For Quick Alerts
  ALLOW NOTIFICATIONS  
  For Daily Alerts

  ಮನರಂಜನೆಗೆ ಮೋಸ ಮಾಡಲ್ಲ ರಜಿನಿ ಕಾಂತ

  By Rajendra
  |

  Rating:
  2.5/5
  ಎರಡೂವರೆ ಗಂಟೆ ಫ್ರೀಯಾಗಿದ್ದೀನಿ. ಸಿನಿಮಾ ನೋಡಿ ತುಂಬಾ ದಿನ ಆಯ್ತು. ಯಾವುದಾದರೂ ಸಿನಿಮಾ ನೋಡಲೇಬೇಕು ಎಂದಿದ್ದರೆ ತಪ್ಪದೆ ನೋಡಬಹುದಾದ ಚಿತ್ರ 'ರಜಿನಿ ಕಾಂತ'. ಎರಡೂವರೆ ಗಂಟೆಗಳ ಮನರಂಜನೆಗೆ ಮೋಸ ಮಾಡಲ್ಲ ರಜಿನಿ ಕಾಂತ.

  ರೀಮೇಕ್ ಜಮಾನಾದ ನಡುವೆ ನಿರ್ದೇಶಕ ಪ್ರದೀಪ್ ರಾಜ್ ಅವರ ಸ್ವಮೇಕ್ ಪ್ರಯೋಗವನ್ನು ಮೆಚ್ಚಲೇಬೇಕು. ರಜಿನಿ ಹಾಗೂ ಕಾಂತ ಎಂಬ ಇಬ್ಬರು ಅಣ್ಣತಮ್ಮಂದಿರ ಕಥೆ ಇದು. ಒಬ್ಬನಿಗೆ ಹುಟ್ಟಿನಿಂದಲೇ ಸೀಳುತುಟಿ ಸಮಸ್ಯೆ (ರಜನಿ) ಇರುತ್ತದೆ. ಇನ್ನೊಬ್ಬನದು ಸಾದಾಸೀದಾ ಜಾಯಮಾನ. ಸೂಪರ್ ಸ್ಟಾರ್ ರಜನಿಕಾಂತ್ ಗೂ ಈ ಚಿತ್ರಕ್ಕೂ ಎತ್ತಣಿಂದ ಎತ್ತಲೂ ಸಂಬಂಧವಿಲ್ಲ. ಆದರೆ ಚಿತ್ರದಲ್ಲಿ ರಜಿನಿ ಮತ್ತು ಕಾಂತ ಮಾತ್ರ ಸೂಪರ್ ಸ್ಟಾರ್ಸ್.

  ಆದರೆ ಅವರ ತಾಯಿಗೆ (ರೇಖಾ) ದೊಡ್ಡ ಮಗನ ಮೇಲೆ ಮಮಕಾರ ಹೆಚ್ಚು. ಇದರಿಂದ ಅಣ್ಣನಾದ ಕಾಂತನ ಬಗ್ಗೆ ಅಸೂಯೆ ಬೆಳೆಸಿಕೊಳ್ಳುತ್ತಾನೆ. ರಜಿನಿಗೆ ಸರಿಯಾಗಿ ಮಾತನಾಡಲು ಬರದಿದ್ದರೂ ಓದಿನಲ್ಲಿ ಚುರುಕು. ಆದರೆ ಕಾಂತ ಮಾತ್ರ ಉಂಡಾಗಿ ಗುಂಡ.

  ತಂದೆ ಇಲ್ಲದ ತನ್ನಿಬ್ಬರು ತಬ್ಬಲಿಗಳನ್ನು ತಾಯಿ ಬೆಳೆಸಿ ದೊಡ್ಡವರನ್ನಾಗಿ ಮಾಡುತ್ತಾರೆ. ಇವರಿಬ್ಬರೂ ದೊಡ್ಡವರಾದ ಮೇಲೂ ಕಾಂತನಿಗೆ ರಜಿನಿಯನ್ನು ಕಂಡರೆ ಆಗಲ್ಲ. ಕಡೆಗೆ ಇವರಿಬ್ಬರೂ ಬದಲಾಗುತ್ತಾರೆ. ಒಬ್ಬರನ್ನೊಬ್ಬರು ಇಷ್ಟಪಡುತ್ತಾರೆ. ಇದಕ್ಕೆ ಕಾರಣವಾದ ಘಟನೆ ಏನು ಎಂಬುದನ್ನು ಚಿತ್ರದಲ್ಲಿ ನೋಡಬಹುದು.

  ಚಿತ್ರ: ರಜಿನಿ ಕಾಂತ
  ನಿರ್ದೇಶನ: ಪ್ರದೀಪ್ ರಾಜ್
  ನಿರ್ಮಾಪಕ: ಗಂಡುಗಲಿ ಕೆ.ಮಂಜು
  ಸಂಗೀತ: ಅರ್ಜುನ್ ಜನ್ಯ
  ಸಂಕಲನ: ಪಳನಿವೇಲ್
  ಕೊರಿಯೋಗ್ರಫಿ: ಇಮ್ರಾನ್ ಸರ್ಧಾರಿಯಾ
  ಸಂಭಾಷಣೆ: ಮಂಜು ಮಾಂಡವ್ಯ
  ಛಾಯಾಗ್ರಹಣ: ಆರ್.ಗಿರಿ
  ಸಾಹಸ: ಕಲೈ
  ಪಾತ್ರವರ್ಗ: ದುನಿಯಾ ವಿಜಯ್, ಐಂದ್ರಿತಾ ರೇ, ಬುಲೆಟ್ ಪ್ರಕಾಶ್, ರೇಖಾ, ಜಸ್ಪೀರ್

  ದ್ವಿಪಾತ್ರಾಭಿನಯದಲ್ಲಿ ಗೆದ್ದ ವಿಜಯ್

  ದ್ವಿಪಾತ್ರಾಭಿನಯದಲ್ಲಿ ಗೆದ್ದ ವಿಜಯ್

  ಅಭಿನಯಕ್ಕೆ ಸವಾಲೊಡ್ಡುವಂತಹ ರಜನಿ ಪಾತ್ರವನ್ನು (ಸೀಳುತುಟಿ) ದುನಿಯಾ ವಿಜಯ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಸೀಳುತುಟಿ ಸಮಸ್ಯೆಯಿಂದ ಬಳಲುವವರ ಹಾವಭಾವ, ಧ್ವನಿ, ವೈಲಕ್ಷಣಗಳನ್ನು ಅವರ ಪಾತ್ರದಲ್ಲಿ ಕಾಣಬಹುದು. ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಎರಡೂ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

  ಸುದೀರ್ಘ ಎಳೆದಾಟ ತಪ್ಪಿಸಬಹುದಿತ್ತು

  ಸುದೀರ್ಘ ಎಳೆದಾಟ ತಪ್ಪಿಸಬಹುದಿತ್ತು

  ದ್ವಿತೀಯಾರ್ಧದಲ್ಲಿ ಒಂದು ಕಡೆ ಕಥೆ ಇನ್ನೇನು ಮುಗಿದೇ ಹೋಯಿತು ಎಂಬಂತಾಗುತ್ತದೆ. ಆದರೆ ಅಲ್ಲಿಂದ ಮತ್ತೆ ಶುರುವಾಗಿ ಕೊನೆಯಾಗುವ ಹೊತ್ತಿಗೆ ಕಥೆಗೆ ಒಂಚೂರು ಕತ್ತರಿ ಹಾಕಿದ್ದರೆ ಚೆನ್ನಾಗಿತ್ತು ಎನ್ನಿಸುತ್ತದೆ. ಈ ಸುದೀರ್ಘ ಎಳೆದಾಟವನ್ನು ತಪ್ಪಿಸಬಹುದಿತ್ತು. ಒಳ್ಳೆ ಕಥೆ ಇದೆ ಆದರೆ ನಿರೂಪಣೆಯಲ್ಲಿ ಎಡವಿದ್ದಾರೆ.

  ಯಾರ ಪಾತ್ರಕ್ಕೆ ಎಷ್ಟು ಮಾರ್ಕ್ಸ್

  ಯಾರ ಪಾತ್ರಕ್ಕೆ ಎಷ್ಟು ಮಾರ್ಕ್ಸ್

  ಜಂಗ್ಲಿ ಚಿತ್ರದ ಬಳಿಕ ಐಂದ್ರಿತಾ ರೇ ಹಾಗೂ ವಿಜಿ ಒಟ್ಟಿಗೆ ಅಭಿನಯಿಸಿರುವ ಚಿತ್ರವಿದು. ಇಬ್ಬರ ರಸಾಯನಶಾಸ್ತ್ರ ಚೆನ್ನಾಗಿಯೇ ವರ್ಕ್ ಔಟ್ ಆಗಿದೆ. ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ವಿಜಿ ಮೇಲೆ ಮಲಗಲ್ಲ ಎಂದು ಕಿರಿಕಿರಿ ಮಾಡಿಕೊಂಡಿದ್ದ ಐಂದ್ರಿತಾ, ಲವ್ ಸೀನ್ ಗಳಿಗೆ ಚೆನ್ನಾಗಿಯೇ ಅಭಿನಯಿಸಿದ್ದಾರೆ. ಆದರೆ ಅಭಿನಯದಲ್ಲಿ ಸೆಕೆಂಡ್ ಕ್ಲಾಸ್. ತಮಿಳು ಹಾಗೂ ಮಲಯಾಳಂ ಚಿತ್ರಗಳ ಹಿರಿಯ ತಾರೆ ರೇಖಾ ಅವರು ತಾಯಿ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಬುಲೆಟ್ ಪ್ರಕಾಶ್ ತಮ್ಮ ಎಂದಿನ ಶೈಲಿಗಿಂತ ಒಂಚೂರು ಡಿಫರೆಂಟ್ ಪಾತ್ರ. ಉಳಿದ ಪಾತ್ರಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ.

  ತಾಂತ್ರಿಕವಾಗಿ ಚಿತ್ರ ಹೇಗಿದೆ?

  ತಾಂತ್ರಿಕವಾಗಿ ಚಿತ್ರ ಹೇಗಿದೆ?

  ಒಟ್ಟು ಐದು ಹಾಡುಗಳಲ್ಲಿ ಒಂದೋ ಎರಡು ಹಾಡುಗಳು ಇಷ್ಟವಾಗಬಹುದು. ಅರ್ಜುನ್ ಜನ್ಯ ಸಂಗೀತದಲ್ಲಿ ಹೊಸತನವಿಲ್ಲ. ಆರ್ ಗಿರಿ ಅವರ ಛಾಯಾಗ್ರಹಣ ಸಾಧಾರಣ. ಇದ್ದದ್ದರಲ್ಲಿ ಇಮ್ರಾನ್ ಸರ್ಧಾರಿಯಾ ಅವರ ಕೊರಿಯೋಗ್ರಫಿಯೇ ಪರ್ವಾಗಿಲ್ಲ ಅನ್ನಿಸುತ್ತದೆ. ಮಂಜು ಮಾಂಡವ್ಯ ಅವರ ಸಂಭಾಷಣೆ ಓಕೆ. ಪ್ರದೀಪ್ ರಾಜ್ ಅವರ ನಿರ್ದೇಶನದ ಬಗ್ಗೆ ಎರಡು ಮಾತಿಲ್ಲ. ಪಳನಿವೇಲ್ ಅವರ ಸಂಕಲನ ಲೆಕ್ಕತಪ್ಪಿಲ್ಲ.

  ಇಷ್ಟಕ್ಕೂ ಚಿತ್ರ ನೋಡಬಹುದೇ?

  ಇಷ್ಟಕ್ಕೂ ಚಿತ್ರ ನೋಡಬಹುದೇ?

  ಖಂಡಿತವಾಗಿ ನೋಡಬಹುದಾದ ಚಿತ್ರ. ಒಂಚೂರು ವಿಭಿನ್ನ ಕಥೆ ಇದೆ. ಒಂದಷ್ಟು ಮಾಸ್ ಮಸಾಲಾ ಅಂಶಗಳು ಇವೆ. ಅಣ್ಣತಮ್ಮ, ತಾಯಿ ಸೆಂಟಿಮೆಂಟ್ ಇದೆ. ಕುಟುಂಬ ಸಮೇತವಾದರೂ ಸರಿ, ಗೆಳೆಯ/ಗೆಳತಿಯರ ಸಮೇತವಾದರೂ ಸರಿ. ಒಮ್ಮೆ ನೋಡಿ ಬರಬಹುದಾದ ಚಿತ್ರ.

  English summary
  Review of Kannada film Rajani Kantha. Actor Duniya Vijay plays a double role Rajani and Kantha with one of the characters is born with a cleft palate. The movie has generated a good hype through trailers and songs, not to forget his recent personal life issues. A good story lost due to bad narration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X