twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: ನಟರಾಜ 'ಸೂಪರ್', ಸರ್ವೀಸ್ 'ಸುಮಾರು'

    ಬ್ಯಾಂಕ್ ದರೋಡೆ ಮಾಡುವ ಉದ್ದೇಶ ಹೊಂದಿರುವ ನಟರಾಜ 'ಹುಟ್ಟು ಕಳ್ಳ'. ಮತ್ತೊಂದೆಡೆ 'ಲತ್ತೆ' ಸಹನಾ. ಇವರಿಬ್ಬರ ಹಿನ್ನಲೆಯೊಂದಿಗೆ ಶುರುವಾಗುವ 'ನಟರಾಜ ಸರ್ವೀಸ್' ಚಿತ್ರಕಥೆ ಹಾಸ್ಯಭರಿತ.

    |

    ''ಸಣ್ಣ ಪುಟ್ಟ ಕಳ್ಳತನ ಮಾಡಿ ಒಂದೆರೆಡು ದಿನ ಜೈಲಿನಲ್ಲಿ ಇರುವುದಕ್ಕಿಂತ, ಯಾವುದಾದರೂ ದೊಡ್ಡ ಬ್ಯಾಂಕ್ ದರೋಡೆ ಮಾಡಿ, ಪರ್ಮನೆಂಟ್ ಆಗಿ ಜೈಲಿನಲ್ಲೇ ಸೆಟ್ಲಾಗಬೇಕು'' - ಇದು ನಟರಾಜನ ಪ್ಲಾನ್.!

    ''ನನ್ನ ಯಾರೇ ಪ್ರೀತಿ ಮಾಡಿದ್ರು, ಅವರು ಪ್ರಾಣ ಕಳೆದುಕೊಳ್ಳುತ್ತಾರೆ, ಅವರ ಜೀವನ ಹಾಳಾಗೋಗುತ್ತೆ, ನಾನು 'ಲತ್ತೆ' - ಇದು ಸಹನಾಳ ಅಳಲು

    ಇವರಿಬ್ಬರು ಮೀಟ್ ಆದ್ಮೇಲೆ ನಡೆಯುವ ಕಥೆಯೇ 'ನಟರಾಜ ಸರ್ವೀಸ್'.

    Rating:
    3.5/5
    Star Cast: ಶರಣ್, ಮಯೂರಿ ಕ್ಯಾತರಿ, ರಾಕ್ ಲೈನ್ ವೆಂಕಟೇಶ್, ರವಿಶಂಕರ್ ಪಿ
    Director: ಪವನ್ ಒಡೆಯರ್

    ಕಥಾ ಹಂದರ

    ಕಥಾ ಹಂದರ

    ಬ್ಯಾಂಕ್ ದರೋಡೆ ಮಾಡುವ ಉದ್ದೇಶ ಹೊಂದಿರುವ ನಟರಾಜ 'ಹುಟ್ಟು ಕಳ್ಳ'. ಮತ್ತೊಂದೆಡೆ 'ಲತ್ತೆ' ಸಹನಾ. ಇವರಿಬ್ಬರ ಹಿನ್ನಲೆಯೊಂದಿಗೆ ಶುರುವಾಗುವ 'ನಟರಾಜ ಸರ್ವೀಸ್' ಚಿತ್ರಕಥೆ ಹಾಸ್ಯಭರಿತ.

    ಸೆಕೆಂಡ್ ಹಾಫ್ ನಲ್ಲಿ ಟ್ವಿಸ್ಟೋ ಟ್ವಿಸ್ಟ್

    ಸೆಕೆಂಡ್ ಹಾಫ್ ನಲ್ಲಿ ಟ್ವಿಸ್ಟೋ ಟ್ವಿಸ್ಟ್

    ಚಿತ್ರದ ಎರಡನೇ ಅರ್ಧ ಹಲವು ಟ್ವಿಸ್ಟ್ ಗಳಿಂದ ಕೂಡಿದೆ. ತಾನು ಮಾಡದ ತಪ್ಪಿಗೆ ಆಕಸ್ಮಿಕವಾಗಿ ಕಾಡಿಗೆ ಬರುವ ನಟರಾಜನಿಗೆ, ಯಾವುದೋ ಸಮಸ್ಯೆಗೆ ಸಿಲುಕಿರುವ ಸಹನಾ ಸಿಗುತ್ತಾಳೆ. ಅವಳ ಕಷ್ಟವನ್ನ ಬಗೆಹರಿಸುವ ನಿಟ್ಟಿನಲ್ಲಿ ಸಹನಾಗೆ ನಟರಾಜ ಜೊತೆಯಾಗುತ್ತಾನೆ. ಅಲ್ಲಿಂದ ಇಬ್ಬರಿಗೂ ಸಂಕಟ ಶುರು. ಮುಂದೆ ನಡೆಯುವ ಹಾವು-ಏಣಿ ಆಟವನ್ನ ನೀವು ಚಿತ್ರಮಂದಿರದಲ್ಲೇ ನೋಡಿ...

    ಶರಣ್ ಆಕ್ಟಿಂಗ್ ಸೂಪರ್

    ಶರಣ್ ಆಕ್ಟಿಂಗ್ ಸೂಪರ್

    'ನಟರಾಜ ಸರ್ವೀಸ್' ಚಿತ್ರದಲ್ಲಿ ಶರಣ್ ಆಕ್ಟಿಂಗ್ ಗೆ ಫುಲ್ ಮಾರ್ಕ್ಸ್. ಆರಂಭದಿಂದ ಹಿಡಿದು, ಕೊನೆಯ ದೃಶ್ಯದ ವರೆಗೂ ಶರಣ್ ತನ್ನ ಅಭಿನಯ ಹಾಗೂ ಪಂಚಿಂಗ್ ಡೈಲಾಗ್ಸ್ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಾರೆ. ಇಡೀ ಚಿತ್ರವನ್ನೇ ಶರಣ್ ಒಬ್ಬರೇ ಆವರಿಸಿಕೊಂಡಿದ್ದಾರೆ ಅಂದ್ರೆ ತಪ್ಪಾಗಲ್ಲ.

    'ಮಯೂರಿ' ಅಭಿನಯ ಹೇಗಿದೆ

    'ಮಯೂರಿ' ಅಭಿನಯ ಹೇಗಿದೆ

    'ಲತ್ತೆ ಸಹಾನ' ಪಾತ್ರದಲ್ಲಿ ಮಯೂರಿ ಇಷ್ಟವಾಗುತ್ತಾರೆ. ಚಿತ್ರದಲ್ಲಿ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿರುವ ಮಯೂರಿ ಪಟ ಪಟ ಅಂತ ಡೈಲಾಗ್ ಹೊಡೆಯುತ್ತಾರೆ. ಆದರೂ ಅವರ ಆಕ್ಟಿಂಗ್ ನಲ್ಲಿ ಏನೋ ಮಿಸ್ಸಿಂಗ್ ಅನ್ನಿಸುತ್ತೆ.

    ಉಳಿದವರ ಅಭಿನಯದ ಹೇಗಿದೆ

    ಉಳಿದವರ ಅಭಿನಯದ ಹೇಗಿದೆ

    ಉಳಿದಂತೆ ಸಹನಾಗೆ 'ಲತ್ತೆ' ಬಿಡಿಸುವ ಫಕೀರನ ಪಾತ್ರಧಾರಿ ರವಿಶಂಕರ್ ಮೋಡಿ ಮಾಡುತ್ತಾರೆ. ಪೊಲೀಸ್ ಪಾತ್ರದಲ್ಲಿ ರಾಕ್ ಲೈನ್ ವೆಂಕಟೇಶ್ ಅಭಿನಯ ಖಡಕ್ ಆಗಿದೆ.

    ಸಂಗೀತ ಹೇಗಿದೆ?

    ಸಂಗೀತ ಹೇಗಿದೆ?

    'ನಟರಾಜ್ ಸರ್ವೀಸ್' ಚಿತ್ರದ ಪ್ಲಸ್ ಪಾಯಿಂಟ್ ಅಂದ್ರೆ, ಚಿತ್ರದ ಸಂಗೀತ. ಅನೂಪ್ ಸೀಳಿನ್ ಅವರ ಹಾಡುಗಳು ತೆರೆಮೇಲೆ ನೋಡೋದಕ್ಕೆ ಚೆನ್ನಾಗಿದೆ. ಚಿತ್ರದ ಹಿನ್ನಲೆ ಸಂಗೀತವೂ ಕಥೆಗೆ ಪೂರಕವಾಗಿದೆ.

    ಕಾಮಿಡಿ ಬೇಕಿತ್ತು

    ಕಾಮಿಡಿ ಬೇಕಿತ್ತು

    ಶರಣ್ ಚಿತ್ರ ಅಂದ್ರೆ, ಅಲ್ಲಿ ಹೆಚ್ಚು ಕಾಮಿಡಿ ಇರುತ್ತೆ ಎಂಬುದು ಜನರ ನಿರೀಕ್ಷೆ. ಆದ್ರೆ, 'ನಟರಾಜ ಸರ್ವೀಸ್' ಚಿತ್ರದಲ್ಲಿ ಪ್ರೇಕ್ಷಕರು ಎಕ್ಸ್ ಪೆಕ್ಟ್ ಮಾಡುವಂತಹ ಕಾಮಿಡಿ ಕಾಣಿಸಲ್ಲ. ಶರಣ್ ಅವರ ಪಂಚಿಂಗ್ ಡೈಲಾಗ್ ಗಳು ಚಿತ್ರಕ್ಕೆ ಮೈಲೇಜ್ ಹೆಚ್ಚಿಸಿದೆ.

    ನಿರ್ದೇಶನ ಹೇಗಿದೆ?

    ನಿರ್ದೇಶನ ಹೇಗಿದೆ?

    'ನಟರಾಜ ಸರ್ವೀಸ್' ಪವನ್ ಒಡೆಯರ್ ಸಿನಿಮಾ ಎನ್ನುವಷ್ಟು ಮೋಡಿ ಮಾಡಿಲ್ಲ. ಚಿತ್ರಕಥೆ ಉತ್ತಮವಾಗಿದ್ದರೂ, ಕೆಲವು ಸನ್ನಿವೇಶಗಳಲ್ಲಿ ಬೋರ್ ಎನ್ನಿಸುತ್ತದೆ. ಹೀಗಾಗಿ, ನಿರ್ದೇಶಕರು ಮತ್ತಷ್ಟು ಕಾಳಜಿ ವಹಿಸಬಹುದಿತ್ತು.

    ಫೈನಲ್ ಸ್ಟೇಟ್ ಮೆಂಟ್

    ಫೈನಲ್ ಸ್ಟೇಟ್ ಮೆಂಟ್

    'ನಟರಾಜ ಸರ್ವೀಸ್' ಚಿತ್ರದಲ್ಲಿ ಮನರಂಜನೆಗೆ ಮೋಸ ಇಲ್ಲ. ಶರಣ್, ಕಾಮಿಡಿ ಕಿಂಗ್ ಅಂತ ಇಲ್ಲೂ ಪ್ರೂವ್ ಮಾಡಿದ್ದಾರೆ. ಯಾವುದೇ ನಿರೀಕ್ಷೆ ಇಲ್ಲದೇ 'ನಟರಾಜ ಸರ್ವೀಸ್' ನೋಡಬಹುದು.

    ಫಸ್ಟ್ ಡೇ ವಿಡಿಯೋ ನೋಡಿ

    ಫಸ್ಟ್ ಡೇ ವಿಡಿಯೋ ನೋಡಿ

    'ನಟರಾಜ ಸರ್ವೀಸ್' ಚಿತ್ರವನ್ನ ಮೊದಲ ದಿನ ನೋಡಿದ, ಪ್ರೇಕ್ಷಕರ ರೆಸ್ ಪಾನ್ಸ್ ಹೇಗಿತ್ತು ಅಂತ ತಿಳಿಯಲು ಈ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.

    English summary
    Kannada Actor Sharan and Mayuri starrer 'Nataraja Service' has hit the screens today (November 17th). The movie is a Complete entertainer and a treat for Sharan fans. Here is the complete review of 'Nataraja Service'
    Saturday, September 29, 2018, 15:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X