»   » ವಿಮರ್ಶೆ: ಪ್ರೀತಿಯಲ್ಲಿ ಸೋತವರಿಗೆ 'ಆ ಎರಡು ವರ್ಷ'ಗಳಲ್ಲಿ ಸ್ಫೂರ್ತಿದಾಯಕ ಸಂದೇಶ

ವಿಮರ್ಶೆ: ಪ್ರೀತಿಯಲ್ಲಿ ಸೋತವರಿಗೆ 'ಆ ಎರಡು ವರ್ಷ'ಗಳಲ್ಲಿ ಸ್ಫೂರ್ತಿದಾಯಕ ಸಂದೇಶ

Posted By:
Subscribe to Filmibeat Kannada

ಎರಡು ವರ್ಷಗಳ ಹುಡುಗ-ಹುಡುಗಿ ಇಬ್ಬರ ಪ್ರೇಮದಲ್ಲಿ ಬಿರುಕು ಉಂಟಾಗಿ ಬ್ರೇಕಪ್ ಆಗುತ್ತದೆ. ಅದನ್ನು ಲವ್, ಬ್ರೇಕಪ್ ಮತ್ತು ??? ಎಂದು ಬರೆಯಬಹುದು. ಈ ಬ್ರೇಕಪ್ ಗೆ ಹುಡುಗಿಯೇ ಕಾರಣ ಎಂದು ತಿಳಿದಾಗ.. ಈ ಪ್ರಶ್ನಾರ್ಥಕ ಚಿಹ್ನೆಗಳಿಗೆ ಹಲವರು ತಮ್ಮೊಳಗೆ ಬ್ರೇಕಪ್ ಆದ ಮೇಲೆ ಮುಂದೇನಾಗಬಹುದು ಎಂಬುದಕ್ಕೆ ಉತ್ತರ.. 'ಹುಡುಗ ದೇವದಾಸ್ ತರ ಗಡ್ಡ ಬಿಡುತ್ತಾನೆ, ಆತ್ಮಹತ್ಯೆ ಮಾಡಿಕೊಳ್ಳಬಹುದು. ಇಬ್ಬರಿಗೆ ಹೊಸ ಲವರ್ ಗಳು ಸಿಗಬಹುದು, ಹುಡುಗ ಕೋಪಗೊಂಡು ಹುಡುಗಿ ಮುಖಕ್ಕೆ ಆಸಿಡ್ ಹಾಕಬಹುದು. ಹತ್ಯೆಯಾಗಬಹುದು' ಹೀಗೆ ಇನ್ನೂ ಹಲವು ಟ್ರ್ಯಾಜಿಡಿ ಎಂಡಿಂಗ್‌ಗಳೇ ಕಣ್ಣಮುಂದೆ ಬರುತ್ತವೆ.

ಸಮಾಜದಲ್ಲಿ ನಡೆಯುತ್ತಿರುವುದು ಅದೇ ಅಲ್ಲವೇ ಎಂಬ ಸಮರ್ಥನೆ ಹಲವರದ್ದು ಆಗಿರಬಹುದು. ಆದರೆ ಇದಕ್ಕೆಲ್ಲಾ ವಿರುದ್ಧವಾಗಿ 'ಆ ಎರಡು ವರ್ಷಗಳು' ಚಿತ್ರದಲ್ಲಿ ಅತ್ಯುತ್ತಮವಾದ ಸಂದೇಶವನ್ನು ನಿರ್ದೇಶಕ ಬಿ ಮಧುಸೂದನ್ ನೀಡಿದ್ದಾರೆ. ಈ ಚಿತ್ರದ ಪೂರ್ಣ ವಿಮರ್ಶೆ ಈ ಕೆಳಗಿನಂತಿದೆ.

ಚಿತ್ರ: 'ಆ ಎರಡು ವರ್ಷಗಳು'
ನಿರ್ಮಾಣ: ರಿಷಿಕಾ ಮಧುಸೂದನ್
ಕಥೆ-ಚಿತ್ರಕಥೆ-ನಿರ್ದೇಶನ: ಬಿ ಮಧುಸೂದನ್
ಸಂಗೀತ: ಅನೂಪ್ ಸೀಳಿನ್
ತಾರಾಬಳಗ: ರೇಣುಕ್ ಮಠದ್, ಅಮಿತ್ ಕುಲಾಳ್, ರಾಮಕೃಷ್ಣ, ತ್ರಿವೇಣಿ ಮತ್ತು ಇತರರು

ನವಿರು ಪ್ರೇಮಕಥೆ

ಇಬ್ಬರು ಯಂಗ್ ಕಪಲ್ಸ್‌ಗಳ ನವಿರು ಪ್ರೇಮಕಥೆ 'ಆ ಎರಡು ವರ್ಷಗಳು'. ಸಿನಿಮಾ ಟೈಟಲ್ ನಲ್ಲಿಯೇ ಚಿತ್ರಕಥೆ ಅಡಗಿದ್ದು, ಎರಡು ವರ್ಷಗಳಲ್ಲಿ ಈ ಇಬ್ಬರು ಪ್ರೇಮಿಗಳು ಭೇಟಿಯಾಗಿದ್ದು ಹೇಗೆ, ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ, ನಂತರ ಅವರ ಪ್ರೇಮದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದೇ ಚಿತ್ರಕಥೆ. ಇಂತಹ ಪ್ರೇಮ ಕಥೆಗಳ ಸಿನಿಮಾಗಳು ಬಂದಿವೆಯಲ್ಲ ಅಂದು ಕೊಂಡರೂ ಈ ಚಿತ್ರ ಅಂತಹ ಚಿತ್ರಗಳಿಗಿಂತ ವಿಭಿನ್ನ ಎನ್ನುವುದು ತಿಳಿಯುವುದು ಚಿತ್ರ ನೋಡಿದ ಮೇಲೆಯೇ.

ಪ್ರೇಮಕಥೆಗೆ ಅಂತ್ಯದಲ್ಲಿ ಟ್ವಿಸ್ಟ್

ಸಾಮಾನ್ಯವಾಗಿ ಪ್ರೇಮಕಥೆ ಎಂದಮೇಲೆ ನಾಯಕ ಮತ್ತು ನಾಯಕಿಯ ಲವ್‌ಗೆ ಫ್ಯಾಮಿಲಿ ಅಥವಾ ಯಾರಾದರೂ ಒಬ್ಬರು ವಿಲನ್ ಎದುರಾಗುತ್ತಾರೆ ಎಂಬುದು ಸಿನಿಮಾಗಳ ಸಿದ್ಧ ಸೂತ್ರ. ಆದರೆ ಈ ಚಿತ್ರದಲ್ಲಿ ಪ್ರೇಮಿಗಳ ಮನಸ್ಸುಗಳೇ ನಿಜವಾದ ವಿಲನ್‌ ಎಂಬುದನ್ನು ಸಂಭಾಷಣೆಯ ಮೂಲಕ ನಿರೂಪಿಸಲಾಗಿದೆ. ಅದು ಹೇಗೆ ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಭೇಟಿ ಕೊಡಿ.

ಸಂಭಾಷಣೆ ಮತ್ತು ಕಥೆ ಚಿತ್ರದ ಪ್ಲಸ್ ಪಾಯಿಂಟ್

'ಆ ಎರಡು ವರ್ಷಗಳ' ನಿಜವಾದ ಹೀರೋ ಚಿತ್ರಕಥೆ, ಉಳಿದವರೆಲ್ಲಾ ಪಾತ್ರಧಾರಿಗಳು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಚಿತ್ರನೋಡಿದ ಪ್ರೇಕ್ಷಕನಿಗೂ ಅನಿಸುತ್ತದೆ. ಈ ಸೊಗಸಾದ ಪ್ರೇಮಕತೆಯಲ್ಲಿ ಕಪಲ್ಸ್ ಗಳಾದ ವರುಣ್(ರೇಣು) ಮತ್ತು ವರ್ಷಾ(ಅಮಿತಾ ಕುಲಾಲ್) ನಡುವಿನ ಸಂಭಾಷಣೆ ಚಿತ್ರವನ್ನು ಆಸಕ್ತಿಯಿಂದ ನೋಡಿಸಿಕೊಳ್ಳುತ್ತದೆ.

ರೇಣುಕ್ ಮತ್ತು ಅಮಿತಾ ಕುಲಾಲ್ ಅಭಿನಯ

ಲವರ್ ಬಾಯ್ ರೇಣುಕ್ ಮುಗ್ಧ ಮತ್ತು ಸ್ವಲ್ಪ ಮುಜುಗರದ ಸ್ವಭಾವವಾದರೂ ಆ ಗುಣದಿಂದಲೇ ಪ್ರೇಕ್ಷಕನಿಗೆ ತುಂಬಾ ಇಷ್ಟವಾಗುತ್ತಾರೆ. ನಾಯಕಿ ಅಮಿತಾ ಚಿತ್ರಪೂರ್ಣ ತಮ್ಮ ಡೈಲಾಗ್‌ಗಳಿಂದಲೇ ಕಚಗುಳಿ ಇಡುತ್ತಾರೆ. ಅಲ್ಲದೇ ನಕ್ಕಾಗ, ಅತ್ತಾಗ, ಕೋಪಿಸಿಕೊಂಡಾಗ, ಸೈಲೆಂಟಾಗಿ ಇದ್ದರೂ ಆಕರ್ಷಿಸುತ್ತಾರೆ. ಚಿತ್ರ ಪೂರ್ಣ ಇವರ ಜರ್ನಿ ಮುಂದೇನಾಗಬಹುದು ಎಂಬ ಕುತೂಹಲವನ್ನು ಕೊನೆಯವರೆಗೂ ಕಾಡುತ್ತದೆ.

ಇತರರು

ಚಿತ್ರದ ಸೆಕೆಂಡ್ ಆಫ್‌ನಿಂದ ಹಿರಿಯ ನಟ ರಾಮಕೃಷ್ಣ ಮತ್ತು ಧಾರಾವಾಹಿ ನಟಿ ತ್ರಿವೇಣಿ ರವರು ಹಿರಿಯ ವಯಸ್ಸಿನಲ್ಲಿ ಒಂದಾದ ಪ್ರೇಮಿಗಳಾಗಿ ಕಾಣಿಸಿಕೊಳ್ಳುತ್ತಾರೆ. ನಿಜವಾದ ಪ್ರೀತಿ ಹೀಗೂ ಇರುತ್ತದಾ ಎಂಬುದನ್ನು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ನಿರ್ದೇಶಕರು ಇವರ ಕಥೆಯಲ್ಲಿ ತೋರಿಸಿದ್ದಾರೆ. ಇದನ್ನು ಚಿತ್ರದಲ್ಲಿ ನೋಡಿದರೇನೆ ಮನಸ್ಸಿಗೆ ಮುದ. ಉಳಿದಂತೆ ಹೆಚ್ಚಾಗಿ ಕಿರುತೆರೆ ಕಲಾವಿದರೇ ನಟಿಸಿದ್ದು, ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದರೆ.

ನಿರ್ದೇಶನ

ಧಾರಾವಾಹಿ ನಿರ್ದೇಶಕ ಬಿ.ಮಧುಸೂದನ್ ರವರು ಇದೇ ಮೊದಲ ಬಾರಿಗೆ ಬೆಳ್ಳಿತೆರೆಗಾಗಿ ಆಕ್ಷನ್ ಕಟ್ ಹೇಳಿದ್ದು, ಸ್ಕ್ರೀನ್ ಪ್ಲೇ ಸ್ವಲ್ಪ ನಿಧಾನ ಎಂಬುದು ಬಿಟ್ಟರೇ ಇನ್ಯಾವುದೇ ಮೈನಸ್ ಪಾಯಿಂಟ್ ಇಲ್ಲ. ಪ್ರೇಮಕತೆಗೆ ವಿಭಿನ್ನವಾದ ಟ್ವಿಸ್ಟ್ ನೀಡುವ ಸಿನಿಮಾವನ್ನು, ಎಲ್ಲೂ ಯಾವ ಎಲಿಮೆಂಟ್ಸ್‌ಗಳನ್ನು ಹೆಚ್ಚಾಗಿ ತುರುಕದೇ ಅದ್ಭುತವಾಗಿ ತೆರೆಮೇಲೆ ತಂದಿದ್ದಾರೆ.

ಸಂಗೀತ-ಸಂಕಲನ-ಛಾಯಾಗ್ರಹಣ

ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ಚಿತ್ರಕ್ಕೆ, ಚಿತ್ರದಲ್ಲಿ ಕಾಣಿಸಿಕೊಂಡಿರುವ ಲೊಕೇಶನ್‌ಗಳಿಗೆ ಪೂರಕವಾಗಿದೆ. ಅರಸು ಅಂತಾರೆ ಸಾಹಿತ್ಯದ 'ಪ್ರಥಮಂ ಪ್ರೇಮಂ' ಹಾಡು ಇಷ್ಟವಾಗುತ್ತದೆ. ತೀರ್ಥಹಳ್ಳಿ ಕಡೆಯ ಸುಂದರ ಬೆಟ್ಟ ಗುಡ್ಡ ಪ್ರದೇಶಗಳು ಮತ್ತು ಬೆಂಗಳೂರನ್ನು ರವಿ ಕಿಶೋರ್ ತಮ್ಮ ಛಾಯಾಗ್ರಹಣದಲ್ಲಿ ಅದ್ಭುತವಾಗಿ ತೋರಿಸಿದ್ದಾರೆ. ಸಂಕಲನವು ಅದಕ್ಕೆ ಪೂರಕವಾಗಿದೆ.

ಸೋತ ಪ್ರೇಮಕಥೆಗಳಿಗೆ ಹೊಸ ಸಂದೇಶ

ಮಾಸ್ ಆಡಿಯನ್ಸ್ ಗೆ 'ಆ ಎರಡು ವರ್ಷಗಳು' ಸ್ಕ್ರೀನ್ ಪ್ಲೇ ಸ್ವಲ್ಪ ನಿಧಾನವಾಗಿರುವುದರಿಂದ ಬೇಸರ ಅನಿಸಬಹುದು. ಆದರೆ ಪ್ರೀತಿಯಲ್ಲಿ ಸೋತ ಪ್ರೇಮಿಗಳ ಬದುಕಿಗೆ ಉತ್ತಮ ಸಂದೇಶ ಇರುವುದರಿಂದ ಮಿಸ್ ಮಾಡದೇ ಚಿತ್ರವನ್ನು ಒಮ್ಮೆ ನೋಡಬಬಹುದು.

English summary
Actor Renuk Mathad and Ameeta Kulal starrer Kannada Movie 'Aa Eradu Varshagalu' has hit the screens on July 28. The Movie gets positive response from the audience. 'Aa Eradu Varshagalu' Directed by B Madhusudhan. Movie review is here..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada