twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಸಿನಿ ವಿಮರ್ಶಕರು ಬಿಗಿದಪ್ಪಿ ಮುದ್ದಾಡದ 'ಬಾಕ್ಸರ್'.!

    By Harshitha
    |

    'ದಿಲ್ ರಂಗೀಲಾ' ಚಿತ್ರದ ಬಳಿಕ ಒಂದು ವರ್ಷ ತೆಗೆದುಕೊಂಡು ಪ್ರೀತಮ್ ಗುಬ್ಬಿ ನಿರ್ದೇಶಿಸಿರುವ ಸಿನಿಮಾ 'ಬಾಕ್ಸರ್'. ಎಂದಿನಂತೆ ಖಾಲಿ ಪೋಲಿ ಲವ್ ಸ್ಟೋರಿ ಸಿನಿಮಾ ಮಾಡದೆ, ಈ ಬಾರಿ ಆಕ್ಷನ್ ಸಿನಿಮಾ ಮಾಡಿದ್ದಾರೆ ಪ್ರೀತಮ್ ಗುಬ್ಬಿ.

    ಆಕ್ಷನ್ ಜೊತೆ ಲವ್-ಸೆಂಟಿಮೆಂಟ್ ಹದವಾಗಿ ಬೆರೆತಿರುವ 'ಬಾಕ್ಸರ್' ಸಿನಿಮಾ ನಿಮ್ಮ ಮುಂದೆ ಬಂದಿದ್ದಾಗಿದೆ. 'ಬಾಕ್ಸರ್' ಆಗಿ ಧನಂಜಯ್ ನೀಡಿರುವ ಅಮೋಘ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕುರುಡಿ ಪಾತ್ರದಲ್ಲಿ ಕೃತಿಕಾ ಜಯಕುಮಾರ್ ಕೂಡ ಎಲ್ಲರ ಗಮನ ಸೆಳೆದಿದ್ದಾರೆ. [ವಿಮರ್ಶೆ: ಸ್ಪೆಷಲ್ ಹುಡುಗನ 'ಬಾಕ್ಸರ್' ಪ್ರೇಕ್ಷಕರಿಗೆ ಕಿಕ್ ಕೊಡುತ್ತೆ.!]

    'ಬಾಕ್ಸರ್' ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ಕಿದ್ದರೂ, ವಿಮರ್ಶಕರು ಮಾತ್ರ ಫುಲ್ ಮಾರ್ಕ್ಸ್ ನೀಡಿಲ್ಲ. ಇದಕ್ಕೆ ಕಾರಣ ಏನು? 'ಬಾಕ್ಸರ್' ಚಿತ್ರದ ಬಗ್ಗೆ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ....ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ...

    ಪ್ರೇಮದ ಅತಿಯೂ ಮಿತಿಯೂ... - ಪ್ರಜಾವಾಣಿ

    ಪ್ರೇಮದ ಅತಿಯೂ ಮಿತಿಯೂ... - ಪ್ರಜಾವಾಣಿ

    ‘ಬಾಕ್ಸರ್' ಎಂದಾಕ್ಷಣ ಇಡೀ ಚಿತ್ರ ಬಾಕ್ಸಿಂಗ್‌ಗೇ ಸೀಮಿತ ಎಂದುಕೊಂಡರೆ ತಪ್ಪು. ನಿದ್ದೆ ಕೆಡಿಸಿದ ಅಂಧ ಹುಡುಗಿ ಲಕ್ಷ್ಮಿಯ (ಕೃತಿಕಾ) ಪ್ರೀತಿಯಲ್ಲಿ ಬೀಳುತ್ತಾನೆ ರಾಜ್. ಈ ಪ್ರೇಮ ಪ್ರಸಂಗವೇ ಬಹುತೇಕ ದೃಶ್ಯಗಳನ್ನು ನುಂಗಿದೆ. ಮೊದಮೊದಲು ಇವರ ಪ್ರೀತಿ, ಮಾತುಗಳು ಲವಲವಿಕೆಯಿಂದಲೇ ನೋಡಿಸಿಕೊಂಡರೂ, ಎಳೆದಂತೆ ಅನ್ನಿಸುವುದೂ ಸುಳ್ಳಲ್ಲ. ತಾನು ಪ್ರೀತಿಸಿದ ಹುಡುಗಿಗೆ ಕಣ್ಣು ಬರುವಂತೆ ಮಾಡಲು ರಾಜ್ ತನ್ನ ಜೀವವನ್ನೇ ಪಣಕ್ಕಿಟ್ಟು ಬಾಕ್ಸಿಂಗ್‌ನಿಂದ ಹಣ ಸಂಪಾದಿಸಲು ಬ್ಯಾಂಕಾಕ್‌ಗೆ ತೆರಳುತ್ತಾನೆ. ಅದು ಸಾವು ಬದುಕಿನ ಆಟ. ಆ ಆಟವನ್ನು ಗೆಲ್ಲುವ ರಾಜ್ ಕಾಲಿನ ಸ್ವಾಧೀನ ಕಳೆದುಕೊಳ್ಳುತ್ತಾನೆ. ಬ್ಯಾಂಕಾಕ್‌ನಿಂದ ವಾಪಸಾದ ರಾಜ್, ಈಗಷ್ಟೇ ಜಗತ್ತನ್ನು ಕಾಣಲಾರಂಭಿಸಿದವಳಿಗೆ ತಾನು ಹೊರೆಯಾಗಿ ಆಕೆಯ ಬಾಳನ್ನು ಮತ್ತೆ ಕತ್ತಲು ಮಾಡಬಾರದು ಎಂದುಕೊಂಡು ದೂರವಾಗುವ ಪ್ರಯತ್ನ ಮಾಡುತ್ತಾನೆ. ತಾನು ಕಂಡೇ ಇರದ ತನ್ನ ಪ್ರೇಮಿಯ ಮುಖವನ್ನು ಲಕ್ಷ್ಮೀ ಗುರುತಿಸುತ್ತಾಳಾ, ಪ್ರೀತಿ ಸುಖಾಂತವೇ- ಇಂಥ ಪ್ರಶ್ನೆಗಳಿಗೆ ಚಿತ್ರ ನೋಡಿಯೇ ಉತ್ತರ ಕಂಡುಕೊಳ್ಳಬೇಕು. -ಗಣೇಶ್ ವೈದ್ಯ

    ಪಂಚ್ ಕೊಡದ ಬಾಕ್ಸರ್ - ವಿಜಯ ಕರ್ನಾಟಕ

    ಪಂಚ್ ಕೊಡದ ಬಾಕ್ಸರ್ - ವಿಜಯ ಕರ್ನಾಟಕ

    ಧನಂಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಬಾಕ್ಸರ್'ನ ಕತೆ ಈಗಾಗಲೇ ಹಲವು ಚಿತ್ರಗಳಲ್ಲಿ ಬಂದುಹೋಗಿರುವಂಥಾದ್ದು. ಮಾಮೂಲಿ ಪ್ರೇಮ ಕತೆಯನ್ನು ಸರಳವಾಗಿ ಸಾದಾ ಸೀದಾ ತೋರಿಸಿದ್ದಾರೆ ನಿರ್ದೇಶಕ ಪ್ರೀತಂ ಗುಬ್ಬಿ. ಯಾವುದೇ ಅತಿರೇಕಗಳು, ಅಬ್ಬರಗಳು ಇಲ್ಲದ ಸದಭಿರುಚಿಯ ಚಿತ್ರ ಎಂಬ ಸಮಾಧಾನ ಉಂಟು ಮಾಡಿದರೂ, ಕುತೂಹಲವನ್ನೂ ಮೂಡಿಸದೆ ಸಪ್ಪೆ ಎನಿಸುತ್ತದೆ. ರಾಜ (ಧನಂಜಯ್) ಗಲ್ಲಿ ಬಾಕ್ಸರ್. ಟೋಲ್ ಗೇಟ್‌ನಲ್ಲಿ ಶುಲ್ಕ ವಸೂಲಿ ಮಾಡೋ ಹುಡುಗ. ಅದಕ್ಕೂ ಮೊದಲು ತನ್ನ ಬಾಕ್ಸಿಂಗ್ ಕಲೆಯನ್ನು ಬಳಸಿಕೊಂಡು ಸಾಲ ವಸೂಲಿಗಾರನ ಕೆಲಸ ಮಾಡುತ್ತಿದ್ದವನು. ಇವನ ಕಾಟಕ್ಕೆ ಒಬ್ಬ ಕಣ್ಣೆದುರೇ ಬೆಂಕಿಗೆ ಆತ್ಮಾಹುತಿ ಮಾಡಿಕೊಂಡಾಗ ಒಳ್ಳೆಯವನಾಗಿ ಆಸ್ಪತ್ರೆಯಲ್ಲಿರುವವರಿಗೆ ಸಹಾಯ ಮಾಡುತ್ತಿರುತ್ತಾನೆ. ಆಗಾಗ್ಗೆ ಅಣ್ಣನಂತೆ ಇರೋ ಬೆಟ್ಟಪ್ಪನ ಜೇಬು ತುಂಬಿಸಲು ಗಲ್ಲಿಯಲ್ಲಿ ಫೈಟ್ ಮಾಡುತ್ತಿರುತ್ತಾನೆ. ಹೊಡೆಯೋದ್ರಲ್ಲಿ ಇವನದು ಚಿರತೆ ವೇಗ. ಇವನಿಗೆ ವಿದ್ಯಾವಂತೆಯಾದ ಅಂಧ ಹುಡುಗಿ ಲಕ್ಷ್ಮಿಯ ಜತೆ ಪ್ರೀತಿ ಶುರುವಾಗುತ್ತದೆ. ಒಮ್ಮೆ ಅವಳನ್ನು ಕೆಟ್ಟ ಬಾಸ್‌ನಿಂದ ರಕ್ಷಿಸುತ್ತಾನೆ. ನಂತರ ಅವಳೂ ಇವನನ್ನು ಪ್ರೀತಿಸಲಾರಂಭಿಸುತ್ತಾಳೆ. ಲಕ್ಷ್ಮಿಯ ಆಸೆಯಂತೆ ಕಣ್ಣಿನ ಸರ್ಜರಿ ಮಾಡಿಸಲು ಆಸ್ಪತ್ರೆಗೆ ದಾಖಲು ಮಾಡಿ, ಸರ್ಜರಿಗೆ ಹಣ ಹೊಂದಿಸಲು ವಿದೇಶದಲ್ಲಿ ಬೆಟ್ಟಿಂಗ್ ದಂಧೆಗಾಗಿ ನಡೆಯುವ ಬಾಕ್ಸಿಂಗ್‌ಗೆ ಹೋಗುತ್ತಾನೆ. ನಂತರ ಅವನು ಹಿಂತಿರುಗುತ್ತಾನಾ? ಅವಳಿಗೆ ಕಣ್ಣು ಬರುತ್ತಾ? ಅನ್ನೋದನ್ನು ಸಿನಿಮಾದಲ್ಲಿ ನೋಡಬೇಕು. - ಪದ್ಮಾ ಶಿವಮೊಗ್ಗ

    ಸಿಟಿ ಲೈಟ್ಸ್ ಛಾಯೆಯಲ್ಲಿ ಬಾಕ್ಸರ್ ಕಿಕ್ - ಕನ್ನಡಪ್ರಭ

    ಸಿಟಿ ಲೈಟ್ಸ್ ಛಾಯೆಯಲ್ಲಿ ಬಾಕ್ಸರ್ ಕಿಕ್ - ಕನ್ನಡಪ್ರಭ

    ಹೆಚ್ಚೇನೂ ತಿರುವುಗಳಿಲ್ಲದೆ, ಜೊತೆಗೆ ಯಾವುದೇ ಅತಿರೇಕಗಳಿಲ್ಲದೆ ಒಂದು ಸರಳ ಪ್ರೇಮಕಥೆಯನ್ನು ಸಶಕ್ತ ತಾಂತ್ರಿಕ ವೈಭವದೊಂದಿಗೆ ಕಟ್ಟಿಕೊಡಲು ನಿರ್ದೇಶಕ ಯಶಸ್ವಿಯಾಗಿದ್ದಾರೆ. ಕ್ಲೀಶೆಯ ಐಡಿಯಲ್ ಪಾತ್ರಗಳನ್ನು, ಘಟನೆಗಳನ್ನು ಸೃಷ್ಟಿಸುವ ಬದಲು ಕೆಲವು ಸಂದಿಗ್ಧ ಸನ್ನಿವೇಶಗಳನ್ನು ಸೃಷ್ಟಿಸಲು ನಿರ್ದೇಶಕನಿಗೆ ಸಾಧ್ಯವಾಗಿದ್ದಲ್ಲಿ ಸಿನೆಮಾ ಇನ್ನಷ್ಟು ಕಳೆಕಟ್ಟುತ್ತಿತ್ತು. ಸದಾ ಒಳ್ಳೆಯದನ್ನೇ ಚಿಂತಿಸುವ ಒಳ್ಳೆಯದನ್ನೇ ಮಾಡುವ ಫೀಲ್ ಗುಡ್ ನಾಯಕ-ನಾಯಕಿಯರಾಚೆಗಿನ ಬದುಕನ್ನು ಕಟ್ಟಿಕೊಡುವ ಪ್ರಯೋಗಗಳು ಏಕಾಗುವುದಿಲ್ಲ ಎಂಬ ಪ್ರಶ್ನೆಯೂ ಮೂಡದೆ ಇರದು. ೫-ಸ್ಟಾರ್ ಹೋಟೆಲಿನಲ್ಲಿ ಶಿಷ್ಟಾಚಾರ ಗೊತ್ತಿರದ ನಾಯಕ, ಫೈವ್ ಸ್ಟಾರ್ ಹೋಟೆಲ್ಲಿನ ಊಟ ಹಿಡಿಸದೆ, ಪಾನಿ ಪುರಿ ಇಷ್ಟ ಪಡುವ ನಾಯಕಿ ಹೀಗೆ 'ಪೊಲಿಟಿಕಲ್ಲಿ ಕರೆಕ್ಟ್' ಗುಣಗಳನ್ನೇ ನಾಯಕ ನಾಯಕಿಯರಿಗೆ ಆರೋಪಿಸುವ ಜಾಣ್ಮೆ ಕಮರ್ಷಿಯಲ್ ದೃಷ್ಟಿಯಿಂದ ಹಿತವಾದರೂ ಇದನ್ನೇ ಪುನರಾವರ್ತಿತವಾಗಿ ನೋಡಿರುವ ಪ್ರೇಕ್ಷಕ ಇನ್ನೂ ಹೆಚ್ಚಿನದನೇನನ್ನೋ ಬಯಸುತ್ತಾನೆ ಎಂಬುದು ಕೂಡ ನಿಜವೇ. ಬಡ್ಡಿ ಸಂಗ್ರಹಿಸುವ ರಾಜ, ತನ್ನ ಹಿಂಸಾಪ್ರವೃತ್ತಿಗೆ ಸ್ವಯಂ ಮನನೊಂದು ಒಳ್ಳೆಯನಾಗುತ್ತಾನೆ ಎಂಬ ನಾಯಕನ ಎಸ್ಟಾಬ್ಲಿಶ್ಮೆಂಟ್ ದ್ವಿತೀಯಾರ್ಧದಲ್ಲಿ ಪ್ರೆಶ್ ಆಗಿ ಕಾಣಿಸಿಕೊಂಡರೂ ನಾಯಕಿಯ ಮಟ್ಟಿಗೆ ಅಂತಹ ಯಾವುದೇ ಪ್ರಯತ್ನಗಳು ಇಲ್ಲ. ಅನಾಥೆ-ನತದೃಷ್ಟ ಅಂಧೆ-ಚೆಲುವೆ-ಬುದ್ಧಿವಂತೆ ಎಂಬುದನ್ನು ಬಿಟ್ಟರೆ ಪಾತ್ರದ ಗಟ್ಟಿ ನಿರೂಪಣೆಯಲ್ಲಿ ಎಡವಲಾಗಿದೆ. ಆಕ್ಷನ್ ದೃಶ್ಯಗಳಲ್ಲಿ- ಒರಟಾದ ನಟನೆಯಲ್ಲಿ ಭರವಸೆ ಮೂಡಿಸುವ ನಟ ಧನಂಜಯ್, ರೊಮ್ಯಾಂಟಿಕ್ ಆಗುವಾಗ ಸಪ್ಪೆ ಎನಿಸುತ್ತಾರೆ. ಕೃತಿಕಾ ಪರಿಪೂರ್ಣ ಪ್ರಮಾಣದ ತಮ್ಮ ಚೊಚ್ಚಲ ಸಿನೆಮಾದಲ್ಲಿ ಭರವಸೆ ಮೂಡಿಸುತ್ತಾರೆ. ರಂಗಾಯಣ ರಘು ಅವರ ನಟನೆ ಎಂದಿನಂತೆ ಚೆನ್ನಾಗಿದೆ. ಹರಿಕೃಷ್ಣ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಪರವಾಗಿಲ್ಲ. - GN

    Boxer Movie Review - Times of India

    Boxer Movie Review - Times of India

    Preetham Gubbi's strength as a filmmaker lies in his portrayal of urban love stories. In Boxer, which also has a little action thrown in, he has taken more than just inspiration from the Korean romantic film Always, but has altered a few things. While the film works at most times, the second half does seem to stretch a bit too much, even with the film's relatively short duration. - Sunayana Suresh

    Boxer Movie Review - Bangalore Mirror

    Boxer Movie Review - Bangalore Mirror

    Boxer is more or less a retelling of the Korean movie Always/Only You, though all stories where the leading lady is blind may trace their origin to Charlie Chaplin's City Lights. Preetham Gubbi manages to convey some of the emotional content while letting songs take over the remaining narrative. What sets Boxer apart is the setting. The protagonist is a prizefighter, a character we hardly find in Kannada movies. The film also tries to be very personal and most of the interaction is between the two lead actors. Boxer overall is a cute little love story wrapped in four kickboxing fights and Harikrishna's melodies. - Shyam Prasad S

    Boxer: In the Ring of Love - The New Indian Express

    Boxer: In the Ring of Love - The New Indian Express

    Preetham Gubbi's obsession with love stories does stun. His ability to weave stories through human emotions is made of classic material. He proved it as a script writer for Mungaru Male. With Boxer, while he has again interlaced feelings, what stands out is strength he has been able to bring in the fragile contrasts of emotions. While the combination of love and rage has been tried umpteen times, Gubbi manages to nudge excellence in his own way, but his success comes in the contrast in his characters. While Raja (Dhananjay), a street boxer represents ruggedness and power, Lakshmi (Kruthika Jayakumar) as a blind girl depicts helplessness. The contrast is applaudable when the characterisation gets a reversal - Raja's helplessness and Lakshmi's inner strength taking their love to its destined abode. - A Sharadhaa

    English summary
    Dhananjay starrer Kannada Movie 'Boxer' has received mixed response from the critics. Here is the collection of reviews by Top News Papers of Karnataka.
    Monday, November 23, 2015, 16:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X