರಿಸಿದ್ದಾರೆ ಛಾಯಾಗ್ರಾಹಕ ವೈದಿ.ಎಸ್.ಅರ್ಜುನ್‌ ಜನ್ಯ ಸಂಯೋಜನೆಯ ಹಾಡುಗಳು ಆ ಕ್ಷಣದ ಅವಶ್ಯಕತೆಯನ್ನು ಪೂರೈಸುವುದರಾಚೆ ನೆನಪಿನಲ್ಲುಳಿಯುವುದಿಲ್ಲ. ಭಾವುಕತೆಯಲ್ಲಿ ಮುಳುಗಿಯೇ ಇರಲು ಬೇಸರಿಸದವರಿಗೆ ‘ರಾಗ'ದ ಸುದೀರ್ಘ ಆಲಾಪ ಇಷ್ಟವಾಗಬಹುದು.

  ಕಲಾತ್ಮಕತೆಯಲ್ಲಿ ಅರಳಿದ ಪ್ರೇಮಲೋಕ: ವಿಜಯ ಕರ್ನಾಟಕ

  ಪಿ.ಸಿ.ಶೇಖರ್ ಅಂಧರಿಬ್ಬರ ನಡುವಿನ ಕಲ್ಮಶವೇ ಇಲ್ಲದ ಪ್ರೀತಿಯನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಪ್ರೀತಿಯ ಮೂಲಕ ಬದುಕಿನ ಮೌಲ್ಯಗಳನ್ನು ಹದವಾಗಿ ಹೇಳುವ ಪ್ರಯತ್ನದಲ್ಲಿ, ಪ್ರೀತಿಯ ಹಲವು ಕೋನಗಳನ್ನು ಆವಿಷ್ಕರಿಸಿದ್ದಾರೆ. ಸಂಭಾಷಣೆಯಲ್ಲಿ ಗಟ್ಟಿತನವಿದೆ. ಮನೋರಂಜನೆಗೆ ಆದ್ಯತೆ ಕಡಿಮೆ ಆದರು ನಿರೂಪಣೆ ಗಮನ ಸೆಳೆಯುತ್ತದೆ. ಇದು ಕನ್ನಡದಲ್ಲೊಂದು ಕ್ಲಾಸಿಕ್ ಚಿತ್ರ ಬಂದಂತಿದೆ. ಮಿತ್ರ ಮತ್ತು ಭಾಮಾ ಪಾತ್ರದಿಂದ ಸಂಪೂರ್ಣ ಗಮನಸೆಳೆದಿದ್ದಾರೆ. ಅರ್ಜುನ್ ಜನ್ಯ ಸಂಗೀತದಲ್ಲಿ ಮೆಲೋಡಿ ಜತೆಗೆ ಗಟ್ಟಿತನವಿದೆ. ಎರಡು ಹಾಡುಗಳು ಚೆನ್ನಾಗಿವೆ. ಸಾಹಿತ್ಯ ಮನಮುಟ್ಟುವಂತಿದೆ. ಛಾಯಾಗ್ರಾಹಕ ಹೊಸ ಲೋಕವನ್ನೇ ತೋರಿಸಿದ್ದಾರೆ.

  ಅತಿ ಒಳ್ಳೆತನದ ಉಪದೇಶಗಳ 'ರಾಗ'ಲಾಪನೆಯಲ್ಲಿ ನೈಜತೆಯ ಕೊರತೆ: ಕನ್ನಡಪ್ರಭ

  ಮೇಲ್ನೋಟಕ್ಕೆ ಅಂಧ ವ್ಯಕ್ತಿಗಳ ರೋಚಕ ಪ್ರೇಮಕಥೆಯಂತೆ ಕಂಡರೂ, ಪ್ರತಿ ಪಾತ್ರ, ಪ್ರತಿ ಘಟನೆ ಎಲ್ಲವುಗಳ ರಾಗ-ದ್ವೇಷಗಳು ಪ್ಲಾಸ್ಟಿಕ್ ಭಾವನೆಗಳಂತೆ ಮೂಡಿರುವುದು ನಿರಾಸೆ ಮೂಡಿಸುತ್ತದೆ. ದೃಷ್ಟಿ ದೋಷವುಳ್ಳವರ ಜೀವನದಲ್ಲಿ ಇರುವ ಸವಾಲುಗಳನ್ನು ಹಿಡಿಯುವಂತಹ ಪಾತ್ರವನ್ನು ಸೃಷ್ಟಿಸಲು ನಿರ್ದೇಶಕ ಇಲ್ಲಿ ವಿಫಲರಾಗಿದ್ದಾರೆ. ಸಂಭಾಷಣೆಯಿಂದಲೂ ಅಲ್ಲಲ್ಲಿ ಬೇಸರ ತರಿಸುತ್ತದೆ ಚಿತ್ರ.ಮಿತ್ರ ಮತ್ತು ಭಾಮಾ ಇನ್ನಷ್ಟು ಸಹಜವಾಗಿ ನಟಿಸಬಹುದಿತ್ತು. ಕಥೆಯಲ್ಲಿ ಅಷ್ಟೇನೂ ತಾಜಾತನವಿರದೆ, ಬಲವಂತದ ಭಾವುಕತೆಯಲ್ಲಿ ಎಲ್ಲವನ್ನು ಸುಂದರವಾಗಿ ಕಾಣಿಸುವ ಕೃತಕ ಪರಿಸರದಲ್ಲಿ ಸಿನೆಮಾ ಮೂಡಿಸಿದ್ದಾರೆ ನಿರ್ದೇಶಕ. ಆದ್ದರಿಂದ ಪ್ರೇಕ್ಷಕನ ಆಳಕ್ಕೆ ಇಳಿಯದೆ ಮೇಲ್ಮಟ್ಟದಲ್ಲೇ ಮಾಯವಾಗುತ್ತದೆ ಚಿತ್ರಕಥೆ.

  ಭಾವುಕ ರಾಗಮಾಲಿಕೆ: ವಿಜಯವಾಣಿ

  ಕಣ್ಣಿಲ್ಲದವರ ಪ್ರೀತಿಯೂ ಭಿನ್ನವೇನಲ್ಲ ಎಂಬುದು 'ರಾಗ' ಚಿತ್ರದ ಮಾತು. ಈ ಸುಂದರ ಕಲಾಕೃತಿ ರಚಿಸಲು ಪ್ರಯತ್ನಿಸಿರುವ ನಿರ್ದೇಶಕರ ಶ್ರಮಕ್ಕೆ ಭೇಷ್ ಎನ್ನಲೇಬೇಕು. ಆದರೆ ಮಿಕ್ಕೆಲ್ಲಾ ಬಣ್ಣಗಳಿಗಿಂತಲೂ ಭಾವುಕತೆಯೇ ಹೆಚ್ಚಾಗಿರುವುದು ಕೊಂಚ ಬೇಸರ. ಮೊದಲಾರ್ಧ ಕತೆಗೆ ಹೊಸತನದ ಮೂಲಕ ಆವರಿಸಿಕೊಳ್ಳುವ ಶಕ್ತಿ ಇದೆ. ಛಾಯಾಗ್ರಾಹಕರ ಕೈಚಳಕ ಚೆನ್ನಾಗಿದೆ. ದ್ವಿತಿಯಾರ್ಧ ಸವಕಲು ಜಗತ್ತಿಗೆ ಮರಳಿದಂತೆ ಭಾಸವಾಗುವುದು. ಕತೆ ಏರುಪೇರಾದರು ಅಡ್ಡಾ ದಿಡ್ಡಿಯಾಗಿಲ್ಲ. ಪ್ರೇಕ್ಷಕನ ಕಣ್ಣು ಆಗಾಗ ತೇವವಾಗುತ್ತಿರುತ್ತವೆ. ನಟನೆಯಲ್ಲಿ ಎಲ್ಲರೂ ಪರಸ್ಪರ ಜಿದ್ದಿಗೆ ಬಿದ್ದಂತಿದೆ. ಅರ್ಜುನ್ ಜನ್ಯ ಸಂಗೀತ ಭಾವುಕತೆಯನ್ನು ದ್ವಿಗುಣಗೊಳಿಸುತ್ತದೆ.

  'ರಾಗ' ಚಿತ್ರ ವಿಮರ್ಶೆ; ದಿ ಟೈಮ್ಸ್ ಆಫ್ ಇಂಡಿಯಾ

  PC Shekar's Raaga is a visual treat. Each frame looks to be painstakingly put together to recreate the ambience of an old era and the lighting ensures every shot is worthy of being a postcard. The treatment and styling is akin to Bollywood films like Barfi! and Black, which is laudable. And the characterization reminds one of Charlie Chaplin's memorable film Citylights.

  When the film has all of this going for it, the dialogues, that are excessively philosophical and preachy, hinder what could have been a beautiful love story.The highlight apart from Mithra is Vaidhy's cinematography, which is a treat for the eyes. He is complemented by the good art direction and costumes. Should you watch this film? Yes, it is a good attempt that can be acknowledged if you like bittersweet love stories of underdogs.

  English summary
  Kannada Actor Mithra and Kannada Actress Bhama Starrer Kannada Movie 'Raaga' has hit the screens yesterday (April 21st). Here is the Critics Review of Raaga.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more