For Quick Alerts
ALLOW NOTIFICATIONS  
For Daily Alerts

  'ಆರ್ಯನ್' ಹೇಗಿದೆ? ಪತ್ರಿಕೆಗಳ ವಿಮರ್ಶಾ ನೋಟ

  By ಉದಯರವಿ
  |

  ಒಂದು ಚಿತ್ರದ ಆಟ, ಓಟವನ್ನು ಯಾವುದೇ ಚಿತ್ರ ವಿಮರ್ಶೆಗಳು ನಿರ್ಧರಿಸಲು ಸಾಧ್ಯವಿಲ್ಲ. ಅದೆಷ್ಟೋ ಚಿತ್ರಗಳು ವಿಮರ್ಶಕರ ಕಡು ಟೀಕೆಗೆ ಗುರಿಯಾದರೂ ಬಾಕ್ಸ್ ಆಫೀಸಲ್ಲಿ ಗೆದ್ದಿವೆ. ಕೆಲವು ಚಿತ್ರಗಳು ಸಿಕ್ಕಾಪಟ್ಟೆ ಹೊಗಳಿಕೆಗೆ ಪಾತ್ರವಾದರೂ ಬಾಕ್ಸ್ ಆಫೀಸಲ್ಲಿ ಮಕಾಡೆ ಮಲಗಿವೆ.

  ಹಾಗಾಗಿ ಚಿತ್ರ ವಿಮರ್ಶೆ ಎನ್ನುವುದು ಚಿತ್ರವೊಂದರ ಹಣೆಬರಹವಲ್ಲ. ಅದು ಏನಿದ್ದರೂ ತನ್ನ ಓದುಗರಿಗೆ ಸೂಕ್ಷ್ಮವಾಗಿ ಕೆಲವು ವಿಚಾರಗಳನ್ನು ತಿಳಿಸುವ ಪ್ರಯತ್ನ ಅಷ್ಟೇ ಎನ್ನಬಹುದು. ಇರಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಆರ್ಯನ್' ಚಿತ್ರ ದೇಶದಾದ್ಯಂತ ತೆರೆಕಂಡಿದೆ.

  ಕೆಲವು ಪತ್ರಿಕೆಗಳು ಚಿತ್ರ ಬೊಂಬಾಟ್ ಎಂದರೆ, ಇನ್ನೂ ಕೆಲವರು ಪರ್ವಾಗಿಲ್ಲ ಎನ್ನುತ್ತಿವೆ. ಆದರೆ ಅಭಿಮಾನಿಗಳು ಮಾತ್ರ ಚಿತ್ರ ವಿಮರ್ಶೆ ಹೇಗೇ ಇರಲಿ ಒಮ್ಮೆ ಚಿತ್ರ ನೋಡಿದರೇನೇ ಅವರ ಮನಸ್ಸಿಗೆ ಸಮಾಧಾನ. ಬನ್ನಿ ಯಾವ್ಯಾವ ಪತ್ರಿಕೆಗಳಲ್ಲಿ ಏನು ವಿಮರ್ಶೆ ಬಂದಿದೆ ಎಂಬುದನ್ನು ನೋಡೋಣ.

  ವಿಜಯವಾಣಿ: ಶಿವಾನುಭವ ರಮ್ಯಾನಂದ!

  ಕ್ರೀಡೆ, ಚಿತ್ರದ ಪ್ರಮುಖ ಆಕರ್ಷಣೆ. ಲವ್, ಕಾಮಿಡಿ ಮತ್ತು ಸೆಂಟಿಮೆಂಟ್ ಇದರ ಟಿಸಿಲುಗಳು. ಅರ್ಥಾತ್, ಕ್ರೀಡೆಯೊಟ್ಟಿಗೆ ಪ್ರೀತಿ-ಪ್ರೇಮ, ಹಾಸ್ಯ-ಭಾವನೆಗಳ ಸಂಘರ್ಷ ಮತ್ತು ಸಾಹಸ -ಸಾಧನೆ ಚಿತ್ರದಲ್ಲಿ ಮಿಳಿತವಾಗಿರುವ ಅಂಶಗಳು. ಅಥ್ಲೆಟಿಕ್ ತರಬೇತುದಾರನಾಗಿ ಶಿವರಾಜ್ ಕುಮಾರ್ ಇಡೀ ಚಿತ್ರ ಆವರಿಸಿಕೊಂಡಿದ್ದಾರೆ. ಅಭಿನಯದಲ್ಲಿ ಸೆಂಚುರಿ ಸ್ಟಾರ್ ಗೆ ಸಖತ್ ಫೈಟ್ ಕೊಟ್ಟಿದ್ದಾರೆ ನಾಯಕಿ ರಮ್ಯಾ. ಶಿವಣ್ಣ ಮತ್ತು ರಮ್ಯಾ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡುತ್ತದೆ - ರಾಜಶೇಖರಮೂರ್ತಿ

  ಪ್ರಜಾವಾಣಿ: ಓಟ, ಪ್ರೇಮದಾಟದ ಮೋಹಕ ಯುಗಳ

  ಕ್ರೀಡೆಯನ್ನೇ ಪ್ರಧಾನ ಅಂಶವನ್ನಾಗಿ ಆರಿಸಿಕೊಂಡು ತಯಾರಾದ ಸಿನಿಮಾಗಳು ಕಡಿಮೆ. ಬಾಲಿವುಡ್‌ನಲ್ಲಿ ಆಗೊಮ್ಮೆ ಈಗೊಮ್ಮೆ ಅಂತ ಸಿನಿಮಾ ತೆರೆ ಮೇಲೆ ಕಾಣು­ತ್ತವೆ. ಆದರೆ ಬಣ್ಣದ ಲೋಕ ಯಾವತ್ತೂ ಪ್ರೀತಿ- ಪ್ರೇಮ, ಭಾವನಾತ್ಮಕ ವಿಷಯದತ್ತಲೇ ಹೆಚ್ಚು ವಾಲು­ವುದುಂಟು. ಕ್ರೀಡೆ ಪ್ರಮುಖ ಕೇಂದ್ರವಾಗಿರದೇ ಹೋದರೂ ಅದನ್ನೇ ಆಧರಿಸಿದ ಸಿನಿಮಾಗಳ ಸಾಲಿಗೆ ‘ಆರ್ಯನ್' ಸೇರುತ್ತದೆ. ಆಟ, ನೋಟ, ಪ್ರೇಮಿಗಳ ತುಂಟಾಟ, ವಿರಹ ಎಲ್ಲವನ್ನೂ ಹದವಾಗಿ ಬೆರೆಸಿ ಕೊಟ್ಟಿ­ದ್ದಾರೆ ದಿವಂಗತ ಡಿ.ರಾಜೇಂದ್ರ ಬಾಬು - ಆನಂದತೀರ್ಥ ಪ್ಯಾಟಿ

  ವಿಜಯಕರ್ನಾಟಕ: ಶಿವಣ್ಣ ಅಭಿಮಾನಿಗಳ ಸ್ಟೈಲಿಶ್ ಆರ್ಯನ್

  ಶಿವರಾಜ್ ಕುಮಾರ್ ಮತ್ತು ರಮ್ಯಾ ಜೋಡಿ ಇದೇ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿದೆ. ಸಹಜವಾಗಿ ಕುತೂಹಲವಿತ್ತು. ಎಲ್ಲಿಯೂ ಈ ಜೋಡಿ ನಿರಾಸೆ ಮೂಡಿಸುವುದಿಲ್ಲ. ವಯಸ್ಸಿನ ಅಂತರವಿದ್ದರೂ ಸಖತ್ ಮ್ಯಾಚ್ ಮಾಡಿದ್ದಾರೆ ಕಾಸ್ಟ್ಯೂಮ್ ಡಿಸೈನರ್ ಮತ್ತು ಮೇಕಪ್ ಕಲಾವಿದರು - ಶರಣು ಹುಲ್ಲೂರು

  ಉದಯವಾಣಿ: ಬಾಬು ಶೈಲಿಯ ಸುಮಧುರ ಚಿತ್ರ

  ಯಾವುದೇ ಗಿಮಿಕ್ ಗಳಿಲ್ಲದೇ ಬಾಬು ಅವರು ಮಾಡಿಟ್ಟುಕೊಂಡ ಪ್ರಾಮಾಣಿಕ ಕತೆ ಮತ್ತು ಚಿತ್ರಕತೆ ಆರ್ಯನ್. ತಿರುವು, ಮುರುವು, ಟಪ್ಪಾಂಗುಚ್ಚಿ, ಐಟಂಗಳ್ ಆಬ್ಬರಗಳ ಮಧ್ಯೆ ತಣ್ಣಗೆ ಹರಿಯುವ ಶ್ರೀಮಂತ ನದಿಯಂತೆ ಆರ್ಯನ್ ಸಾಗುತ್ತದೆ. ಇಡೀ ಚಿತ್ರ ಖುಷಿ ಕೊಡುವುದು ಶಿವರಾಜ್ ಕುಮಾರ್ ಅವರ ಗಂಭೀರ ಅಭಿನಯಕ್ಕೆ - ವಿಕಾಸ ನೇಗಿಲೋಣಿ

  ಹೊಸ ದಿಗಂತ: ಜೈ ಹೋ ಆರ್ಯನ್

  ಚಿತ್ರದ ಉದ್ದಕ್ಕೂ ಆಟ, ಪಾಠ, ಪ್ರೀತಿ ಎಲ್ಲವೂ ಇದೆ. ಜೊತೆಗೆ ಕೋಪ ತಾಪಕ್ಕೂ ಜಾಗವಿದೆ. ಹೆಚ್ಚಾಗಿ ಆಟದ ಕಡೆ ಗಮನಹಸಿರುವುದರಿಂದ 'ಆರ್ಯನ್' ಆಟ ಬೊಂಬಾಟ ಎನ್ನಬಹುದು.

  Bangalore Mirror: WOODEN SPOON

  In hindsight, the film's main love track is a milder version of the cheap jokes in the comedy track. Shivanna should stop working with filmmakers who are just out to use his popularity. Even if he makes fewer number of films, it is better to choose better subjects - Shyam Prasad S

  Chitraloka - Aaryan movie review

  Most of the film is shot in Singapore and there is a refreshing change in the background for Kannada films. Aryan is a film you should not miss this season. Time to run to the theatres.

  English summary
  Kannada movie Aryan (Shivrajkumar and Ramya starer), the most expected film of the year, has been out in the theatres with enormous pre and post release hype. Here, we present you what the reviewers said about Aryan in this crop, you will find reviews, range from good, bad to ugly, which will surely entertain you and inform you about this film.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more