»   » ವಿಭಿನ್ನ ಕಥೆಯ ಗುಳ್ಟು ಚಿತ್ರಕ್ಕೆ ವಿಮರ್ಶಕರ ಫುಲ್ ಮಾರ್ಕ್

ವಿಭಿನ್ನ ಕಥೆಯ ಗುಳ್ಟು ಚಿತ್ರಕ್ಕೆ ವಿಮರ್ಶಕರ ಫುಲ್ ಮಾರ್ಕ್

By Pavithra
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಟೈಟಲ್ ಮತ್ತು ಟೀಸರ್ ನಿಂದಲೇ ಕನ್ನಡ ಸಿನಿಮಾ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದ ಸಿನಿಮಾ ಗುಳ್ಟು. ಹೊಸಬರ ಪ್ರಯತ್ನ ಗೆಲ್ಲುತ್ತದೆ ಎಂದು ಮೊದಲ ಸಿನಿಪ್ರಿಯರು ಲೆಕ್ಕಾ ಹಾಕಿದ್ದರು. ಸಿನಿಮಾ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದರು. ಶುಕ್ರವಾರ ಫಸ್ಟ್ ಶೋ ನೋಡಿಕೊಂಡು ನಂದ ವಿಮರ್ಶಕರು ಗುಳ್ಟು ಮ್ಯಾಜಿಕ್ ಇಷ್ಟ ಪಟ್ಟಿದ್ದಾರೆ.

  ಗುಳ್ಟು ನೋಡಿದ ವಿಮರ್ಶಕರು ಚಿತ್ರದ ಬಗ್ಗೆ ಹೇಳಿದ್ದೇನು? ಹೊಸಬರ ಹಾಗೂ ವಿಭಿನ್ನ ಚಿತ್ರ ಮೊದಲ ಪ್ರಯತ್ನದಲ್ಲೇ ವರ್ಕ್ ಔಟ್ ಆಯ್ತಾ? ಇಷ್ಟೆಲ್ಲಾ ಕೌತುಗಳ ಮಧ್ಯೆ ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.

  ವಿಭಿನ್ನ ಸಿನಿಮಾ ಅನ್ನುವ ಉದ್ದೇಶದಿಂದಲೇ ಚಿತ್ರತಂಡ ಚಿತ್ರದ ಪ್ರಚಾರವನ್ನೂ ವಿಭಿನ್ನವಾಗಿಯೇ ಮಾಡಿತ್ತು. ಎರಡು ಮೂರು ತಿಂಗಳಿಂದ ತಲೆ ಕೆಡಿಸಿಕೊಂಡು ಮಾಡಿದ ಪ್ರಚಾರ ತೆರೆ ಮೇಲೆ ವರ್ಕ್ ಔಟ್ ಆಗಿದೆ. ಕರ್ನಾಟಕ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ವಿಮರ್ಶೆ ಮುಂದೆ ಓದಿ

  ವಿಜಯ ಕರ್ನಾಟಕ

  ಆಧುನಿಕ ಜಗತ್ತನ್ನು ಹೆಚ್ಚು ಆತಂಕಕ್ಕೀಡು ಮಾಡುತ್ತಿದೆ ಸೈಬರ್ ಕ್ರೈಮ್. ಅದರಲ್ಲೂ ಆನ್‌ಲೈನ್‌ ದೋಖಾಗಳು ಎಲ್ಲರನ್ನೂ ತಲ್ಲಣಗೊಳಿಸುತ್ತಿವೆ. ಕಣ್ಮುಚ್ಚಿ ಕಣ್ಣು ತೆರೆಯುವುದರೊಳಗೆ ಪ್ರಪಂಚವೇ ಅದಲು ಬದಲಾದ ಅನೇಕ ಘಟನೆಗಳು ಡಿಜಿಟಲ್‌ ಯುಗದಲ್ಲಿ ನಡೆದಿವೆ. ಇಂತಹ ಗಂಭೀರ ವಿಷಯಗಳನ್ನೂ ಇಟ್ಟುಕೊಂಡು ‘ಗುಳ್ಟು' ಸಿನಿಮಾ ಮಾಡಿದ್ದಾರೆ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ.ಸಂಕೀರ್ಣವಾದ ವಿಷಯವನ್ನು ಸಾಮಾನ್ಯನಿಗೂ ಅರ್ಥವಾಗುವಂತೆ ಕಟ್ಟಿಕೊಟ್ಟಿದ್ದಾರೆ ಅವರು. ಹಾಗಾಗಿ ಸಿನಿಮಾ ನೋಡಿದ ಪ್ರತಿ ಪ್ರೇಕ್ಷಕನ ಮುಖದಲ್ಲೂ ಆತಂಕದ ಛಾಯೆ ಕಾಣುತ್ತದೆ. ನಮ್ಮ ಅರಿವಿಗೆ ಬಾರದಂತೆ ನಾವು ಡಿಜಿಟಲ್‌ ಡ್ರೀಮ್ ಗೆ ಹೇಗೆ ಬಲಿಯಾಗಿದ್ದೇವೆ ಎಂಬುದು ಒಮ್ಮೆಗೆ ಮೈಬೆವರುವಂತೆ ಮಾಡುತ್ತದೆ. ಅಷ್ಟರಮಟ್ಟಿಗೆ ಸಿನಿಮಾ ಪರಿಣಾಮಕಾರಿಯಾಗಿದೆ. ಆಯ್ದುಕೊಂಡಿರುವ ವಿಷಯವೇ ಹೊಸದಾಗಿರುವುದರಿಂದ ಮೊದಲ ದೃಶ್ಯದಿಂದ ಕೊನೆವರೆಗೂ ಥ್ರಿಲ್ ನೀಡುತ್ತಲೇ ಚಿತ್ರ ಸಾಗುತ್ತದೆ. ಹಾಡುಗಳಿಗಿಂತ ಹಿನ್ನೆಲೆ ಸಂಗೀತ ಹೆಚ್ಚು ಆಪ್ತವಾಗುತ್ತದೆ. ಚಿತ್ರಕಥೆಯ ಓಟಕ್ಕೆ ಸಿನಿಮಾಟೋಗ್ರಫಿ ಮಂಕಾಗುತ್ತದೆ. ಕನ್ನಡದಲ್ಲಿ ಬಂದ ಅಪರೂಪದ ಸಿನಿಮಾವಿದು

  ಆನ್-ಲೈನ್ ನಲ್ಲಿ ಕಳ್ಳ ಪೊಲೀಸ್ ಆಟ

  ಇದು ಹ್ಯಾಕಿಂಗ್ ಕುರಿತ ಮತ್ತು ಹ್ಯಾಕರ್ ಒಬ್ಬನ ಕಥೆ ಇರುವ ಚಿತ್ರ. ಆತ ಹೇಗೆ ಮಾಹಿತಿ ಕಳ್ಳತನ ಮತ್ತು ಮಾಹಿತಿ ಸೋರಿಕೆ ಮಾಡಿ, ಬಲಿಷ್ಠನಾಗುತ್ತಾನೆ ಎಂದು ಚಿತ್ರ ಹೇಳುತ್ತದೆ. ಈ ತರಹದ ವಿಷಯಗಳನ್ನು ಹೇಳುವುದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯ ಜನರಿಗೆ ಅರ್ಥ ಮಾಡಿಸುವುದು ಅಷ್ಟು ಸುಲಭವಲ್ಲ. ಆದರೆ, ಜನಾರ್ಧನ್‌ ಈ ವಿಷಯದಲ್ಲಿ ಗೆದ್ದಿದ್ದಾರೆ. ಇಂಟರ್ ನೆಟ್‌, ತಂತ್ರಜ್ಞಾನ, ಹ್ಯಾಕಿಂಗ್, ಮಾಹಿತಿ ಸೋರಿಕೆ ಮುಂತಾದ ಹಲವು ವಿಷಯಗಳನ್ನು ಬಹಳ ಸರಳವಾಗಿ ನಿರೂಪಿಸುತ್ತಾ ಹೋಗಿದ್ದಾರೆ. ಅದೇ ಕಾರಣಕ್ಕೆ ಚಿತ್ರ ಇಷ್ಟವಾಗುತ್ತಾ ಹೋಗುತ್ತದೆ. ಚಿತ್ರದ ಮೊದಲಾರ್ಧ ಒಬ್ಬ ಸಾಮಾನ್ಯ ಸಾಫ್ಟ್ವೇರ್ ತಂತ್ರಜ್ಞನ ಸುತ್ತ ಸುತ್ತುತ್ತದೆ.

  ಇಲ್ಲಿ ಸ್ನೇಹ, ಪ್ರೀತಿ, ಒಂದಿಷ್ಟು ಕಳ್ಳಾಟ, ಕಣ್ಣಾಮುಚ್ಚಾಲೆಯ ಸುತ್ತ ಸುತ್ತುತ್ತದೆ. ದ್ವಿತೀಯಾರ್ಧ ಶುರುವಾಗುತ್ತಿದ್ದಂತೆಯೆ, ಚಿತ್ರಕ್ಕೊಂದು ದೊಡ್ಡ ಟ್ವಿಸ್ಟ್ ಸಿಗುತ್ತದೆ. ಅಲ್ಲಿಂದ ಚಿತ್ರ ಗಂಭೀರವಾಗುತ್ತಾ ಹೋಗುತ್ತದೆ. ಕೊನೆಗೆ ಚಿತ್ರ ಮುಗಿಯುವುದೇ ಗೊತ್ತಾಗದಷ್ಟು ಹಿಡಿದಿಟ್ಟು ನೋಡಿಸಿಕೊಂಡು ಹೋಗುತ್ತದೆ.

  ಆನ್ ಲೈನ್ ಅಪರಾದದ ಅಚ್ಚುಕಟ್ಟು ಅನಾವರಣ

  ಇಂಟರ್​ನೆಟ್ ವಿಚಾರಕ್ಕೆ ಸಂಬಂಧಿಸಿದಂತೆ ತಾಜಾ ಎನಿಸುವಂತಹ ಘಟನೆಗಳನ್ನೇ ಇಟ್ಟುಕೊಂಡು ಕಥೆ ಹೆಣೆದಿದ್ದಾರೆ ನಿರ್ದೇಶಕ ಜನಾರ್ದನ್. ಈವರೆಗೂ ಬೇರಾವುದೇ ಸಿನಿಮಾಗಳಲ್ಲಿ ನೋಡಿರದಂಥ ಹೊಚ್ಚ ಹೊಸ ವಿಷಯವನ್ನೇ ಪ್ರೇಕ್ಷಕನಿಗೆ ತಿಳಿಸುವುದು ಈ ಚಿತ್ರದ ಹೆಚ್ಚುಗಾರಿಕೆ. ಅಸಲಿಗೆ, ಇಂಟರ್​ನೆಟ್ ಬಳಕೆದಾರನ ಖಾಸಗಿ ಮಾಹಿತಿ ಎಂದರೇನು? ಅದನ್ನು ಕದಿಯುವುದರಿಂದ ಕಳ್ಳರಿಗೆ ಆಗಬಹುದಾದ ಉಪಯೋಗವೇನು? ತೀರಾ ಖಾಸಗಿಯಾಗಿ ಹುಡುಗ-ಹುಡುಗಿ ವಿನಿಮಯ ಮಾಡಿಕೊಂಡ ಪೋಲಿ ಸಂಭಾಷಣೆಗಳನ್ನು ಡಿಲಿಟ್ ಮಾಡಿದ ಮಾತ್ರಕ್ಕೆ ನಿಜಕ್ಕೂ ಅವು ಡಿಲಿಟ್ ಆಗಿರುತ್ತವೆಯೇ? ಯಾರಿಗೂ ಗೊತ್ತಾಗದಂತೆ ಗುಟ್ಟಾಗಿ ಇಟ್ಟುಕೊಂಡಿರುವ ಪಾಸ್​ವರ್ಡ್ ಗಳನ್ನು ಹ್ಯಾಕರ್​ಗಳು ಹೇಗೆ ತಿಳಿದುಕೊಳ್ಳುತ್ತಾರೆ? ಇವೇ ಮೊದಲಾದ ಪ್ರಶ್ನೆಗಳಿಗೆ ಸರಣಿ ಉತ್ತರಗಳನ್ನು ನೀಡುತ್ತದೆ ಗುಳ್ಟು ಚಿತ್ರ.

  ಗುಳ್ಟು ವಿಮರ್ಶೆ

  If you use a smartphone, then you should definitely watch the film because you will get to know how vulnerable your information is online. In light of the recent Facebook scandal, it is important to know how we are being watched; people are being categorised into profiles. You will know more about what happens with the information you send out through your social media profiles and the likes through the film.This film is for all those who are interested in watching a film with good content. There haven't been many films on cybercrime, in Kannada or other languages. This film deals exclusively with that. I am a fan of director Mani Ratnam, and am influenced by the way he tells stories with the settings and the underlying statements through the dialogues. I have tried to do that with Gultoo.

  English summary
  Actor Naveen Shankar and actress Sonu Gowda starrer Gultoo kannada movie review. the movie get good response everywhere.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more