twitter
    For Quick Alerts
    ALLOW NOTIFICATIONS  
    For Daily Alerts

    ಲೂಸಿಯಾ : ಹೊಸತನಕ್ಕೆ ಸೋತ ಪ್ರೇಕ್ಷಕ, ಗೆದ್ದ ಸತೀಶ

    By Mahesh
    |

    ಹೊಸತನದ ಕನ್ನಡ ಚಿತ್ರಗಳನ್ನು ಎದುರು ನೋಡುತ್ತಿರುವ ಸಿನಿ ರಸಿಕರ ಜತೆಗೆ ಚಿತ್ರರಂಗದ ಉದ್ಯಮಿಗಳಿಗೂ ಕುತೂಹಲ ಹುಟ್ಟಿಸಿರುವ 'ಲೂಸಿಯಾ' ಚಿತ್ರ ರಾಜ್ಯದಾದ್ಯಂತ ಅಲ್ಲ ಭಾರತದಾದ್ಯಂತ ಬಿಡುಗಡೆಯಾಗುತ್ತಿರುವುದು ಸಂತೋಷದ ಸಂಗತಿ. ಲೂಸಿಯಾ ಸೃಷ್ಟಿಸಿರುವ 'ಹೈಪ್' ಗೆ ತಕ್ಕಂತೆ ಓಪನಿಂಗ್ ಸಿಕ್ಕಿರುವುದು ಸಂತಸದ ವಿಷಯ.

    ಪವನ್ ಕುಮಾರ್ ಆಕ್ಷನ್ ಕಟ್ ಹೇಳಿರುವ 'ಲೂಸಿಯಾ' ಚಿತ್ರದ ಹೆಗ್ಗಳಿಕೆ ಎಂದರೆ ಬಿಡುಗಡೆಗೂ ಮುನ್ನವೇ ಹಿಟ್ ಆಗಿರುವುದು! ಹೌದು ಈ ಚಿತ್ರ ಲಂಡನ್ ಅಂತಾರ್ರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿ ಎಲ್ಲರ ಗಮನಸೆಳೆದಿತ್ತು. ಈಗಾಗಲೆ ಚಿತ್ರದ ಆಡಿಯೋಗೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. [ಆಡಿಯೋ ವಿಮರ್ಶೆ ಓದಿ]

    ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಸನತ್ ಸುರೇಶ್ ಮತ್ತು ಪವನ್ ಕುಮಾರ್ ಸಂಕಲನ, ಹರ್ಷ, ಮುರಳಿ, ಸೌಮ್ಯ ಜಗನ್ ಮೂರ್ತಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಎಂ.ಕೆ.ಸುಬ್ರಹ್ಮಣ್ಯ.

    ನೀನಾಸಂ ಸತೀಶ್ ಅವರು ಪೂರ್ಣ ಪ್ರಮಾಣದ ನಾಯಕರಾಗಿರುವ ಈ ಚಿತ್ರಕ್ಕೆ ಶ್ರುತಿ ಹರಿಹರನ್, ಹಾರ್ದಿಕಾ ಶೆಟ್ಟಿ ನಾಯಕಿಯರು, ಅಚ್ಯುತಕುಮಾರ್, ಸಂಜಯ್, ಕೃಷ್ಣ, ರಿಷಬ್, ಬಾಲಾಜಿ ಮನೋಹರ್, ಆರ್ಯನ್, ಪೂರ್ಣಚಂದ್ರ, ಪ್ರಶಾಂತ್, ಭರತ್, ಮಹದೇವ್, ವಸುಧಾ, ಪವನ್ ಕುಮಾರ್, ಪ್ರಸಾದ್, ಅರಸು, ನಾರಾಯಣಭಟ್, ಗೌರೀಶ್, ಮಹೇಶ್, ಸತೀಶ್ ಮುಂತಾದವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಚಿತ್ರದ ಮೊದಲ ದಿನದ ಪ್ರದರ್ಶನದ ವರದಿ ಗಂಧದ ಗುಡಿ ಹುಡುಗರಿಂದ ಇಲ್ಲಿದೆ. ಚಿತ್ರದ ವಿಮರ್ಶೆಗಾಗಿ ಕಾಯುತ್ತಿರಿ. ಪ್ರಿವ್ಯೂ ನೋಡಿದ ಅನೇಕ ಗೆಳಯರು ಮತ್ತೊಮ್ಮೆ ಇವತ್ತಿಗೆ ಶೋಗೆ ಬಂದಿದ್ದು ವಿಶೇಷವಂತೆ ಮುಂದೆ ಓದಿ...

    ಈ ಚಿತ್ರ ಏಕೆ ನೋಡಬೇಕು

    ಈ ಚಿತ್ರ ಏಕೆ ನೋಡಬೇಕು

    "ಆಡಿಯನ್ಸ್ ಫಿಲ್ಮ್" ಎಂಬ ಹೊಸ ವಿಧಾನವೊಂದು ನಮ್ಮ ನಾಡಲ್ಲಿ ಚಿಗುರುತ್ತಿರುವುದು ಎಲ್ಲರ ಕುತೂಹಲ ಮತ್ತು ಮೆಚ್ಚುಗೆಗೆ ಕಾರಣವಾಗಿದೆ. ನಿರ್ದೇಶಕ ಪವನ್ ಕುಮಾರ್ ಅವರ ಪ್ರಯೋಗ ಶೀಲತೆ, ರಂಗಭೂಮಿ ಕಲಾವಿದ ನೀನಾಸಂ ಸತೀಶ್ ಮೊದಲ ಬಾರಿಗೆ ನಾಯಕರಾಗಿರುವುದು, ಶ್ರುತಿ ಹರಿಹರನ್ ಎಂಬ ಪ್ರತಿಭೆ ಇಲ್ಲೇ ಉಳಿಸಿಕೊಳ್ಳಲು, ಹೊಸ ಪ್ರಯತ್ನಕ್ಕೆ ಕನ್ನಡ ಪ್ರೇಕ್ಷಕರು ಯಾವಾಗಲೂ ಪ್ರೋತ್ಸಾಹ ನೀಡುತ್ತಾರೆ ಎಂಬ ಮಾತು ನಿಜವಾಗಿಸಲು ಈ ಚಿತ್ರ ಎಲ್ಲರೂ ನೋಡಬೇಕಾಗಿದೆ.

    ಓಪನಿಂಗ್ ಹೇಗಿದೆ

    ವಾರಾಂತ್ಯದಲ್ಲಿ ಚಿತ್ರ ತುಂಬಿದ ಗೃಹ ಪ್ರದರ್ಶನ ಕಾಣುವುದು ಗ್ಯಾರಂಟಿ ಎನ್ನಲಾಗಿದೆ. ನಗರ ಕೇಂದ್ರಿತ ಪ್ರದೇಶ ಬಿಟ್ಟು ಉಳಿದೆಡೆ ಚಿತ್ರಕ್ಕೆ ಹೇಗೆ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂಬುದು ಸ್ಪಷ್ಟವಾಗಿಲ್ಲ.

    ನಿರೂಪಣೆ ವಿಭಿನ್ನ

    ಕಥೆ ಸರಳ ಅದರೆ, ಪವನ್ ನಿರೂಪಣೆ ವಿಭಿನ್ನ, ಇಂಗ್ಲೀಷ್ ಸಬ್ ಟೈಟಲ್, ಪಾತ್ರಧಾರಿಗಳ ಬಳಕೆ, ಪ್ರತಿ ದೃಶ್ಯದ ಲೈಂಟಿಂಗ್, ನೀನಾಸಂ ಸತೀಶ್ ನಟನೆ ಒಮ್ಮೆಗೆ ಗಮನ ಸೆಳೆಯುತ್ತದೆ.

    ಕನಸು ಹಾಗೂ ನೈಜತೆಯಲ್ಲಿ ಎರಡು ಕಥೆ ಓಡುತ್ತದೆ. ಎರಡರಲ್ಲೂ ಸತೀಶ್ ಇರುತ್ತಾರೆ. ಆದರೆ, ಪ್ರೇಕ್ಷಕರಿಗೆ ಕನ್ ಫ್ಯೂಸ್ ಆಗದಂತೆ ದೃಶ್ಯ ನಿರೂಪಣೆ ಇದೆ

    ತಲೆಗೆ ಹುಳ ಬಿಟ್ಟರು

    ಮಧ್ಯಂತರ ತನಕ ಚಿತ್ರದ ತಲೆ ಬುಡ ಅರ್ಥವಾಗದಂತೆ ಕೆಲವು ಪ್ರೇಕ್ಷಕರು ಒದ್ದಾಡಿದರೂ ಸೀಟು ಬಿಟ್ಟು ಕದಲುವಂತಿಲ್ಲ. ಬಿಳಿ ಹುಡುಗಿಯರಿಗೆ ಕನ್ನಡ ಹೇಳಿಕೊಡುವ ಸತೀಶ ಪಾತ್ರಕ್ಕೆ ಬಹುಪರಾಕ್ ಸಿಕ್ಕಿದೆ.

    ಕನ್ನಡಲ್ಲಿ ಇಂಥದ್ದೊಂದು ಪ್ರಯೋಗಕ್ಕೆ ಪ್ರೇಕ್ಷಕರು ಸೋತಿದ್ದಾರೆ. ನಟನೆಯಲ್ಲಿ ಸತೀಶ ಮತ್ತೆ ಗೆದ್ದಿದ್ದಾರೆ.

    ಚಿತ್ರಕ್ಕೆ ಮೆಚ್ಚುಗೆ

    ಚಿತ್ರಕ್ಕೆ ಮೆಚ್ಚುಗೆ

    inception, fight club ಮಾದರಿಯ ಚಿತ್ರಗಳನ್ನು ಮೆಚ್ಚುವ ಪ್ರೇಕ್ಷಕರಿಗೆ ಲೂಸಿಯಾ ರಸದೌತಣವಾಗಲಿದೆ. ನಮ್ಮ ಪ್ರತಿಭೆಗಳು ಕೂಡಾ ಆ ಮಾದರಿ ಚಿತ್ರಗಳನ್ನು ಹೊರ ಹಾಕಬಲ್ಲರು ಎಂಬುದನ್ನು ಲೂಸಿಯಾ ನಿರೂಪಿಸಿದೆ.

    ಆದರೆ, ಸಾಮಾನಂತರವಾಗಿ ಸಾಗುವ ಕಥೆ ಪ್ರೇಕ್ಷಕರು ಹಾಗೂ ಗೊಂದಲಗಳ ನಡುವೆ ಹೋಯ್ದಾಟದಲ್ಲಿ ಯಾರಿಗೆ ಗೆಲುವು ಸಿಗುವುದೋ ಕಾದು ನೋಡಬೇಕಿದೆ. ಚಿತ್ರ ಬೋರ್ ಹೊಡೆಸದೆ ಇರಲು ಹಾಡುಗಳು ನೂರಕ್ಕೆ ನೂರು ಸಹಾಯಕವಾಗಿದೆ. ಇಲ್ಲದಿದ್ದರೆ ಖಂಡಿತವಾಗಿಯೂ ಮಧ್ಯಂತರ ನಂತರ ಯಾರೂ ಚಿತ್ರಮಂದಿರದಲ್ಲಿ ಉಳಿಯುವ ಧೈರ್ಯ ಮಾಡುತ್ತಿರಲಿಲ್ಲ.

    ಶ್ಯಾಮ್ ಟ್ವೀಟ್ಸ್

    ಚಿತ್ರದಲ್ಲಿರುವ ಕನ್ ಫ್ಯೂಸಿಂಗ್ ಎಲ್ಲರನ್ನು ಮೆಚ್ಚಿಸಲು ಸಾಧ್ಯವಿಲ್ಲ. 2.5/5

    English summary
    Director Pawan Kumar's Lucia Kannada film gets good opening in Multiplexes than in single screen thaters. Lucia likely to pull the audience in coming days reports Gandhanda Gudi forum
    Friday, September 6, 2013, 13:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X