For Quick Alerts
  ALLOW NOTIFICATIONS  
  For Daily Alerts

  ಮೂವಿಗೆ ಬದಲು 'ಗೋವಾ'ಗೆ ಹೋಗೋದೆ ವಾಸಿ

  By ಉದಯರವಿ
  |

  ಇದು ತಮಿಳಿನ ಯಶಸ್ವಿ ಚಿತ್ರ 'ಗೋವಾ'ದ ಎರವಲು ಸರಕು. ಇದೊಂದು ಕಡಿಮೆ ಬಜೆಟ್ ನ ಸಿನಿಮಾ ಆದರೂ ತಮಿಳಿನಲ್ಲಿ ಭರ್ಜರಿ ಫಸಲನ್ನೇ ತೆಗೆದಿತ್ತು. ಆ ಕಾರಣಕ್ಕೋ ಏನೋ ಕನ್ನಡಕ್ಕೆ ಇದನ್ನು ತಂದಿದ್ದಾರೆ ನಿರ್ಮಾಪಕರಾದ ಶಂಕರ್ ಗೌಡ. ಆದರೆ ಫಸಲು ಬರುವುದಿರಲಿ ಅಸಲು ಬಂದರೆ ಸಾಕು ಎಂಬಂತಿದೆ ಚಿತ್ರ.

  ಒಂದು ಕುಗ್ರಾಮ. ಆ ಊರಲ್ಲಿ ಮೂವರು ತರ್ಲೆ ನನ್ಮಕ್ಳು. ಊರಿನ ಆಚಾರವಿಚಾರ, ಪೋಷಕರ ಹಿತವಚನ, ಬಹುವಚನ ಇವರ ಪಾಲಿಗೆ ಎಮ್ಮೆ ಮೇಲೆ ಮಳೆ ಹುಯ್ದಂತೆ ಸರ್ವಜ್ಞ. ಇಂತಹವರು ಮಾಡಿದ ಒಂದು ತಪ್ಪಿಗೆ ಊರಿನ ಯಜಮಾನ (ಅಶೋಕ್) ಶಿಕ್ಷೆ ಪ್ರಕಟಿಸುತ್ತಾರೆ. [ಗೋವಾ' ಗೋಲ್ ಮಾಲ್ ; ಕೋಮಲ್ ಇನ್ ಟ್ರಬಲ್]

  ಒಬ್ಬರಿಗೊಬ್ಬರು ಮಾತನಾಡಬಾರದು, ಒಂದು ವೇಳೆ ಮಾತಾಡಿದರ ಅವರಷ್ಟೇ ಅಲ್ಲ ಅವರ ಮನೆಯವರಿಗೂ ಬಹಿಷ್ಕಾರ ಹಾಕಲಾಗುತ್ತದೆ ಎಂದು ತೀರ್ಪು ನೀಡುತ್ತಾರೆ. ಇಂತಹ ಬರಗೆಟ್ಟ ಊರಿನಲ್ಲಿರುವುದಕ್ಕಿಂತ ಬೆಂಗಳೂರಿಗೆ ಹೋಗುವುದು ಎಂದು ರಾತ್ರೋರಾತ್ರಿ ಪೇರಿಕೀಳುತ್ತಾರೆ.

  Rating:
  2.0/5

  ಚಿತ್ರ: ಗೋವಾ
  ನಿರ್ಮಾಪಕರು: ಶಂಕರ್ ಗೌಡ, ಸಿ.ಎಂ.ಆರ್. ಶಂಕರ್ ರೆಡ್ಡಿ ಹಾಗೂ ರಜತ್ ಮಂಜುನಾಥ್
  ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ: ಸೂರ್ಯ
  ಸಂಗೀತ: ಅರ್ಜುನ್ ಜನ್ಯ
  ಛಾಯಾಗ್ರಹಣ: ರಾಜೇಶ್
  ಸಂಕಲನ: ದೀಪು ಎಸ್ ಕುಮಾರ್
  ಪಾತ್ರವರ್ಗ: ಕೋಮಲ್, ತರುಣ್ ಚಂದ್ರ, ಶ್ರೀಕಾಂತ್, ಶರ್ಮಿಳಾ ಮಾಂಡ್ರೆ, ರಚಲ್, ಸೋನುಗೌಡ, ಅಶೋಕ್, ಶೋಭರಾಜ್, ರಮೇಶ್ ಭಟ್, ಬುಲೆಟ್ ಪ್ರಕಾಶ್, ಧರ್ಮ, ಕರಿಸುಬ್ಬು ಮುಂತಾದವರು.

  ಗೋವಾಗೆ ಯಾಕೆ ಹೋಗ್ತಾರೆ?

  ಗೋವಾಗೆ ಯಾಕೆ ಹೋಗ್ತಾರೆ?

  ಅಲ್ಲಿಂದ ಕಥೆ ಬೆಂಗಳೂರಿಗೆ ಶಿಫ್ಟ್ ಆಗುತ್ತದೆ. ಗೆಳೆಯನೊಬ್ಬ ಫಾರಿನ್ ಬೆಡಗಿಗೆ ಬಲೆಹಾಕಿ ಅವಳನ್ನು ಮದುವೆಯೂ ಆಗುತ್ತಿರುತ್ತಾನೆ. ಅವನಂತೆ ಇವರೂ ವಿದೇಶಿ ಬೆಡಗಿಗೆ ಬಲೆ ಹಾಕಿ ಫಾರಿನ್ ನಲ್ಲಿ ಸೆಟ್ಲ್ ಆಗಲು ಗೋವಾಗೆ ಹೋಗುತ್ತಾರೆ.

  ಸೆಕೆಂಡ್ ಗೇರ್ ನಲ್ಲಿ ಸಾಗುವ ಕಥೆ

  ಸೆಕೆಂಡ್ ಗೇರ್ ನಲ್ಲಿ ಸಾಗುವ ಕಥೆ

  ಅಲ್ಲಿ ಈ ಮೂವರು ಏನೆಲ್ಲಾ ಮಾಡುತ್ತಾರೆ, ಇವರಿಗೆ ಫಾರಿನ್ ಬೆಡಗಿ ಸಿಗುತ್ತಾಳಾ ಇಲ್ಲವೇ ಎಂಬುದು ಕಥೆಯ ಹೂರಣ. ಆರಂಭದಲ್ಲಿ ನಾಲ್ಕನೇ ಗೇರ್ ನಲ್ಲಿ ಓಡುವ ಕಥೆ ಗೋವಾ ಬರುತ್ತಿದ್ದಂತೆ ಸೆಕೆಂಡ್ ಗೇರ್ ಗೆ ಶಿಫ್ಟ್ ಆಗುತ್ತದೆ.

  ಕುಳಿತಲ್ಲೇ ಒದ್ದಾಡುವ ಪ್ರೇಕ್ಷಕರು

  ಕುಳಿತಲ್ಲೇ ಒದ್ದಾಡುವ ಪ್ರೇಕ್ಷಕರು

  ಅಲ್ಲಿ ಇವರ ಆಟಪಾಠ, ನೋಟಗಳನ್ನು ನೋಡಲು ಎರಡು ಕಣ್ಣು ಸಾಲದು. ಗೋವಾದಿಂದ ಕಥೆಯನ್ನು ಟೇಕಾಫ್ ಮಾಡಲು ನಿರ್ದೇಶಕರು ಬಹಳಷ್ಟು ಒದ್ದಾಡಿದ್ದಾರೆ. ಪ್ರೇಕ್ಷಕರು ಸಹ ಅಷ್ಟೇ ಕುಳಿತಲ್ಲೇ ಒದ್ದಾಡುವಂತಾಗುತ್ತದೆ.

  ಕಾಮಿಡಿ ಟೈಮಿಂಗ್ ಮಿಸ್

  ಕಾಮಿಡಿ ಟೈಮಿಂಗ್ ಮಿಸ್

  ಇದು ಕಾಮಿಡಿ ಪ್ರಧಾನ ಚಿತ್ರವಾದರೂ ಮುಖ್ಯವಾಗಿ ಮಿಸ್ ಆಗಿರುವುದೇ ಕಾಮಿಡಿ. ಕೋಮಲ್, ತರುಣ್ ಚಂದ್ರ ಅವರ ಕಾಮಿಡಿ ಟೈಮಿಂಗ್ ಗೆ ಪ್ರೇಕ್ಷಕರು ಒತ್ತರಿಸಿ ಬರುವ ಆಕಳಿಕೆಯನ್ನು ಅದುಮಿಡುವ ಪ್ರಯತ್ನ ಮಾಡುತ್ತಾರೆ.

  ಗೋವಾ ಬೀಜ್ ನಲ್ಲಿ ಮುಳುಗಿದ ಪಂಚ್

  ಗೋವಾ ಬೀಜ್ ನಲ್ಲಿ ಮುಳುಗಿದ ಪಂಚ್

  ಸಂಭಾಷಣೆಯಲ್ಲಿ ಪಂಚ್ ಇಲ್ಲದಿರುವುದು, ಕಾಮಿಡಿ ಟೈಮಿಂಗ್ ಮಿಸ್ ಆಗಿರುವುದು, ಜಾಳುಜಾಳು ನಿರೂಪಣೆ, ಎತ್ತಿಂದ ಎತ್ತಲೋ ಹೊರಳುವ ಕಥೆ, ನೀರಸ ಹಾಡುಗಳು...ಹೀಗೆ ಹತ್ತು ಹಲವು ಎಡವಟ್ಟುಗಳು ಚಿತ್ರವನ್ನು 'ಗೋವಾ' ಬೀಚ್ ನಲ್ಲಿ ಮುಳುಗಿಸಿವೆ.

  ತಾಂತ್ರಿಕತೆ ಬಗ್ಗೆ ಮಾತನಾಡದಿರುವುದೇ ವಾಸಿ

  ತಾಂತ್ರಿಕತೆ ಬಗ್ಗೆ ಮಾತನಾಡದಿರುವುದೇ ವಾಸಿ

  ಚಿತ್ರದಲ್ಲಿ ಸಾಕಷ್ಟು ಹಾಸ್ಯ ಕಲಾವಿದರಿದ್ದರೂ ನಗು 'ಬಿಗು'ವಾಗಿದೆ. ಉಳಿದಿದ್ದರಲ್ಲಿ ಶರ್ಮಿಳಾ, ಸೋನುಗೌಡ, ರಾಚಲ್ ಎಂಬ ವಿದೇಶಿ ಬೆಡಗಿಯ ತಾಜಾ ಬೆಡಗು 'ಗೋವಾ' ಗೆ ಒಂದಷ್ಟು ಭಾವ ತಂದಿದೆ. ಚಿತ್ರದ ತಾಂತ್ರಿಕತೆ ಬಗ್ಗೆ ಮಾತನಾಡದಿರುವುದೇ ವಾಸಿ.

  ಮೂವಿಗೆ ಬದಲು 'ಗೋವಾ'ಗೆ ಹೋಗೋದೆ ವಾಸಿ

  ಮೂವಿಗೆ ಬದಲು 'ಗೋವಾ'ಗೆ ಹೋಗೋದೆ ವಾಸಿ

  ಕೊನೆಯ ಮಾತು, ಈ ಮೂವಿಗೆ ಬದಲು ಸ್ವತಃ ಗೋವಾಗೆ ಹೋಗಿ ಅಲ್ಲಿನ ಸುಂದರ ಬೀಚ್ ಗಳನ್ನು, ಬೆಡಗಿಯರನ್ನು ನೋಡಿಕೊಂಡು, ಸಾಧ್ಯವಾದರೆ ಕ್ಯಾಸಿನೋದಲ್ಲಿ ಒಂದು ಸುತ್ತು ಹಾಕಿಕೊಂಡು ಬರೋದು ವಾಸಿ.

  English summary
  Kannada movie Goa review. Both the lead actors are nowhere near to convincing the audience. The director of the film Surya needs to do his homework before he gets his hand on other project for the betterment Kannada films. Instead of watching movie better to go real Goa.
  Friday, March 6, 2015, 18:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X