»   » ನಿರೀಕ್ಷೆ ಮೂಡಿಸಿದ 'ಅಕಿರ' ಮೇಲೆ ವಿಮರ್ಶಕರ ಮಿಶ್ರ ಪ್ರತಿಕ್ರಿಯೆ.!

ನಿರೀಕ್ಷೆ ಮೂಡಿಸಿದ 'ಅಕಿರ' ಮೇಲೆ ವಿಮರ್ಶಕರ ಮಿಶ್ರ ಪ್ರತಿಕ್ರಿಯೆ.!

By Harshitha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸ್ಯಾಂಡಲ್ ವುಡ್ ಅಂಗಳದಲ್ಲಿ ಭಾರಿ ಭಾರಿ ಸದ್ದು ಸುದ್ದಿ ಮಾಡಿದ್ದ 'ಅಕಿರ' ಸಿನಿಮಾ ನಿಮ್ಮ ಮುಂದೆ ಬಂದಿದ್ದಾಗಿದೆ. ಬಹು ನಿರೀಕ್ಷೆ ಹುಟ್ಟುಹಾಕಿದ 'ಅಕಿರ' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಓಪನ್ನಿಂಗ್ ಸಿಕ್ಕಿದೆ.

  ಶ್ರೀಮಂತ ಹುಡುಗ (ಅಖಿಲ್ ರಾಜ್) ಪ್ರೀತಿ-ಪ್ರೇಮದ ಸುತ್ತ ಹೆಣೆದಿರುವ ಕಥೆ ಪಡ್ಡೆ ಹುಡುಗರಿಗೆ 'ಇದು ನಮ್ಮದೇ ಕಥೆ' ಅಂತ ಭಾಸವಾಗಿರಬಹುದು. ಆದ್ರೆ, ವಿಮರ್ಶಕರಿಗೆ ಮಾತ್ರ 'ಅಕಿರ' ಮೇಲೆ ಕೊಂಚ ಬೇಸರವಾದಂತಿದೆ. ['ಅಕಿರ' ವಿಮರ್ಶೆ: ಪ್ರೀತಿ-ಗೀತಿ, ಸೆಂಟಿಮೆಂಟ್ ವಗೈರ ವಗೈರ]

  ಅನೀಶ್ ತೇಜೇಶ್ವರ್, ಅದಿತಿ ರಾವ್ ಮತ್ತು ಕ್ರಿಷಿ ತಾಪಂಡ ಅಭಿನಯಿಸಿರುವ 'ಅಕಿರ' ಚಿತ್ರದ ಬಗ್ಗೆ ಕರ್ನಾಟಕದ ಜನಪ್ರಿಯ ಪತ್ರಿಕೆಗಳು ನೀಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ.....

  ಮಂದ ಬೆಳಕಿನಲ್ಲಿ ದೀರ್ಘ ಪಯಣ - ಪ್ರಜಾವಾಣಿ

  ಕನಸುಗಳ ರೆಕ್ಕೆಯೊಂದಿಗೆ ಹಾರಾಡುವ ಹರೆಯದ ಹುಡುಗನಿಗೆ ಅಪ್ಪನ ಜವಾಬ್ದಾರಿ ಮಾತುಗಳು ರುಚಿಸುತ್ತವೆಯೇ? ತನ್ನ ಹಿತವಚನವನ್ನು ನಿರ್ಲಕ್ಷ್ಯ ಮಾಡಿದಾಗ ಮಗನನ್ನು ಮನೆಯಿಂದ ಹೊರಹಾಕುವ ತಂದೆ, ಆತನಿಗೊಂದು ಪಾಠ ಕಲಿಸಲು ನಿರ್ಧರಿಸುತ್ತಾನೆ. ಒಂದೆಡೆ ನೆಲೆ ಇಲ್ಲದೇ ಅಂಡಲೆಯುವ ಅಖಿಲ್, ಮತ್ತೊಂದೆಡೆ ತನ್ನ ಪ್ರೇಮ ವೈಫಲ್ಯಗಳನ್ನು ಮರೆಯಲು ಯತ್ನಿಸುತ್ತಾನೆ. ಕೊನೆಗೆ, ‘ಎಲ್ಲ ಬಗೆಯ ಕಷ್ಟಗಳನ್ನು ಸಹಿಸಿಕೊಂಡು ಯಶಸ್ಸಿನತ್ತ ನಡೆಯುವವನೇ ಅಕಿರ' ಎಂಬ ಅಮ್ಮನ ಮಾತನ್ನು ನಿಜವಾಗಿಸುತ್ತಾನೆ. ಅಂದಹಾಗೆ, ಅಕಿರ ಅಂದರೆ ಜಪಾನಿ ಭಾಷೆಯಲ್ಲಿ ‘ಕತ್ತಲಿನಿಂದ ಬೆಳಕಿನೆಡೆಗೆ ಸಾಗುವವನು' ಎಂಬರ್ಥವೂ ಇದೆ - ಆನಂದತೀರ್ಥ ಪ್ಯಾಟಿ

  ಸ್ವಾರ್ಥವಿಲ್ಲದ ಪ್ರೇಮ, ಅರ್ಥವಿಲ್ಲದ ಟೈಟಲು, ವ್ಯರ್ಥ ಪರಿಶ್ರಮ - ಉದಯವಾಣಿ

  ಚಿತ್ರ ಕೆಲವೊಮ್ಮೆ ಯದ್ವಾತದ್ವಾ ಸಾಗಿದರೆ, ಇನ್ನೂ ಕೆಲವೊಮ್ಮೆ ಬಹಳ ನಿಧಾನವಾಗಿ ಮುಂದುವರೆಯುತ್ತದೆ. ಏನೇನಾಗುತ್ತಿದೆ ಎಂದು ಪ್ರೇಕ್ಷಕನಿಗೆ ಸ್ಪಷ್ಟವಾಗುವುದು ಕೊನೆಯಲ್ಲಿ. ಅಲ್ಲಿಯವರೆಗೂ ಅವನು ಏನಾದರೂ ಮಾಡಬೇಕಲ್ಲ. ಅವನು ಸುಸ್ತಾಗುತ್ತಾನೆ, ಮುಂದೆ ಓಡಿಸ್ರೋ ಎಂದು ಬೊಬ್ಬೆ ಹಾಕುತ್ತಾನೆ, ರಂಗಾಯಣ ರಘು ಅವರಿಂದ ಆ ರೀತಿ ಆಡಿಸುವುದನ್ನು ನೋಡಿ ಮಮ್ಮಲ ಮರಗುತ್ತಾನೆ, ಕಾಮಿಡಿ ಬೇಕು ಎನ್ನುವ ಕಾರಣಕ್ಕೆ ಬುಲೆಟ್ ಪ್ರಕಾಶ್ ರನ್ನು ಕರೆತರಲಾಗಿದೆ ಎಂದು ಕೊರಗುತ್ತಾನೆ, ಸೆಖೆಗೆ ಬೆವರಿಳಿಸುತ್ತಾನೆ, ಆಕಳಿಸುತ್ತಾನೆ, ಹೀಗೆ ಒಬ್ಬೊಬ್ಬ ಪ್ರೇಕ್ಷಕ ಒಂದೊಂದು ರೀತಿಯಲ್ಲಿ ಸ್ಪಂದಿಸುತ್ತಾನೆ - ಚೇತನ್ ನಾಡಿಗೇರ್

  ನವಿರಾದ ಪ್ರೇಮಕಾವ್ಯ - ವಿಜಯ ಕರ್ನಾಟಕ

  ಮೊದಲ ಪ್ರಯತ್ನದಲ್ಲೇ ಭರವಸೆಯನ್ನು ಮೂಡಿಸಿದ್ದಾರೆ ನವೀನ್ ರೆಡ್ಡಿ. ಅನೀಶ್ ಎನರ್ಜಿಟಿಕ್ ಆಗಿದ್ದಾರೆ. ಅವರ ಡ್ಯಾನ್ಸ್, ಫೈಟ್ ಚೆನ್ನಾಗಿದೆ. ಅದಿತಿಯದು ಪಾತ್ರಕ್ಕೆ ಪೂರಕ ಅಭಿನಯ. ಕೃಷಿ ತಾಪಂಡ ಪುಟಿಯುವ ಹುಡುಗಿ. ಚೆನ್ನಾಗಿ ನಟಿಸಿದ್ದಾರೆ. ಒಂದೆರಡು ದೃಶ್ಯಗಳಲ್ಲಿ ಬರುವ ರಂಗಾಯಣ ರಘು, ಅವಿನಾಶ್ ಮನಸ್ಸಿನಲ್ಲಿ ಉಳಿಯುತ್ತಾರೆ. ಅಜನೀಶ್ ಲೋಕನಾಥ್ ಸಂಗೀತ ಪ್ಲಸ್ ಪಾಯಿಂಟ್. ಕೆಟ್ಟ ಸಿನಿಮಾಗಳ ನಡುವೆ ತಪ್ಪದೇ ನೋಡಬಹುದಾದ ಚಿತ್ರ 'ಅಕಿರ'. - ಪದ್ಮಾ ಶಿವಮೊಗ್ಗ

  Akira Movie Review - Bangalore Mirror

  A plain story, confusing screenplay, uninspiring incidents, lousy narrative and forgettable dialogues are wrapped in a lavish set up and booming music. The colourful visuals and lively tunes hardly make up for the rest of the defective elements. Akira is boring at best and a sleeping tablet at its worst. - Shyam Prasad S

  Akira Movie Review - Times of India

  When it comes to performances, Anish stands tall and delivers his all. Krishi and Aditi are more than just props and do justice to their roles. The film scores big on production values, especially with the locales, music score by B Ajaneesh Loknath and the cinematography by Yogi. Unfortunately, the film wanders too much in trying to satisfy the commercial audiences that the essence is lost. A little more tautness in the screenplay might have been the order. Should you watch the film? If you like love stories and all that gloss associated with them, this one might just work for you... - Sunayana Suresh

  English summary
  Kannada Actor Anish Tejeshwar starrer 'Akira' has received mixed response from the critics. Here is the collection of reviews by Top News Papers of Karnataka.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more