twitter
    For Quick Alerts
    ALLOW NOTIFICATIONS  
    For Daily Alerts

    'ಆಕೆ'ಯ ಚೇಷ್ಟೆ ನೋಡಿ ಬೆಚ್ಚಿಬಿದ್ದ ವಿಮರ್ಶಕರು ಅಷ್ಟೇ ಖುಷಿಪಟ್ಟರು

    By Suneel
    |

    ತಮಿಳಿನ 'ಮಾಯಾ' ರಿಮೇಕ್ ಚಿತ್ರ ಕನ್ನಡದ 'ಆಕೆ' ರಾಜ್ಯಾದ್ಯಂತ ತೆರೆಕಂಡಿದೆ. ಹಾಲಿವುಡ್ ರೇಂಜ್ ಚಿತ್ರ ದಂತಿರುವ 'ಆಕೆ' ನೋಡಿದ ಪ್ರೇಕ್ಷಕರು ಕಂಪ್ಲೀಟ್ ಹಾರರ್ ಅನುಭವ ಪಡೆದು ಥ್ರಿಲ್ ಆಗಿದ್ದಾರೆ.

    ಕೆ.ಎಂ.ಚೈತನ್ಯ ನಿರ್ದೇಶನದಲ್ಲಿ ಮೂಡಿಬಂದಿರುವ 'ಆಕೆ' ಚಿತ್ರ ಮೇಕಿಂಗ್ ದೃಷ್ಟಿಯಿಂದಲೂ ಸಖತ್ ರಿಚ್ ಆಗಿದ್ದು ಬಂಕ್ ಮಾಡದೇ ನೋಡಬೇಕಾದ ಹಾರರ್ ಥ್ರಿಲ್ಲರ್ ಸಿನಿಮಾ ಎಂಬ ಪ್ರಶಂಸೆಯನ್ನು ಪ್ರೇಕ್ಷಕರಿಂದ ಪಡೆದಿದೆ. ಆದರೆ 'ಆಕೆ' ನೋಡಿದ ನಮ್ಮ ವಿಮರ್ಶಕರು ಪ್ರೇಕ್ಷಕರಂತೆ ಬೆಚ್ಚಿಬಿದ್ರ? ಚಿತ್ರದ ಬಗ್ಗೆ ಅವರ ಅನಿಸಿಕೆ ಏನು? ಎಂಬುದಕ್ಕೆ ಉತ್ತರ ಇಲ್ಲಿದೆ.

    ವಿಮರ್ಶೆ: ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ 'ಆಕೆ'ವಿಮರ್ಶೆ: ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ 'ಆಕೆ'

    ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಆಕೆ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿರಿ..

    'ಆಕೆ'ಯ ಭೂತಚೇಷ್ಟೆಯ ಪ್ರಲಾಪ: ಪ್ರಜಾವಾಣಿ

    'ಆಕೆ'ಯ ಭೂತಚೇಷ್ಟೆಯ ಪ್ರಲಾಪ: ಪ್ರಜಾವಾಣಿ

    'ಆಕೆ' ಮಸಾಲೆ ಮಿಶ್ರಿತ ಹಾರರ್ ಚಿತ್ರವಲ್ಲ. ಭೀಬತ್ಸ ದೃಶ್ಯಗಳು ಸಾಮಾನ್ಯವಾಗಿದ್ದು, ಹಸಿ ಹಸಿಯಾಗಿ ತೋರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದು, ನೋಡುಗರು ಬೆಚ್ಚಿ ಬೀಳುತ್ತಾರೆ. ಮೊದಲಾರ್ಧದಲ್ಲಿ ಕಥೆ ನೀರಸವಾಗಿ ಸಾಗುತ್ತದೆ. ದ್ವಿತೀಯಾರ್ಧ ಭೂತಚೇಷ್ಟೆಗಳಿಗೆ ಮೀಸಲು. ಶರ್ಮಿಳಾ ಮಾಂಡ್ರೆ ಅವರದು ಸಂಕೀರ್ಣ ಪಾತ್ರ. ತಾಯಿ ಮತ್ತು ಪುತ್ರಿಯಾಗಿ ಮಾಗಿದ ಅಭಿನಯ. ಇತರರದ್ದು ಅಚ್ಚುಕಟ್ಟು ಅಭಿನಯ. 'ಹ್ಯಾರಿ ಪಾಟರ್' ಚಿತ್ರಕ್ಕೆ ಕೆಲಸ ಮಾಡಿದ ಇಯನ್ ಹಾವ್ಸ್ ಮತ್ತು ಮನೋಹರ್ ಜೋಷಿ ಪರಿಶ್ರಮ ಪ್ರತಿ ಫ್ರೇಮ್ ನಲ್ಲೂ ಎದ್ದುಕಾಣುತ್ತದೆ. ಗುರುಕಿರಣ್ ಸಂಗೀತದ 'ತೂಗಾಡುವ ಉಯ್ಯಾಲೆ' ಹಾಡು ಮನದಲ್ಲಿ ಉಳಿಯುತ್ತದೆ. ಹಾರರ್, ಥ್ರಿಲ್ ಪ್ರಿಯರಿಗೆ 'ಆಕೆ' ಇಷ್ಟವಾಗುತ್ತಾಳೆ- ಕೆ.ಎಚ್.ಓಬಳೇಶ್

    ಬೆಚ್ಚಿ ಬೀಳಿಸುವ ಆಕೆ: ವಿಜಯ ಕರ್ನಾಟಕ

    ಬೆಚ್ಚಿ ಬೀಳಿಸುವ ಆಕೆ: ವಿಜಯ ಕರ್ನಾಟಕ

    ಏಕಕಾಲದಲ್ಲಿ ಲಂಡನ್ ಮತ್ತು ಬೆಂಗಳೂರಿನಲ್ಲಿ ನಡೆಯುವ ಕತೆಯನ್ನು ಎಳೆ ಎಳೆಯಾಗಿ ನಿರ್ದೇಶಕ ಸಮರ್ಥವಾಗಿ ತೆರೆಗೆ ಅಳವಡಿಸಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಜತೆಗೆ ಹಾರರ್ ಇದ್ದು ಕೆಲ ದೃಶ್ಯಗಳು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತವೆ. ಚಿತ್ರ ತಮಿಳಿನ 'ಮಾಯಾ' ರಿಮೇಕ್ ಅದರೂ ಅದಕ್ಕಿಂತ ರಿಚ್ ಆಗಿ ಮೂಡಿಬಂದಿದೆ. ಗುರುಕಿರಣ್ ಹಿನ್ನೆಲೆ ಸಂಗೀತ ಪ್ಲಸ್ ಪಾಯಿಂಟ್. ಛಾಯಾಗ್ರಾಹಕ ಲಂಡನ್ ರಾತ್ರಿ ಸೌಂದರ್ಯವನ್ನು ಅದ್ಭುತವಾಗಿ ತೋರಿಸಿದ್ದಾರೆ. ಆದರೆ ಚಿತ್ರಕ್ಕೆ ಇನ್ನಷ್ಟು ವೇಗ ಬೇಕಿತ್ತು. ಹಿರೋಯಿಸಂಗೆ ಅವಕಾಶವಿಲ್ಲದಿದ್ದರೂ ಚಿರಂಜೀವಿ ಸರ್ಜಾ ಗಮನ ಸೆಳೆಯುತ್ತಾರೆ. ಶರ್ಮಿಳಾ ಮಾಂಡ್ರೆ ಅಭಿನಯದಲ್ಲಿ ಮಾಗಿದ್ದಾರೆ. 'ಆಕೆ' ಒಂದೊಳ್ಳೆ ಹಾರರ್ ಮತ್ತು ಸಸ್ಪೆನ್ಸ್ ಅಂಶಗಳನ್ನು ನೀಡುವಲ್ಲಿ ಅನುಮಾನವಿಲ್ಲ- ಹರೀಶ್ ಬಸವರಾಜ್

    ಆಕೆಯ ಭಯದಲ್ಲಿ ಈಕೆಯ ಚಡಪಡಿಕೆ: ಉದಯವಾಣಿ

    ಆಕೆಯ ಭಯದಲ್ಲಿ ಈಕೆಯ ಚಡಪಡಿಕೆ: ಉದಯವಾಣಿ

    ಹಿಂದಿನ ಹಾರರ್ ಸಿನಿಮಾಗಳಿಗಿಂತ ಸ್ವಲ್ಪ ವಿಭಿನ್ನವಾದ ಚಿತ್ರ ಎಂದರೆ ತಪ್ಪಿಲ್ಲ. ಚಿತ್ರದಲ್ಲಿ ಎರಡು ಟ್ರಾಕ್‌ಗಳಿವೆ. ಅವರೆಡನ್ನೂ ಅರ್ಥ ಮಾಡಿಕೊಳ್ಳಲು ಪ್ರೇಕ್ಷಕ ಸ್ವಲ್ಪ ತಾಳ್ಮೆಗೆಡಬೇಕು. ದ್ವಿತಿಯಾರ್ಧದಲ್ಲಿ ಈ ಎರಡು ಟ್ರಾಕ್‌ಗಳಿಗೆ ಸಂಬಂಧವೇನು ತಿಳಿದರು ಸ್ಪಷ್ಟತೆ ಸಿಗಲು ಕ್ಲೈಮ್ಯಾಕ್ಸ್ ವರೆಗೂ ಕಾಯಬೇಕು. ಇದು ಹಾಲಿವುಡ್ ರೇಂಜ್ ಸಿನಿಮಾ ಎಂದರೂ ತಂಡದ ಮಾತು ಪೂರಾ ಸುಳ್ಳೇನಲ್ಲ. ಸಂಗೀತ ಹಾಲಿವುಡ್ ಲೆವೆಲ್ ಗೆ ತಕ್ಕದಾಗಿದೆ. ಅಭಿನಯ ಒಂದೆರಡು ಪಾತ್ರಗಳು ಬಿಟ್ಟರೆ ಮಿಕ್ಕಂತೆ ಎಲ್ಲವೂ ಗಂಭೀರ. ಚಿರು ಶರ್ಮಿಳಾ, ಪ್ರಕಾಶ್ ಬೆಳವಾಡಿ ಹೈಲೈಟು. ಚಿತ್ರ ತುಂಬಾ ಕ್ಲಾಸ್ ಆಗಿರುವುದರಿಂದ ಮಾಸ್ ಪ್ರೇಕ್ಷಕರಿಗೆ, ಇಷ್ಟವಿಲ್ಲದ ಕ್ಲಾಸ್ ನಲ್ಲಿ ಕೂತಂತನಿಸಿದರೆ ಆಶ್ಚರ್ಯವಿಲ್ಲ. ಆದರೆ ಬಂಕ್ ಮಾಡದೆ ನೋಡುವ ಪ್ರಯತ್ನ ಮಾಡಬಹುದು- ಚೇತನ್ ನಾಡಿಗೇರ್

    Aake Movie Review: The Times of India

    Aake Movie Review: The Times of India

    The biggest strength of Aake lies in its technically strong team. From good cinematography to top-class background score, one is ensured of some good frights. What also impresses is how there is no forced comedy track, but there are a few situational laughs that act as relief during tense moments. The biggest victory for Aake is the script, which lingers on in one's mind, in which you try to join the dots even much after the film's ended. The clever writing aside, watch this if you're ready to brave some scary moments that send more than just a chill down your spine.

    Tale of A Beautiful Ghost: Bangalore Mirror

    Tale of A Beautiful Ghost: Bangalore Mirror

    Aake is a slick combination of a ‘who is she?' thriller and a horror tale. An almost-perfectly scripted plot that focuses on narrating a story differently rather than serving ghost gimmics makes this film stand apart from the run-of-the-mill horror tales. Aake was touted as the first Kannada-British venture. The film has a professional touch and is as slick as any Kannada film can get. The best man behind the screen is composer Gurukiran. The cinematography and editing too deserve mention. Aake is in the next stage of horror films and going by the trend of Sandalwood becoming the hub of horror films, should set a trend itself. The only unfortunate situation being films having only other films to get inspired by.

    English summary
    Kannada Actor Chiranjeevi Sarja and Sharmila Mandre starrer starrer 'Aake' film has received positive response from Critics. 'Aake' Movie Critics review is here..
    Saturday, July 1, 2017, 13:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X