»   » 'ಬದ್ಮಾಶ್' ಟ್ವಿಟ್ಟರ್ ವಿಮರ್ಶೆ: ಥರ ಥರ, ಏನೋ ಒಂಥರಾ ಎಂದ ಪ್ರೇಕ್ಷಕರು

'ಬದ್ಮಾಶ್' ಟ್ವಿಟ್ಟರ್ ವಿಮರ್ಶೆ: ಥರ ಥರ, ಏನೋ ಒಂಥರಾ ಎಂದ ಪ್ರೇಕ್ಷಕರು

Posted By:
Subscribe to Filmibeat Kannada

''ಸ್ಪೆಷಲ್ ಹೀರೋ' ಧನಂಜಯ್ ಅಭಿನಯಿಸಿರುವ 'ಬದ್ಮಾಶ್' ಚಿತ್ರದ ರೀಮೇಕ್ ರೈಟ್ಸ್ ನ ಬಾಲಿವುಡ್ ನಟ ಸಲ್ಮಾನ್ ಖಾನ್ ಖರೀದಿಸಲು ಮನಸ್ಸು ಮಾಡಿದ್ದಾರೆ'' ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ 'ಬದ್ಮಾಶ್' ಚಿತ್ರದ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಎಲ್ಲಿಲ್ಲದ ಹೈಪ್ ಕ್ರಿಯೇಟ್ ಆಯ್ತು. 'ಬದ್ಮಾಶ್' ಚಿತ್ರದಲ್ಲಿ 'ಅಂಥದ್ದೇನಿದೆ' ಅಂತ ಎಲ್ಲರೂ ಕುತೂಹಲದಿಂದ ಕಾಯುವಂತಾಯ್ತು. ನಿರೀಕ್ಷೆ ಕೂಡ ಡಬಲ್ ಆಯ್ತು.

ಪ್ರೇಕ್ಷಕರ ನಿರೀಕ್ಷೆ, ಕುತೂಹಲಕ್ಕೆ ಇವತ್ತು ಬ್ರೇಕ್ ಬಿದ್ದಿದೆ. 'ಬದ್ಮಾಶ್' ಚಿತ್ರ ಇಂದು ರಾಜ್ಯದಾದ್ಯಂತ ಬಿಡುಗಡೆ ಆಗಿದೆ. 'ಬದ್ಮಾಶ್' ಚಿತ್ರವನ್ನ ಫಸ್ಟ್ ಡೇ, ಫಸ್ಟ್ ಶೋ ನೋಡಿದ ಪ್ರೇಕ್ಷಕರು ಟ್ವಿಟ್ಟರ್ ನಲ್ಲಿ ನೀಡಿರುವ ವಿಮರ್ಶೆಗಳತ್ತ ಒಮ್ಮೆ ಕಣ್ಣಾಡಿಸೋಣ ಬನ್ನಿ....


'ಬೋರಿಂಗ್' ಬದ್ಮಾಶ್

''15 ನಿಮಿಷ ಕಥೆ, 45 ನಿಮಿಷಗಳ ಬಿಲ್ಡಪ್ ಬಳಿಕ 'ಆಟ ಈಗ ಶುರು' ಅಂತ ಹೇಳುವ ಹೊತ್ತಿಗೆ ಇಂಟರ್ವಲ್. ಅಚ್ಯುತ್ ಇರುವ ಸನ್ನಿವೇಶಗಳನ್ನು ಬಿಟ್ಟರೆ, 'ಬದ್ಮಾಶ್' ಬೋರಿಂಗ್'' - ಶ್ಯಾಮ್ ಪ್ರಸಾದ್.ಎಸ್


ಸಲ್ಮಾನ್ ಖಾನ್ ಯಾಕೆ ಕೊಂಡಾಡಿದ್ರೋ.?

''ಬದ್ಮಾಶ್' ಚಿತ್ರವನ್ನ ಸಲ್ಮಾನ್ ಖಾನ್ ಯಾಕೆ ಕೊಂಡಾಡಿದ್ರೋ ಅರ್ಥವಾಗುತ್ತಿಲ್ಲ. ಆದರೂ, ಕ್ಲೈಮ್ಯಾಕ್ಸ್ ವರೆಗೂ ನಿದ್ದೆ ಮಾಡದೆ ಇರಲು ಪ್ರಯತ್ನಿಸುತ್ತೇನೆ'' - ಶಶಿ ಪ್ರಸಾದ್.ಎಸ್.ಎಂ


ಫಸ್ಟ್ ಹಾಫ್ ಓಕೆ

''ಸೆಕೆಂಡ್ ಹಾಫ್ ಈಗ ಶುರು. ಇಲ್ಲಿಯವರೆಗೂ ಚೆನ್ನಾಗಿತ್ತು'' - ಶರಸ್ಚಂದ್ರ


'ಕಿರಿಕಿರಿ' ಸಿನಿಮಾ

''ಇತ್ತೀಚೆಗೆ ನಾನು ನೋಡಿದ ಇರಿಟೇಟಿಂಗ್ ಚಿತ್ರಗಳಲ್ಲಿ 'ಬದ್ಮಾಶ್' ಕೂಡ ಒಂದು'' - ಶಶಿಪ್ರಸಾದ್.ಎಸ್.ಎಂ


ಉತ್ತಮ ಪ್ರಯತ್ನ

''ಔಟ್ ಅಂಡ್ ಔಟ್ ಎಂಟರ್ ಟೇನ್ಮೆಂಟ್. ಆಕಾಶ್ ಶ್ರೀವತ್ಸ ಮತ್ತು ತಂಡದಿಂದ ಉತ್ತಮ ಪ್ರಯತ್ನ. ಮಿಸ್ ಮಾಡ್ಬೇಡಿ'' - ಕನ್ನಡ ಮೂವೀಸ್


ಸೆಕೆಂಡ್ ಹಾಫ್ ಕೂಡ ಚೆನ್ನಾಗಿದೆ

''ಬದ್ಮಾಶ್' ಚಿತ್ರದ ದ್ವಿತೀಯಾರ್ಧ ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ'' - ಶರಸ್ಚಂದ್ರ


ಧನಂಜಯ್ ಪರ್ಫಾಮೆನ್ಸ್ ಹೇಗಿದೆ?

''ಪ್ರಚಲಿತ ವಿದ್ಯಮಾನಗಳನ್ನೊಳಗೊಂಡಿರುವ ಚಿತ್ರ 'ಬದ್ಮಾಶ್'. ಧನಂಜಯ ಪರ್ಫಾಮೆನ್ಸ್ ಪವರ್ ಫುಲ್ ಆಗಿದೆ'' - ರಾಜನೀತಿ


English summary
Kannada Actor Dhananjay starrer 'Badmaash' has hit the screens today (November 18th). 'Badmaash' is receiving mixed response in Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada