»   » 'ಗಣಪ' ಸಿನಿಮಾ ಹೇಗಿದೆ? ವಿಮರ್ಶಕರು ಏನಂತಾರೆ?

'ಗಣಪ' ಸಿನಿಮಾ ಹೇಗಿದೆ? ವಿಮರ್ಶಕರು ಏನಂತಾರೆ?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  '40 ವರ್ಷದ ಮೇಲೆ ಬದುಕಿದ್ದರೆ ಆತ ರೌಡಿಯೇ ಅಲ್ಲ'...ಹೀಗಂತ ಭೂಗತ ಲೋಕದ ಕರಾಳ ಅಧ್ಯಾಯವನ್ನ ಹೊತ್ತು ಇದೇ ವಾರ ರಿಲೀಸ್ ಆಗಿರುವ ಸಿನಿಮಾ 'ಗಣಪ'.

  ಸಂತೋಷ್, ಪ್ರಿಯಾಂಕ, ಪೆಟ್ರೋಲ್ ಪ್ರಸನ್ನ ಮುಂತಾದವರು ನಟಿಸಿರುವ ರೌಡಿಯೊಬ್ಬನ ನವಿರಾದ ಪ್ರೇಮಕಥೆ ಇರುವ ಚಿತ್ರ ಈ 'ಗಣಪ'.

  ಈಗಾಗಲೇ ಗಾಂಧಿನಗರದಲ್ಲಿ ರೌಡಿಸಂ ಕುರಿತಾದ ಚಿತ್ರಗಳು ಸಾಕಷ್ಟು ಬಂದ್ಹೋಗಿವೆ. ಅವೆಲ್ಲಕ್ಕಿಂತ ಪ್ರಭು ಶ್ರೀನಿವಾಸ್ ನಿರ್ದೇಶಿಸಿರುವ 'ಗಣಪ' ವಿಭಿನ್ನವಾಗಿದೆಯಾ? ವಿಮರ್ಶಕರು ಚಿತ್ರವನ್ನ ನೋಡಿ ಏನಂತಾರೆ? ಇದಕ್ಕೆ ಉತ್ತರ ನಮ್ಮ ಬಳಿಯಿದೆ. ಜನಪ್ರಿಯ ದಿನಪತ್ರಿಕೆಗಳು 'ಗಣಪ' ಚಿತ್ರದ ಕುರಿತು ನೀಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಮುಂದೆ ಓದಿ...

  'ಗಣಪ'ನ ಪ್ರೇಮವೂ ವಿಷಾದವೂ - ಪ್ರಜಾವಾಣಿ

  ಅನ್ನದ ತಟ್ಟೆ ಒದ್ದು ಹೋದ ಗುಂಪನ್ನು ಹೊಡೆದುರುಳಿಸುವ ನಾಯಕನಿಗೆ, ತಾನು ರೌಡಿ ಗ್ಯಾಂಗ್ ಮುಖಂಡನೊಬ್ಬನನ್ನು ರಕ್ಷಿಸಿದೆ ಎಂದು ಗೊತ್ತಾಗುವ ಹೊತ್ತಿಗೆ ಆತ ಆ ಗ್ಯಾಂಗ್‌ನ ಸದಸ್ಯನಾಗಿರುತ್ತಾನೆ. ಹೀಗೆ ಅಲೆದಾಡಿಕೊಂಡಿದ್ದವನೊಬ್ಬ ರೌಡಿಯಾಗುತ್ತಾನೆ. ಈ ಮಧ್ಯೆ ನಾಯಕನಿಗೆ ಒಂದು ಮೊಬೈಲ್ ಸಿಗುತ್ತದೆ. ಅದು ನಾಯಕಿ ಬೃಂದಾಳದ್ದು (ಪ್ರಿಯಾಂಕಾ). ಭೇಟಿಯಾಗುವ ಹಲವು ಅವಕಾಶಗಳಿಂದ ವಂಚಿತರಾಗುವ ಇಬ್ಬರೂ ಮಾತಿನಲ್ಲೇ ಪರಿಚಿತರಾಗುತ್ತಾರೆ. ಗಣಪನ ಜೊತೆ ಮಾತನಾಡಿದಾಗಲೆಲ್ಲ ಬೃಂದಾಗೆ ಒಳ್ಳೆಯದೇ ಆಗುತ್ತದೆ! ಈ ಶುಭ ಶಕುನ ಪ್ರೇಮಕ್ಕೆ ತಿರುಗುತ್ತದೆ. ಅದನ್ನು ಅವರು ಈಗ ಹೇಳಿಕೊಳ್ಳುತ್ತಾರೆ, ಆಗ ಹೇಳಿಕೊಳ್ಳುತ್ತಾರೆ ಎಂದು ಪ್ರೇಕ್ಷಕ ಅಂದುಕೊಳ್ಳುತ್ತಿರುವಾಗಲೇ ಅನಿರೀಕ್ಷಿತ ತಿರುವನ್ನು ಇಟ್ಟಿದ್ದಾರೆ ನಿರ್ದೇಶಕ ಪ್ರಭು ಶ್ರೀನಿವಾಸ್ - ಗಣೇಶ್ ವೈದ್ಯ (ಇನ್ನಷ್ಟು ಇಲ್ಲಿ ಓದಿ)

  ಕೈಲಿ ಮಚ್ಚು, ಪ್ರೀತಿ ಹುಚ್ಚು, ಒಂಥರಾ ಸ್ಕೆಚ್ಚು!- ಉದಯವಾಣಿ

  "ಗಣಪ' ಹೇಗೆ ಒಂದು ಆಕ್ಷನ್ ಚಿತ್ರವೋ, ಅದೇ ರೀತಿ ಲವ್‌ ಫೀಲ್ ಇರುವ ಸಿನಿಮಾ ಕೂಡಾ. ನಿರ್ದೇಶಕರ ಟಾರ್ಗೆಟ್ ಮಾಸ್‌ ಆಡಿಯನ್ಸ್. ಹಾಗಾಗಿ ಇಲ್ಲಿ ಯರ್ರಾಬಿರ್ರಿ ಹೊಡೆದಾಟವಿದೆ, ಮಾಸ್‌ ಪ್ರಿಯರು ಶಿಳ್ಳೆ ಹಾಕುವಂತಹ ಸ್ಟಂಟ್ಸ್ ಗಳಿವೆ. ಇಡೀ ಸಿನಿಮಾವನ್ನು ಆ ಹೊಡೆದಾಟ-ಬಡಿದಾಟಗಳಿಗಷ್ಟೇ ಸೀಮಿತಗೊಳಿಸಿದ್ದರೆ "ಗಣಪ' ತೀರಾ ನೀರಸವಾಗಿಬಿಡುತ್ತಿತ್ತೇನೋ. ಆದರೆ, ನಿರ್ದೇಶಕ ಪ್ರಭು ಶ್ರೀನಿವಾಸ್‌ ಅಲ್ಲೊಂದು ಲವ್‌ಸ್ಟೋರಿ ತಂದಿದ್ದಾರೆ. ರೌಡಿಸಂ ಸಿನಿಮಾಗಳಲ್ಲಿ ಲವ್‌ಸ್ಟೋರಿ ಬೆರೆತು ಹೋಗಿರೋದು ಹಳೆಯ ಟ್ರೆಂಡ್. ಆದರೆ, "ಗಣಪ'ನ ಲವ್‌ಟ್ರ್ಯಾಕ್‌ನಲ್ಲಿ ಒಂದಷ್ಟು ಫ್ಲ್ಯಾಶ್‌ಬ್ಯಾಕ್‌, ಟ್ವಿಸ್ಟ್-ಟರ್ನ್ಗಳಿರುವುದರಿಂದ ನಿರ್ದೇಶಕರ ಪ್ರಯತ್ನವನ್ನು ಮೆಚ್ಚಬಹುದು- ರವಿಪ್ರಕಾಶ್ ರೈ (ಇನ್ನಷ್ಟು ಇಲ್ಲಿ ಓದಿ)

  'ಗಣಪ': ಪಾತಕ ಪ್ರೇಮದ ರೂಪಕ - ವಿಜಯ ಕರ್ನಾಟಕ

  ಚಿತ್ರದ ಆರಂಭದಲ್ಲಿ ಇದು ತಲೆಚಿಟ್ಟುಹಿಡಿಸುವ ಮಚ್ಚು ಲಾಂಗಿನ ಸಿನಿಮಾವೋ ಎಂಬ ಆತಂಕ ಹುಟ್ಟಿಸುತ್ತದೆ. ಪ್ರೇಮಕತೆ ಶುರುವಾದ ನಂತರ ಆ ಆತಂಕ ದೂರವಾಗುತ್ತದೆ. ಅನಗತ್ಯವಾದರೂ ಐಟಂ ಸಾಂಗೊಂದು ನುಸುಳಿದೆ. ಗಣಪನನ್ನು ಅಟ್ಟಿಸಿಕೊಂಡು ಬರುವ ರೌಡಿಗಳು ಬೈಕ್ ವೀಲಿಂಗ್ ಮಾಡುತ್ತ ಬರುವುದು ಹಾಸ್ಯಸ್ಪದ. 40 ವರ್ಷದ ಮೇಲೆ ಬದುಕಿದ್ದರೆ ಆತ ರೌಡಿಯೇ ಅಲ್ಲ ಅನ್ನುವ ಡೈಲಾಗ್‌ಗೆ ವಿರೋಧಬಾಸವಾಗಿ ಚಿತ್ರದಲ್ಲಿ ಸಾಕಷ್ಟು ಹಿರಿಯ ರೌಡಿ ಪಾತ್ರಗಳಿವೆ. ಹಾಸ್ಯಕ್ಕೆಂದು ಹೆಚ್ಚುವರಿ ಕಲಾವಿದರು ಇಲ್ಲ. ಮತ್ತೆಮತ್ತೆ ಗುಣುಗಿಕೊಳ್ಳುವಂತಹ ಹಾಡುಗಳಿಲ್ಲ - ಪ್ರವೀಣ್ ಚಂದ್ರ (ಇನ್ನಷ್ಟು ಇಲ್ಲಿ ಓದಿ)

  ಮಚ್ಚು ಮೆಚ್ಚೋರಿಗೆ ಅಚ್ಚುಮೆಚ್ಚು - ಕನ್ನಡ ಪ್ರಭ

  ರೌಡಿ ಕುಟುಂಬಗಳು; ಅವರ ನಡುವಿನ ದ್ವೇಷ; ಮಚ್ಚುಗಳ-ಲಾಂಗುಗಳ ಬೀಸಾಟ; ಮಕ್ಕಳ ಪೆದ್ದಾಟ; ಮುಗ್ಧ-ಅನಾಥ-ಸಂತ್ರಸ್ತ-ಶಕ್ತಿಯುತ ನಾಯಕ ನಟ; ಆಕಸ್ಮಿಕವಾಗಿ ರೌಡಿಸಂಗೆ ಆಗಮನ; ಸುಂದರ ಹುಡುಗಿ-ನಾಯಕ ನಟಿ; ಪ್ರೀತಿ; ಘರ್ಷಣೆ; ಸಂದಿಗ್ಧತೆ; ಭೀಕರ ಹೊಡೆದಾಟಗಳು; ಅಂತ್ಯ - ಗುರುಪ್ರಸಾದ್ (ಇನ್ನಷ್ಟು ಇಲ್ಲಿ ಓದಿ)

  'Ganapa' Film review - Bangalore Mirror

  Watching a movie without having any sort of expectation has its rewards. But knowing that there is something good to expect in this movie will not take away from the wholesome experience it provides. Despite the 'A' certificate and the generous flow of blood in the long line of murders portrayed, Ganapa is a love story at heart. The execution of the film is perfect as the obvious drawbacks are turned into the film's strength. - Shyam Prasad S (ಇನ್ನಷ್ಟು ಇಲ್ಲಿ ಓದಿ)

  English summary
  Santhosh, Priyanka starrer 'Ganapa' has received mixed response from the critics. Here is the collection of reviews by Top News Papers of Karnataka.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more