»   » 'ಧೈರ್ಯಂ'ನಲ್ಲಿ ವಿಮರ್ಶಕರಿಗೆ ಕಂಡಿದ್ದು ಹಣದ ಹಿಂದೆ ಓಡುವ ಮಾಸ್ಟರ್ ಮೈಂಡ್

'ಧೈರ್ಯಂ'ನಲ್ಲಿ ವಿಮರ್ಶಕರಿಗೆ ಕಂಡಿದ್ದು ಹಣದ ಹಿಂದೆ ಓಡುವ ಮಾಸ್ಟರ್ ಮೈಂಡ್

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಕೃಷ್ಣ' ಅಜಯ್ ರಾವ್ ಮತ್ತು ಅಧಿತಿ ಅಭಿನಯದ 'ಧೈರ್ಯಂ' ಚಿತ್ರ ತೆರೆಕಂಡಿದೆ. ಇದೇ ಮೊದಲ ಬಾರಿಗೆ ಲವರ್ ಬಾಯ್ ಅಜಯ್ ರಾವ್ ಆಕ್ಷನ್ ಥ್ರಿಲ್ಲರ್ ಹೀರೋ ಆಗಿ ಮಿಂಚಿದ್ದು ಪ್ರೇಕ್ಷಕ ಪ್ರಭುಗಳಿಂದ ಚಪ್ಪಾಳೆ ಗಿಟ್ಟಿಸಿದ್ದಾರೆ.

  ಚಿತ್ರ ವಿಮರ್ಶೆ : ಸಾಮಾನ್ಯ ಹುಡುಗನ ಅಸಾಮಾನ್ಯ ಸಾಹಸ

  'ಧೈರ್ಯಂ' ಚಿತ್ರ ಸಾಮಾನ್ಯ ಹುಡುಗ ಹಣಕ್ಕಾಗಿ ವಾಮಮಾರ್ಗದಲ್ಲಿ ನಡೆದು ಶತ್ರುಗಳನ್ನು ಸದೆಬಡೆಯುವ ಅಸಮಾನ್ಯ ಕತೆಯನ್ನು ಹೊಂದಿದೆ. ಚಿತ್ರಕತೆಗೆ ತಕ್ಕಂತೆ ರೋಷಾವೇಶದ ಅಬ್ಬರದಲ್ಲಿ ಅಜಯ್‌ ರಾವ್ ಕಾಣಿಸಿಕೊಂಡಿದ್ದಾರೆ. ಆದರೆ ಈ ಚಿತ್ರವನ್ನು ನೋಡಿ ಪ್ರೇಕ್ಷಕರು ಎಂಜಾಯ್ ಮಾಡಿದಂತೆ ನಮ್ಮ ವಿಮರ್ಶಕರು ಎಂಜಾಯ್ ಮಾಡಿದ್ರಾ? ಚಿತ್ರದ ಬಗ್ಗೆ ಅವರ ಅನಿಸಿಕೆ ಏನು? ಅದಕ್ಕೆ ಉತ್ತರ ಇಲ್ಲಿದೆ..

  ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಧೈರ್ಯಂ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಈ ಕೆಳಗಿನಂತಿದೆ ಓದಿರಿ..

  ರೋಷಾವೇಶ‍ದ ಅಬ್ಬರ!: ವಿಜಯವಾಣಿ

  ಲವರ್ ಬಾಯ್ ಹೀರೋ ಅಜಯರ್ ರಾವ್ 'ಧೈರ್ಯಂ' ಮೂಲಕ ಆಕ್ಷನ್-ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಿ ಗೆದ್ದಿದ್ದಾರೆ. ಮಧ್ಯಮ ಕುಟುಂಬದ ಹುಡುಗ ಹಣಕ್ಕಾಗಿ ಜೀವನದಲ್ಲಿ ಈಜಾಡುವ ಕತೆಯನ್ನು ಸೊಗಸಾಗಿ ಶಿವ ತೇಜಸ್ ತೆರೆಮೇಲೆ ತಂದಿದ್ದಾರೆ. ಆದರೆ ಇಲ್ಲಿ ನಾಯಕ ಕೆಟ್ಟವನಾ? ಒಳ್ಳೆಯವನಾ? ಚಿತ್ರ ನೋಡಿಯೇ ತಿಳಿಯಬೇಕು. ತಾಂತ್ರಿಕವಾಗಿ ಸಿನಿಮಾ ಉತ್ತಮವಾಗಿದೆ. ಚಿತ್ರಕಥೆ ಅಲ್ಲಲ್ಲಿ ಬಿಗಿ ಕಳೆದುಕೊಳ್ಳುತ್ತದೆ.ರವಿಶಂಕರ್ ಎಂದಿನಂತೆ ಖದರ್ ಪಾತ್ರದಲ್ಲಿ ನಟಿಸಿದ್ದು ಜೊತೆಗೆ ಮನರಂಜನೆಯನ್ನು ನೀಡುತ್ತಾರೆ. ನೆನಪಿನಲ್ಲಿ ಉಳಿಯುವ ಹಾಡುಗಳು ಇಲ್ಲ. ನಂದೀಶ್ ಸಂಭಾಷಣೆಯಲ್ಲಿ ಪಂಚ್ ಇದೆ. ನಿರೂಪಣೆ ವೇಗ ಕಡಿಮೆ.

  ದುಡ್ಡಿನ ಅಮಲಿನೊಳಗೆ ಸಿಲುಕಿದ ಕಥನ: ಪ್ರಜಾವಾಣಿ

  ಬದುಕಿನಲ್ಲಿ ದುಡ್ಡು ಅಂತಿಮವಲ್ಲ. 'ಸತ್ಯ'ವೇ ಶಾಶ್ವತ ಎಂದು 'ಧೈರ್ಯಂ' ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಶಿವತೇಜಸ್. ಅಜಯರ್ ರಾವ್ ರನ್ನು ಆಕ್ಷನ್ ಹೀರೊ ಆಗಿ ತೋರಿಸುವ ಹೆಬ್ಬಯಕೆ ದಾಳವಾಗಿ ಕಾಣಿಸುತ್ತದೆ. ಬಡ ಕುಟುಂಬದ ಸಂವೇದನೆಯನ್ನು ಹೇಳಲು ಹೋಗಿ, ಸಾಮಾಜಿಕ ಸಮಸ್ಯೆಯ ಸಂಕೀರ್ಣತೆಯನ್ನು ನೋಡುವ ಪ್ರಯತ್ನ ಚಿತ್ರದಲ್ಲಿ ಕಾಣುವುದಿಲ್ಲ. ವಾಮಮಾರ್ಗದಲ್ಲಿ ಹಣ ಸಂಪಾದಿಸಿ ಕೊನೆಗೆ ಶತ್ರುಗಳನ್ನು ಸೆದೆಬಡಿಯುವ ಕಥೆಯಷ್ಟೇ ಆಗಿ ಸಿನಿಮಾ ಮುಗಿದು ಹೋಗುತ್ತದೆ. ಅಜಯ್ ರಾವ್ ಪಂಚಿಂಗ್ ಡೈಲಾಗ್‌ಗಳ ಮೂಲಕ ಚಪ್ಪಾಳೆ ಗಿಟ್ಟಿಸುತ್ತಾರೆ. ನಾಯಕಿ ಅದಿತಿ ಪ್ರಭುದೇವ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇತರರದ್ದು ಅಚ್ಚುಕಟ್ಟಾದ ಅಭಿನಯ. ಎಮಿಲ್ ಸಂಗೀತದ 'ನಮ್ದುಕೆ ಹಿಂಗಿದೆ' ಹಾಡು ಮಾತ್ರ ಕೇಳಲು ಹಿತವಾಗಿದೆ ಅಷ್ಟೆ -ಕೆ.ಎಚ್.ಓಬಳೇಶ್

  ಕಾಸಿನಾಸೆಯ ಹುಡುಗನ ಮಾಸ್ಟರ್ ಗೇಮ್: ಉದಯವಾಣಿ

  ನಿರ್ದೇಶಕ ಶಿವತೇಜಸ್ ಮೈಂಡ್‌ಗೇಮ್ ಚಿತ್ರವನ್ನು ಮಜಾವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ಹೊಸತಾಗಿ ಹೆಚ್ಚಿನದ್ದೇನು ನಿರೀಕ್ಷಿಸುವಂತಿಲ್ಲ. ಆದರೆ ಅಜಯ್ ರಾವ್ ಗೆ ಇದು ಹೊಸ ಬಗೆಯ ಚಿತ್ರವಾಗಿದ್ದು ಕಾನ್ಸೆಪ್ಟ್ ಹಾಗೂ ಸಂದರ್ಭ ಸನ್ನಿವೇಶಗಳು ಭಿನ್ನವಾಗಿವೆ. ಹಾಗಾಗಿ ಚಿತ್ರ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಸಾಧು ಕೋಕಿಲ ಕಾಮಿಡಿ ಸೂಪರ್. ಸಂಭಾಷಣೆ ಚುರುಕಾಗಿದೆ. ಸಣ್ಣ ಪುಟ್ಟ ತಪ್ಪುಗಳ ಜೊತೆಗೆ ಕೆಲವು ಪ್ರಶ್ನೆಗಳು ಚಿತ್ರದ ಬಗ್ಗೆ ಹುಟ್ಟುತ್ತವೆ. ಸಿನಿಮಾದ ಹೈಲೈಟ್ ರವಿಶಂಕರ್. ನಾಯಕಿ ಅದಿತಿ ಪ್ರಭುದೇವ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ಛಾಯಾಗ್ರಹಣ ಚಿತ್ರಕ್ಕೆ ಪೂರಕ. ಎಮಿಲ್ ಸಂಗೀತದ ಎರಡು ಹಾಡುಗಳು ಗುನುಗುತ್ತವೆ -ರವಿಪ್ರಕಾಶ್ ರೈ

  Dhairyam Movie Review: The Times of India

  R Shiva Tejas debuted with the romantic tale. With his second outing, the director has chosen to make a typical commercial caper, which is replete with action, romance, comedy and melodrama. The film picks up pace towards the interval. The second half begins on a promising note, but the unnecessary comic track and a little stretched climax make it fall a little short of perfect. The clever hero act by Ajai seems earnest. Newbie Aditi Prabhudeva shows promise. P Ravi Shankar in his comical villainous act is predictable, but entertaining. The scene involving his character interacting with Sandalwood's matinee idols in a drunken state is hilarious. Dhairyam can be a good watch for those who seek masala, as the tale has some clever twists.

  English summary
  Ajay Rao starrer Kannada Movie 'Dhairyam' has recieved good response from critics. The movie is out and out Commercial Entertainer. 'Dhairyam' Critics Review is here.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more