For Quick Alerts
  ALLOW NOTIFICATIONS  
  For Daily Alerts

  'ಕಾಲೇಜ್ ಕುಮಾರ'ನಿಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

  By Bharath Kumar
  |

  ಟೈಟಲ್ ನಿಂದಲೇ ಪ್ರೇಕ್ಷಕರ ಗಮನವನ್ನ ಸೆಳೆದಿದ್ದ 'ಕಾಲೇಜ್ ಕುಮಾರ' ಈ ವಾರವಷ್ಟೇ ರಾಜ್ಯಾದ್ಯಂತ ತೆರೆಕಂಡಿದೆ. ಪಕ್ಕಾ ಫ್ಯಾಮಿಲಿ ವೀಕ್ಷಕರು ನೋಡಬಹುದು ಈ ಚಿತ್ರದಲ್ಲಿ ಮನರಂಜನೆಯ ಜೊತೆಗೆ ಒಳ್ಳೆಯ ಸಂದೇಶ ಕೂಡ ಇದೆ.

  'ಅಲೆಮಾರಿ' ಖ್ಯಾತಿಯ ಸಂತು ನಿರ್ದೇಶನ ಮಾಡಿದ್ದು, 'ಕೆಂಡಸಂಪಿಗೆ' ಖ್ಯಾತಿಯ ವಿಕ್ಕಿ, ಸಂಯುಕ್ತ ಹೆಗಡೆ, ರವಿಶಂಕರ್, ಶ್ರುತಿ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಜನರ ಮೆಚ್ಚಿಕೊಂಡಿದ್ದು, ವಿಮರ್ಶಕರು 'ಕಾಲೇಜ್ ಕುಮಾರ'ನ ಬಗ್ಗೆ ಏನಂದ್ರು?

  ವಿಮರ್ಶೆ : 'ಕಾಲೇಜ್ ಕುಮಾರ'ನಿಗೆ ಪ್ರೇಕ್ಷಕ ಕ್ಲೀನ್ ಬೌಲ್ಡ್

  ಕರ್ನಾಟಕ ಜನಪ್ರಿಯ ಪತ್ರಿಕೆಗಳು ಪ್ರಕಟಿಸಿರುವ 'ಕಾಲೇಜ್ ಕುಮಾರ' ಚಿತ್ರದ ವಿಮರ್ಶೆಯ ಕಲೆಕ್ಷನ್ ಇಲ್ಲಿದೆ ನೋಡಿ.....

  ಅಪ್ಪನ ಕನಸೆಂಬ ಕುದುರೆಯನೇರಿ - ವಿಜಯ ಕರ್ನಾಟಕ

  ಅಪ್ಪನ ಕನಸೆಂಬ ಕುದುರೆಯನೇರಿ - ವಿಜಯ ಕರ್ನಾಟಕ

  'ಕಾಲೇಜ್ ಕುಮಾರ' ಕ್ಲಾಸಿಕ್‌ ಫ್ಯಾಮಿಲಿ ಸಬ್ಜೆಕ್ಟ್ ಇರುವ ಚಿತ್ರ ಎನ್ನುವಂತೆ ಚಿತ್ರಕತೆ ಹೆಣೆದಿದ್ದಾರೆ ನಿರ್ದೇಶಕರು. ತಂದೆ ತಾಯಿಯರ ಕನಸನ್ನು ಈಡೇರಿಸಲು ಆಗದ ಮಗ ಮತ್ತು ತಂದೆಯ ಕನಸನ್ನು ತಂದೆಯೇ ಈಡೇರಿಸಿಕೊಳ್ಳಲು ಮಗನೇ ಬೆನ್ನಲುಬಾಗಿ ನಿಲ್ಲುವ ಕತೆ ಇಲ್ಲಿದೆ. ಆ ಲಾಸ್ಟ್ ಬೆಂಚ್ ಹುಡುಗನಾಗಿ, ಮಧ್ಯಮ ವರ್ಗದ ತಲೆಗೆ ವಿದ್ಯೆ ಹತ್ತದ ಯುವಕನಾಗಿ ಮತ್ತು ಯುವ ಪ್ರೇಮಿಯಾಗಿ ವಿಕ್ಕಿ ವರುಣ್‌ ನೈಜವಾಗಿ ನಟಿಸಿದ್ದಾರೆ. ಖಳ ನಟ ರವಿಶಂಕರ್‌ ವಿಶಿಷ್ಟ ಮತ್ತು ವಿಭಿನ್ನವಾಗಿ ನಟಿಸಿ ಪ್ರೇಕ್ಷಕರನ್ನು ಕಾಡಿಸಿ, ಅಳಿಸಿ, ನಗಿಸುತ್ತಾರೆ. ಸಂಯುಕ್ತಾ ಹೆಗಡೆ ತಮಗೆ ಸಿಕ್ಕ ಅವಕಾಶವನ್ನು ಸಖತ್‌ ಕಿಲ್ಲಿಂಗ್ ಆಗಿ ಬಳಸಿಕೊಂಡಿದ್ದಾರೆ. ಶ್ರುತಿ ತಮ್ಮ ಪಾತ್ರಕ್ಕೆ ಎಂದಿನಂತೆ ನ್ಯಾಯ ಒದಗಿಸಿದ್ದಾರೆ.

  ಈ ಕಾಲೇಜ್‌ಕುಮಾರ 50ರ ಬಾಲಪ್ರತಿಭೆ - ಪ್ರಜಾವಾಣಿ

  ಈ ಕಾಲೇಜ್‌ಕುಮಾರ 50ರ ಬಾಲಪ್ರತಿಭೆ - ಪ್ರಜಾವಾಣಿ

  ಮೊದಲಾರ್ಧವು ಮಗನನ್ನು ಓದಿಸುವಲ್ಲಿಯೇ ಅಪ್ಪ ಪಡುವ ಶ್ರಮಕ್ಕೆ ಮೀಸಲು. ಚಿತ್ರದ ಟ್ರೇಲರ್ ನಲ್ಲಿ ಕಂಡ ದೃಶ್ಯಗಳೇ ಮೊದಲಾರ್ಧದಲ್ಲಿ ಸುರುಳಿ ಸುತ್ತುತ್ತವೆ. ಇದನ್ನು ಕಂಡು ಪ್ರೇಕ್ಷಕರಿಗೂ ತಬ್ಬಿಬ್ಬು!. ದ್ವಿತೀಯಾರ್ಧದಲ್ಲಿ ರವಿಶಂಕರ್‌ ಅವರೇ ನಾಯಕ. ಅಲ್ಲಿ ನಾಯಕ ಮತ್ತು ನಾಯಕಿ ಹಿನ್ನೆಲೆಗೆ ಸರಿದು ರವಿಶಂಕರ್ ಅವರ ಕಾಲೇಜಿನ ಕಥನ ಮುನ್ನೆಲೆಗೆ ಬರುತ್ತದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಎರಡು ಹಾಡುಗಳು ಕೇಳಲು ಹಿತವಾಗಿವೆ. ಮಕ್ಕಳ ಕಂಗಳಲ್ಲಿ ಭವಿಷ್ಯ ಕಂಡಿರುವ ಪೋಷಕರು ಮತ್ತು ಕಾಲೇಜಿನ ಮಹತ್ವ ಅರಿಯಬೇಕಾದ ವಿದ್ಯಾರ್ಥಿಗಳು ನೋಡಬಹುದಾದ ಸಿನಿಮಾ ‘ಕಾಲೇಜ್‌ ಕುಮಾರ್'.

  ಕಾಲೇಜ್‌ ಗೇಟಲ್ಲಿ ಅಪ್ಪ-ಮಗನ ಜುಗಲ್‌ಬಂದಿ - ಉದಯವಾಣಿ

  ಕಾಲೇಜ್‌ ಗೇಟಲ್ಲಿ ಅಪ್ಪ-ಮಗನ ಜುಗಲ್‌ಬಂದಿ - ಉದಯವಾಣಿ

  ಮಗ ಅಪ್ಪನಿಗೆ ಸವಾಲು ಹಾಕುತ್ತಾನೆ. ಕಾಲೇಜಿಗೆ ಹೋಗಿ ಪಾಸಾಗುವ ಜವಾಬ್ದಾರಿ ಅಪ್ಪನಿಗಾದರೆ, ಮನೆ ನಡೆಸಿ, ಅಪ್ಪನನ್ನು ಕಾಲೇಜು ಓದಿಸುವ ಜವಾಬ್ದಾರಿ ಮಗನದ್ದು. ಈ ಜವಾಬ್ದಾರಿಯನ್ನು ಯಾರು ಸರಿಯಾಗಿ ನಿಭಾಹಿಸುತ್ತಾರೆಂಬ ಕುತೂಹಲವಿದ್ದರೆ ನೀವು "ಕಾಲೇಜ್‌ ಕುಮಾರ್‌' ನೋಡಿ. ನಿಮಗೆ ಕಾಲೇಜ್‌ ಕುಮಾರ್‌ ಚಿತ್ರ ಇಷ್ಟವಾಗೋದೇ ಅದರ ಕಾನ್ಸೆಪ್ಟ್ನಿಂದ. ಪರಸ್ಪರ ತಮ್ಮ ತಮ್ಮ ಜವಾಬ್ದಾರಿ ಹಸ್ತಾಂತರಿಸಿಕೊಳ್ಳುವ ಮೂಲಕ ಹೊಸ ಜರ್ನಿಗೆ ಒಡ್ಡಿಕೊಳ್ಳುವ ಅಪ್ಪ-ಮಗನ ಜುಗಲ್‌ಬಂಧಿಯನ್ನು ನೋಡೋದೇ ಒಂದು ಮಜಾ. ಆ ಮಟ್ಟಿಗೆ ನಿರ್ದೇಶಕ ಸಂತು ಒಂದು ನೀಟಾದ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ನಿರ್ದೇಶಕ ಸಂತು ವಯಸ್ಸಿಗೆ ತುಂಬಾ ಮೆಚುರ್ಡ್ ಕಥೆ ಕೂಡಾ.

  ಕಾಲೇಜ್​ನಲ್ಲಿ ಪಾಲಕರಿಗೂ ಮಕ್ಕಳಿಗೂ ಪಾಠ - ವಿಜಯವಾಣಿ

  ಕಾಲೇಜ್​ನಲ್ಲಿ ಪಾಲಕರಿಗೂ ಮಕ್ಕಳಿಗೂ ಪಾಠ - ವಿಜಯವಾಣಿ

  ಇಷ್ಟು ದಿನ ಖಳನಾಗಿ, ಕಾಮಿಡಿಯನ್ ಆಗಿ ರಂಜಿಸಿದ್ದ ರವಿಶಂಕರ್, ಈ ಚಿತ್ರದಿಂದ ಮತ್ತೊಂದು ಮಗ್ಗುಲಿಗೆ ಹೊರಳಿದ್ದಾರೆ. ಸೆಂಟಿಮೆಂಟ್ ಸೀನ್​ಗಳಲ್ಲಂತೂ ಶ್ರುತಿ ಅವರನ್ನೇ ಸೈಡ್ ಹೊಡೆದು, ಅಳಿಸುವ ಕೆಲಸ ಮಾಡಿದ್ದಾರೆ. ನಟನೆಯಲ್ಲಿ ವಿಕ್ಕಿ ಸಾಕಷ್ಟು ಮಾಗಿದ್ದಾರೆ. ಭಾವುಕ ಸನ್ನಿವೇಶಗಳಲ್ಲಿ ಗಮನಸೆಳೆಯುತ್ತಾರೆ. ಅಮ್ಮನಾಗಿ ಶ್ರುತಿ ನಟನೆಯೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ನಾಯಕಿ ಸಂಯುಕ್ತಾ ಪಾತ್ರದಲ್ಲಿ ಅಂತಹ ವಿಶೇಷತೆ ಏನಿಲ್ಲ. ಕಥೆ ಸೊಗಸಾಗಿದ್ದರೂ, ಚಿತ್ರಕಥೆ ವಿಚಾರದಲ್ಲಿ ಆ ಮಾತನ್ನು ಹೇಳಲಾಗದು. ನಿರೂಪಣೆಯಲ್ಲಿ ಇನ್ನಷ್ಟು ರಂಜಿಸುವ ಅಂಶಗಳಿದಿದ್ದರೆ ‘ಕಾಲೇಜ್' ಮತ್ತಷ್ಟು ರಂಗೇರುತ್ತಿತ್ತು.

  BETTER VERSION OF ‘KRAZY LOKA’- bangalore mirror

  BETTER VERSION OF ‘KRAZY LOKA’- bangalore mirror

  If you have seen the trailer of this film, you have watched the first half. Different versions of the trailer are played out again and again for the first hour. The second half is a better version of the Ravichandran film Krazy Loka. Ravishankar is the star of the show. Shruti is a natural. Achyuth and Prakash Belawadi give the film credibility despite their cut-and-insert characters. Technically, the film is on par with the best.

  English summary
  Read Kannada Movie 'College Kumar' critics review. ಅಲೆಮಾರಿ ಸಿನಿಮಾ ಖ್ಯಾತಿಯ ಸಂತೋಷ್ ನಿರ್ದೇಶನದ ಕಾಲೇಜ್ ಕುಮಾರ ಚಿತ್ರದ ವಿಮರ್ಶೆ ಇಲ್ಲಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X