For Quick Alerts
  ALLOW NOTIFICATIONS  
  For Daily Alerts

  ಫಸ್ಟ್ Rank ರಾಜು ಚಿತ್ರವಿಮರ್ಶೆ: ಡಿಸ್ಟಿಂಕ್ಷನ್ ಗೆ ಕೊಂಚ ಕಮ್ಮಿ

  |

  Rating:
  3.5/5
  Star Cast: ಗುರುನಂದನ್, ಅಫೂರ್ವ ಗೌಡ, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ
  Director: ನರೇಶ್ ಕುಮಾರ್ HN
  ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ನಗೆಹಬ್ಬದ ಕಾರ್ಯಕ್ರಮಗಳಲ್ಲಿ ಹಲವಾರು ಬಾರಿ ಪುಸ್ತಕದ ಹಿಂದೆ ಬಿದ್ದಿರುವ ವಿದ್ಯಾರ್ಥಿಗಳ ಸಾಮಾಜಿಕ ಜ್ಞಾನದ ಬಗ್ಗೆ ತನ್ನ ಧಾಟಿಯಲ್ಲಿ ಮಾತಾಡಿದ್ದುಂಟು.

  ತಮ್ಮ ಮಕ್ಕಳು ಫಸ್ಟ್ rank ಪಡೀಬೇಕು ಎನ್ನುವ ಪೋಷಕರ ಒತ್ತಾಸೆಯಿಂದಾಗಿ ಇಂತಹ ವಿದ್ಯಾರ್ಥಿಗಳು ಸಾಮಾಜಿಕ ಮತ್ತು ವ್ಯಾವಹಾರಿಕ ಜ್ಞಾನದ ವಿಚಾರದಲ್ಲಿ ಎಷ್ಟು ಹಿಂದಕ್ಕೆ ಬಿದ್ದಿರುತ್ತಾರೆ. ಜೀವನದಲ್ಲಿ ಬರೀ ವಿದ್ಯೆಯೊಂದೇ ಮುಖ್ಯವಲ್ಲ ಎನ್ನುವುದೇ 'ಫಸ್ಟ್ Rank ರಾಜು' ಚಿತ್ರದ ಸಂದೇಶ.

  ಪ್ರಮುಖವಾಗಿ ವಿದ್ಯಾರ್ಥಿ ಸಮುದಾಯವನ್ನು ಗುರಿಯಾಗಿಸಿಕೊಂಡು, ವ್ಯವಹಾರವಾಗಿರುವ ಇಂದಿನ ಶಿಕ್ಷಣ ವ್ಯವಸ್ಥೆ, ವಿದ್ಯೆ ಜೊತೆ ಬದುಕಲು ಬುದ್ದಿಯೂ ಬೇಕು ಎನ್ನುವ ಮೆಸೇಜ್ ಇರುವ ನಿರ್ದೇಶಕ ನರೇಶ್ ಕುಮಾರ್ ಹೊಸಹಳ್ಳಿಯವರ ಪ್ರಥಮ ನಿರ್ದೇಶನದ ಚಿತ್ರ. (ದಿ ಪ್ಲ್ಯಾನ್ ವಿಮರ್ಶೆ)

  ವಿದ್ಯೆ 100% ಬುದ್ದಿ 0% ಎಂದು ಟ್ಯಾಗ್ ಲೈನಿನಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ನಾಯಕ ಗುರುನಂದನ್ ಮತ್ತು ನಾಯಕಿ ಅಪೂರ್ವಗೂ ಇದು ಚೊಚ್ಚಲ ಸಿನಿಮಾ.

  ತನ್ನ ಮೊದಲ ನಿರ್ದೇಶನದ ಚಿತ್ರವನ್ನು ಅಚ್ಚುಕಟ್ಟಾಗಿ ತೆರೆಮೇಲೆ ತರಲು ನಿರ್ದೇಶಕರ ಪ್ರಯತ್ನ ಎದ್ದುಕಾಣುವುದಾದರೂ, ಕೆಲವೊಂದಡೆ (ಮಾತ್ರ) ಚಿತ್ರ ವಾಸ್ತವತೆಗೆ ದೂರವಾಗಿರುವುದು ಹೌದು. ಆದರೂ, ಮೊದಲ ನಿರ್ದೇಶನದ ಚಿತ್ರವೆಂದು ಪ್ರೇಕ್ಷಕ ಮನ್ನಿಸಿದರೆ ಚಿತ್ರ ಗೆದ್ದಂತೇ. ಪ್ರಮುಖವಾಗಿ ವಿದ್ಯಾರ್ಥಿ ಸಮೂಹ. ಮುಂದೆ ಓದಿ..

  ಚಿತ್ರದ ಕಥೆಯ ಬಗ್ಗೆ

  ಚಿತ್ರದ ಕಥೆಯ ಬಗ್ಗೆ

  ತನ್ನ ಕುಟುಂಬದಲ್ಲಿ ಯಾರಿಗೂ ವಿದ್ಯೆ ತಲೆಗೆ ಹತ್ತಲಿಲ್ಲ, ತನ್ನ ಮಗ ಹಾಗಾಗಬಾರದೆಂದು ತಂದೆ (ಅಚ್ಯುತ್ ಕುಮಾರ್) ಮತ್ತು ತಾಯಿ (ಸುಧಾ ಬೆಳವಾಡಿ) ಹಠದಿಂದ ಮಗ ರಾಜು (ಗುರುನಂದನ್) , ಕಾಲೇಜಿನಲ್ಲಿ ಟಾಪ್ ವಿದ್ಯಾರ್ಥಿಯಾಗುತ್ತಾನೆ. ಆದರೆ ಮಗ ವಿದ್ಯೆಯಲ್ಲಿ ಮಾತ್ರ ಮುಂದು, ಮಿಕ್ಕೆಲ್ಲಾ ವಿಚಾರದಲ್ಲಿ ಹಿಂದುಳಿದು ನಗೆಪಟಾಲಿಗೆ ಗುರಿಯಾಗುತ್ತಾನೆ.

  ಕ್ಯಾಂಪಸ್ ಸಂದರ್ಶನದಲ್ಲಿ ಫೇಲ್ ಆದಾಗ

  ಕ್ಯಾಂಪಸ್ ಸಂದರ್ಶನದಲ್ಲಿ ಫೇಲ್ ಆದಾಗ

  ಕ್ಯಾಂಪಸ್ ಸಂದರ್ಶನದಲ್ಲಿ ನನ್ನ ಸಂಸ್ಥೆಗೆ ಲಾಸ್ಟ್ ಬೆಂಚಿನವನಾದರೂ ಓಕೆ, ಸಾಮಾನ್ಯ ಜ್ಞಾನವಿರುವ ಯುವಕ ಬೇಕು ಎನ್ನುವ ಮಾಲೀಕನಿಗೆ (ಅನಂತನಾಗ್), ನನ್ನ ಮಗನನ್ನು ಬದಲಾಯಿಸುತ್ತೇನೆಂದು ಚಾಲೆಂಜ್ ಮಾಡಿ ಬರುವ ತಂದೆ, ತನ್ನ ಸವಾಲಿನಲ್ಲಿ ಯಶಸ್ಸು ಪಡೆಯುತ್ತಾನೋ, ಇಲ್ಲವೋ, ಅನುಭವದ ಪಾಠ ಜೀವನದಲ್ಲಿ ಎಷ್ಟು ಮುಖ್ಯ ಎನ್ನುವುದೇ ಚಿತ್ರದ ಕಥಾಹಂದರ.

  ಸಂಭಾಷಣೆಯೇ ಚಿತ್ರದ ಜೀವಾಳ

  ಸಂಭಾಷಣೆಯೇ ಚಿತ್ರದ ಜೀವಾಳ

  ಇಡೀ ಚಿತ್ರದ ಪ್ರಮುಖ ಹೈಲೆಟ್ಸ್ ಎಂದರೆ ಚಿತ್ರದ ಸಂಭಾಷಣೆ. ಕಚಗುಳಿಯಿಡುವ, ಅಲ್ಲಲ್ಲಿ ರುಚಿಗೆ ತಕ್ಕಂತೆ ದ್ವಂದಾರ್ಥದ ಡೈಲಾಗುಗಳು, ಯುವ ಸಮುದಾಯಕ್ಕೆ ಬೇಕಾಗಿರುವ ಪಂಚ್ ಗಳು ಚಿತ್ರದಲ್ಲಿ ಹೇರಳವಾಗಿವೆ. ಇನ್ನು ಪ್ರವೀಣ್ ಅವರ ಛಾಯಾಗ್ರಹಣ ಚೆನ್ನಾಗಿದೆ. ಡ್ಯೂಯೆಟ್ ಸಾಂಗನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ.

  ಸಂಗೀತ ಮತ್ತು ಸಂಕಲನ

  ಸಂಗೀತ ಮತ್ತು ಸಂಕಲನ

  ಚಿತ್ರದ ಮೊದಲಾರ್ಥದಲ್ಲಿ ಮತ್ತು ಕ್ಲೈಮ್ಯಾಕ್ಸಿಗೆ ಮುಂಚೆ ಸಂಕಲನಕಾರ ಗಿರಿ ಮಹೇಶ್ ಸ್ವಲ್ಪ ಕತ್ತರಿ ಪ್ರಯೋಗಿಸಿದ್ದರೆ ಚಿತ್ರ ಇನ್ನೂ ಶಾರ್ಪ್ ಆಗಿ ಮೂಡಿಬರುತ್ತಿತ್ತು. ಚಿತ್ರದ ಸಂಗೀತ ಇನ್ನೊಂದು ಹೈಲೆಟ್ಸ್. ಟೈಟಲ್ ಸಾಂಗ್, ಡ್ಯೂಯಟ್ ಸಾಂಗ್ ಮತ್ತು ಇನ್ನೆರಡು ಹಾಡುಗಳನ್ನು ಕಿರಣ್ ರವೀಂದ್ರನಾಥ್ ಚೆನ್ನಾಗಿ ಕಂಪೋಸ್ ಮಾಡಿದ್ದಾರೆ.

  ಕಲಾವಿದರ ಅಭಿನಯ

  ಕಲಾವಿದರ ಅಭಿನಯ

  ಚೊಚ್ಚಲ ಚಿತ್ರದಲ್ಲಿ, ಕಷ್ಟಕರವಾದ ಪಾತ್ರವನ್ನು ಗುರುನಂದನ್ ಚೆನ್ನಾಗಿ ನಿಭಾಯಿಸಿದ್ದಾರೆ. ಪೆದ್ದು ಪಾತ್ರದಲ್ಲಿ ಮುದ್ದಾಗಿ ನಟಿಸಿ ಮತ್ತು ಸೆಂಟಿಮೆಂಟ್ ಸನ್ನಿವೇಶದಲ್ಲಿ ಇವರ ನಟನೆ ಮೆಚ್ಚುವಂತದ್ದು. ಇನ್ನು ನಾಯಕಿ ಅಪೂರ್ವ, ತನಿಷಾ ಕಪೂರ್ ನಟನೆ ಓಕೆ. ಪೋಷಕ ಕಲಾವಿದರಾದ ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಅನಂತನಾಗ್, ಸಾಧು ಕೋಕಿಲಾ ಮುಂತಾದವರ ನಟನೆ ಪೂರಕವಾಗಿದೆ.

  ಓವರಾಲ್ ಚಿತ್ರದ ಬಗ್ಗೆ

  ಓವರಾಲ್ ಚಿತ್ರದ ಬಗ್ಗೆ

  ಕೆಲವೊಮ್ಮೆ ಅಲ್ಲಲ್ಲಿ ಚಿತ್ರ ಬೋರು ಹೊಡೆಸಿದರೂ, ಹೊಸತನದ ಪ್ರಯತ್ನಕ್ಕೆ ನಿರ್ದೇಶಕ ಕ್ರೆಡಿಟಿಗೆ ಅರ್ಹರು. ಇದು ಸ್ವಮೇಕ್ ಚಿತ್ರ ಎನ್ನುವುದು ಪ್ಲಸ್ ಪಾಯಿಂಟ್. ಉತ್ತಮ ಸಂದೇಶವಿರುವ ಚಿತ್ರವನ್ನೊಮ್ಮೆ 'ಕುಟುಂಬ ಸಮೇತ' ನೋಡಲು ಅಡ್ಡಿಯಿಲ್ಲ. ಚಿತ್ರ ವೀಕ್ಷಿಸುವ ಮೂಲಕ ಚಿತ್ರತಂಡವನ್ನೊಮ್ಮೆ ಬೆನ್ನುತಟ್ಟಿ ಬನ್ನಿ.

  English summary
  Kannada movie directed by Naresh Kumar "First Rank Raju" review. Gurunandan, Apoorva, Tanisha Kapoor, Anantnag, Sadhu Kokila, Achyut KUmar in the lead role of this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X