For Quick Alerts
  ALLOW NOTIFICATIONS  
  For Daily Alerts

  Haftha review: ವಸೂಲಿ ಜಗತ್ತಿನಲ್ಲಿ ಕೊಲ್ಲುವುದು ಮಾಮೂಲಿ

  |

  ಸ್ಟಾರ್ ನಟರ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನ ಮಾಡುತ್ತಿದ್ದ ವರ್ಧನ್ ತೀರ್ಥಹಳ್ಳಿ ನಾಯಕನಾಗಿ ನಟಿಸಿರುವ ಚಿತ್ರ ಹಫ್ತಾ. ಪೋಸ್ಟರ್ ಮತ್ತು ಟ್ರೈಲರ್ ಬಹಳ ಗಮನ ಸೆಳೆದಿತ್ತು. ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದ ವರ್ಧನ್ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದೀಗ, ಸಿನಿಮಾ ರಿಲೀಸ್ ಆಗಿದೆ. ನಿರೀಕ್ಷೆಯಂತೆ ವಸೂಲಿ, ಕೊಲೆ, ಜೊತೆಗೊಂದು ಲವ್ ಸ್ಟೋರಿ ಜೊತೆ ಥಿಯೇಟರ್ ಗೆ ಬಂದಿದೆ. ಪೂರ್ತಿ ವಿಮರ್ಶೆ ಮುಂದೆ ಓದಿ.....

  ಚಿತ್ರ: ಹಫ್ತಾ

  ನಿರ್ದೇಶಕ: ಪ್ರಕಾಶ್ ಹೆಬ್ಬಾಳ್

  ನಿರ್ಮಾಪಕ: ಮೈತ್ರಿ ಮಂಜುನಾಥ್ (ಮೈತ್ರಿ ಪ್ರೊಡಕ್ಷನ್)

  ಕಲಾವಿದರು: ವರ್ಧನ್ ತೀರ್ಥಹಳ್ಳಿ, ರಾಘವ್ ನಾಗ್, ಬಿಂಬಶ್ರೀ, ದಶಾವರ ಚಂದ್ರು, ಸೌಮ್ಯ ತಿತೀರ ಮತ್ತು ಇತರರು

  ಬಿಡುಗಡೆ ದಿನಾಂಕ: ಜೂನ್ 21, 2019

  ಹಫ್ತಾ ಚಿತ್ರದ ಕಥೆ....

  ಹಫ್ತಾ ಚಿತ್ರದ ಕಥೆ....

  ಹಫ್ತಾ ಹೆಸರಿಗೂ ಅಂಡರ್ ವರ್ಲ್ಡ್ ಗೂ ಬಹಳ ನಂಟು. ಈ ಹೆಸರು ಕೇಳಿದ ತಕ್ಷಣ ಇದೊಂದು ಅಂಡರ್ ವರ್ಲ್ಡ್ ಸಿನಿಮಾ ಅನ್ನೋದು ಪಕ್ಕಾ ಆಗಿತ್ತು. ಅದು ನಿಜ ಕೂಡ ಹೌದು. ಈ ಸಿನಿಮಾ ಕಥೆ ನಡೆಯುವುದು ಕಡಲ ತೀರದ ಭೂಗತ ಲೋಕದಲ್ಲಿ. ದುಡ್ಡಿಗಾಗಿ ಯಾವುದೇ ಸೆಂಟಿಮೆಂಟ್ ಇಲ್ಲದೇ ಎದುರಲ್ಲಿ ಇರೋದು ಯಾರೇ ಆಗಲಿ ಕ್ಷಣ ಮಾತ್ರದಲ್ಲಿ ಹೊಡೆದುರುಳಿಸುವ ಶಾರ್ಪ್ ಶೂಟರ್ಸ್ ಕುಡ್ಲ ಅಲಿಯಾಸ್ ಕೃಷ್ಣ ಮತ್ತು ಶಂಕರ್ ಯರವಾಡ. ಇವರಿಬ್ಬರಿಗೂ ಯಾವುದೇ ಗುರಿ ಇಲ್ಲ, ಸಂಬಂಧಗಳಿಲ್ಲ, ಭಾವನೆಗಳಲ್ಲಿ ಹಫ್ತಾ ವಸೂಲಿ ಮಾಡೋದೊಂದೆ ಕಾಯಕ. ಇಂತವರ ಎದುರು ಹಾಕಿಕೊಂಡವನು ಪಾಂಡೆ. ಇವರಿಬ್ಬರ ನಡುವಿನ ಏಟು-ಏದಿರೇಟು ಈ ಚಿತ್ರದ ಸಾಮಾನ್ಯ ಕಥೆ.

  ಆಕ್ಷನ್ ಪ್ಯಾಕೇಜ್ ನಲ್ಲಿ ಎಲ್ಲವೂ ಇದೆ

  ಆಕ್ಷನ್ ಪ್ಯಾಕೇಜ್ ನಲ್ಲಿ ಎಲ್ಲವೂ ಇದೆ

  ಸಿನಿಮಾ ಕಂಪ್ಲೀಟ್ ಆಕ್ಷನ್ ಪ್ಯಾಕೇಜ್. ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೂ ಗನ್ ಸೌಂಡ್ ಕೇಳುತ್ತಲೇ ಇರುತ್ತೆ. ರೌಡಿಗಳ ಅಟ್ಟಹಾಸ, ಕ್ರಿಮಿನಲ್ ಕೆಲಸಗಳು, ಅವರನ್ನ ಮಟ್ಟ ಹಾಕಲು ಪೊಲೀಸರ ಪ್ರಯತ್ನ, ದಾಳಿ-ಪ್ರತಿ ದಾಳಿ ಹೀಗೆ ಎರಡು ಗ್ಯಾಂಗ್ ನಡುವೆ ವಾರ್ ಇದು ಸಾಮಾನ್ಯ. ಇದರ ನಡುವೆ ಕಥೆಗೆ ಟ್ವಿಸ್ಟ್ ಕೊಡುವ ಒಂದು ಲವ್ ಸ್ಟೋರಿ. ಎಲ್ಲ ರೆಗ್ಯುಲರ್ ಚಿತ್ರಗಳಲ್ಲೂ ಇದು ಕಾಣುವ ಅಂಶಗಳೇ. ಹೆಚ್ಚಾಗಿ ಹೇಳಲೇಬೇಕು ಎನ್ನುವ ಅಂಶ ಇಲ್ಲಿಲ್ಲ.

  ಮಂಗಳ ಮುಖಿ ಪಾತ್ರ ಇಷ್ಟ ಆಗುತ್ತೆ

  ಮಂಗಳ ಮುಖಿ ಪಾತ್ರ ಇಷ್ಟ ಆಗುತ್ತೆ

  ಸಿನಿಮಾದಲ್ಲಿ ಹೆಚ್ಚು ಗಮನ ಸೆಳೆಯುವುದು ಮಂಗಳಮುಖಿ ಪಾತ್ರ. ಶಾರ್ಪ್ ಶೂಟರ್ ಆಗಿದ್ದ ಕುಡ್ಲ (ವರ್ಧನ್) ದಿಢೀರ್ ಅಂತ ಮಂಗಳ ಮುಖಿ ಆಗ್ತಾನೆ. ಅದು ಯಾಕೆ ಅಂತ ಸಿನಿಮಾದಲ್ಲಿ ನೋಡಿದ್ರೆ ಮಜಾ. ಮಂಗಳಮುಖಿ ಲುಕ್, ಗೆಟಪ್ ಓಕೆ ಆದರೆ ಮ್ಯಾನರಿಸಂ ಇನ್ನು ಸ್ವಲ್ಪ ಬೇಕಿತ್ತು. ಆದರೂ ಈ ಕ್ಯಾರೆಕ್ಟರ್ ನಲ್ಲಿ ವರ್ಧನ್ ಬಹಳ ಚೆನ್ನಾಗಿ ನಟಿಸಿದ್ದಾರೆ. ಮಂಗಳ ಮುಖಿ ಸಮುದಾಯದ ಬಗ್ಗೆಯೂ ಕಥೆಗೆ ತಕ್ಕಂತೆ ಬಳಸಿಕೊಳ್ಳಲಾಗಿದೆ.

  ಕೊನೆಯದಾಗಿ ಹೇಳುವುದೇನು?

  ಕೊನೆಯದಾಗಿ ಹೇಳುವುದೇನು?

  ನೇರವಾಗಿ ಹೇಳಿದ್ರೆ ಪ್ರೇಕ್ಷಕರಿಗೆ ಮಜಾ ಸಿಗಲ್ಲ ಎಂದು ಅರಿತ ನಿರ್ದೇಶಕ ಪ್ರಕಾಶ್ ಹೆಬ್ಬಾಳ, ರೆಗ್ಯುಲರ್ ಕಥೆಯಾದರೂ ಚಿತ್ರಕಥೆಯಲ್ಲಿ ಫ್ಲಾಶ್ ಬ್ಯಾಕ್, ಟ್ವಿಸ್ಟ್ ಇಟ್ಟು ಕೊನೆಯವರೆಗೂ ಥ್ರಿಲ್ ಆಗಿ ನೋಡಲಿ ಎಂಬ ಬುದ್ದಿವಂತಿಕೆ ಮರೆದಿದ್ದಾರೆ. ಕೆಲವೇ ಸ್ಥಳದಲ್ಲಿ ಚಿತ್ರೀಕರಣವಾಗಿರುವ ಕಾರಣ ಮತ್ತೆ ಮತ್ತೆ ಅದೇ ದೃಶ್ಯಗಳನ್ನ ತೋರಿಸಿದ್ದಾರೆ. ಹಾಡುಗಳ ಬಗ್ಗೆ ನೋ ಕಾಮೆಂಟ್ಸ್. ಹಿನ್ನಲೆ ಸಂಗೀತ ಓಕೆ. ವರ್ಧನ್ ತೀರ್ಥಹಳ್ಳಿ, ರಾಘವ್ ನಾಗ್, ಬಿಂಬಶ್ರೀ, ದಶಾವರ ಚಂದ್ರು, ಸೌಮ್ಯ ತಿತೀರ, ಬಾಲ್ ರಾಜ್ ವಾಡಿ, ಉಗ್ರಂ ರವಿ ಎಂಬ ಕಲಾವಿದರ ಅಭಿನಯದಿಂದ ಹಫ್ತಾ ಸಮಾಧಾನ ತಂದಿದೆ.

  English summary
  Kannada actor Vardhan thirthahalli, raghav nag starrer kannada movie haftha has released today (june 21st). its Pakka action drama with Mass Underworld. the movie directed Prakash hebbal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X