twitter
    For Quick Alerts
    ALLOW NOTIFICATIONS  
    For Daily Alerts

    'ಅಟೆಂಪ್ಟ್ ಟು ಮರ್ಡರ್' ನೋಡಿ ವಿಮರ್ಶಕರು ಮಾಡಿದ ಕಾಮೆಂಟ್ಸ್ ಏನು.?

    By Harshitha
    |

    ಎಟಿಎಂ ಒಳಗೆ ಮಹಿಳೆಯ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿದ್ದ ನೈಜ ಘಟನೆಯನ್ನಿಟ್ಟುಕೊಂಡು ನಿರ್ದೇಶಕ ಅಮರ್ 'ಎ.ಟಿ.ಎಂ' ಅಂತ ಸಿನಿಮಾ ಮಾಡಿದ್ದಾರೆ. 'ಎ.ಟಿ.ಎಂ' ಅಂದ್ರೆ ಆಟೋಮ್ಯಾಟಿಕ್ ಟೆಲ್ಲರ್ ಮಷಿನ್ ಮಾತ್ರ ಎಂದು ಭಾವಿಸುವವರಿಗೆ ಈ ಚಿತ್ರದಲ್ಲಿ ಅಟೆಂಪ್ಟ್ ಟು ಮರ್ಡರ್ ಕಥೆ ಹೇಳಿದೆ ಚಿತ್ರತಂಡ.

    ನೈಜ ಘಟನೆ ಜೊತೆಗೆ ಕಾಲ್ಪನಿಕ ಕಥೆ ಹೊಂದಿರುವ ಕ್ರೈಂ ಥ್ರಿಲ್ಲರ್ ಚಿತ್ರ 'ಎ.ಟಿ.ಎಂ' ನೋಡಿ ಕನ್ನಡ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹೊಸಬರ ಹೊಸ ಪ್ರಯತ್ನ 'ಎ.ಟಿ.ಎಂ' ವಿಮರ್ಶಕರಿಗೆ ಹಿಡಿಸ್ತಾ.?

    ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಎ.ಟಿ.ಎಂ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

    ವಾಸ್ತವ, ಕಲ್ಪನೆಗಳ ಪಾಕ 'ಎಟಿಎಂ' - ಪ್ರಜಾವಾಣಿ

    ವಾಸ್ತವ, ಕಲ್ಪನೆಗಳ ಪಾಕ 'ಎಟಿಎಂ' - ಪ್ರಜಾವಾಣಿ

    ನಿರ್ದೇಶಕ ಅಮರ್‌ ಅವರು ಎಟಿಎಂನಲ್ಲಿ ನಡೆದ ಹಲ್ಲೆಯನ್ನು ಆಧಾರವಾಗಿ ಇಟ್ಟುಕೊಂಡು ಮಾಡಿರುವ ಸಿನಿಮಾ ಹೆಸರು ‘ಎಟಿಎಂ'. ಅಂದರೆ ‘ಅಟೆಂಪ್ಟ್ ಟು ಮರ್ಡರ್.' ಜ್ಯೋತಿ ಉದಯ್‌ ಅವರ ಮೇಲೆ ನಡೆದ ಹಲ್ಲೆ, ಹಲ್ಲೆಕೋರನ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ಕೆಲವು ವರದಿಗಳು ಸೇರಿದಂತೆ ಒಂದೆರಡು ನೈಜ ಕಥೆಯ ಎಳೆಗಳನ್ನು, ಇನ್ನೊಂದಿಷ್ಟು ಕಾಲ್ಪನಿಕ ಕಥೆಯ ಎಳೆಗಳನ್ನು ಒಟ್ಟಾಗಿಸಿ ಮಾಡಿರುವ ಸಿನಿಮಾ ಇದು. ಸಿನಿಮಾದ ಕಥೆ ಆರಂಭದಿಂದಲೇ ಗಂಭೀರ ನೆಲೆಯಲ್ಲಿ ಪಯಣ ಆರಂಭಿಸುತ್ತದೆ. ತನಿಖಾಧಿಕಾರಿ ಅಮರ್‌ (ಈ ಪಾತ್ರ ನಿಭಾಯಿಸಿದವರು ವಿನಯ್ ಗೌಡ) ಹಲ್ಲೆಕೋರ ಯಾರು ಎಂಬುದರ ತನಿಖೆ ಆರಂಭಿಸುತ್ತಾನೆ. ಪತ್ರಕರ್ತೆ ಪ್ರಿಯಾ (ಹೇಮಲತಾ ವಿ.) ಕೂಡ ಈ ಪ್ರಕರಣದ ಬಗ್ಗೆ ತನಗಿದ್ದ ಆಸಕ್ತಿಯ ಕಾರಣದಿಂದಾಗಿ ಹಲ್ಲೆಕೋರ ಯಾರಿರಬಹುದು ಎಂಬುದನ್ನು ಹುಡುಕುವ ಕೆಲಸ ಆರಂಭಿಸಿರುತ್ತಾಳೆ. ಇವೆರಡರ ನಡುವಲ್ಲೇ, ಕ್ಯಾಬ್‌ ಚಾಲಕ ಶಿವು (ಚಂದು ಗೌಡ) ಈ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅವನ ಪ್ರೇಯಸಿ ರಿಯಾ ಶೆಟ್ಟಿ (ಶೋಭಿತಾ) ಕೂಡ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಾಳೆ. ಹಲ್ಲೆಕೋರನನ್ನು ಅಮರ್‌ ಹೇಗೆ ಪತ್ತೆ ಮಾಡುತ್ತಾನೆ, ಶಿವು ಮತ್ತು ರಿಯಾ ಜೋಡಿಯನ್ನು ಅಪಾಯದಿಂದ ಹೇಗೆ ಪಾರುಮಾಡುತ್ತಾನೆ ಎಂಬುದು ಕಥೆಯ ಸಾರರೂಪ - ವಿಜಯ್ ಜೋಷಿ

    ಎಟಿಎಂ ವಿಮರ್ಶೆ : ಸತ್ಯ ಮತ್ತು ಕಾಲ್ಪನಿಕ ಘಟನೆಗಳ ಮಿಶ್ರಣಎಟಿಎಂ ವಿಮರ್ಶೆ : ಸತ್ಯ ಮತ್ತು ಕಾಲ್ಪನಿಕ ಘಟನೆಗಳ ಮಿಶ್ರಣ

    ಕಥೆ ಪ್ಲಸ್ಸು: ರೋಚಕತೆ ಮಿಸ್ಸು - ಉದಯವಾಣಿ

    ಕಥೆ ಪ್ಲಸ್ಸು: ರೋಚಕತೆ ಮಿಸ್ಸು - ಉದಯವಾಣಿ

    ತನಿಖಾಧಾರಿತ ಸಿನಿಮಾಗಳ ಮುಖ್ಯ ಸರಕು ಎಂದರೆ ಅದು ರೋಚಕತೆ ಮತ್ತು ಪ್ರೇಕ್ಷಕನ ಕುತೂಹಲ ಹೆಚ್ಚಿಸುತ್ತಾ ಹೋಗುವುದು. ಆದರೆ "ಎಟಿಎಂ'ನಲ್ಲಿ ಆ ಅಂಶಗಳ ಕೊರತೆ ಕಾಡುತ್ತದೆ. ತನಿಖಾ ಅಂಶಗಳಿಗೆ ಹೆಚ್ಚು ಮಹತ್ವ ಕೊಟ್ಟಿದ್ದರೆ "ಎಟಿಎಂ'ನ ಖದರ್ ಹೆಚ್ಚುತ್ತಿತ್ತು. ಆದರೆ, ನಿರ್ದೇಶಕರು ತನಿಖಾ ಅಂಶದ ಜೊತೆಗೆ ಲವ್‌ಸ್ಟೋರಿಯೊಂದನ್ನು ಸೇರಿಸಿದ್ದಾರೆ. ಕೆಲವೊಮ್ಮೆ ಈ ಟ್ರ್ಯಾಕ್‌ ಮೊಸರಿನಲ್ಲಿ ಕಲ್ಲು ಸಿಕ್ಕಂತಾಗುತ್ತದೆ. ನಿರೂಪಣೆಯ ವಿಷಯಕ್ಕೆ ಬರುವುದಾದರೆ ನಿರ್ದೇಶಕರು ಸಿನಿಮಾವನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ. ಎಲ್ಲೂ ಲಿಂಕ್‌ ಮಿಸ್‌ ಆಗದಂತೆ ನೋಡಿಕೊಂಡಿದ್ದಾರೆ. ನಿರೂಪಣೆ ಇನ್ನಷ್ಟು ವೇಗದಿಂದ ಕೂಡಿರಬೇಕಿತ್ತು. ಜೊತೆಗೆ ಈ ಹಿಂದೆ ನಿರ್ದೇಶಕರೇ ಹೇಳಿದಂತೆ ಚಿತ್ರದ ವಿಲನ್ ಪಾತ್ರ ಹೈಲೈಟ್‌ ಅಂದಿದ್ದರು. ಆದರೆ, ಚಿತ್ರದಲ್ಲಿ ವಿಲನ್ ಪಾತ್ರ ಇಂಟ್ರೋಡಕ್ಷನ್ ಸಾಂಗ್ ಹಾಗೂ ಕೆಲವೇ ಕೆಲವು ದೃಶ್ಯಗಳಿಗೆ ಸೀಮಿತವಾಗಿದೆ - ರವಿಪ್ರಕಾಶ್ ರೈ

    ಅಟೆಂಪ್ಟ್ ಟು ಮರ್ಡರ್ ವಿಮರ್ಶೆ - ವಿಜಯ ಕರ್ನಾಟಕ

    ಅಟೆಂಪ್ಟ್ ಟು ಮರ್ಡರ್ ವಿಮರ್ಶೆ - ವಿಜಯ ಕರ್ನಾಟಕ

    ಆರಂಭದಲ್ಲೇ ಕುತೂಹಲ ಕೆರಳಿಸುವಂತೆ ಸಾಗುವ ಸಿನಿಮಾ ಎಟಿಎಂ ಕೊಲೆಗಾರರನ್ನು ಪತ್ತೆಗಾಗಿ ಹುಡುಕಾಟ ಆರಂಭವಾಗುತ್ತದೆ. ಘಟನೆ ನಡೆದ ಎರಡು ವರ್ಷಗಳ ಬಳಿಕ ದಿಟ್ಟ ಪತ್ರಕರ್ತೆ, ಪೊಲೀಸ್ ಅಧಿಕಾರಿ ಈ ಇಬ್ಬರು ಕೊಲೆಗಾರನನ್ನು ಹೇಗೆ ಪತ್ತೆಹಚ್ಚುತ್ತಾರೆ ಎಂಬುದೇ ಕಥೆ. ನೈಜ ಘಟನೆಯ ಹಿಂದೆ ಬೀಳುವ ಪೊಲೀಸ್‌ ಆಫೀಸರ್, ದಿಟ್ಟ ಪತ್ರಕರ್ತೆ, ಕ್ಯಾಬ್ ಡ್ರೈವರ್, ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಹುಡುಗಿ ಮತ್ತು ವಿಲನ್ ನಡುವಿನ ರೋಚಕ ಕಥೆ ಇಲ್ಲಿದೆ. ಸಮಾಂತರವಾಗಿ ಸಾಗುವ ಎರಡು ಕಥೆಗಳಿಗೆ ನಿರ್ದೇಶಕ ತರಾತುರಿಯಲ್ಲಿ ತಾರ್ಕಿಕ ಅಂತ್ಯ ನೀಡಿದ್ದಾರೆ. ಬಹುಶಃ ಭಾಗ 2 ಮಾಡುವ ಉದ್ದೇಶ ಅವರಿಗಿರಬಹುದು ಎನ್ನಿಸುತ್ತದೆ. ಈ ಚಿತ್ರದ ಗಮನಾರ್ಹ ಅಂಶಗಳಲ್ಲಿ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಹೆಚ್ಚು ಅಂಕ ಪಡೆದಿದೆ. ಅನಗತ್ಯ ಡ್ಯುಯಟ್ ಹಾಡಿಗೆ ಕತ್ತರಿ ಹಾಕಬಹುದಿತ್ತು. ಕ್ರೈಮ್ ಥ್ರಿಲ್ಲರ್ ಚಿತ್ರವೊಂದರ ಬಿಗಿ ನಿರೂಪಣೆಗೆ ಈ ರೀತಿಯ ಅನಗತ್ಯ ಮಸಾಲೆ ಅಂಶಗಳು ಹೊಡೆತ ನೀಡಿವೆ. ಒಟ್ಟಾರೆಯಾಗಿ ಮೊದಲ ಪ್ರಯತ್ನದಲ್ಲಿ ಯುವಪಡೆಯ ಮೂಲಕ ಅಮರ್ ಗಮನಸೆಳೆದಿದ್ದಾರೆ. ಸಿನಿಮಾ ಒಮ್ಮೆ ನೋಡಲು ಅಭ್ಯಂತರವಿಲ್ಲ.

    Attempt To Murder Review - Times of India

    Attempt To Murder Review - Times of India

    There aren't too many crime thrillers being made in Sandalwood in the actual sense of the genre and that's where Attempt To Murder fits in. The film is based on a real incident that shook Bengaluru and the film follows a tale that has ambition, crime, darkness and romance. Debutant director Amar has shown that he has style and can put together a good story. But excessive stylized sequences and song instead of an edgier portrayal of the crime story makes the film fall a little short of being a gripping tale that has the viewers on the edge of their seats throughout - Sunayana Suresh

    English summary
    Kannada Movie 'ATM' has received mixed response from the critics. Here is the collection of 'ATM' reviews by Top News Papers of Karnataka.
    Sunday, April 22, 2018, 14:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X