For Quick Alerts
  ALLOW NOTIFICATIONS  
  For Daily Alerts

  ಚಿರು ಅಭಿನಯದ 'ಚಂದ್ರಲೇಖ' ಚಿತ್ರ ವಿಮರ್ಶೆ

  By ಉದಯರವಿ
  |

  ಕಾಮಿಡಿ, ಥ್ರಿಲ್ಲಿಂಗ್ ಹಾಗೂ ಹಾರರ್ ಅಂಶಗಳನ್ನು ಹದವಾಗಿ ಬೆರೆಸಿ ಮಾಡಿದ ಚಿತ್ರವಿದು. ಆಕಡೆ ತೀರಾ ಹಾರರ್ ಅಲ್ಲದ ಈಕಡೆ ತೀರಾ ಕಾಮಿಡಿ ಅಲ್ಲದ ವಿಭಾಗಕ್ಕೆ ಈ ಚಿತ್ರವನ್ನು ಸೇರಿಸಬಹುದು. ಆ ಮಟ್ಟಿಗೆ ಇದೊಂದು ವಿಭಿನ್ನ ಪ್ರಯೋಗ ಅನ್ನಬಹುದು.

  ಆದರೆ ಈ ಚಿತ್ರದ ಸಂಪೂರ್ಣ ಕ್ರೆಡಿಟ್ ಸಿಗೋದು ಮಾತ್ರ ತೆಲುಗಿನ 'ಪ್ರೇಮ ಕಥಾ ಚಿತ್ರಂ'ಗೆ. ಏಕೆಂದರೆ 'ಚಂದ್ರಲೇಖ' ಚಿತ್ರ ಅದರ ಪಡಿಯಚ್ಚು. ತೆಲುಗು ಚಿತ್ರವನ್ನು ಯಥಾವತ್ತಾಗಿ ಕನ್ನಡಕ್ಕೆ ತಂದಿದ್ದಾರೆ ಓಂ ಪ್ರಕಾಶ್ ರಾವ್.

  ಇಲ್ಲಿ ಅವರ ತನ ಎನುವುದು ಏನೂ ಇಲ್ಲ. ಎಲ್ಲವೂ ರೆಡಿಮೇಡ್. ಹಾಗಾಗಿ ಇದೊಂದು ರೆಡಿಮೇಡ್ ಚಿತ್ರಾನ್ನ. ಓರಿಜಿನಲ್ ಚಿತ್ರ ನೋಡದವರಿಗೆ ಚಿತ್ರಾನ್ನ ರುಚಿಸುತ್ತದೆ. ಇಲ್ಲದಿದ್ದರೆ ಹಳಸಲು ಚಿತ್ರಾನ್ನದಂತೆ ಭಾಸವಾಗುತ್ತದೆ.

  Rating:
  2.5/5

  ಚಿತ್ರ: ಚಂದ್ರಲೇಖ

  ನಿರ್ಮಾಪಕರು: ಕೆ ವಿ ಶ್ರೀಧರ್ ರೆಡ್ಡಿ

  ನಿರ್ದೇಶನ: ಓಂ ಪ್ರಕಾಶ್ ರಾವ್

  ಛಾಯಗ್ರಹಣ: ರವಿಕುಮಾರ್

  ಸಂಗೀತ:ಜೆ.ಬಿ

  ಸಂಕಲನ: ಲಕ್ಷ್ಮಣ್ ರೆಡ್ಡಿ

  ಸಂಭಾಷಣೆ: ಎಂ.ಎಸ್.ರಮೇಶ್

  ಪಾತ್ರವರ್ಗ: ಚಿರಂಜೀವಿ ಸರ್ಜಾ, ಸಾನ್ವಿ ಶ್ರೀನಿವಾಸ್, ನಾಗಶೇಖರ್, ಸಾಧು ಕೋಕಿಲ ಮುಂತಾದವರು.

  ಚಿರಂಜೀವಿ ಸರ್ಜಾ ಲೀಲಾಜಾಲ ಅಭಿನಯ

  ಚಿರಂಜೀವಿ ಸರ್ಜಾ ಲೀಲಾಜಾಲ ಅಭಿನಯ

  ಇನ್ನು ನಟ ಚಿರಂಜೀವಿ ಸರ್ಜಾ ಅವರಿಗೆ ಇದು ಎರಡನೆಯ ಹಾರರ್ ಚಿತ್ರ. ಈ ಮೊದಲು ಅವರು 'ವಿಜಲ್' ಚಿತ್ರದಲ್ಲಿ ಅಂಥಹದ್ದೇ ಪಾತ್ರ ಪೋಷಿಸಿದ್ದರು. ಈಗಲೂ ಆಷ್ಟೇ. ಅವರ ಹಾವಭಾವಗಳಲ್ಲಿ ವ್ಯತ್ಯಾಸವಿಲ್ಲ. ಲೀಲಾಜಾಲವಾಗಿ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ.

  ಬಹುತೇಕ ಕಥೆ ನಡೆಯುವುದು ಗೆಸ್ಟ್ ಹೌಸ್ ನಲ್ಲಿ

  ಬಹುತೇಕ ಕಥೆ ನಡೆಯುವುದು ಗೆಸ್ಟ್ ಹೌಸ್ ನಲ್ಲಿ

  ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸುವ ನಾಲ್ಕು ಮಂದಿಯ ಕಥೆ ಇದು. ಆವರು ಆಯ್ಕೆ ಮಾಡಿಕೊಳ್ಳುವ ಸ್ಥಳ ಗೆಸ್ಟ್ ಹೌಸ್. ಬಹುತೇಕ ಕಥೆ ಆ ಗೆಸ್ಟ್ ಹೌಸ್ ನಲ್ಲೇ ನಡೆಯುತ್ತದೆ.

  ಇಷ್ಟಕ್ಕೂ ಚಿತ್ರದ ಕಥೆ ಏನು?

  ಇಷ್ಟಕ್ಕೂ ಚಿತ್ರದ ಕಥೆ ಏನು?

  ಇವರೆಲ್ಲಾ ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದುಕೊಂಡರು. ಚಂದು (ಚಿರಂಜೀವಿ ಸರ್ಜಾ) ನಾಯಕಿಯನ್ನು ಅಪ್ಪಿಕೊಳ್ಳಲು ಹೋದಾಗ ಏನಾಗುತ್ತದೆ. ಐಶೂ (ಸಾನ್ವಿ) ಮೈಮೇಲೆ ದೆವ್ವ ಬಂದಂತೆ ಆಡಲು ಕಾರಣ ಏನು ಎಂಬುದೆ ಚಿತ್ರದ ಕಥಾಕಾಲಕ್ಷೇಪ.

  ಭರವಸೆ ಮೋಡಿಸಿದ ನಾಯಕಿ ಸಾನ್ವಿ

  ಭರವಸೆ ಮೋಡಿಸಿದ ನಾಯಕಿ ಸಾನ್ವಿ

  ಹೊಸ ಪರಿಚಯ ಸಾನ್ವಿ ಶ್ರೀನಿವಾಸ್ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಚಂದು ಅಪ್ಪಿಕೊಳ್ಳಲು ಹೋದಾಗ ಮಾತ್ರ ಅವರ ಕಣ್ಣುಗಳನ್ನು ನೋಡಲು ಎರಡು ಕಣ್ಣು ಸಾಲದು. 'ಆಪ್ತಮಿತ್ರ' ಚಿತ್ರದ ಸೌಂದರ್ಯಾ ಕಣ್ಣುಗಳು ನೋಡಿದ ಅನುಭವ ಆಗುತ್ತದೆ ಪ್ರೇಕ್ಷಕರಿಗೆ.

  ಛಾಯಾಗ್ರಹಣ, ಸಂಗೀತ ಓಕೆ

  ಛಾಯಾಗ್ರಹಣ, ಸಂಗೀತ ಓಕೆ

  ಇಡೀ ಚಿತ್ರವನ್ನು ಒಂದೇ ಮನೆಯಲ್ಲಿ ತೆಗೆದಿರುವುದು ವಿಶೇಷ. ಕ್ಯಾಮೆರಾ ವರ್ಕ್ (ರವಿಕುಮಾರ್) ಚೆನ್ನಾಗಿದೆ. ಸಂಗೀತ, ಹಿನ್ನೆಲೆ ಸಂಗೀತವೂ (ಜೆ.ಬಿ) ಸನ್ನಿವೇಶಗಳಿಗೆ ತಕ್ಕಂತೆ ಮಿಡಿದಿದೆ. ಎಂ.ಎಸ್.ರಮೇಶ್ ಅವರ ಸಂಭಾಷಣೆಯಲ್ಲಿ ಪಂಚ್ ಮಿಸ್ ಆಗಿದೆ.

  ರೀಮೇಕ್ ನಲ್ಲಿ ಓಂಗೆ ಯಾರು ಸಾಟಿ

  ರೀಮೇಕ್ ನಲ್ಲಿ ಓಂಗೆ ಯಾರು ಸಾಟಿ

  ಚಿತ್ರ ರೀಮೇಕ್ ಆದರೂ ಹಾಡುಗಳಲ್ಲಿ ಮಾತ್ರ ತಮ್ಮತನ ಕಾದಿಟ್ಟುಕೊಂಡಿದ್ದಾರೆ ಓಂ. ಅವರು ಈಗಾಗಲೇ ಹಲವಾರು ಕಾಮಿಡಿ ಚಿತ್ರಗಳನ್ನು ಮಾಡಿರುವ ಕಾರಣ ಇಲ್ಲೂ ಗೆದ್ದಿದ್ದಾರೆ. ರೀಮೇಕ್ ಚಿತ್ರಗಳಲ್ಲಿ ಅವರಿಗೆ ಅವರೇ ಸಾಟಿ.

  ಹಾರರ್ ಕಾಮಿಡಿ ಸ್ಯಾಂಡ್ವಿಚ್ ಚಿತ್ರ

  ಹಾರರ್ ಕಾಮಿಡಿ ಸ್ಯಾಂಡ್ವಿಚ್ ಚಿತ್ರ

  ಇನ್ನು ನಾಗಶೇಖರ್ ಹಾಗೂ ಸಾಧು ಕೋಕಿಲ ಅವರ ಕಾಮಿಡಿ ಚಿತ್ರದಲ್ಲಿ ಚೆನ್ನಾಗಿ ವರ್ಕ್ ಔಟ್ ಆಗಿದೆ. ಇದೊಂಥರಾ ತೀರಾ ಹಾರರ್ ಅಲ್ಲದ ತೀರಾ ಕಾಮಿಡಿ ಅಲ್ಲದ ಸ್ಯಾಂಡ್ವಿಚ್ ಚಿತ್ರ.

  ಚಿರು ಅಭಿಮಾನಿಗಳಿಗೆ ನಿರಾಸೆಪಡಿಸಲ್ಲ

  ಚಿರು ಅಭಿಮಾನಿಗಳಿಗೆ ನಿರಾಸೆಪಡಿಸಲ್ಲ

  ಚಿರು ಅಭಿಮಾನಿಗಳಿಗೆ ಚಿತ್ರ ಖಂಡಿತ ನಿರಾಸೆಪಡಿಸಲ್ಲ. ಚಿತ್ರದ ಮೊದಲರ್ಧ ನಿಧಾನಕ್ಕೆ ಸಾಗಿದರೂ ದ್ವಿತಿಯಾರ್ಧದಲ್ಲಿ ವೇಗ ಪಡೆದುಕೊಳ್ಳುತ್ತದೆ. ಚಿರಂಜೀವಿ ಸರ್ಜಾ ಅಭಿಮಾನಿಗಳಿಗೆ ಖಂಡಿತ ನಿರಾಸೆಪಡಿಸುವುದಿಲ್ಲ.

  English summary
  Kannada movie Chandralekha review, starrer Chiranjeevi Sarja and Sanvi Srinivas. Normally horror movies are associated with dark shades, shrill re-recording effects, black magic and all sorts of spooky elements. But Chandralekha does away with all these.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X