»   » ವಿಮರ್ಶಕರಿಗೆ 'ಬೆತ್ತನಗೆರೆ' ರಕ್ತಚರಿತ್ರೆ ಇಷ್ಟವಾಯ್ತಾ?

ವಿಮರ್ಶಕರಿಗೆ 'ಬೆತ್ತನಗೆರೆ' ರಕ್ತಚರಿತ್ರೆ ಇಷ್ಟವಾಯ್ತಾ?

Posted By:
Subscribe to Filmibeat Kannada

ರಿಯಲ್ ರೌಡಿಶೀಟರ್ ಬೆತ್ತನಗೆರೆ ಸೀನ ಮತ್ತು ಶಂಕ್ರ ರವರ ನಿಜ ಜೀವನ ಆಧಾರಿತ ಚಿತ್ರ 'ಬೆತ್ತನಗೆರೆ'. ನಡು ರಸ್ತೆಯಲ್ಲಿ ಹತನಾದ ಬೆತ್ತನಗೆರೆ ಸೀನನ ಸೋದರ ಸಂಬಂಧಿ ಮೋಹನ್ ರವರೇ ಈ ಚಿತ್ರ ನಿರ್ದೇಶನ ಮಾಡಿರುವ ಕಾರಣ 'ರಕ್ತಮಂಗಲ'ದ ಕರಾಳ ಅಧ್ಯಾಯ ತೆರೆ ಮೇಲೆ ಅನಾವರಣವಾಗಬಹುದು ಅಂತ ಎಲ್ಲರೂ ಲೆಕ್ಕಾಚಾರ ಹಾಕಿದ್ದರು.

ಈ ವಾರ 'ಬೆತ್ತನಗೆರೆ' ಸಿನಿಮಾ ರಿಲೀಸ್ ಆಗಿದೆ. ತೆರೆಮೇಲೆ 'ರಕ್ತಮಂಗಲ' ಚರಿತ್ರೆಯನ್ನ ನೋಡಿದ ಪ್ರೇಕ್ಷಕರು ಶಿಳ್ಳೆ ಹೊಡೆದಿದ್ದಾರೆ. ಆದ್ರೆ ವಿಮರ್ಶಕರು ಚಿತ್ರದ ಬಗ್ಗೆ ಏನ್ ಹೇಳ್ತಾರೆ? [ವಿಮರ್ಶೆ: ಒಂದು ಬಾರಿ ನೋಡಲಡ್ಡಿಯಿಲ್ಲ ಮಾರಾಯ್ರೆ 'ಬೆತ್ತನಗೆರೆ']

ಇದುವರೆಗೂ ಚಾಕಲೇಟ್ ಬಾಯ್ಸ್ ಆಗಿದ್ದ ಅಕ್ಷಯ್ ಮತ್ತು ಸುಮಂತ್ ಶೈಲೇಂದ್ರ ಬಾಬು 'ಬೆತ್ತನಗೆರೆ' ರೌಡಿಗಳಾಗಿರುವುದು ವಿಮರ್ಶಕರಿಗೆ ಸರಿಯಾದ ಚಾಯ್ಸ್ ಅನ್ಸ್ತಾ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. 'ಬೆತ್ತನಗೆರೆ' ಚಿತ್ರದ ಬಗ್ಗೆ ಕರ್ನಾಟಕದ ಜನಪ್ರಿಯ ದಿನ ಪತ್ರಿಕೆಗಳು ನೀಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ಊರಿನ ಕಥೆ, ದ್ವೇಷದ ವ್ಥಥೆ - ಪ್ರಜಾವಾಣಿ

ಕೆಲವು ವರ್ಷಗಳ ಹಿಂದೆ ಬೆತ್ತನಗೆರೆ ಎನ್ನುವ ಊರಿನಲ್ಲಿ ರಾಜಕಾರಣದ ಹಿನ್ನೆಲೆಯಲ್ಲಿ ನಡೆದ ನೈಜ ರೌಡಿಸಂ ಕಥಾನಕಕ್ಕೆ ಸಿನಿಮಾ ರೂಪ ನೀಡಿದ್ದಾರೆ ನಿರ್ದೇಶಕ ಮೋಹನ್ ಗೌಡ. ಬಂದುಹೋಗಿರುವ ಲೆಕ್ಕವಿಲ್ಲದಷ್ಟು ಮಚ್ಚು-ಕೊಚ್ಚು ಕಥೆಗಳಲ್ಲಿ ‘ಬೆತ್ತನಗೆರೆ'ಯೂ ಒಂದು. ಬಹುತೇಕ ರೌಡಿಸಂ ಚಿತ್ರಗಳಂತೇ ಸಾಗುವ ‘ಬೆತ್ತನಗೆರೆ' ದಾರಿಯಲ್ಲಿ ಹೊಸತೇನೂ ಇಲ್ಲ. ಒಂದೇ ಮನೆಯಲ್ಲಿ ಹುಟ್ಟಿ, ಒಂದೇ ತಟ್ಟೆಯಲ್ಲಿ ತಿಂದು, ಒಬ್ಬರಿಗೊಬ್ಬರು ಹೆಗಲಾಗುತ್ತ ಬೆಳೆದ ಅಣ್ಣ-ತಮ್ಮಂದಿರು ಮೂರನೆಯವರ ಮಾತು ಕೇಳಿ ಹೊಡೆದಾಡಿ ದೂರವಾಗುತ್ತಾರೆ. ಊರ ರಾಜಕಾರಣ ದ್ವೇಷಕ್ಕೆ ತಿರುಗಿದರೆ ಎಷ್ಟು ಅನಾಹುತಕಾರಿ ಆಗಿರುತ್ತದೆ ಎಂಬುದು ಕಥೆಯಾಗಿದ್ದರೂ ಅದನ್ನು ಗಟ್ಟಿಯಾದ ಭಾವನೆಗಳೊಂದಿಗೆ ನಿರೂಪಿಸುವಲ್ಲಿ ನಿರ್ದೇಶಕರು ಪೂರ್ಣ ಯಶಸ್ವಿಯಾಗಿಲ್ಲ. - ಗಣೇಶ್ ವೈದ್ಯ

ಸಹೋದರರ ಸವಾಲಿನ ರಾಜಕೀಯ ಅಧ್ಯಾಯ - ಉದಯವಾಣಿ

ನೀನಾ, ನಾನಾ...ಹೀಗೆ ಶುರುವಾಗುತ್ತದೆ 'ಬೆತ್ತನಗೆರೆ'. ಹೀಗೆ ಜಿದ್ದಿಗೆ ಬೀಳುವುದು ಬೆತ್ತನಗೆರೆ ಸಹೋದರರಾದ ಶಿವ ಮತ್ತು ಶೇಖರ ಹಾಗೂ ಆ ಹಳ್ಳಿಯ ಚೇರ್ಮನ್. ಒಂದು ಸಣ್ಣ ವಿಷಯಕ್ಕೆ ಈ ಎರಡು ಗುಂಪುಗಳ ಮಧ್ಯೆ ಬೆಂಕಿ ಹೊತ್ತಿಕೊಳ್ಳುತ್ತದೆ. ಈ ಜಿದ್ದಾಜಿದ್ದಿ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದರೆ ಶೇಖರ ಮತ್ತು ಚೇರ್ಮನ್ ಒಂದಾಗಿ, ಶಿವನ ಮೇಲೆ ಕತ್ತಿಮಸೆಯುವವರೆಗೂ ಮುಂದುವರೆಯುತ್ತದೆ. ಈ ಎರಡು ಗುಂಪುಗಳಲ್ಲಿ ಗೆಲ್ಲೋರ್ಯಾರು, ನಿಲ್ಲೋರ್ಯಾರು ಎಂಬುದು ಚಿತ್ರದ ಕಥೆ. - ಚೇತನ್ ನಾಡಿಗೇರ್

ಬೆತ್ತನಗೆರೆ: ಮಾಸ್ ಮಸಾಲ್ ಪುರಿ - ವಿಜಯ ಕರ್ನಾಟಕ

ಸ್ಯಾಂಡಲ್ ವುಡ್‌ನಲ್ಲಿ ಬಂದಿರುವ ಸಾಕಷ್ಟು ರೌಡಿಸಂ ಚಿತ್ರಗಳ ಪೈಕಿ ಕೆಲವೇ ಕೆಲವನ್ನು ಪ್ರೇಕ್ಷಕ ಇಷ್ಟಪಟ್ಟಿದ್ದಾನೆ. ಉಳಿದವುಗಳಿಂದ ದೂರವೇ ಉಳಿದಿದ್ದಾನೆ. ಬೆತ್ತನಗೆರೆ ಚಿತ್ರದ ಕತೆ ಎಲ್ಲರಿಗೂ ಗೊತ್ತಿರುವಂಥದ್ದೆ. ಬೆತ್ತನಗೆರೆ ಸೀನ, ಶಂಕರ ನಡುವಣ ಮಾರಾಮಾರಿ ಕತೆಯೇ ಬೆತ್ತನಗೆರೆ ಚಿತ್ರದ ಕತೆ. ಇನ್ನು ಗ್ಯಾಂಗ್ ವಾರ್ ಕತೆಗಳು ಸಹ ಬೇಕಾದಷ್ಟು ಬಂದಿವೆ. ಬೆತ್ತನಗೆರೆ ಚಿತ್ರದಲ್ಲಿಯೂ ಎರಡು ಗ್ಯಾಂಗ್ ವಾರ್ ಕತೆ ಇದ್ದರೂ ನೋಡಿಸಿಕೊಂಡು ಹೋಗುತ್ತದೆ. ಮುಂದೆ ಏನಾಗುತ್ತದೆ ಎಂದು ಸುಲಭವಾಗಿ ಊಹಿಸಿದರೂ, ಪ್ರೇಕ್ಷಕನನ್ನು ಸ್ವಲ್ಪ ಮಟ್ಟಿಗೆ ಹಿಡಿದಿಟ್ಟುಕೊಳ್ಳುವಲ್ಲಿ ಚಿತ್ರದ ನಿರ್ದೇಶಕ ಮೋಹನ್ ಗೆದ್ದಿದ್ದಾರೆ. - ಎಚ್.ಮಹೇಶ್

ಬೇಲಿ ಹಾರದ ಬೆತ್ತನಗೆರೆ - ಕನ್ನಡ ಪ್ರಭ

ನಿರ್ದೇಶಕ ತೆರೆಯ ಮೇಲೆ ನಡೆದ ಕ್ರೈಂಗಳನ್ನು ನಿರೂಪಿಸಲು ನಿಷ್ಟವಾಗಿದ್ದರೆ ಪ್ರೇಕ್ಷನಿಗೂ ಸಿನೆಮಾ ಇಷ್ಟವಾಗುತ್ತಿತ್ತೇನೋ, ಆದರೆ ಅಪರಾಧಿಗಳ ವಿಜೃಂಭಣೆಗೆ ನಿರ್ದೇಶಕ ಟೊಂಕ ಕಟ್ಟಿ ನಿಲ್ಲುವುದಕ್ಕೂ ಹಾಗೂ ಅವರು ಮುಗ್ಧರು ಮತ್ತವರ ನಡೆಗಳೆಲ್ಲಾ ಆಕಸ್ಮಿಕ ಎಂಬ ಅಭಿಪ್ರಾಯ ರೂಪಿಸಲು ಪ್ರಯಾಸದಾಯಕವಾಗಿ ಪ್ರಯತ್ನಿಸಿರುವುದರಿಂದ ಸಿನೆಮಾ ಮಹಾ ಬೋರು ಹೊಡೆಸುತ್ತದೆ. ಸಿಕಿಬಿದ್ದು ಎನ್ ಕೌಂಟರ್ ಆಗುವುದಕ್ಕೂ ಮುಂಚಿತವಾಗಿ ಪೊಲೀಸರಿಗೆ ತಾನು ಮತ್ತು ತನ್ನ ಸಹೋದರ ಅಮಾಯಕರು ಎಂದು ಶಿವ ಪೊಲೀಸರಿಗೆ ಹೇಳುವ ಕಥೆಯಿಂದ ಆರಂಭವಾಗುವ ಸಿನೆಮಾ ಮತ್ತೆಲ್ಲಾ ಭೂಗತ ಪಾತಕಿಗಳ ಸಿನೆಮಾಗಳಂತೆ ಸೀದಾಸಾದವಾಗಿ ಮುಂದುವರೆಯುತ್ತದೆ. ಉದ್ವೇಗದ ತೀವ್ರತೆಯನ್ನು ಹೆಚ್ಚಿಸಲೆಂದು ಟಿಲ್ಟ್ ಶಾಟ್ಗಳನ್ನು ಯಥೇಚ್ಚವಾಗಿ ಬಳಸಿದ್ದರು, ನಿರೂಪಣೆಯಲ್ಲಿ, ಕಥಾ ಪಾತ್ರದ ಪರಿಕಲ್ಪನೆಯಲ್ಲಿ, ಸಂಭಾಷಣೆಯಲ್ಲಿ ಆ ಉದ್ವಿಗ್ನತೆ ಕಳೆದು ಹೋಗಿ ನಿರೂಪಣೆ ಬೇಸರ ಮೂಡಿಸುತ್ತದೆ. ಸಿನೆಮಾದ ಮುಖ್ಯ ಪಾತ್ರಧಾರಿಗಳಾದ ಶಿವ ಮತ್ತು ಶೇಖರರನ್ನು ಅಮಾಯಕರು ಎಂದು ಮತ್ತು ಅವರ ಸಾಹಸಗಳನ್ನು ವಿಜೃಂಭಿಸಲು ಹರಸಾಹಸಪಟ್ಟಿರುವ ನಿರ್ದೇಶಕ ನೈಜತೆಯಿಂದ ದೂರವುಳಿದರೇನೋ ಎಂಬ ಅನುಮಾನ ಕಾಡುತ್ತದೆ. ಇದಕ್ಕಾಗಿ ಸುಮಂತ್ ಮತ್ತು ಅಕ್ಷಯ್ ಅವರಿಗೆ ಉದ್ದುದ್ದ ಬೋಧನೆಯ ರೀತಿಯ ಸಂಭಾಷಣೆ ಅನಗತ್ಯವಾಗಿ ಬರೆಯಲಾಗಿದೆ. ನಟನೆಯಲ್ಲಿ ಕೂಡ ಈ ಇಬ್ಬರೂ ಯಾವುದೇ ಛಾಪು ಮೂಡಿಸುವುದಿಲ್ಲ. ಪ್ರೆಡಿಕ್ಟೆಬಲ್ ಆಗಿ ಮುಂದುವರೆಯುವ ಕಥೆ ಎಂದಿನ ಭೂಗತ ಸಿನೆಮಾಗಳಂತೆ ಕೊಲೆಗಳಾಗುವುದು, ತಲೆಗಳು ಉರುಳುವುದು ಮುಂತಾದ ಸಂಗತಿಗಳನ್ನು ವಿಜೃಂಭಿಸುವ ನಿರ್ದೇಶಕ ಅವುಗಳಿಗೆ ಅಗತ್ಯವಾದ ನೆಲೆ, ಕಾರಣ, ಯೋಜನೆ ಮತ್ತು ನಂತರದ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲು ವಿಫಲರಾಗುತ್ತಾರೆ. - G.N

MOVIE REVIEW: BETTANAGERE - Bangalore mirror

Here is another film that comes with a disclaimer that it is fictional, which, by the way, has become as silly as the 'statutory warning' on cigarette packs. Anyone with a little knowledge of Bengaluru's underbelly would have heard of the Bettanagere village and its notorious gangsters. This film is about the two most infamous gangsters from this village. A sibling rivalry goes horribly wrong when local politicians begin to play one against the other. The story has enough meat and there is ample action and drama on screen to make Bettanagere watchable. - Shyam Prasad S

English summary
Kannada Actor Sumanth Shailendra Babu and Akshay starrer Kannada Movie 'Bettanagere' has received mixed response from the critics. Here is the collection of reviews by Top News Papers of Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada