»   » 'ಶಿವಲಿಂಗ' ಚಿತ್ರ ಹೇಗಿದೆ? ವಿಮರ್ಶಕರು ಏನಂತಾರೆ?

'ಶಿವಲಿಂಗ' ಚಿತ್ರ ಹೇಗಿದೆ? ವಿಮರ್ಶಕರು ಏನಂತಾರೆ?

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ವೇದಿಕಾ ಅಭಿನಯದ 'ಶಿವಲಿಂಗ' ಚಿತ್ರ ಈ ವಾರ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಪಿ.ವಾಸು ನಿರ್ದೇಶನದ ಈ ಚಿತ್ರಕ್ಕೆ ಅದ್ಭುತ ಓಪನ್ನಿಂಗ್ ಸಿಕ್ಕಿದೆ.

'ಆಪ್ತಮಿತ್ರ' ರೇಂಜಿಗೆ ಇರುವ 'ಶಿವಲಿಂಗ' ಸಿನಿಮಾ ಕಂಡು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿವಣ್ಣನ ಅಭಿಮಾನಿಗಳಿಗಂತೂ ಹಬ್ಬದೂಟ ಆಗಿರುವ 'ಶಿವಲಿಂಗ' ಸಿನಿಮಾ ವಿಮರ್ಶಕರಿಗೆ ಇಷ್ಟವಾಯ್ತಾ? ['ಶಿವಲಿಂಗ' ವಿಮರ್ಶೆ; ಪಿ.ವಾಸು ನಿರ್ದೇಶನದ ಮತ್ತೊಂದು 'ಆಪ್ತಮಿತ್ರ']


ಕರ್ನಾಟಕದ ಜನಪ್ರಿಯ ದಿನ ಪತ್ರಿಕೆಗಳು ಪ್ರಕಟಿಸಿರುವ 'ಶಿವಲಿಂಗ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....


'ಆಪ್ತ' ನೆರಳು! - ಪ್ರಜಾವಾಣಿ

‘ಆಪ್ತಮಿತ್ರ', ‘ಆಪ್ತರಕ್ಷಕ' ಚಿತ್ರಗಳ ಮುಂದುವರಿದ ಭಾಗದಂತೆ ಕಾಣಿಸುವುದು ‘ಶಿವಲಿಂಗ' ಚಿತ್ರದ ಅಗ್ಗಳಿಕೆ ಹಾಗೂ ಮಿತಿ. ಹಿಂದಿನ ಎರಡು ಚಿತ್ರಗಳಂತೆಯೇ ‘ಶಿವಲಿಂಗ' ಚಿತ್ರಕ್ಕೆ ಪ್ರೇಕ್ಷಕನ ಕುತೂಹಲವನ್ನು ಕೊನೆಯವರೆಗೂ ಹಿಡಿದಿಡುವ ಗುಣವಿದೆ. ಪ್ರೇತಾತ್ಮಗಳ ಕಥನಗಳ ಮೂಲಕ ಮನುಷ್ಯರ ಅಂತರಂಗವನ್ನು ಶೋಧಿಸುವ ವಾಸು ಅವರ ಪ್ರಯತ್ನ ಈ ಚಿತ್ರದಲ್ಲೂ ಮುಂದುವರಿದಿದೆ. ರೈಲಿನಲ್ಲಿ ಕೊಲೆಯಾದ ತರುಣನೊಬ್ಬ ತನ್ನ ಕೊಲೆಗೆ ಸೇಡು ತೀರಿಸಿಕೊಳ್ಳುವುದು ಚಿತ್ರದ ಕಥೆ. ಕೊಲೆಯಾದ ವ್ಯಕ್ತಿಗೆ ತನ್ನನ್ನು ಕೊಂದವರು ಯಾರೆನ್ನುವುದು ತಿಳಿಯದಿರುವುದು ಕಥೆಯಲ್ಲಿನ ಕೌತುಕ. ತನಿಖೆಯನ್ನು ಕೈಗೆತ್ತಿಕೊಂಡ ಸಿಐಡಿ ಅಧಿಕಾರಿಯನ್ನು ಬೆನ್ನುಬಿದ್ದು ತನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ಪ್ರೇತಾತ್ಮ ಪ್ರಯತ್ನಿಸುತ್ತದೆ - ರಘುನಾಥ ಚ.ಹ.


ಥ್ರಿಲ್ ನೀಡುವ ಸಸ್ಪೆನ್ಸ್ 'ಶಿವಲಿಂಗ' - ವಿಜಯ ಕರ್ನಾಟಕ

ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾಗಳಿಗೆ ಪಿ.ವಾಸು ಹೇಳಿ ಮಾಡಿಸಿದ ನಿರ್ದೇಶಕ. ಪ್ರೇಕ್ಷಕನಿಗೆ ಪ್ರತಿ ಕ್ಷಣವೂ ಥ್ರಿಲ್ ನೀಡುವ ಶಕ್ತಿ ಅವರ ಸಿನಿಮಾಗಳಿಗಿದೆ. ಅದೇ ಹಾದಿಯಲ್ಲೇ ಮೂಡಿ ಬಂದಿದೆ ಶಿವಲಿಂಗ ಚಿತ್ರ. ಇದೇ ಮೊದಲ ಬಾರಿಗೆ ಇವರ ನಿರ್ದೇಶನದ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ನಟಿಸಿದ್ದರಿಂದ ಥ್ರಿಲ್ಲರ್ ಕತೆಗೆ ಇನ್ನಷ್ಟು ಶಕ್ತಿ ಬಂದಿದೆ. ಸಿನಿಮಾ ಮುಗಿಯುವತನಕ ಕುತೂಹಲ ಮೂಡಿಸುತ್ತಲೇ ಚಿತ್ರ ಸಾಗುತ್ತದೆ - ಶರಣು ಹುಲ್ಲೂರು


ಮಿಸ್ಟರಿಯ ಜಾಡು, ದೆವ್ವದ ಹಾಡು, ಪಾರಿವಾಳದ ಗೂಡು - ಉದಯವಾಣಿ

'ಶಿವಲಿಂಗ' ಚಿತ್ರದ ಹೈಲೈಟ್ ಎಂದರೆ ಶಿವರಾಜ್ ಕುಮಾರ್. ಕಿಲಾಡಿ ಪೊಲೀಸ್ ಆಫೀಸರ್ ಆಗಿ, ಹೆಂಡತಿಯ ಸ್ಥಿತಿಗೆ ಮರುಗುವ ಪತಿಯಾಗಿ ಶಿವರಾಜ್ ಕುಮಾರ್ ಅಭಿನಯ ಚೆನ್ನಾಗಿದೆ. ವೇದಿಕಾ ಪಾತ್ರ ಚೆನ್ನಾಗಿದೆ. ಆದರೆ, ಅದಕ್ಕೆ ತಕ್ಕಂತ ಅಭಿನಯದ ಆಕೆಯಿಂದ ಬಂದಿಲ್ಲ. ಸಾಧು ಕೋಕಿಲ ಕೆಲವು ದೃಶ್ಯಗಳಲ್ಲಿ ಸಖತ್ ಮಜ ಕೊಡುತ್ತಾರೆ. ಇಲ್ಲಿ ಶಿವರಾಜ್ ಕುಮಾರ್ ಅಭಿಮಾನಕ್ಕಿಂತ ಹೆಚ್ಚಾಗಿ, ವಾಸು ಅವರ ಅಭಿಮಾನಿಯಾಗಿದ್ದರೆ ಈ ಚಿತ್ರವನ್ನು ಖಂಡಿತಾ ಮಿಸ್ ಮಾಡಬೇಡಿ - ಚೇತನ್ ನಾಡಿಗೇರ್


P Vasu delivers an entertaining mix - Bangalore Mirror

This is a film with the P Vasu touch. The director goes back to doing what he does best and makes a film that works only with a big star playing the lead. Shivalinga (the title has nothing to do with what is in the film) is an entertaining mixture of a thriller, suspense and horror. Of course, it calls for you to suspend your disbelief and go with the flow. Once that is done, it is a satisfying experience of the masala kind. The film's structure is basically that of Apthamitra but in a different setting - Shyam Prasad S


Shivalinga is an Engaging Mix - The New Indian Express

Using spirituality and scientific explanation while weaving the script tightly using comedy, suspense, music and near perfect characterisation, Vasu's penchant for horror finds a new personality with Shivalinga. Those who remember his character of Nagavalli in Apthamithra would merrily welcome his new character Sathya, a role played by Vedhika. The director has truthfully followed the success formula of Apthamitra, which had mass appeal and with the intention to capture a wider audience, he has blended in an intercaste marriage between a Hindu and Muslim as well - A Sharahdaa


English summary
Kannada Actor Shiva Rajkumar starrer 'Shivalinga' has received positive response from the critics. Here is the collection of reviews by Top News Papers of Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada