»   » 'ನಮ್ ದುನಿಯಾ ನಮ್ ಸ್ಟೈಲ್' ಚಿತ್ರ ವಿಮರ್ಶೆ

'ನಮ್ ದುನಿಯಾ ನಮ್ ಸ್ಟೈಲ್' ಚಿತ್ರ ವಿಮರ್ಶೆ

By: ಉದಯರವಿ
Subscribe to Filmibeat Kannada
Rating:
2.0/5

ನವಿರು ಪ್ರೇಮಕಥೆಗಳಿಗೆ ಹೆಸರಾಗಿರುವ ಪ್ರೀತಂ ಗುಬ್ಬಿ ಅವರ ಮತ್ತೊಂದು ಕಾಣಿಕೆ ಇದು. ಒಂದೇ ಚಿತ್ರದಲ್ಲಿ ಮೂರು ಕಥೆಗಳನ್ನು ಹೇಳಲು ಹೊರಟ ಪ್ರಯತ್ನವಿದು. ಆದರೆ ಅವರ ಒಂದೇ ಏಟಿಗೆ ಮೂರು ಹಕ್ಕಿ ಹೊಡೆಯುವ ಪ್ರಯತ್ನ ಸಾಕಾರವಾಗಿಲ್ಲ.

ಮೂವರು ಹದಿಹರೆಯದ ಸ್ನೇಹಿತರ (ಲಿಖಿತ್, ಕೃಷ್ಣ, ವಿನಾಯಕ ಜೋಷಿ) ಪ್ರೇಮಗಾಥೆ ಇದು. ಮಾಯಾ (ಸೋನಿಯಾ ಗೌಡ) ಎಂಬ ಹುಡುಗಿಯನ್ನು ಪ್ರೀತಂ (ಲಿಖಿತ್) ಪ್ರೀತಿಸುತ್ತಿರುತ್ತಾನೆ. ಆಕೆಗೆ ಇನ್ನೇನು ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳಬೇಕು ಅನ್ನುವಷ್ಟರಲ್ಲಿ ಆಕೆ ಮಲೇಷಿಯಾಗೆ ಹಾರುತ್ತಾಳೆ.

ಪ್ರೀತಂ ಜೊತೆ ಆತನ ಇಬ್ಬರು ಗೆಳೆಯರೂ ಮಲೇಷಿಯಾಗೆ ಹೋಗುತ್ತಾರೆ. ಆದರೆ ಮಾಯಾ ಮತ್ತೊಬ್ಬನೊಂದಿಗೆ ಲಿವ್ ಇನ್ ಸಂಬಂಧ ಇಟ್ಟುಕೊಂಡುತ್ತಿರುತ್ತಾಳೆ. ಪ್ರೀತಂನ ಇಬ್ಬರು ಕುಚಿಕು ಗೆಳೆಯರಾದ ಯೋಗಿ (ಕೃಷ್ಣ) ಹಾಗೂ ಉಮೇಶ್ ಶೆಟ್ಟಿ (ವಿನಾಯಕ ಜೋಷಿ) ಅವರಿಗೆ ಮಲೇಷಿಯಾದಲ್ಲಿ ಲವ್ ಶುರುವಾಗುತ್ತದೆ.


ತಾವು ಪ್ರೀತಿಸಿದ ಹುಡುಗಿಯರು ಇವರ ಕೈಗೆ ಸಿಗುತ್ತಾರಾ ಎಂಬುದೇ ಚಿತ್ರದ ಒಟ್ಟಾರೆ ಕಥೆ. ಯುವ ಜನಾಂಗವನ್ನೇ ಉದ್ದೇಶವಾಗಿಟ್ಟುಕೊಂಡು ಹೆಣೆದ ಈ ಚಿತ್ರ ನಿಧಾನಗತಿಯ ಓಟದಿಂದಾಗಿ ಪ್ರೇಕ್ಷಕರು ಕುಳಿತಲ್ಲೇ ಚಡಪಡಿಸುವಂತಾಗುತ್ತದೆ.

ಇದೊಂಥರಾ ಬಾಲಿಶ ಕಥೆ ಅನ್ನಿಸಿದರೂ ಅಚ್ಚರಿಯಿಲ್ಲ. ಪೇಲವ ಅಭಿನಯದ ಜೊತೆಗೆ ಎಡವುತ್ತಾ ಕುಂಟುತ್ತಾ ಸಾಗುವ ಕಥೆಯ ಓಟಕ್ಕೆ ಬ್ರೇಕ್ ಹಾಕುತ್ತದೆ. ಕಾವ್ಯ ಶೆಟ್ಟಿ, ಮಿಲನಾ, ಸೋನಿಯಾ ಗೌಡ ಮೂವರು ನಾಯಕಿಯರಿದ್ದರೂ ಯಾರೊಬ್ಬರೂ ಗಮನಸೆಳೆಯುವ ಅಭಿನಯ ನೀಡಿಲ್ಲ.

ಕೃಷ್ಣ ನಾಗಪ್ಪ (ಮದರಂಗಿ) ಹೊರತುಪಡಿಸಿದರೆ ಉಳಿದ ನಾಯಕನಟರು ಅಷ್ಟಕ್ಕಷ್ಟೆ. ರಂಗಾಯಣ ರಘು, ಸಾಧುಕೋಕಿಲ ಅವರ ನಗಿಸುವ ಪ್ರಯತ್ನ ಸಂಪೂರ್ಣ ವಿಫಲವಾಗಿದೆ. ಚಿತ್ರದ ಒಂದೇ ಒಂದು ಗಮನಾರ್ಹ ಸಂಗತಿ ಎಂದರೆ ಸಂಭಾಷಣೆ.

ಎಚ್ ಸಿ ವೇಣು ಅವರ ಛಾಯಾಗ್ರಹಣ ಸಾಧಾರಣ. ಶಾನ್ ರೆಹಮಾನ್ ಅವರ ಸಂಗೀತವನ್ನು ಕೇಳಲು ಅಡ್ಡಿಯಿಲ್ಲ. ಉಳಿದಂತೆ ಚಿತ್ರದಲ್ಲಿ ಹೇಳಿಕೊಳ್ಳುವಂತಹ ಅಂಶಗಳಿಲ್ಲ. ಒಟ್ಟಾರೆಯಾಗಿ ಮೂರು ಮತ್ತೊಂದು ಚಿತ್ರ ಎಂಬಂತಾಗಿದೆ.

ಚಿತ್ರ: ನಮ್ ದುನಿಯಾ ನಮ್ ಸ್ಟೈಲ್
ನಿರ್ಮಾಣ: ಗುಬ್ಬಿ ಟಾಕೀಸ್
ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ: ಪ್ರೀತಂ ಗುಬ್ಬಿ
ಛಾಯಾಗ್ರಹಣ: ಎಚ್.ಸಿ.ವೇಣು
ಸಂಗೀತ: ಶಾನ್ ರೆಹಮಾನ್
ತಾರಾಬಳಗ: ಕೃಷ್ಣನಾಗಪ್ಪ, ವಿನಾಯಕಜೋಷಿ, ಲಿಖಿತ್ ಶೆಟ್ಟಿ, ಮಿಲನ ನಾಗರಾಜ್, ಕಾವ್ಯಾಶೆಟ್ಟಿ, ಸೋನಿಯಾ ಗೌಡ, ರಂಗಾಯಣರಘು, ಸಾಧುಕೋಕಿಲಾ ಇತರರು.

English summary
Pretham Gubbi Kannada film 'Nam Duniya Nam Style' review. It is a good-looking film but lacks a good story. NDNS movie story about Love and Friendship and it talks about three childhood friends.
Please Wait while comments are loading...