»   » 'ಗೀತಾ ಬ್ಯಾಂಗಲ್ ಸ್ಟೋರ್' ಬಗ್ಗೆ ವಿಮರ್ಶಕರು ಹೇಳಿದ್ದೇನು?

'ಗೀತಾ ಬ್ಯಾಂಗಲ್ ಸ್ಟೋರ್' ಬಗ್ಗೆ ವಿಮರ್ಶಕರು ಹೇಳಿದ್ದೇನು?

Posted By:
Subscribe to Filmibeat Kannada

ಬಹುತೇಕ ಹೊಸ ಪ್ರತಿಭೆಗಳೇ ನಟಿಸಿರುವ, ಮಂಜು ಮಿತ್ರ ನಿರ್ದೇಶಿಸಿರುವ 'ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರ ಬಿಡುಗಡೆ ಆಗಿದೆ. 'ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದ ಬಗ್ಗೆ ನಿರೀಕ್ಷೆ ಮೂಡಲು ಕಾರಣ ನಿರ್ದೇಶಕ ಯೋಗರಾಜ್ ಭಟ್.

ಯಾಕಂದ್ರೆ, 'ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರವನ್ನ ಮೆಚ್ಚಿ, ವಿತರಣೆ ಹಕ್ಕುಗಳನ್ನ ಕೊಂಡುಕೊಂಡವರು ಯೋಗರಾಜ್ ಭಟ್. ಗ್ರಾಮೀಣ ಸೊಗಡಿನ ಪ್ರೇಮಕಥೆ ಇರುವ 'ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆದ್ರೆ, ಹೊಸಬರ ಈ ಹೊಸ ಪ್ರಯತ್ನ ವಿಮರ್ಶಕರಿಗೆ ಇಷ್ಟವಾಯ್ತಾ? ಅನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ಕನ್ನಡದ ಜನಪ್ರಿಯ ಪತ್ರಿಕೆಗಳು 'ಗೀತಾ ಬ್ಯಾಂಗಲ್ ಸ್ಟೋರ್' ಬಗ್ಗೆ ಪ್ರಕಟಿಸಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಮುಂದೆ ಓದಿ....

ಗೀತಾ ಬ್ಯಾಂಗಲ್ ಸ್ಟೋರ್ : ನವಿರು ಪ್ರೇಮಕಥೆಯ ರೂಪಕ - ವಿಜಯ ಕರ್ನಾಟಕ

ಗ್ರಾಮೀಣ ಸೊಗಡಿನ ನವಿರಾದ ಪ್ರೇಮಕಥೆಯ ಚಿತ್ರ 'ಗೀತಾ ಬ್ಯಾಂಗಲ್ಸ್ ಸ್ಟೋರ್'. ಹಳ್ಳಿ ಜನರ ಮುಗ್ಧತೆ, ಗ್ರಾಮೀಣ ಭಾಷೆಯ ಸೊಗಡು, ಅಲ್ಲಿನ ತವಕ ತಲ್ಲಣಗಳು, ಸೂಕ್ಷ್ಮ ಮನಸ್ಸುಗಳ ಪ್ರೀತಿ, ತಣ್ಣನೆಯ ಕ್ರೌರ್ಯವನ್ನು ಒಡಲಲ್ಲಿ ಇಟ್ಟುಕೊಂಡಿದೆ ಚಿತ್ರ. ಕ್ಲಾಸಿಯಾಗಿದ್ದುಕೊಂಡು ಮಾಸ್‌ಗೂ ಇಷ್ಟವಾಗುವಂತೆ ಚಿತ್ರ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಮಂಜುಮಿತ್ರ. ಚಿತ್ರದ ಮೊದಲಾರ್ಧ ಸೊಗಸಾಗಿದ್ದು, ಉತ್ತರಾರ್ಧ ಹೃದಯವನ್ನು ತುಸು ಆರ್ದ್ರಗೊಳಿಸುತ್ತದೆ. ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಹಾಡುಗಳನ್ನು, ಹೊಡೆದಾಟಗಳನ್ನು ಚಿತ್ರ ಒಳಗೊಂಡಿದೆ. - ಪ್ರವೀಣ್ ಚಂದ್ರ

ಗೀತನ ಬಳೆಯಂಗಡಿಯಲ್ಲಿ ಎಲ್ಲವೂ ಇದೆ! - ಉದಯವಾಣಿ

ನಾಲ್ಕು ಗೋಡೆಯ ನಡುವೆ ಆಗುವ ಜಗಳ, ಅದು ಹೊರಗೆ ಬೀಳಬಾರದೆಂಬ ಅಮ್ಮನ ಕಾಳಜಿ, ಅದೆಷ್ಟೇ ಪ್ರೀತಿ ಇದ್ದರೂ ಒಂದು ಕ್ಷಣ ಅಪ್ಪನ ಮೇಲೇ ಕೈಮಾಡಿಬಿಡುವ ಮಗನ ಸಿಟ್ಟು, ಮಗನೇ ಆದರೂ ಅಪ್ಪನಿಗ್ಯಾವತ್ತೋ ಹುಟ್ಟುವ ಕೆಟ್ಟ ಹಠ- ಇದೆಲ್ಲವನ್ನೂ ಆ ಒಂದು ದೃಶ್ಯದಲ್ಲಿ ನಿರ್ದೇಶಕರು ಕಟ್ಟಿಕೊಟ್ಟುಬಿಡುತ್ತಾರೆ. ಒಬ್ಬ ಹೊಸ ನಿರ್ದೇಶಕನಿಗೆ ದೃಶ್ಯ ಮಾಧ್ಯಮದ ಮೇಲೆ ಇರೋ ಹಿಡಿತ ಮತ್ತು ಪ್ರೀತಿಯನ್ನು "ಗೀತಾ ಬ್ಯಾಂಗಲ್‌ ಸ್ಟೋರ್ಸ್‌' ಸುಲಭವಾಗಿ ತೋರಿಸುತ್ತದೆ. ಪ್ರೀತಿಯೆಂಬ ಜ್ವರದಲ್ಲಿ ಬಳಲುವ ಯಾವುದೇ ಹಳ್ಳಿಯ ಹರಯ, ಅದಕ್ಕೆ ಸುತ್ತಿಕೊಳ್ಳುವ ಜೀವನ, ಮೈ ಕಾವಿನ ಥರದ ಪ್ರೀತಿ, ಅದಕ್ಕೆ ಹೊಯ್ದ ತಣ್ಣೀರಿನ ತರಹದ ಕರ್ತವ್ಯ, ತಣ್ಣನೆಯ ದ್ವೇಷ, ಅಷ್ಟೇ ಪ್ರಕರವಾದ ಜೀವನಪ್ರೀತಿ ... ಇವೆಲ್ಲಾ ಈ ದೃಶ್ಯ-ಸ್ಟೋರ್‌ನಲ್ಲಿ ಲಭ್ಯ. - ವಿಕಾಸ ನೇಗಿಲೋಣಿ

ಬಳೆಗಳು ಹಾಡುತಿವೆ - ಪ್ರಜಾವಾಣಿ

ಹಳ್ಳಿಯ ಬಂಡಿ ಜಾಡಿನಲ್ಲಿ ತಗ್ಗು-ದಿಣ್ಣೆಗಳು ಸಹಜ. ಆ ತಗ್ಗು-ದಿಣ್ಣೆಗಳಲ್ಲಿಯೇ ಮೆಚ್ಚಬಹುದಾದ ಪಯಣ ಮತ್ತು ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಮಂಜು ಮಿತ್ರ. ‘ಗೀತಾ ಬ್ಯಾಂಗಲ್ ಸ್ಟೋರ್‌' ಅವರ ನಿರ್ದೇಶನದ ಮೊದಲ ಚಿತ್ರ. ಇಲ್ಲಿ ಬಣ್ಣದ ಬಳೆಗಳೂ ಇವೆ, ಒಡೆದ ಬಳೆಗಳೂ ಇವೆ. ‘ಸಹಜ'ಕ್ಕೆ ಸಾಮೀಪ್ಯವಾಗಿ ಕಥೆ ನಿರೂಪಿಸಿರುವುದು ಮತ್ತು ಸಂಭಾಷಣೆ ಇರುವುದು ಪ್ರಶಂಸೆಗೆ ಪಾತ್ರವಾಗುತ್ತದೆ. ಕಥನದ ಕೇಂದ್ರ ಬಯಲುಸೀಮೆಯ ಒಂದು ಹಳ್ಳಿ. ಈ ಹಳ್ಳಿಯ ಪರಿಸರ-ವ್ಯಕ್ತಿಗಳು-ಹುಡುಗರ ಹುಡುಗಾಟ-ಪ್ರೀತಿ ಪ್ರೇಮ-ಕಲಹ, ಇತ್ಯಾದಿ ವಿಷಯಗಳು ಹಳ್ಳಿಗಳಲ್ಲಿ ಸಾರ್ವತ್ರಿಕವಾಗಿ ಕಾಣುವ ಘಟನಾವಳಿಗಳೇ. - ಡಿ.ಎಂ.ಕುರ್ಕೆ ಪ್ರಶಾಂತ

ಬಳೆಗಳು ಕಾಡುತಿವೆ, ಝಲ್ ಝಲ್ ಎನ್ನುತಿವೆ....- ವಿಜಯವಾಣಿ

ವಯಸ್ಸಿಗೆ ಬಂದ ಮಗಳನ್ನು ಓದಿಸುತ್ತ, ಬಳೆಯಂಗಡಿ ಇಟ್ಟುಕೊಂಡು ಜೀವನ ಸಾಗಿಸುವ ಗೃಹಿಣಿಗೆ ನೆರವಾಗಲು ಹೋಗಿ, ಅನಿರೀಕ್ಷಿತ ಸಂಕಷ್ಟದ ‘ಬಳೆ'ಯಲ್ಲಿ ಸಿಲುಕುವ ಹಳ್ಳಿ ಯುವಕನ ಏಳು-ಬೀಳಿನ ಕಥಾನಕ ‘ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದ ಜೀವಾಳ. ಅಂಥ ಯುವಕ ಪ್ರೀತಿಯಲ್ಲಿ ವಚನಭ್ರಷ್ಟನಾದ ಬಳಿಕ ಏನೇನಾಗುತ್ತದೆ ಅನ್ನುವುದೇ ‘...ಸ್ಟೋರ್' ಸ್ಟೋರಿ. ಸಿನಿಮಾಗೆ ಬೇಕಾದ ಎಲ್ಲ ಮಸಾಲೆಗಳಿದ್ದರೂ ಆಶಯವೇ ನಾಪತ್ತೆ. ‘ಬಳೆಯಂಗಡಿ'ಗಾಗಿ ನಾಯಕ ಯಾಕೆ ತನ್ನ ಸರ್ವಸ್ವ ಧಾರೆಯೆರೆಯುತ್ತಾನೆ, ಆತನ ಕುಡುಕ ಅಪ್ಪ ಅದ್ಹೇಗೆ ದಿಢೀರನೆ ಹಣವಂತ ಆಗುತ್ತಾನೆ... ಎಂಬುದಕ್ಕೆ ಸಮರ್ಥನೆಯೇ ಇಲ್ಲ. ಗತಕಾಲದ ಟಿಪಿಕಲ್ ಹಳ್ಳಿ ಪರಸರವನ್ನೇ ಎತ್ತಿ ತೋರಿಸಿರುವುದು ಮತ್ತೊಂದು ಮೈನಸ್. ಹೀಗಿದ್ದೂ ನಾಯಕ ಪಂಜು, ನಾಯಕಿ ಸುಶ್ಮಿತಾ, ಪೋಷಕ ನಟರಾದ ಅಚ್ಯುತ್, ವಿನಯಾಪ್ರಸಾದ್ ಅಭಿನಯ ನೋಡುಗನನ್ನು ತಕ್ಕಷ್ಟು ಹಿಡಿದಿಡುತ್ತದೆ.

English summary
Kannada Movie 'Geetha Bangle Store' has received mixed response from the critics. Here is the collection of reviews from Karnataka's leading News Papers.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more