For Quick Alerts
  ALLOW NOTIFICATIONS  
  For Daily Alerts

  'ದಿಲ್ ರಂಗೀಲಾ': ಸವಕಲು ಕಥೆ ಹೊಸ ನಿರೂಪಣೆ

  |

  'ಮಳೆಯಲಿ ಜೊತೆಯಲಿ' (2009) ಚಿತ್ರದ ಬಳಿಕ ಪ್ರೀತಂ ಗುಬ್ಬಿ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ಕೈಜೋಡಿಸಿರುವ ಚಿತ್ರ 'ದಿಲ್ ರಂಗೀಲಾ;. ಗಣೇಶ್ ಇನ್ನೂ 'ಮುಂಗಾರು ಮಳೆ' ಗುಂಗಿನಿಂದ ಹೊರಬಂದಂತಿಲ್ಲ, ಚಿತ್ರ ನೋಡಿದ ಮೇಲೆ ನಿಮಗೂ ಇದೇ ರೀತಿ ಅನ್ನಿಸುತ್ತದೆ.

  ಪ್ರೇಕ್ಷಕರು ಈಗಾಗಲೆ ಅವರನ್ನು ಲವರ್ ಬಾಯ್ ಆಗಿ ನೋಡಿನೋಡಿ ಸುಸ್ತಾಗಿದ್ದಾರೆ. ಅವರಿಂದ ಭಿನ್ನ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರು ಮಾತ್ರ ಇನ್ನೂ ಬದಲಾವಣೆಯನ್ನು ಬಯಸುತ್ತಿಲ್ಲ. ಇನ್ನೂ ಎಷ್ಟು ದಿನ ಅವರು ಲವರ್ ಬಾಯ್ ಪಾತ್ರಗಳನ್ನು ಮಾಡುತ್ತಾರೋ ಗೊತ್ತಿಲ್ಲ.

  ಪ್ರೀತಂ ಅವರು ರೊಮ್ಯಾಂಟಿಕ್ ಚಿತ್ರಗಳಿಗೆ ಹೆಸರಾದವರು. ಅವರ ಹಳೆ ಚಿತ್ರಗಳ ಸಾಲಿಗೆ 'ದಿಲ್ ರಂಗೀಲಾ' ಚಿತ್ರ ಹೊಸ ಸೇರ್ಪಡೆ ಅನ್ನಬಹುದು. 'ಮುಂಗಾರು ಮಳೆ'ಯಂತೆ ಇಲ್ಲೂ ಅವರ ಹೆಸರು ಪ್ರೀತಂ. ಗಣೇಶ್ ಇಲ್ಲಿ ಕೂಲ್ ಹಾಗೂ ಅಷ್ಟೇ ಬೇಜವಾಬ್ದಾರಿ ಯುವಕ, ಪಟಪಟ ಮಾತನಾಡುವ ಪಟಾಕಿ.

  ಗೋವಾದಲ್ಲಿ ಅಚಾನಕ್ ಆಗಿ ಖುಷಿ (ರಚಿತಾ ರಾಮ್) ಭೇಟಿಯಾಗುತ್ತಾಳೆ. ಪ್ರೀತಂನ ವ್ಯಕ್ತಿತ್ವಕ್ಕೆ ಮಾರುಹೋಗಿ ಲವ್ವಲ್ಲಿ ಬೀಳುತ್ತಾಳೆ. ಆದರೆ ಅದನ್ನು ಪ್ರೀತಂ ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ. ಬೇರೆ ಹುಡುಗಿಯರ ಜೊತೆಗೂ ಅವನೂ ಅದೇ ರೀತಿ ಚೆಲ್ಲಾಟ ಆಡುತ್ತಿರುತ್ತಾನೆ. ಮುಂದೇನಾಗುತ್ತದೆ ಎಂಬುದೇ ಚಿತ್ರದ ಕಥಾಸಾರ.

  Rating:
  2.5/5
  Star Cast: ಗಣೇಶ್, ರಚಿತಾ ರಾಮ್, ರಂಗಾಯಣ ರಘು, ಅಚ್ಯುತ್ ಕುಮಾರ್
  Director: ಪ್ರೀತಂ ಗುಬ್ಬಿ

  ಕಥೆ ಸವಕಲು ನಿರೂಪಣೆ ಹೊಸದು

  ಕಥೆ ಸವಕಲು ನಿರೂಪಣೆ ಹೊಸದು

  ಕಥೆ ಸವಕಲಾದರೂ ನಿರೂಪಣೆಯಲ್ಲಿ ಮಾತ್ರ ಹೊಸತನವಿದೆ. ಚಿತ್ರವನ್ನು ಇಷ್ಟಪಡುಲು ಇದೊಂದೇ ಕಾರಣ ಎನ್ನಬಹುದು. ದಿಲ್ ರಂಗೀಲಾ ಚಿತ್ರ ಮತ್ತೊಂದು ಲವ್ ಸ್ಟೋರಿ. ಅಚಾನಕ್ ಆಗಿ ನಡೆಯುವ ಕೆಲವು ಘಟನೆಗಳು ನಾಯಕ ನಾಯಕಿಯನ್ನು ಒಂದು ಮಾಡುವುದು, ಕಥೆ ಹಾಗೆಯೇ ಮುಂದುವರಿಸಿಕೊಂಡು ಹೋಗಿದ್ದಾರೆ.

  ಗಮನಸೆಳೆಯುವ ಗಣೇಶ್ ಜಿಮ್ ಬಾಡಿ

  ಗಮನಸೆಳೆಯುವ ಗಣೇಶ್ ಜಿಮ್ ಬಾಡಿ

  ಇನ್ನೊಂದು ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಗಣೇಶ್ ಸ್ವಲ್ಪ ಜಿಮ್ ಮಾಡಿ ತಮ್ಮ ದೇಹವನ್ನು ಹುರಿಗಟ್ಟಿಸಿದ್ದಾರೆ. ಗೋವಾದ ಬೀಚ್ ನಲ್ಲಿ ಹುಡುಗಿಯರ ಜೊತೆ ಚೆಲ್ಲಾಟವಾಡುವಾಗ ಅವರ ದಷ್ಟಪುಷ್ಟ ದೇಹವನ್ನು ಕಾಣಬಹುದು.

  ರಂಗಾಯಣ ರಘು ಭರ್ಜರಿ ಕಾಮಿಡಿ

  ರಂಗಾಯಣ ರಘು ಭರ್ಜರಿ ಕಾಮಿಡಿ

  ರಂಗಾಯಣ ರಘು ಅವರ ಕಾಮಿಡಿ ಚಿತ್ರಕ್ಕೆ ಹೊಸ ಸತ್ವ ನೀಡಿದೆ. ಇದೇ ಚಿತ್ರದ ಅತಿದೊಡ್ಡ ಪ್ಲಸ್ ಪಾಯಿಂಟ್ ಎನ್ನಬಹುದು. ಒಂದು ವೇಳೆ ರಘು ಕಾಮಿಡಿ ಇಲ್ಲದಿದ್ದರೆ ಚಿತ್ರ ನಿಸ್ಸಾರವಾಗುತ್ತಿತ್ತು.

  ಒಂದಷ್ಟು ಎಮೋಷನಲ್ ಟಚ್ ಇದೆ

  ಒಂದಷ್ಟು ಎಮೋಷನಲ್ ಟಚ್ ಇದೆ

  ಜೊತೆಗೆ ಒಂದಷ್ಟು ಎಮೋಷನಲ್ ಸೀನ್ ಗಳು ಚಿತ್ರದಲ್ಲಿ ಗಮನಸೆಳೆಯುತ್ತವೆ. ಇಷ್ಟು ದಿನ ಲವರ್ ಬಾಯ್ ನಂತೆ ಕಾಣುತ್ತಿದ್ದ ಗಣೇಶ್ ಇಲ್ಲಿ ತಮ್ಮ ಅಂಗಸಾಧನೆಯನ್ನೂ ಪ್ರದರ್ಶಿಸಿ ತಮ್ಮ ಪಾತ್ರಕ್ಕೆ ಒಂಚೂರು ಭಿನ್ನ ಸ್ಪರ್ಶ ನೀಡಿದ್ದಾರೆ.

  ದಿಲ್ ಕದಿಯುವ 'ಬುಲ್ ಬುಲ್' ರಚಿತಾ

  ದಿಲ್ ಕದಿಯುವ 'ಬುಲ್ ಬುಲ್' ರಚಿತಾ

  'ಬುಲ್ ಬುಲ್' ಚಿತ್ರದ ಮೂಲಕ ಬೆಳ್ಳಿಪರದೆಗೆ ಅಡಿಯಿಟ್ಟ ರಚಿತಾ ರಾಮ್ ಇಲ್ಲೂ ಕ್ಯೂಟ್ ಅಭಿನಯ ನೀಡಿ ಪ್ರೇಕ್ಷಕರ ದಿಲ್ ಕದಿಯುತ್ತಾರೆ. ಗಣೇಶ್ ಜೊತೆಗಿನ ಕೆಮಿಸ್ಟ್ರಿ ಬಗ್ಗೆ ಎರಡು ಮಾತಿಲ್ಲ.

  ಸಂಭಾಷಣೆ ತಕ್ಕಮಟ್ಟಿಗೆ ವರ್ಕ್ ಔಟ್ ಆಗಿದೆ

  ಸಂಭಾಷಣೆ ತಕ್ಕಮಟ್ಟಿಗೆ ವರ್ಕ್ ಔಟ್ ಆಗಿದೆ

  ವಿಕ್ಟರಿ ಹಾಗೂ ರ್ಯಾಂಬೋ ಚಿತ್ರಗಳಿಗೆ ಡೈಲಾಗ್ಸ್ ಬರೆದಿದ್ದ ಪ್ರಶಾಂತ್ ಅವರ ಸಂಭಾಷಣೆ ದಿಲ್ ರಂಗೀಲಾದಲ್ಲೂ ತಕ್ಕಮಟ್ಟಿಗೆ ವರ್ಕ್ ಔಟ್ ಆಗಿದೆ. ರಂಗಾಯಣ ರಘು ಭಾಗಕ್ಕೆ ಅವರ ಡೈಲಾಗ್ಸ್ ಚೆನ್ನಾಗಿ ಹೊಂದಾಣಿಕೆಯಾಗಿದ್ದು, ಅದೇ ಗಮನಾರ್ಹ ಅನ್ನುವಂತಿದೆ.

  ಆರಂಭಿಕ ಸೀನ್ ಮಿಸ್ ಮಾಡಿಕೊಳ್ಳುವಂತಿಲ್ಲ

  ಆರಂಭಿಕ ಸೀನ್ ಮಿಸ್ ಮಾಡಿಕೊಳ್ಳುವಂತಿಲ್ಲ

  ಕಥೆಗೆ ಹೆಚ್ಚಿನ ಒತ್ತು ನೀಡದೆ ಬಹುತೇಕ ತಮ್ಮ ಶ್ರಮವನ್ನು ತಾಂತ್ರಿಕ ಅಂಶಗಳಿಗೆ ವ್ಯಯಿಸಿದ್ದಾರೆ ಪ್ರೀತಂ ಗುಬ್ಬಿ. ಚಿತ್ರದ ಆರಂಭದಲ್ಲಿ ಬರುವ ವೈಮಾನಿಕ ನೋಟ ಮಿಸ್ ಮಾಡಿಕೊಳ್ಳುವಂತಿಲ್ಲ.

  ಅರ್ಜುನ್ ಜನ್ಯ ತಾಜಾತನದ ಟ್ಯೂನ್ಸ್

  ಅರ್ಜುನ್ ಜನ್ಯ ತಾಜಾತನದ ಟ್ಯೂನ್ಸ್

  ಹೊಸ ಅಲೆಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇಲ್ಲೂ ತಾಜಾತನದ ಟ್ಯೂನ್ಸ್ ನೀಡಿದ್ದಾರೆ. "ಫಸ್ಟ್ 30 ಆಮೇಲೆ 60 ಮತ್ತೆ 90" ಎಂಬ ಗೀತೆ ಗುಂಡುಪ್ರಿಯರಿಗೆ ಅರ್ಪಣೆ ಮಾಡಬಹುದು.

  ಕಣ್ಣಿಗೆ ಹಿತಮಿತ ವೇಣು ಛಾಯಾಗ್ರಹಣ

  ಕಣ್ಣಿಗೆ ಹಿತಮಿತ ವೇಣು ಛಾಯಾಗ್ರಹಣ

  ಗೋವಾದ ಸುಂದರ ತೀರ, ಮೋಹಕ ಮೈಮಾಟವನ್ನು ಸೆರೆಹಿಡಿಯುವಲ್ಲಿ ಎಚ್ ಸಿ ವೇಣು ಅವರ ಛಾಯಾಗ್ರಹಣ ಗೆದ್ದಿದೆ. ಪಬ್ ಗಳು, ಸಮುದ್ರ ತೀರ, ಗೋವಾದ ಸುಂದರ ತಾಣಗಳನ್ನು ಕಣ್ಣಿಗೆ ಹಿತಮಿತವಾಗಿ ರಾಚುವಂತೆ ಅವರ ಕ್ಯಾಮೆರಾ ಕಣ್ಣು ಕೆಲಸ ಮಾಡಿದೆ.

  ತಾಂತ್ರಿಕವಾಗಿ ಹೊಸತನದಿಂದ ಕೂಡಿದೆ

  ತಾಂತ್ರಿಕವಾಗಿ ಹೊಸತನದಿಂದ ಕೂಡಿದೆ

  ಕಥೆಯಲ್ಲಿ ಹೊಸತನವಿಲ್ಲದಿದ್ದರೂ ನಿರೂಪಣೆಯಲ್ಲಿ ಹೊಸತನ ಕಾದುಕೊಂಡಿದ್ದಾರೆ ನಿರ್ದೇಶಕ ಪ್ರೀತಂ ಗುಬ್ಬಿ. ಚಿತ್ರಕ್ಕೆ ತಾಂತ್ರಿಕವಾಗಿಯೂ ಒತ್ತು ನೀಡಲಾಗಿದೆ. ಪ್ರೀತಂ ಗುಬ್ಬಿ ಅಷ್ಟರ ಮಟ್ಟಿಗೆ ಗೆದ್ದಿದ್ದಾರೆ.

  ಒಮ್ಮೆ ನೋಡಬಹುದಾದ ಚಿತ್ರ

  ಒಮ್ಮೆ ನೋಡಬಹುದಾದ ಚಿತ್ರ

  ಕಥೆಯಲ್ಲಿ ಹೊಸತನವಿಲ್ಲದಿರುವುದು ಚಿತ್ರದ ಅತಿದೊಡ್ಡ ನ್ಯೂನತೆ. ರಂಗಾಯಣ ರಘು ಕಾಮಿಡಿ ಬಯಸುವವರು, ಗಣೇಶ್ ಅವರ ತೋಳ ಬದಲಾವಣೆ ನೋಡಬೇಕೆನ್ನುವವರು ಒಮ್ಮೆ 'ದಿಲ್ ರಂಗೀಲಾ' ಚಿತ್ರವನ್ನು ಕಣ್ತುಂಬ ನೋಡಬಹುದು.

  English summary
  Kannada movie Dil Rangeela review, Golden Star Ganesh and Rachita Ram are in lead. If you are the lover of Ranghayana Raghu's comedy or a Ganesh's fan, then Dil Rangeela is one time watchable. Storyline is the biggest drawback in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X