twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: ಅಚ್ಚುಕಟ್ಟಾದ 'ಬೋರಾಪುರ' ನೋಡಲು ಚೆಂದ

    By Bharath Kumar
    |

    ಚಿತ್ರದ ಹೆಸರು ಹೇಳುವಾಗೆ ಇದೊಂದು ಅಪ್ಪಟ ಹಳ್ಳಿ ಸಿನಿಮಾ. ಈ ಹಿಂದಿನ ಸಿನಿಮಾಗಳಂತೆ ಡಬ್ಬಲ್ ಮೀನಿಂಗ್ ಡೈಲಾಗ್ ಗಳು, ಭೂತ-ಪೇತ, ಸೆಂಚುರಿ ಗೌಡ, ಗಡ್ಡಪ್ಪ ಏನೂ ಈ ಚಿತ್ರದಲ್ಲಿಲ್ಲ. ಸುಭಿಕ್ಷವಾಗಿದ್ದ ಒಂದು ಗ್ರಾಮದಲ್ಲಿ ಹೊಸ ವಸ್ತುವೊಂದು ಬಂದಾಗ ಅಲ್ಲಿನ ಜನರಲ್ಲಿ ಆದ ಬದಲಾವಣೆಗಳು ಏನು ಎಂಬುದನ್ನ ಬಹಳ ಮುಗ್ದವಾಗಿ ಚಿತ್ರಿಸಿದ್ದಾರೆ. ಪೂರ್ತಿ ವಿಮರ್ಶೆ ಓದಲು ಮುಂದೆ ಓದಿ....

    ಚಿತ್ರ: ಬೋರಾಪುರ
    ನಿರ್ದೇಶಕ: ಆದಿತ್ಯ ಕುಣಿಗಲ್
    ಸಂಗೀತ: ವಿವೇಕ್ ಚಕ್ರವರ್ತಿ
    ನಿರ್ಮಾಪಕ: ಅಜೀತ್ ಕುಮಾರ್ ಗದ್ದಿ, ಮಧು ಬಸವರಾಜು, ರಕ್ಷಾ ಗದ್ದಿ, ಹಾಗೂ ಶಾಂತಲಾ ಮಧು
    ಕಲಾವಿದರು: ಪ್ರಶಾಂತ್, ಅನಿತಾ ಭಟ್, ಸೂರ್ಯ ಸಿದ್ಧಾರ್ಥ, ಅಮಿತ್ ರಂಗನಾಥ್ ಮತ್ತು ಇತರರು
    ಬಿಡುಗಡೆ: ಏಪ್ರಿಲ್ 27, 2018

    ಅಚ್ಚುಕಟ್ಟಾದ ಹಳ್ಳಿಯ ಸೊಗಡಿನ ಕಥೆ

    ಅಚ್ಚುಕಟ್ಟಾದ ಹಳ್ಳಿಯ ಸೊಗಡಿನ ಕಥೆ

    'ಡೇಸ್ ಆಫ್ ಬೋರಾಪುರ' ಒಂದು ಹಳ್ಳಿಯ ಕಥೆ. ಇಲ್ಲಿ ಎಲ್ಲರೂ ಅಣ್ಣ-ತಮ್ಮ-ಸಂಬಂಧಿಗಳಂತೆ ಯಾವುದೇ ಜಾತಿ-ಭೇದ ಭಾವವಿಲ್ಲದೇ ಅನ್ಯೋನ್ಯವಾಗಿ ಬದುಕುತ್ತಿದ್ದಾರೆ. ಸಾಲ, ಬಡ್ಡಿ, ಎಂಬ ಸಮಸ್ಯೆಯಲ್ಲಿ ಬೇಯುತ್ತಿದ್ದ ಊರಿನಲ್ಲಿ ಎಟಿಎಂ ಮಿಷನ್ ಒಂದನ್ನ ಬ್ಯಾಂಕಿನವರು ಇಡುತ್ತಾರೆ. ಇದರ ಆಗಮನದಿಂದ ಊರಿನಲ್ಲಿ ಏನೇಲ್ಲಾ ಬದಲಾವಣೆಗಳು ಆಗುತ್ತೆ ಎಂಬುದು ಚಿತ್ರಕಥೆ.

    ಈ ಹಳ್ಳಿಯಲ್ಲಿ ಎಲ್ಲವೂ ಇದೆ

    ಈ ಹಳ್ಳಿಯಲ್ಲಿ ಎಲ್ಲವೂ ಇದೆ

    ಊರಿನ ಗೌಡ್ರು ಅಂದ್ರೆ ಎಲ್ಲರಿಗೂ ಗೌರವ. ಊರಿನ ಎಲ್ಲರ ಸಮಸ್ಯೆಯನ್ನೂ ತನ್ನದೇ ಎಂದು ಸಹಾಯ ಮಾಡುವ ಗೌಡ. ಪ್ರೀತಿಸಿದ ಹುಡುಗಿಯನ್ನ ಮದುವೆಯಾಗದ ಭಗ್ನಪ್ರೇಮಿಯಾಗಿರುವ ಪ್ರೇಮಿ. ಪ್ರೀತಿಸದವಳ ತಂದೆಯನ್ನ ಒಪ್ಪಿಸಿ ಮದುವೆ ಆಗಬೇಕು ಎಂಬ ಮತ್ತೊಬ್ಬ ಯುವಕ. ಜೀವನಕ್ಕಾಗಿ ಸಾಲ ಪಡೆದಿರುವ ವ್ಯಕ್ತಿ. ಸಾಲ ಕಟ್ಟದಿದ್ದಾಗ ಬಡ್ಡಿ ವಸೂಲಿ ಮಾಡುವ ಸಾಲ ಕೊಟ್ಟವ. ಇವರೆಲ್ಲರ ಮಧ್ಯೆ ಪರಪುರಷನ ಸಹವಾಸ ಮಾಡುವ ಹೆಂಗಸು. ಇದೆಲ್ಲರ ಜೊತೆಗೆ ರೈತರ ಸಮಸ್ಯೆಗಳು....ಎಲ್ಲವೂ ತೆರೆಮೇಲೆ ನೋಡುವಾಗ ನಾವೇ ಆ ಹಳ್ಳಿಯಲ್ಲಿ ಇದ್ದೀವಿ ಎಂಬ ಭಾವನೆ ಮೂಡುತ್ತೆ. ಅಷ್ಟರ ಮಟ್ಟಿಗೆ ನೀಜವಾಗಿ ಸಿನಿಮಾ ಮೂಡಿ ಬಂದಿದೆ.

    ನೈಜವಾಗಿದೆ ಕಲಾವಿದರ ಅಭಿನಯ

    ನೈಜವಾಗಿದೆ ಕಲಾವಿದರ ಅಭಿನಯ

    ಭಗ್ನ ಪ್ರೇಮಿ ಪಾತ್ರದಲ್ಲಿ ಪ್ರಶಾಂತ್, ವಿದ್ಯಾವಂತ ಹಳ್ಳಿ ಹುಡುಗನಾಗಿ ಸೂರ್ಯ ಚಿತ್ರದ ಮುಖ್ಯ ಪಾತ್ರಗಳು. ಈ ಇಬ್ಬರು ಕೂಡ ಬಹಳ ಪಾತ್ರದಲ್ಲಿ ಜೀವಿಸಿದ್ದಾರೆ. ವಿದ್ಯಾವಂತೆ ಹುಡುಗಿಯಾಗಿ ಅಮಿತಾ ರಂಗನಾಥ್. ಮುಗ್ಧ ಹುಡುಗಿಯಾಗಿ ಪ್ರಕೃತಿ ಹಾಗೂ ನಾಟಕ ಕಲಾವಿದೆ ಪಾತ್ರದಲ್ಲಿ ಅನಿತಾ ಭಟ್ ಇಷ್ಟವಾಗ್ತಾರೆ. ಈ ಪಾತ್ರಗಳ ಜೊತೆಗೆ, ಮಾದ, ಫಕೀರಾ, ಸಿದ್ದ, ಗೌಡ್ರು, ಮೇಷ್ಟ್ರು, ಪಿಸಿ, ಮ್ಯಾನೇಜರ್ (ಶಫಿ), ಮತ್ತು ಇಬ್ಬರು ಕಳ್ಳರು ಹೀಗೆ ಪ್ರತಿಯೊಂದು ಪಾತ್ರಗಳು ಅಚ್ಚುಕಟ್ಟಾಗಿ ಅಭಿನಯಿಸಿದ್ದು, ನೋಡುಗರಿಗೆ ಖುಷಿ ನೀಡುತ್ತೆ.

    ತಾಂತ್ರಿಕವಾಗಿ ಸಿನಿಮಾ

    ತಾಂತ್ರಿಕವಾಗಿ ಸಿನಿಮಾ

    ಒಂದು ಹಳ್ಳಿ ಸೊಗಡಿನ ಕಥೆಯನ್ನ ಯಾವುದೇ ಮುಜುಗರದ ದೃಶ್ಯಗಳು ಇಲ್ಲದೇ, ಎಲ್ಲೂ ಬೋರ್ ಮಾಡದೆ, ಆಸಕ್ತಿದಾಯಕವಾಗಿ, ಕುತೂಹಲದಿಂದ ನಿರ್ದೇಶನ ಮಾಡಿದ್ದಾರೆ ಆದಿತ್ಯ ಕುಣಿಗಲ್. ಈ ಹಳ್ಳಿ ಕತೆಗೆ ತಕ್ಕ ಸಂಗೀತ ವಿವೇಕ್ ಚಕ್ರವರ್ತಿ ನೀಡಿದ್ದಾರೆ. ಯೋಗರಾಜ್ ಭಟ್ ಹಿನ್ನೆಲೆ ಧ್ವನಿ ಮತ್ತು ಜಗ್ಗೇಶ್ ಹಾಡಿರುವ ಒಂದು ಹಾಡು ಚೆನ್ನಾಗಿದೆ.

    ಅಬ್ಬರವಿಲ್ಲದ ಕಮರ್ಷಿಯಲ್ ಸಿನಿಮಾ

    ಅಬ್ಬರವಿಲ್ಲದ ಕಮರ್ಷಿಯಲ್ ಸಿನಿಮಾ

    ಬೋರಾಪುರ ಯಾವುದೇ ಆಡಂಬರ, ಫೈಟ್, ಸಾಂಗ್ಸ್, ಜಬರ್ ದಸ್ತ್ ಡೈಲಾಗ್ಸ್, ಮಾಸ್ ಎಂಟ್ರಿ, ಮಸಾಲೆ ಅಂಶಗಳು ಯಾವುದು ಇಲ್ಲದ ಕಮರ್ಷಿಯಲ್ ಸಿನಿಮಾ. ಇದು ಆರ್ಟ್ ಮೂವಿನೂ ಅಲ್ಲ, ಕಮರ್ಷಿಯಲ್ ಸಿನಿಮಾನೂ ಅಲ್ಲ ಎರಡು ಕಡೆ ಬ್ಯಾಲೆನ್ಸ್ ಮಾಡಿದ್ದಾರೆ. ಬೋರ್ ಮಾಡದ ಬೋರಾಪುರ ಚಿತ್ರವನ್ನ ಆರಾಮಾಗಿ ನೋಡಬಹುದು.

    English summary
    Prashant, Anita Bhat, Surya Siddhartha, Amita Ranganath and others starrer borapura movie review. the movie has released today (april 27th).
    Friday, April 27, 2018, 15:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X